ಹಸಿವೆಂದರೆ ಹೇಳದೇ
ಉಳಿದು ಹೋದ ನಿಗೂಢ
ರೊಟ್ಟಿಯೆಂದರೆ ಆಡಿಯೂ
ಕಳೆದು ಹೋದ ರಹಸ್ಯ.
ಹೇಳಿದ್ದಕ್ಕೂ
ಹೇಳದೇ ಉಳಿದದ್ದಕ್ಕೂ
ನಡುವೆ ಅಗಾಧ ಕಂದರ.
*****