ಒಂದು ಸಲ ಕೈಲಾಸಂರವರು ಊಟಕ್ಕೆ ಕುಳಿತಾಗ ಮಾಣಿ ಅನ್ನ ಬಡಿಸಿ, ಬಕೆಟ್ನಿಂದ ಸಾಂಬಾರ್ ಸುರಿದು ನಿಂತ. ಅದರಲ್ಲಿ ತರಕಾರಿಯ ಒಂದು ಹೋಳೂ ಕಾಣಲಿಲ್ಲ. ಹೊಟೆಲ್ ಮಾಲೀಕರನ್ನು ಕರೆದು ಅವರ ಕಿವಿಯಲ್ಲಿ “ಒಂದು ಕೌಪೀನ (ಲಂಗೋಟಿ) ಇದ್ದರೆ ದಯಪಾಲಿಸುತ್ತೀರಾ” ಎಂದರು. ಮಾಲೀಕರು ಕಕ್ಕಾಬಿಕ್ಕಿ ಆಗಿ “ಏಕೆ ತಮಗಾ ಸಾರ್?” ಕೇಳಿದರು. “ಇನ್ನೇನೂ ಇಲ್ಲ, ಈ ಬಕೆಟ್ನೊಳಗೆ ಮುಳುಗಿ ಒಂದೆರಡು ತರ್ಕಾರಿ ಹೋಳುಗಳೇನಾದರೂ ಸಿಗುತ್ತವೆಯೋ ಎಂದು ನೋಡೋಣ ಅಂತ.” ಆಗ ಮಾಲೀಕ ಅಳಲೂ ಆಗದೆ ನಗಲೂ ಆಗದೆ ಪೆಚ್ಚಾದ!
***