Home / Poem

Browsing Tag: Poem

ಎಣ್ಣೆಹಚ್ಚಿ ತಿದ್ದಿತೀಡಿ ಬೆಚ್ಚಗಿನ ಹಂಡೆಯಲಿ ಹದಕಾಯಿಸಿ ಕಾಲು ನೀಡಿ ಎರೆದು ಹಾಕಿದ ಕಂದ ಸಾಂಬ್ರಾಣಿಯ ಸೂಸು ಹೋಗೆ ಕಣ್ಣು ರೆಪ್ಪೆಯ ಮುಚ್ಚಿ ತೆಪ್ಪಗೆ ಮಲಗಿರುವ ತೊಟ್ಟಿಲಲಿ ಹಾಲು ಹೀರಿದ ಎದೆಯಲಿ ಚಿಲ್ಲನೆ ಮತ್ತೆ ಚಿಮ್ಮುತ್ತಿವೆ ಎದೆ ಹಾಲ ಹನಿಗಳ...

ಚೆಲ್ಲಾಟ – ಹುಡುಗಾಟ ಕಿರುಚಾಟ – ಕುಣಿದಾಟ ನೆಗೆದಾಟ – ಮಂಗಾಟ ಮರೆವಿನಾಟ – ಮೋಸದಾಟ ರಂಪಾಟ – ರಸದೂಟ ಎಲ್ಲಾ ಐಲು – ಮೊಬೈಲು *****...

ಮಳೆ ಎಂದರೆ ಮೋಡ ಮಿಂಚು ಗುಡುಗು ಸಿಡಿಲು. ಮಳೆ ಎಂದರೆ ಹಳ್ಳ ಕೊಳ್ಳ ನದಿ ಹೊಳೆ. ಮಳೆ ಎಂದರೆ ಚಹಾ ಚುರುಮುರಿ ಕಂಬಳಿ ಕೊಡೆ. ಮಳೆ ಎಂದರೆ ಸೋರುವ ಸೂರು ಮುರಿದ ಚಾವಣಿ. ಮಳೆ ಎಂದರೆ ಬುಡ ಕಡಿದ ಮರ ಉದುರಿದ ಹೂವು ಎಲೆ. ಮಳೆ ಎಂದರೆ ಬೆಳೆ ಮಳೆ ಎಂದರೆ ಹ...

ಮೂರ್ಛೆ ಬಂದಿತ್ತು! ಮೂರ್ಛೆ ಬಂದಿತ್ತು! ಕಾಂಪೋಂಡು ಬಂಗ್ಲಿ ಕಂಕಮ್ಮಂಗೆ ಮೂರ್ಛೆ ಬಂದಿತ್ತು ಮದಿವೊ ಏನೋ ಆಗುತಿತ್ತಂತೆ ಚಪ್ಪರ ಕಂಬ ವರಗಿದ್ದರಂತೆ ಮದವಣಗನ್ನೇ ನೋಡುತಿದ್ದರಂತೆ ಯಾಕೋ ಏನೋ ಬಂದವರಂತೆ ಯಾರೋ ಏನೋ ಉಸಿರಿದರಂತೆ ಕೂತಿದ್ದ ಹಾಗೇ ಕನಕಂನ...

ವಿರಳವಾಗಿಹರು ಇಂದು ಒಪ್ಪತ್ತು ಕೆಲಸಕ್ಕೂ ಆಳು ಗದ್ದೆಯಲಿ ಕಳೆ ಬೆಳೆದು ಬೆಳೆಯಂತೂ ಹಾಳು. ದುಂಬಾಲು ಬಿದ್ದರೂ ದರಕಾರೇ ಇಲ್ಲ: ಉದ್ಯೋಗ ಖಾತರಿಯ ಯೋಜನೆಯೇ ಬೆಲ್ಲ. ಕೆಲಸ ಮಾಡದಿರೂ ಬರಿಯ ಹೆಸರ ದಾಖಲೆ ಫೈಲು ಶುಕ್ರ, ಸೋಮ ಜೊತೆಗೆ ಮಾದನಿಗೂ ಡೌಲು. ಜೇ...

ವ್ಯಾಸರ ಪರಂಪರಾಗತ ಕಾಮುಕನಲ್ಲ ಈ ಕೈಲಾಸಂ ವಿರಚಿತ ಕೀಚಕ ನಾಟ್ಯ ಕೋವಿದನೀತ ಪ್ರೇಮವೆಂಬ ವಿದ್ಯು- ದ್ದೀಪದಲಿ ಹೊಳೆವನು ಚಕಚಕ ಯಾವ ಸ್ತ್ರೀ ರತ್ನವನು ಪ್ರೀತಿಸಿದನೋ ಅವಳಿಂದಲೇ ಆಗಲವಮಾನ ತನ್ನ ಸಾವನು ತಾನೇ ಬಯಸಿದವನು ಹಳಿವನೇನು ಬಲಭೀಮನ? ತೊಡಲು ಬೇ...

1...9495969798...449

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...