ಸಂಯುಕ್ತ ಭಾರತದಲ್ಲಿ ಒಂದು ರಾಜ್ಯಕ್ಕೆ ಸುವರ್ಣ ಸಮಯವೆನ್ನುವುದಕ್ಕೇನು ಅರ್ಥ? ಈ ಪ್ರಶ್ನೆಗೆ ಉತ್ತರಿಸುವುದು ತುಂಬ ಸ್ವಾರಸ್ಯಕರ. ಭಾರತ ಬೃಹತ್ ರಾಷ್ಟ್ರ. ೩೫ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡು ದೇಶದ ಒಂದೆ ಸಮನಾದ ಬೆಳವಣಿಗೆಯನ್ನು ಖಚಿತಗೊಳಿಸಲು ಕೆಲಸಗಳಿಗೆ ಸಂಬಂಧಿಸಿದ ಬಹುತೇಕ ವಿಭಾಗಗಳು ಕೇಂದ್ರ ಮಂತ್ರಾಲಯಗಳ ಹತೋಟಿಯಲ್ಲಿದೆ. ಅದು ರೈಲ್ವೇ ವಿಭಾಗವಿರಬಹುದು, ಅದು ರಾಷ್ಟೀಯ ಹೆದ್ದಾರಿ ವಿಭಾಗವಿರಬಹುದು ಮತ್ತು ಅದು ಕೈಗಾರಿಕಾ ವಿಭಾಗ ಹಾಗು ಅದು ಕೃಷಿ ವಿಭಾಗವಿರಬಹುದು. ಇಲ್ಲೇ ಕೇಂದ್ರದ ಮಂತ್ರಿಗಳು ಪ್ರಸ್ತುತವಾಗುವುದು. ಅವರು ಅಧಿಕಾರಿ ಜನ ಮತ್ತು ಖಂಡಿತ ಅವರು ತಮ್ಮ ರಾಜ್ಯಗಳಿಗೆ ವಿಶೇಷ ದಯೆ ತೋರಿಸಬಹುದು. ಕೆಲವು ವರ್ಷಗಳ ಹಿಂದೆ ಅಲಿಖಿತ ಕಾಯ್ದೆ ಇತ್ತು. ಅದು ಕೇಂದ್ರ ಮಂತ್ರಿಗಳು ತಮ್ಮ ಸ್ವಂತ ರಾಜ್ಯಗಳು ಬೇರೆ ಪಕ್ಷಗಳ ಆಡಳಿತದಲ್ಲಿದ್ದರೆ ಮಲತಾಯಿ ಧೋರಣೆ ತೋರಬಹುದೆಂದು. ಅದೊಂದು ಹಾನಿಕಾರಕ ರಾಜಕೀಯ ತಂತ್ರ. ಅನೇಕ ರಾಜಕೀಯ ಪಕ್ಷ ಅನುಸರಿಸಿದ್ದು, ಅದು ವಿಶೇಷವಾಗಿ ಕರ್ನಾಟಕವನ್ನು ಬಹಳವಾಗಿ ಹಾನಿಗೊಳಿಸಿತು. ಮತ್ತು ಅಭಿವೃದ್ಧಿ ಗಂಭೀರವಾಗಿ ತಡೆಯಲ್ಪಟ್ಟಿತ್ತು.

ಆದರೆ ಈಗ ಪರಿಸ್ಥಿತಿ ಕರ್ನಾಟಕಕ್ಕೆ ಕೇಂದ್ರದಲ್ಲಿ ಬಹಳ ಬಹಳ ಸುಖಕರ ವಾಗಿದೆ. ನಾವೀಗ ಕೇಂದ್ರದಲ್ಲಿ ಕರ್ನಾಟಕದಿಂದ ಉತ್ತಮ ಜನರನ್ನು ಕೇಂದ್ರ ಮಂತ್ರಿಯನ್ನಾಗಿ ಹೊಂದಿದ್ದೇವೆ. ಅವರುಗಳೆಂದರೆ ಶ್ರೀ ಎಸ್. ಎಂ. ಕೃಷ್ಣ, ಶ್ರೀ ಎಂ. ವೀರಪ್ಪ ಮೊಯ್ಲಿ, ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಶ್ರೀ ಕೆ. ಹೆಜ್. ಮುನಿಯಪ್ಪ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಹೊಂದಿದ್ದೇವೆ. ಅವರು ಸದಾ ಕರ್ನಾಟಕದ ಅಭಿವೃದ್ಧಿಯನ್ನು ಗಮನಿಸುತ್ತಿರುತ್ತಾರೆ. ಈ ಎಲ್ಲ ಧುರೀಣರನ್ನು ಕರ್ನಾಟಕ ಹಾಗೂ ಭಾರತದಲ್ಲೆಲ್ಲ ಬಹಳವಾಗಿ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ೨೦೧೦ ಜೂನ್ ತಿಂಗಳಲ್ಲಿ ಒಂದು ವಿಶ್ವ ಹೂಡಿಕೆದಾರರ ಸಮ್ಮೇಳನವನ್ನು ಏರ್ಪಡಿಸುತ್ತಾರೆ. ೩ ಲಕ್ಷ ಕೋಟಿ ಹೂಡಿಕೆಯಾಗುವ ನಿರೀಕ್ಷೆ ಇದೆ. ಉದ್ಯೋಗ ಮಂತ್ರಿ ಶ್ರೀ ಮುರುಗೇಶ್ ನಿರಾಣಿ ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಈ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಲೆಂದು ಬಹಳ ಶ್ರಮವಹಿಸುತ್ತಿದ್ದಾರೆ. ಇಷ್ಟೆಲ್ಲದೆ ೫ ಬೃಹತ್ ಉಕ್ಕು ಕಾರ್ಖಾನೆಗಳ ಮೆ. ಆರ್ಸೆಲರ್ ಮಿಟ್ಟಲ್‌, ಮೆ. ಕೆ.ಐ.ಓ.ಸಿ., ಮೆ.ಪಿ.ಒ.ಎಸ್. ಸಿ.ಬ., . ಮೆ.ಎನ್.ಎಮ್.ಡಿ.ಸಿ. ಮತ್ತು ಮೆ.ಜೆ.ಎಸ್.ಡಬ್ಲೂ ಶೀಘ್ರದಲ್ಲೆ ಬರುವ ಸಾಧ್ಯತೆಯಿದೆ. ಈ ಎಲ್ಲ ಯೋಜನೆಗಳಿಗೆ ಕೇಂದ್ರದ ಒಪ್ಪಿಗೆ ಬೇಕಾಗುತ್ತದೆ. ಇಲ್ಲೇ ಕರ್ನಾಟಕದ ಕೇಂದ್ರ ಮಂತ್ರಿಗಳು ಅತಿ ಮುಖ್ಯ ಪಾತ್ರ ವಹಿಸುವುದು. ಕೇಂದ್ರದ ಒಪ್ಪಿಗೆ ಶೀಘ್ರವಾಗಿ ದೊರಕುವಂತೆ ಮಾಡುವಲ್ಲಿ.

ಇದರ ಜೊತೆಗೆ ಅತ್ಯಂತ ಅದೃಷ್ಟವಂತರೇಕೆಂದರೆ ನಮಗೆ ಕರ್ನಾಟಕದ ಬಗ್ಗೆ ಸಹೃದಯರಾಗಿರುವ ಕೆಳಕಂಡ ಹಿರಿಯ ಮಂತ್ರಿಗಳು ಕೇಂದ್ರದಲ್ಲಿದ್ದು ನಮಗೆ ಸಹಾಯ ಮಾಡಲು ಸಂತೋಷ ಪಡುತ್ತಾರೆ.

೧. ಶ್ರೀ ಶರದ್ ಪವಾರ್

೨. ಶ್ರೀ ಸುಶೀಲ್ ಕುಮಾರ್ ಶಿಂಧೆ

೩. ಶ್ರೀ ಜೈರಾಮ್ ರಮೇಶ್

೪. ಶ್ರೀ ಪ್ರಫುಲ್ ಪಟೇಲ್

ತಮಿಳುನಾಡು ಡಿ.ಎಂ.ಕೆ. ಪಕ್ಷದ ಕೇಂದ್ರಮಂತ್ರಿಗಳೆಲ್ಲರೂ ನಮ್ಮ ಯೋಜನೆ ಗಳನ್ನು ಮತ್ತು ವಿಧಾನಗಳನ್ನು ಬೆಂಬಲಿಸುತ್ತಾರೆ. ಏಕೆಂದರೆ ಅವರಿಗೆ ತಮಿಳುನಾಡು ಡಿ.ಎಂ.ಕೆ. ಪಕ್ಷದ ಪರಮ ಶ್ರೇಷ್ಠ ಮಾನ್ಯ ಮುಖ್ಯಮಂತ್ರಿ ಕಲೈಗ್ನಾರ್ ಡಾ!! ಎಂ. ಕರುಣಾನಿಧಿಯವರ ಪ್ರೀತಿಯ ಮಗಳಿಗೆ ಕರ್ನಾಟಕ ಸೇರಿದ್ದೆಂದು ಅವರೆಲ್ಲರೂ ಚೆನ್ನಾಗಿ ತಿಳಿದಿದ್ದಾರೆ.

ನಾವೀಗ ಬಿ.ಜೆ.ಪಿ. ಆಡಳಿತದಲ್ಲಿರುವ ನಮ್ಮ ರಾಜ್ಯದ ರಾಜಕೀಯ ವ್ಯವಸ್ಥೆಯತ್ತ ಹಿಂದಿರುಗೋಣ. ನಾವು ಆಡಳಿತ ಪಕ್ಷ ಬಿ.ಜೆ.ಪಿ. ಪಕ್ಷಕ್ಕೆ ಸೇರಿದ ನಮ್ಮ ಕ್ಷೇತ್ರದ ರಾಜಕಾರಣಿಗಳನ್ನು ಆತ್ಮೀಯವಾಗಿ ಬಲ್ಲೆವು. ಅವರು ನಮ್ಮ ಉತ್ತಮೋತ್ತಮ ಮುಂದಾಳುಗಳು ಮತ್ತು ನಾವು ಅವರನ್ನು ಗೌರವಿಸುತ್ತೇವೆ. ಅವರುಗಳು ಯಾರೆಂದರೆ ಲೋಕಸಭಾ ಸದಸ್ಯ ಶ್ರೀ ಅನಂತ್‌ಕುಮಾರ್, ಮಂತ್ರಿಗಳಾದ ಶ್ರೀ ಆರ್. ಅಶೋಕ್, ಮಂತ್ರಿಗಳಾದ ಶ್ರೀ ಸುರೇಶ್‌ಕುಮಾರ್, ಮಂತ್ರಿಗಳಾದ ಶ್ರೀ ವಿ. ಸೋಮಣ್ಣ, ಮಾಜಿ ಮಂತ್ರಿಗಳಾದ ಶ್ರೀ ಕೃಷ್ಣಪ್ಪ, ಮತ್ತು ವಿಧಾನಸಭಾ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯಂ ಅವರು ನಮಗೆ ಗೊತ್ತಿರುವ ಪ್ರದೇಶದವರು ಮತ್ತು ನಮಗೆ ಹತ್ತಿರದವರು ಮತ್ತು ನಮಗೆ ಗೊತ್ತಿದೆ. ಅವರೆಲ್ಲರೂ ನಮ್ಮ ರಾಜ್ಯ ಕೃಷಿ ಉದ್ಯೋಗ ವಿದ್ಯಾಭ್ಯಾಸ ಮತ್ತು ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಶೀಘ್ರವಾಗಿ ಅಭಿವೃದ್ಧಿಯಾಗಬೇಕೆಂದು ಇಷ್ಟಪಡುತ್ತಾರೆ. ಕಾಂಗ್ರೆಸ್ಸಿನ ಹಿರಿಯ ಮುಂದಾಳುಗಳು ಒಂದು ಮುಖ್ಯ ಪಾತ್ರ ವಹಿಸಬೇಕು. ನಾವು ಬಹುಶಕ್ತಿ ಕಾಂಗ್ರೆಸ್ ಮುಂದಾಳುಗಳನ್ನು ನಮ್ಮ ರಾಜ್ಯದಲ್ಲಿ ಹೊಂದಿದ್ದೇವೆ. ಅವರುಗಳೆಂದರೆ ಮಾಜಿ ಮುಖ್ಯಮಂತ್ರಿ ಶ್ರೀ ಎನ್. ಧರ್ಮಸಿಂಗ್, ಮಾಜಿ ಉಪಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಮಾಜಿ ಮಂತ್ರಿ ಶ್ರೀ ಆರ್. ವಿ. ದೇಶ್‌ಪಾಂಡೆ ಮತ್ತು ಮಾಜಿ ಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯದ ಕೃಷಿ, ಉದ್ಯೋಗ ಮತ್ತು ಮೂಲಭೂತ ಸೌಕರ್ಯಗಳ ತುರ್ತು ಆವಶ್ಯಕತೆಗಳ ಅರಿವಿದೆ. ಇತ್ತೀಚೆಗೆ ಶ್ರೀ ಹೆಚ್.ಡಿ. ಕುಮಾರಸ್ವಾಮಿ ೨ ವರ್ಷಗಳ ಕಾಲ ನಮ್ಮ ಪ್ರೀತಿಯ ಮುಖ್ಯಮಂತ್ರಿ ಗಳಾಗಿದ್ದರು. ಅವರಿಗೆ ಕರ್ನಾಟಕದ ಆರ್ಥಿಕ ಆವಶ್ಯಕತೆಗಳ ಸಂಪೂರ್ಣ ಅರಿವಿದೆ. ಅವರು ಹಾಲಿ ಸರ್ಕಾರದ ಎಲ್ಲ ನಿಜವಾದ ಅಭಿವೃದ್ಧಿಕಾರ್ಯಗಳಿಗೆ ಪೂರ್ಣ ಬೆಂಬಲ ನೀಡುತ್ತಾರೆ. ಕೇಂದ್ರದಲ್ಲಿ ಕ್ಯಾಬಿನೆಟ್ ಮಂತ್ರಿಗಳಾಗಿರುವ ಶ್ರೀ ಎಸ್. ಎಂ. ಕೃಷ್ಣ ಹಾಗು ಶ್ರೀ ಎನ್ ವೀರಪ್ಷಮೊಯ್ಲಿ ನಮ್ಮ ಹಿಂದಿನ ಮುಖ್ಯಮಂತ್ರಿಗಳು. ಅವರು ಈಗಾಗಲೇ ಕರ್ನಾಟಕದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರದ ಯೋಜನೆಗಳಲ್ಲಿ ಸೇರಿಸಲು ಇತರ ಹಿರಿಯ ಮಂತ್ರಿಗಳೊಂದಿಗೆ ಚರ್ಚಿಸುತ್ತಿದ್ದಾರೆ. ಹಿರಿಯ ಕ್ಯಾಬಿನೆಟ್ ಮಂತ್ರಿ ಶ್ರೀ ಮಲ್ಲಿಕಾರ್ಜುನ ಖರ್ಗೆ ನಮಗೆ ಸೂಪರ್ ಆಸ್ತತ್ರೆಗಳನ್ನು ಹಾಗು ಅತ್ಯುತ್ತಮ ವೈದ್ಯಕೀಯ ವಿದ್ಯಾಲಯಗಳನ್ನು ಕೊಡುತ್ತಿದ್ದಾರೆ. ರೈಲ್ವೆ ರಾಜ್ಯಮಂತ್ರಿ ಶ್ರೀ ಕೆ. ಹೆಚ್. ಮುನಿಯಪ್ಪರವರು ಹೊಸ ಬ್ರಾಡ್ಗೇಜ್ ಸೌಲಭ್ಯಗಳನ್ನು ಹೊಸ ಫಾಸ್ಟ್ ಟ್ರೇನ್‌ಗಳನ್ನು ಕೊಡುತ್ತಿದ್ದಾರೆ. ಶ್ರೀ ವೀರಪ್ಪ ಮೊಯ್ಲಿ ಕರ್ನಾಟಕಕ್ಕೆ ಐ‌ಐಟಿಯ ಆಶ್ವಾಸನೆ ನೀಡಿದ್ದಾರೆ. ಅದನ್ನು ಅವರ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಬೇಕು. ಕರ್ನಾಟಕದ ಅನೇಕ ಐ‌ಐಟಿ ಆಕಾಂಕ್ಷೆಗಳು ಚೆನ್ನೈ, ಮುಂಬೈಗಳಲ್ಲಿ ಹಾಸ್ಟೆಲ್‌ನ ದುಬಾರಿ ಖರ್ಚಿನಿಂದಾಗಿ ಐ‌ಐಟಿ-ಜೆ‌ಇ‌ಇ ಪರೀಕ್ಷೆಗಳನ್ನು ತೆಗೆದುಕೊಂಡಿಲ್ಲ. ಕರ್ನಾಟಕದಲ್ಲಿ ಅನೇಕ ಖಾಸಗೀ ಇಂಜಿನಿಯರಿಂಗ್ ಕಾಲೇಜಗಳು ಇರಬಹುದು ಆದರೂ ಅವು ಐ‌ಐಟಿಯ ಗುಣಮಟ್ಟದಲ್ಲೆಲ್ಲೂ ಇಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಸಂಪೂರ್ಣ ಬೆಂಬಲ ಮತ್ತು ಮೆಚ್ಚುಗೆ ಭಾರತದ ಇಬ್ಬರು ಮಹಾನ್ ವ್ಯಕ್ತಿಗಳದು ಇದೆ. ಅವರ ಹೆಸರು ಭಾರತದ ಮಾನ್ಯ ಪ್ರಧಾನಮಂತ್ರಿ ಡಾ|| ಮನಮೋಹನ್ ಸಿಂಗ್ ಮತ್ತು ಯು.ಪಿ.ಎ.ಯ ಮಾನ್ಯ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಭಾರತವನ್ನು ವಿಶ್ವ ಭೂಪಟದ ಮೇಲೆ ಹಾಕಿದ ಕರ್ನಾಟಕದ ತ್ವರಿತ ಅಭಿವೃದ್ಧಿ ಅವರಿಗೆ ಬೇಕು. ಅವರಿಗೆ ಗೊತ್ತಿದೆ ಕರ್ನಾಟಕ ಅನೇಕ ರಾಷ್ಟ್ರಗಳನ್ನು ಅಲ್ಲಾಡಿಸಿದ ಒಂದು ನಗರವನ್ನು ಸೃಷ್ಟಿಸಿದ ಒಂದು ರಾಜ್ಯವೆಂದು.

ಕಳೆದ ೩,೦೦೦ ವರ್ಷಗಳ ಭಾರತದ ಇತಿಹಾಸವನ್ನು ನಾವು, ಪುನರ್ ವೀಕ್ಷಿಸಿದರೆ ನಾವು ಗಮನಿಸುತ್ತೇವೆ. ಒಂದೇ ಒಂದು ಸುವರ್ಣಕಾಲವಿತ್ತೆಂದು ಈಗ ಒಂದು ಸುವರ್ಣಾವಕಾಶ ದೊರಕಿದೆ. ಭಾರತದ ೨ನೇ ಸುವರ್ಣಕಾಲ ಸೃಷ್ಟಿಸಲು.

ಎಲ್ಲಾ ರಾಜಕಾರಣಿಗಳು ಮತ್ತು ಎಲ್ಲಾ ಶ್ರೇಷ್ಠ ವ್ಯಕ್ತಿಗಳು ಕರ್ನಾಟಕಕ್ಕೆ ಮೊದಲ ಸುವರ್ಣ ಕಾಲ ಮತ್ತು ಭಾರತಕ್ಕೆ ೨ನೇ ಸುವರ್ಣ ಕಾಲ ಸೃಷ್ಟಿಸಲು ಒಂದಾಗುತ್ತಾರೆಂಬುದು ನನಗೆ ಖಚಿತ.

ಮುಂದಿನ ಮೂರು ನಾಲ್ಕು ವರ್ಷಗಳಲ್ಲೂ ಕರ್ನಾಟಕದ ಮೂರು ರಾಜಕೀಯ ಪಕ್ಷಗಳ ಹಿರಿಯ ರಾಜಕಾರಣಿಗಳು ಒರೆಯ ಪರೀಕ್ಷೆಯನ್ನು ಎದುರಿಸುತ್ತಾರೆ. ಅವರಿಗೆ ನಿಜವಾದ ಕರ್ನಾಟಕ ಸುವರ್ಣ ಕಾಲವನ್ನು ಪಡೆಯುವುದು ಬೇಕಾಗಿದ್ದರೆ ಅವರುಗಳು ಈಗಿರುವ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಂಪೂರ್ಣ ಬೆಂಬಲ ನೀಡುವ ಮುಖಾಂತರ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ತ್ವರಿತ ಅಭಿವೃದ್ಧಿ ಆಗುವುದೆಂದು ಖಚಿತಗೊಳಿಸಬೇಕು ಮತ್ತು ಅವರೇನು ವಾಸ್ತವವಾಗಿ ಮಾಡುತ್ತಾರೆ ಎಂಬುದನ್ನು ಕರ್ನಾಟಕದ ೫೩ ಮಿಲಿಯನ್ ಜನ ಮಾತ್ರವಲ್ಲದೆ ಕರ್ನಾಟಕ ಜನತೆಯ ದೇವಿ ತಾಯಿ ಭುವನೇಶ್ವರಿಯೂ ಗಮನಿಸುತ್ತಿರುತ್ತಾಳೆ.
*****
೨೦೧೧