ಹಲ್ಲು ಕೀಳಿಸಲು ದಂತವೈದ್ಯರ ಬಳಿಗೆ ಬಂದು. ಪರೀಕ್ಷಿಸಿ ಹಲ್ಲನ್ನು ಕೀಳಬೇಕೆಂದು ಬೇಡಿದ. ಅದರಂತೆ ಹಲ್ಲು ಕಿತ್ತರು. ಫೀಸ್ ಎಷ್ಟು ಎಂದು ಕೇಳಿದಾಗ ೫೦೦/- ರೂ ಎಂದರು. `ಏನು ಸಾರ್ ಒಂದು ಹಲ್ಲು ಕೀಳಲು ೫೦೦/- ರೂ ಚಾರ್ಜ ಮಾಡಿದ್ದೀರಿ. ಇದು ನ್ಯಾಯವೆ? ಕೇಳಿದ. ಅಲ್ಲವ ಮತ್ತೆ, ವೈದ್ಯರು ನುಡಿದರು: `ಹಲ್ಲು ಕೀಳುವಾಗ ನೀನು ಕಿರುಚಾಡಿದ ರಭಸಕ್ಕೆ ನಾಲ್ಕು ಗಿರಾಕಿಗಳು ಹಲ್ಲು ಕೀಳಿಸಲು ಬಂದಿದ್ದವರು ಹೇಳದೆ ಕೇಳದೆ ಓಟಕಿತ್ತರಲ್ಲಾ ಅದಕ್ಕೆ ಏನು ಹೇಳ್ತೀ ? ವೈದ್ಯರು ಕೇಳಿದರು.
***