ವಿರಳವಾಗಿಹರು ಇಂದು
ಒಪ್ಪತ್ತು ಕೆಲಸಕ್ಕೂ ಆಳು
ಗದ್ದೆಯಲಿ ಕಳೆ ಬೆಳೆದು
ಬೆಳೆಯಂತೂ ಹಾಳು.

ದುಂಬಾಲು ಬಿದ್ದರೂ
ದರಕಾರೇ ಇಲ್ಲ:
ಉದ್ಯೋಗ ಖಾತರಿಯ
ಯೋಜನೆಯೇ ಬೆಲ್ಲ.

ಕೆಲಸ ಮಾಡದಿರೂ
ಬರಿಯ ಹೆಸರ ದಾಖಲೆ ಫೈಲು
ಶುಕ್ರ, ಸೋಮ ಜೊತೆಗೆ
ಮಾದನಿಗೂ ಡೌಲು.

ಜೇಬಿನಲಿ ಜಣಜಣ
ದಿನಕ್ಕೆ ನೂರಿಪ್ಪತ್ತು
ಹೆಂಡದಂಗಡಿ ಒಡೆಯ
ಹಣ ಎಣಿಸಿ ಸುಸ್ತು.

ಸರಕಾರಿ ಸವಲತ್ತು
ಅನುಭವಿಸಿ ದೌಲತ್ತು
ಕ್ರೀಮು, ಪೇಸ್ಟು, ಸೆಂಟು
ಇವನಿಂಗು ಗಮ್ಮತ್ತು.

ಕಾಯಕ ಹೊರೆಯಾಯ್ತು
ಖಾತರಿ ಕರಾಮತ್ತು
ಹೆಂಡದ ಗುಂಡಿಲಿ ಬಿದ್ದ
ಹೆಣ ಎತ್ತೋ….!
*****