ನಿನಗೇನು ಹೇಳು ಹೊತ್ತಿಲ್ಲ ಹೆತ್ತಿಲ್ಲ
ಸಾಕಬೇಕಿಲ್ಲ ಸಲಹಬೇಕಿಲ್ಲ
ಮಕ್ಕಳು ಮರಿ ಹೊಟ್ಟೆಪಾಡಿಗಾಗಿ
ಬೆವರು ಸುರಿಸಿ ದುಡೀಬೇಕಾಗಿಲ್ಲ
ಶಿಸ್ತಾಗಿ ಬೆಳಗಿನವರೆಗೂ ಬಿಳಿ ಬಿಳಿಯಾಗಿ
ಷೋಕಿ ಮಾಡಿಕೊಂಡು ಆಕಾಶ
ಅಳೀ(ಲೀ)ತಾ ತಿರುಗ್ತೀಯ.
ಅವಳೋ ಹೆಸರೇ ಭೂಮಿತಾಯಿ
ಹೆತ್ತು ಹೊತ್ತು ಸುಸ್ತಾಗಿರೋ
ಅವಳಿಗೆ ರೊಮ್ಯಾನ್ಸ್‌ಗೆಲ್ಲಪ್ಪಾ ಪುರಸೊತ್ತು
ಆ ಆಸೆಬಿಡು – ಇಷ್ಟು ದೊಡ್ಡ
ಆಕಾಶದಲ್ಲಿ ಬೇರೆ ಎಲ್ಲಿಯಾದರೂ
ಸಿಗಬಹುದು ಅವಕಾಶ
ಒಂದು ಕೈ ನೋಡು.
*****


















