ತಂಬಾಕಿನಿಂದ ಉತ್ಪಾದಿಸುವ ಯಾವುದೇ ಬೀಡಿ ಸಿಗರೇಟುಗಳನ್ನು ಎಷ್ಟೇ ಎಚ್ಚರಿಕೆಯಿಂದ ಕುಡಿದರೂ ಹೊಗೆ ಬಂದೇ ಬರುತ್ತದೆ. ಇದರಿಂದಾಗಿ ಪರಿಸರ ಮಾಲಿನ್ಯವಾಗುವುದರ ಜೊತೆಗೆ ಸಿಗರೇಟಿನ ವಾಸನೆಯಿಂದ ಹಲವು ಜನ ದೂರವಾಗುವುದೂ ನಡೆಯುತ್ತದೆ. “ಸಿಗರೇಟು-ಸೇವನೆ’ ಅಪಾಯಕರವೆಂದರೂ ಅದನ್ನು ಮಾನಸಿಕ ತೃಪ್ತಿಗಾಗಿ ಸೇವನೆ ಮಾಡುವ ಜನರು ಎಲ್ಲವರ್ಗದಲ್ಲಿಯೂ ಇದ್ದಾರೆ.

ವಾಸನೆ ಇಲ್ಲದೆ, ಹೊಗೆ ಇಲ್ಲದ, ಪರಿಸರಕ್ಕೆ ಹಾನಿಯಾಗದ ಸಿಗರೇಟ್‌ನ್ನು ಅಮೇರಿಕದ ತಂಬಾಕು ವ್ಯವಹಾರ ಸಾಮ್ರಾಟನೆನಿಸಿದ ಫಿಲಪ್ ಮಾರಿಸ್ ಕಂಪನಿಯವರು ಕಂಡುಹಿಡಿದಿದ್ದಾರೆ. ಈಗಾಗಲೇ ಜಪಾನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಈ ಸಿಗರೇಟಿನ ಡಿಜಿಟಲ್ ಸ್ಮೋಕಿಂಗ್ ಆಗಿದೆ. ಮತ್ತು ಸಿಗರೇಟಿನ ಹೆಸರು ಓಯಸಿಸ್, ಮತ್ತು ಇದರ ಲೈಟರ್ ಹೆಸರು ‘ಡಿಜಿಟಲ್ ಲೈಟರ್’ ಈ ವಿಧಾನವು ಹೊಗೆಯಾಡಿಸದೇ ಧೂಮಪಾನ ಮಾಡುವಂತಹದ್ದಾಗಿದೆ.

ಅಮೇರಿಕನ್ ಕಂಪನಿಯು ಜಪಾನಿನ ಜಸತಾರ ಎಂಬ ಪ್ರತಿಷ್ಟಿತ ಮಾರಾಟ ಮಳಿಗೆಗಳಿಗೆ ಮಾತ್ರ ಈ ಸಿಗರೇಟನ್ನು ಬಿಡುಗಡೆ ಮಾಡಿದೆ. ಅಂದಹಾಗೆ ಸಿಗರೇಟಿನ ಬೆಲೆ 20 ಸಿಗರೇಟುಗಳ ಪ್ಯಾಕಿಗೆ 300 ಯೆನ್ (2.7 ಡಾಲರ್) ಅದರೆ ಲೈಟರ್ ಬೆಲೆ 45 ಡಾಲರ್ ಆಗಿದೆ.
****