ಒಂದು ಮರದ ದೊಡ್ಡದೊಡ್ಡ ಶಾಖೆಗಳನ್ನು ಮನುಷ್ಯ ಕಡಿದು ಹಾಕಿ ಮರವನ್ನು ಬೋಳು ಮಾಡಿದ.
“ನನ್ನ ಮೈ ಕೈ ಹೀಗೆ ಕತ್ತರಿಸಿ ಹಾಕಿದರೆ ನಾನು ಮತ್ತೆ ಚಿಗುರಿ ಬೆಳೆಯ ಬಲ್ಲೆ. ಒಮ್ಮೆ ಯೋಚಿಸು”,
“ನಿನ್ನ ಕೈ ಕಾಲು ಕತ್ತರಿಸಿ ಹಾಕಿದರೆ ಮತ್ತೆ ನೀನು ಬೆಳೆದು ಕೊಳ್ಳಬಲ್ಲೆಯಾ?” ಎಂದು ಸವಾಲು ಹಾಕಿತು ಮರ.
ಮನುಷ್ಯ ಕೊಡಲಿ ಕೆಳಗೆ ಹಾಕಿ ಮೌನವಾಗಿ ಮುನ್ನಡೆದ.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)