ಮನೆ ವಿಮೆ : ಏನು? ಹೇಗೆ?

ಏನಿದು ಮನೆ ವಿಮೆ? ಇಂದೊದು ವಿಮಾ ಸೌಲಭ್ಯಗಳ ಪ್ಯಾಕೇಜ್. ಅಂದರೆ ಹಲವು ನಷ್ಟ ಸಂಭವಗಳಿಗೆ ವಿಮೆ ಒದಗಿಸುವ ವ್ಯವಸ್ಥೆ, ಅನಿರೀಕ್ಷಿತವಾಗಿ ಬೆಂಕಿಯಿಂದ, ಕಳವಿನಿಂದ ಅಥವಾ ಗೃಹಸಾಧನಗಳು ಕೆಟ್ಟು ಆಗಬಹುದಾದ ನಷ್ಟಕ್ಕೆ ಈ ಪಾಲಿಸಿಯಿಂದ ಪರಿಹಾರ ಲಭ್ಯ. ಮನೆಗೆ ಬೆಂಕಿ ಬಿದ್ದಾಗ ಅಥವಾ ಕಳ್ಳತನ ಆದಾಗ ನಮಗಾಗಬಹು- ದಾದ ನಷ್ಟವನ್ನು ಪೂರ್ತಿ ಇಲ್ಲವೆ ಭಾಗಶಃ ತುಂಬಿಕೊಳ್ಳುವ ಒಂದು ಜಾಣತನದ ದಾರಿಯೇ ಮನೆ ವಿಮೆ. ನಿಮಗೆ
ಹಾಗೂ ನಿಮ್ಮ ಕುಟುಂಬದವರಿಗೆ ಅಪಘಾತ ವಿಮೆ ಮತ್ತು ಮನೆಗೆಲಸದವರಿಗೆ ನಿಮ್ಮ ಮನೆಯಲ್ಲಿ ಆಗಬಹುದಾದ ಘಾಸಿಗೂ ಪರಿಹಾರ ಬೇಕಿದ್ದರೆ, ಅಧಿಕ ಪ್ರೀಮಿಯಂ ಪಾವತಿಸಿ ಸೂಕ್ತ ಸೆಕ್ಷನನ್ನು ಪಾಲಿಸಿಗೆ ಸೇರಿಸಿಕೊಳ್ಳಬಹುದು.

ಯಾರಿಂದ ವಿಮಾ ಪಾಲಿಸಿ?
ಕಳೆದೆರಡು ದಶಕಗಳಿಂದ ಸಾರ್ವಜನಿಕ ರಂಗದ ವಿಮಾ ಕಂಪೆನಿಗಳಾದ ನ್ಯಾಶನಲ್ ಇನ್ನೂರೆನ್ಸ್, ನ್ಯೂ ಇಂಡಿಯಾ ಅಶುರೆನ್ಸ್, ಓರಿಯೆಂಟಲ್ ಇನ್ಸೂರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಗಳು ಇಂತಹ ಪಾಲಿಸಿ ನೀಡುತ್ತಿದ್ದವು ಇದೀಗ ಬಜಾಜ್ ಆಲ್ಮೆಯಂಜ್, ಐಸಿಐಸಿಐ ಲೊಂಬಾರ್ಡ್, ಇಪ್ಕೋ-ಟೋಕಿಯೊ, ರಿಲಯನ್ಸ್ ಜನರಲ್ ಇನ್ಶೂರೆನ್ಸ್, ರಾಯಲ್ ಸುಂದರಂ, ಟಾಟಾ -ಎಐಜಿ ಇತ್ಯಾದಿ ಖಾಸಗಿ ವಿಮಾ ಕಂಪನಿಗಳೂ
ಮನೆ ವಿಮೆ ಪಾಲಿಸಿ ನೀಡುತ್ತವೆ.

ಸಾರ್ವಜನಿಕ ರಂಗದ ಕಂಪೆನಿಗಳ ವಿಮಾ ಪಾಲಿಸಿಗಳಲ್ಲಿ 10 ಸೆಕ್ಷನ್ ಗಳಿವೆ. ಬೆಂಕಿ ವಿಮೆ, ಕಳ್ಳತನ ವಿಮೆ, ಒಡವೆ ವಿಮೆ, ಗೃಹಸಾಧನಗಳ ವಿಮೆ, ಇಲೆಕ್ಟ್ರಾನಿಕ್ ಸಾಧನಗಳ ವಿಮೆ ಇತ್ಯಾದಿ. ಇವುಗಳಲ್ಲಿ ಕನಿಷ್ಠ ಮೂರು ಸೆಕ್ಷನ್ ಗಳ ಪ್ರಕಾರ ಪಾಲಿಸಿದಾರರು ವಿಮೆ ಪಡೆಯುವುದು ಕಡ್ಡಾಯ. ಅದೇ ರೀತಿ, ಬಜಾಜ್ ಆಲ್ಮೆಯಂಜ್ ನ ಪಾಲಿಸಿಯಲ್ಲಿ ಎರಡು ಸೆಕ್ಷನ್ಗಳಿಗೆ, ಇಪ್ಕೋ-ಟೋಕಿಯೊ ಪಾಲಿಸಿಯಲ್ಲಿ (12ರಲ್ಲಿ) 5 ಸೆಕ್ಷನ್‌ಗಳಿಗೆ ವಿಮೆ ಪಡೆಯಲೇಬೇಕು. ಖಾಸಗಿ ಕಂಪನಿಗಳ ವಿಮಾ ಪಾಲಿಸಿಯಲ್ಲಿ ನಮಗೆ ಬೇಕಾದ ಕೆಲವು ಬದಲಾವಣೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿದೆ.
ರಾಯಲ್ ಸುಂದರಂನ ಪಾಲಿಸಿಯಲ್ಲೊಂದು ಅನುಕೂಲವಿದೆ : ಅವರ ಪಾಲಿಸಿ ನಿಮಗೆ ಸಮಾಧಾನಕರ ಅನಿಸದಿದ್ದರೆ, ನೀವು 16 ದಿನಗಳೂಳಗೆ ಆದನ್ನು ಹಿಂದಿರುಗಿಸಿ ರದ್ದು ಮಾಡಬಹುದು.

ಬೆಂಕಿ, ಪ್ರಾಕೃತಿಕ ವಿಕೋಪ
ಜಮ್ಮು-ಕಾಶ್ಮೀರದಲ್ಲಿ ಆರ್.ಕೆ. ಕೌಲರ ಎರಡೂ ಮನೆಗಳು ಭಯೋತ್ಪಾದಕರ ಹಿಂಸಾಚಾರದಲ್ಲಿ ಸುಟ್ಟುಹೋದವು.
ಇನ್ಯೂರೆನ್ಸ್ ಕಂಪೆನಿಯ ಸರ್ವೇಯರ್ ಪರಿಶೀಲಿಸಿ ರೂ. 2,10,858 ನಷ್ಟವಾಗಿದೆ ಎಂದು ವರದಿಯಿತ್ತರು. ಆದರೆ ಯುನ್ನೆಟೆಡ್ ಇಂಡಿಯಾ ಇನ್ಯೂರೆನ್ಸ್ ಕಂಪನಿ, ಎರಡೂ ಮನೆಗಳಿಗೆ ಶೇ. 50 ಸವಕಳಿ (ಡಿಪ್ರೆಸಿಯೇಶನ್) ಆಗಿದೆಯೆಂದು ನಿರ್ಧರಿಸಿ ಕೇವಲ ರೂ. 95,000 ನಷ್ಟ ಪರಿಹಾರ ಮಂಜೂರು ಮಾಡಿತು. ಕೌಲರು ಇದರ ವಿರುದ್ದ ಬಳಕೆದಾರರ ದೂರು ಪರಿಹಾರದ ರಾಷ್ಟ್ರೀಯ ಕಮಿಷನಿಗೆ ದೂರು ಸಲ್ಲಿಸಿದರು. ಅಲ್ಲಿ ಕೌಲರ ಪರವಾಗಿಯೇ ತೀರ್ಪು ಬಂತು. ಪಾಲಿಸಿ ಪಡೆದ ದಿನಾಂಕದಿಂದ ಕೇವಲ 6 ತಿಂಗಳು ಆಗುವಾಗ ನಷ್ಟ ಸಂಭವಿಸಿದೆ. ಆದ್ದರಿಂದ ಸವಕಳಿ
ಶೇ. 10 ಎಂದು ಕಮಿಶನ್ ನಿರ್ಧರಿಸಿತು. ಆ ಪ್ರಕಾರ ಕೌಲರಿಗೆ ಪರಿಹಾರ ಪಾವತಿಸಲು ಆದೇಶಿಸಿತು.

ಬೆಂಕಿ ಮತ್ತು ಭೂಕಂಪ, ನೆರೆ, ಬಿರುಗಾಳಿ ಇಂತಹ ಪ್ರಾಕೃತಿಕ ವಿಕೋಪಗಳಿಂದಾಗುವ ನಷ್ಟವನ್ನು ವಿಮೆ ಮಾಡುವ ಈ ಸೆಕ್ಷನಿನಲ್ಲಿ ಎರಡು ಭಾಗಗಳಿವೆ : ಕಟ್ಟಡ ಮತ್ತು ಅದರಲ್ಲಿರುವ ಸೊತ್ತುಗಳು. ಮನೆ ನಿಮ್ಮ ಸ್ವಂತದ್ದಾದರೆ ಮನೆಯ ಕಟ್ಟಡ ಮತ್ತು ಸೊತ್ತುಗಳನ್ನು ವಿಮೆ ಮಾಡಬಹುದು. ಎಲ್ಲ ಸೊತ್ತುಗಳನ್ನು ವಿಮೆ ಮಾಡುವುದು ಕಡ್ಡಾಯ.

ಹುಲ್ಲಿನ ಛಾವಣಿಯ ಮನೆಗಳ ಹೊರತಾಗಿ ಬೇರೆಲ್ಲ ಮನೆಗಳನ್ನೂ ವಿಮೆ ಮಾಡಬಹುದು. ಸಾರ್ವಜನಿಕ ರಂಗದ ವಿಮಾ ಕಂಪೆನಿಗಳ ಪಾಲಿಸಿಯಲ್ಲಿ ಪ್ರೀಮಿಯಂ ದರ ರೂ. 1,000 ಮೌಲ್ಯಕ್ಕೆ 65 ಪೈಸೆ. ಅಂದರೆ ಮನೆಗೆ ರೂ. 10 ಲಕ್ಷದ ವಿಮೆ ಮಾಡಿದರೆ ವಾರ್ಷಿಕ ಪ್ರೀಮಿಯಂ ಕೇವಲ ರೂ. 650. ಕೆಲವು ಖಾಸಗಿ ಕಂಪನಿಗಳ ಪ್ರೀಮಿಯಂ ಇದಕ್ಕಿಂತಲೂ ಕಡಿಮೆ. ಕಟ್ಟಡದ ಸೊತ್ತುಗಳಿಗೂ ರೂ. 1,000 ಮೌಲ್ಯಕ್ಕೆ 65 ಪೈಸೆಯಂತೆ ಪ್ರೀಮಿಯಂ ಪಾವತಿಸಿ ವಿಮೆ ಮಾಡಿಸಿರಿ.

ಕಳ್ಳತನದಿಂದ ನಷ್ಟ
ಉತ್ತರಪ್ರದೇಶದ ಬಹ್‌ರ್‌ಯಾಚಿನ ರಾಂ ಹರ್ಷವರ್ಮ ಮನೆಯವ ರೊಂದಿಗೆ ಗೋರಖ್‌ಪುರಕ್ಕೆ ಮದುವೆಗೆ ಹೋಗಿ ಹಿಂತಿರುಗಿದಾಗ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಆವರು ಪೋಲೀಸ್ ರಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿ,
ತನ್ನ ಮನೆ ವಿಮೆ ಮಾಡಿದ್ದ ನ್ಯಾಶನಲ್ ಇನ್ಯೂರೆನ್ಸ್ ಕಂಪೆನಿಗೂ ತಿಳಿಸಿದರು. ಅನಂತರ ರೂ. 65,500ಕ್ಕೆ ಕ್ಲೈಮ್ ಸಲ್ಲಿಸಿದರು. ಆದರೆ ನ್ಯಾಶನಲ್ ಇನ್ನೂರೆನ್ಸ್ ನೀಡಿದ ಪರಿಹಾರ ಕೇವಲ ರೂ. 10,800. ಈ ವಿವಾದ ದಿಲ್ಲಿಯ ಜಿಲ್ಲಾ ಬಳಕೆದಾರರ ಕೋರ್ಟಿಗೆ ಹೋಗಿ, ಅನಂತರ ದಿಲ್ಲಿಯ ರಾಜ್ಯ ಕಮಿಷನಿನ ಎದುರು ಬಂತು. ಅಲ್ಲಿ ನ್ಯಾಶನಲ್ ಇನ್ನೂರೆನ್ಸಿನ ವಾದ ಹೀಗಿತ್ತು: ವಿಮಾ ಪಾಲಿಸಿಯಲ್ಲಿ ನಮೂದಿಸದ ವಸ್ತುಗಳನ್ನು ಕೈಮ್ ಅರ್ಜಿಯಲ್ಲಿ ಸೇರಿಸಲಾಗಿದೆ. ಎಫ್ಐಆರ್ ನಲ್ಲಿ ಕಳವಾದ ವಸ್ತುಗಳ ಮೌಲ್ಯ ನಮೂದಿಸಿಲ್ಲ. ಮನೆಯವರು ಮದುವೆಗೆ ಹೋದಾಗ ಒಡವೆ ಮತ್ತು ಸೀರೆಗಳನ್ನು ಒಯ್ದಿರುತ್ತಾರೆ. (ಹಾಗಾಗಿ ಕಳವಾಗಲು ಸಾಧ್ಯವಿಲ್ಲ) ಒಡವೆಗಳ ಮೌಲ್ಯಮಾಪನ
ಸರ್ಟಿಫೀಕೇಟ್ ಒದಗಿಸಿಲ್ಲ. ಆದ್ದರಿಂದ ಒಡವಗಳ ಚಿನ್ನದ ಶುದ್ದತೆಗೆ (ಕ್ಯಾರೆಟ್) ಆಧಾರವಿಲ್ಲ. ಅವರ ಟೆಲಿವಿಶನ್ ಹಳೆಯದು. ಹಾಗಾಗಿ ಅದರ ಮೌಲ್ಯ ಕಡಿಮೆ.

ಈ ಎಲ್ಲ ವಾದಗಳನ್ನು (ಟಿವಿಯ ಮೌಲ್ಯದ ಹೊರತಾಗಿ) ತಳ್ಳಿ ಹಾಕಿದ ರಾಜ್ಕ ಕಮಿಷನ್ ರೂ. 29,680ನ್ನು ಶೇ. 18 ವಾರ್ಷಿಕ ಬಡ್ಡಿ ಸಹಿತ ವರ್ಮರಿಗೆ ಪಾವತಿಸಬೇಕೆಂದು ನ್ಯಾಶನಲ್ ಇನ್ಯೂರೆನ್ಸ್ ಕಂಪೆನಿಗೆ ಆದೇಶಿಸಿತು.

ಮನೆಯ ವಿಮೆ ಮಾಡುವಾಗ ಕಳ್ಳತನದಿಂದಾಗುವ ನಷ್ಟಕ್ಕಾಗಿ ಪ್ರತ್ಯೇಕ ವಿಮೆ ಮಾಡಿಸಿರಿ. ಯಾಕೆಂದರೆ ಇವೆರಡೂ ಬೇರೆ ಬೇರೆ ನಷ್ಟ ಸಂಭವಗಳು. ಇದಕ್ಕಾಗಿ ಸಾರ್ವಜನಿಕ ರಂಗದ ವಿಮಾ ಪಾಲಿಸಿಗಳ ಪ್ರೀಮಿಯಂ ರೂ. 480. ಖಾಸಗಿ ಕಂಪನಿಗಳ ಪಾಲಿಸಿಗಳ ಪ್ರೀಮಿಯಂ ದರ ಇದಕ್ಕಿಂತ ತುಸು ಕಡಿಮೆ.

ಬೆಂಕಿ ಬಿದ್ದಾಗ ಮನೆಯ ಎಲ್ಲ ಸೊತ್ತುಗಳೂ ಸುಟ್ಟು ಹೋದಾವು. ಆದರೆ ಕಳ್ಳನೊಬ್ಬ ಮನೆಯ ಬೆಲೆಬಾಳುವ ಸೊತ್ತುಗಳನ್ನು ಮಾತ್ರ ಕದ್ದು ಒಯ್ದಾನು. ಆದ್ದರಿಂದ ಇನ್ನೂರೆನ್ಸ್ ಕಂಪೆನಿಗಳು ಪಾಲಿಸಿದಾರರಿಗೆ ಒಂದು ಆಯ್ಕೆ ನೀಡುತ್ತವೆ : ಮನೆಯ ಎಲ್ಲ ಸೊತ್ತುಗಳನ್ನೂ ಕಡಿಮೆ ಮೊತ್ತಕ್ಕೆ ವಿಮೆ ಮಾಡಿಸುವ ಆಯ್ಕೆ. ಇದನ್ನು ‘ಮೊದಲ ನಷ್ಟದ ಆಧಾರದ ವಿಮೆ’ ಎನ್ನುತ್ತಾರೆ. ಉದಾಹರಣೆಗೆ, ನಿಮ್ಮ ಮನೆಯ ಸೊತ್ತುಗಳ ಮೌಲ್ಯ ರೂ. 2 ಲಕ್ಷಗಳು ಎಂದಿರಲಿ. ನೀವು ಅವನ್ನೆಲ್ಲ ಅರ್ಧ ಮೌಲ್ಯಕ್ಕೆ ವಿಮೆ ಮಾಡಿಸಬೇಕೆಂದಾದರೆ, ಶೇ. 50 ‘ಮೊದಲ ನಷ್ಟದ ಆಧಾರದ ವಿಮೆ’ ಆಯ್ಕೆ ಮಾಡಿರಿ,

ನೆನಪಿರಲಿ :ಮನೆಯ ಎಲ್ಲ ಸೊತ್ತುಗಳ ಪಟ್ಟಿ ವಿಮಾ ಕಂಪೆನಿಗೆ ಕೊಡಬೇಕು. ವಾಹನ, ಸೈಕಲ್ ಅಥವಾ ಜಾನುವಾರುಗಳ ಕಳ್ಳತನದಿಂದಾಗುವ ನಷ್ಟ ಈ ವಿಮೆಯಲ್ಲಿ ಸೇರಿಲ್ಲ. ನಗದು, ಸೆಕ್ಯುರಿಟಿಗಳು, ಸ್ಟಾಂಪ್ ಗಳು, ಬುಲಿಯನ್ ಗಳು, ಬಾಂಡ್ ಗಳು, ಷೇರುಪತ್ರಗಳು, ದಾಖಲೆ ಪತ್ರಗಳು, ಅಮೂಲ್ಯ ಹರಳುಗಳು, ಒಡವೆ ಮತ್ತು ಕೆಮರಾದಂತಹ ಬೆಲೆ ಬಾಳುವ ವಸ್ತುಗಳು ಈ ವಿಮೆಯಲ್ಲಿ ಸೇರಿಲ್ಲ. ಮನೆಯಲ್ಲಿ ಸತತವಾಗಿ 60 ದಿನಗಳು ಯಾರೂ ವಾಸವಿಲ್ಲದಿದ್ದರೆ ಈ ವಿಮೆಯಿಂದ ನಷ್ಟ ಪರಿಹಾರ ಸಿಗುವುದಿಲ್ಲ.

ಒಡವೆ ಇತ್ಯಾದಿ
ಒಡವೆ, ಕೆಮರಾ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಪ್ರತ್ಯೇಕ ಸೆಕ್ಷನಿನ ಪ್ರಕಾರ ವಿಮೆ ಮಾಡಿಸಬೇಕು. ಕೆಲವು ಕಂಪೆನಿಗಳು ಪಾಲಿಸಿದಾರರ ನಿರ್ಲಕ್ಷದಿಂದ ಅಥವಾ ಪ್ರಯಾಣದಲ್ಲಿ ಇವನ್ನು ಕಳೆದುಕೂಂಡರೆ ನಷ್ಟ ಪರಿಹಾರ ನೀಡುವುದಿಲ್ಲ. ವಿಮೆ ಮಾಡಿಸಲಿಕ್ಕಾಗಿ ಎಲ್ಲ ಒಡವೆ ಮತ್ತು ಬೆಲೆ ಬಾಳುವ ವಸ್ತುಗಳ ಮೌಲ್ಯಸಹಿತ ಪಟ್ಟಿ ಮಾಡಬೇಕು. ಆ ಮೊತ್ತವೇ ವಿಮಾ ಮೊತ್ತ. ಸಾರ್ವಜನಿಕ ರಂಗದ ಕಂಪನಿಗಳ ಪಾಲಿಸಿಯಲ್ಲಿ ಇದಕ್ಕೆ ರೂ. 1.000 ಮೊತ್ತಕ್ಕೆ ರೂ. 10.05ರಂತೆ ಪ್ರೀಮಿಯಂ ಲೆಕ್ಕಾಚಾರ. ನಿಮ್ಮ ಒಡವೆ ಇತ್ಯಾದಿಗಳನ್ನು ರೂ. 2 ಲಕ್ಷಗಳ ಮೊತ್ತಕ್ಕೆ ವಿಮೆ ಮಾಡಿಸಿದರೆ ಪ್ರೀಮಿಯಂ ರೂ. 2,010.

ನೆನಪಿರಲಿ : ನಿಮ್ಮ ಪಟ್ಟಿಯಲ್ಲಿ ಒಂದು ವಸ್ತುವಿನ ಮೌಲ್ಯ ಒಟ್ಟು ಮೌಲ್ಯದ ಶೇ. 10ಕ್ಕಿಂತ ಜಾಸ್ತಿ ಇದ್ದರೆ, ಅದರ ಬಿಲ್ ಅಥವಾ ಮೌಲ್ಯಮಾಪನ ಸರ್ಟಿಫೀಕೇಟ್ ಅವಶ್ಯವಾಗಿ ತೆಗೆದಿರಿಸಿರಿ. ನಿಮ್ಮ ಒಡವೆ ಇತ್ಯಾದಿ ವಸ್ತುಗಳನ್ನು ಬ್ಯಾಂಕಿನ ಲಾಕರ್ ನಲ್ಲಿ ಇರಿಸಿದ್ದರೆ, ಆ ಬ್ಯಾಂಕಿನ ಹೆಸರು, ವಿಳಾಸ ವಿಮಾ ಕಂಪೆನಿಗೆ ತಿಳಿಸಿರಿ. ಇವೆರಡನ್ನು ಅನುಸರಿಸದಿದ್ದರೆ ಕ್ಲೈಮ್ ಮಾಡಿದಾಗ ವಿಮಾ ಕಂಪೆನಿಗಳು ತಕರಾರು ಎತ್ತುತ್ತವೆ.

ಗೃಹ ಸಾಧನಗಳು  ವಾಷಿಂಗ್ ಮೆಶಿನ್ ಇತ್ಯಾದಿ ಗೃಹಸಾಧನಗಳನ್ನು ಬೆಂಕಿ ಮತ್ತು ಕಳ್ಳತನದಿಂದಾಗುವ ನಷ್ಟಕ್ಕಾಗಿ ವಿಮೆ ಮಾಡಿದರೆ ಸಾಲದು. ಅವು ಕೆಟ್ಟು ಹೋದರೆ? ಅದಕ್ಕಾಗಿ ಈ ಬಗ್ಗೆ ಪ್ರತ್ಯೇಕ ವಿಮೆ ಮಾಡಿಸಬೇಕು. ಇದಕ್ಕೆ ಬಹುಪಾಲು ಕಂಪನಿಗಳ ಪ್ರೀಮಿಯಂ ದರ ರೂ. 1,000 ಮೌಲ್ಯಕ್ಕೆ ರೂ. 2.50 ಆಂದರೆ ರೂ. 1 ಲಕ್ಷ ಮೌಲ್ಯದ ಗ್ಯಹಸಾಧನಗಳಿಗೆ ಪ್ರೀಮಿಯಂ ರೂ. 250. ಕೆಲವು ವಿಮಾ ಕಂಪೆನಿಗಳು 10 ವರುಷ ಮೀರಿದ
ಸಾಧನಗಳ ವಿಮೆ ಮಾಡುವುದಿಲ್ಲ.

ನೆನಪಿರಲಿ : ಗೃಹ ಸಾಧನಗಳ ಖರೀದಿ ಬಿಲ್ಗಳು ಅವುಗಳ ಮೌಲ್ಯದ ಪುರಾವೆ ಇವನ್ನು ಜೋಪಾನವಾಗಿ ತೆಗೆದಿರಿಸಿರಿ. ಮನೆ ವಿಮೆ ಪಾಲಿಸಿ ಪಡೆದ ಬಳಿಕ ಯಾವುದೇ ಗೃಹ ಸಾಧನ ಖರೀದಿಸಿದರೆ ಆಥವಾ ಬದಲಾಯಿಸಿದರೆ, ಇದರ ಹೆಚ್ಚಿನ ಮೌಲ್ಯವನ್ನು ವಿಮೆಗೆ ಕೂಡಿಸಿ, ವಿಮಾ ಕಂಪೆನಿಗೆ ಹೆಚ್ಚಿನ ಪ್ರೀಮಿಯಂ ಪಾವತಿಸಿರಿ. ಗೃಹಸಾಧನ ಕೆಟ್ಟು ಹೋದರೆ ತತ್‌ಕ್ಷಣವೇ ವಿಮಾ ಕಂಪೆನಿಗೆ ತಿಳಿಸಿರಿ; ಅವರ ಸರ್ವೇಯರ್ ಪರಿಶೀಲಿಸಿದ ಅನಂತರ ರಿಪೇರಿ ಮಾಡಿಸಿರಿ. ರಿಪೇರಿಯ ವೆಚ್ಚವನ್ನು ವಿಮಾ ಕಂಪೆನಿ ಅನುಮೋದಿಸಿದರೆ ಅದನ್ನು ಲಿಖಿತವಾಗಿ ಪಡೆಯಿರಿ. ರಿಪೇರಿಯ ಬಳಿಕ ವಿಮಾ ಕಂಪೆನಿಗೆ ಬಿಲ್ ಸಲ್ಲಿಸಿ ಕ್ಲೈಮ್ ಪಡೆಯಿರಿ.

ಇಲೆಕ್ಟ್ರಾನಿಕ್ ಸಾಧನಗಳು
ಟಿವಿ, ವಿಸಿಆರ್, ವಿಸಿಡಿ, ಡಿವಿಡಿ ಪ್ಲೇಯರ್, ಸಂಗೀತ ಸಿಸ್ಟಂಗಳು, ಕಂಪ್ಯೂಟರ್ಗಳು . ಇವೆಲ್ಲ ಇಲೆಕ್ಟ್ರಾನಿಕ್ ಸಾಧನಗಳನ್ನು ಬೆಂಕಿ ಆಥವಾ ಕಳವಿನಿಂದಾಗುವ ನಷ್ಟಕ್ಕಾಗಿ ವಿಮೆ ಮಾಡಿಸಿದರೆ ಸಾಕಾಗದು. ಅವು ಕೆಟ್ಟುಹೋದರೆ ಆಗುವ ನಷ್ಟಕ್ಕಾಗಿಯೂ ವಿಮೆ ಮಾಡಿಸಬೇಕು. ಪ್ರೀಮಿಯಂ ದರ ರೂ. 1,000 ಮೌಲ್ಯಕ್ಕೆ ರೂ. 10.5. ಕೆಲವು ಖಾಸಗಿ ಕಂಪೆನಿಗಳು 10 ವರುಷಗಳಿಗಿಂತ ಹಳೆಯದಾದ ಸಾಧನಗಳನ್ನು ವಿಮೆ ಮಾಡುವುದಿಲ್ಲ. ಈ ಸಾಧನಗಳಿಗೆ ಗರಿಷ್ಠ ಶೇ. 50 ಸವಕಳಿ ಪರಿಗಣಿಸುತ್ತಾರೆ. ಕೆಟ್ಟು ಹೋದ ಸಾಧನವನ್ನು ರಿಪೇರಿ ಮಾಡುವಂತಿದ್ದರೆ, ವಿಮಾ ಕಂಪೆನಿ ಪಾಲಿಸಿದಾರರಿಗೆ ರಿಪೇರಿ ವೆಚ್ಚವನ್ನು ಮಾತ್ರ ನಷ್ಟ ಪರಿಹಾರವಾಗಿ ನೀಡುತ್ತದೆ. ಯಾವುದೇ ಸಾಧನದ ನ್ಯೂನತೆ ಆಥವಾ ರಿಪೇರಿಗೆ ಉತ್ಪಾದಕ / ಮಾರಾಟಗಾರ ಜವಾಬ್ದಾರಿ (ಉದಾ :ಗ್ಯಾರಂಟಿ ಅವಧಿಯಲ್ಲಿ) ಎಂದಾದರೆ, ವಿಮಾ ಕಂಪೆನಿ ನಷ್ಟ ಪರಿಹಾರ ಪಾವತಿಸುವುದಿಲ್ಲ.

ಮನೆ ವಿಮೆ ಪಾಲಿಸಿಗಾಗಿ ಮನೆವಿಮೆ ಪಾಲಿಸಿ ಪಡೆಯುವುದು ಬಹಳ ಸುಲಭ. ನಿಮ್ಮ ಮನೆಯ ಮೌಲ್ಯ ತಿಳಿದುಕೊಳ್ಳಿರಿ. ಅನಂತರ ಮನೆಯಲ್ಲಿರುವ ಸೊತ್ತುಗಳನ್ನು ಅವುಗಳ ಮೌಲ್ಯದ ಸಹಿತ ಪಟ್ಟಿ ಮಾಡಿರಿ. ಎಲ್ಲ ಗೃಹಸಾಧನಗಳ ಗುರುತಿನ ನಂಬರನ್ನು (ಉತ್ಪಾದಕರು ಸಾಧನದಲ್ಲಿ ಆಥವಾ ಮಾರಾಟಗಾರ ಬಿಲ್‌ನಲ್ಲಿ ನಮೂದಿಸಿದ್ದರೆ) ಬರೆದುಕೊಳ್ಳಿರಿ. ಇಲ್ಲವಾದರೆ ನೀವೇ ಒಂದು ಗುರುತಿನ ನಂಬರ್ ಹಚ್ಚಿರಿ. ಎಲ್ಲ ವಸ್ತುಗಳನ್ನು ಈ  ಲೇಖನದಲ್ಲಿ ಸೈಡ್ ಹೆಡ್ಡಿಂಗ್ ಗಳಲ್ಲಿ ಸೂಚಿಸಿದಂತೆ ಬೇರೆ ಬೇರೆ ಸೆಕ್ಷನಿನ ಆನುಸಾರ ವಿಂಗಡಿಸಿ ಪ್ರತೇಕವಾಗಿ
ಪಟ್ಟಿ ಮಾಡಿರಿ. ಅನಂತರ ವಿಮಾ ಕಂಪೆನಿಯ ಅರ್ಜಿ ಫಾರಂನಲ್ಲಿ ನಮೂದಿಸಿದ ದರಗಳ ಪ್ರಕಾರ ನೀವೇ ಪ್ರೀಮಿಯಂ ಲೆಕ್ಕ ಹಾಕಿರಿ. ನಿಮ್ಮ ಎಲ್ಲ ಅನುಮಾನಗಳಿಗೂ ಪ್ರಶ್ನೆಗಳಿಗೂ ವಿಮಾ ಏಜೆಂಟರಿಂದ ಆಥವಾ ಅಧಿಕಾರಿಗಳಿಂದ ಲಿಖಿತ ಆಥವಾ ಮುದ್ರಿತ ಉತ್ತರ ಪಡೆಯಿರಿ. ಹೆಚ್ಚಿನ ಸೆಕ್ಷನ್‌ಗಳ ಅನುಸಾರ ವಿಮೆ ಮಾಡಿಸಿದರೆ ಸಿಗುವ ಡಿಸ್ಕೌಂಟನ್ನು ಕಳೆಯಿರಿ. ಹೀಗೆ ಲೆಕ್ಕ ಹಾಕಿದ ಪ್ರೀಮಿಯಂ ಪಾವತಿಸಿ, ಮನೆ ವಿಮೆ ಪಾಲಿಸಿ ಪಡೆಯಿರಿ. ಪ್ರತಿ ವರುಷವೂ ಮನೆ ವಿಮೆ ಪಾಲಿಸಿ ನೆನಪಿನಿಂದ ನವೀಕರಿಸಿರಿ.

****************************************
ಸರಿಯಾದ ಮೊತ್ತಕ್ಕೆ ವಿಮೆ ಮಾಡಿಸಿರಿ

ಈ ಲೇಖನದಲ್ಲಿ ಮನೆವಿಮೆ ಪಾಲಿಸಿಯ ಬೇರೆ ಬೇರೆ ಸೆಕ್ಷನ್ ಗಳ ವಾರ್ಷಿಕ ಪ್ರೀಮಿಯಂ ದರಗಳನ್ನು |ರೂ. 1,000 ಮೌಲ್ಯಕ್ಕೆ ನಮೂದಿಸಲಾಗಿದೆ.

ನೆನಪಿರಲಿ : ಪ್ರತೀ ವರುಷವೂ ಪಾಲಿಸಿ ನವೀಕರಿಸಬೇಕು. ಬದಲಾಗಿ 3 ಆಥವಾ 6 ವರುಷಗಳ ಆವಧಿಯ ಪಾಲಿಸಿ ಲಭ್ಯವಿದ್ದರೆ ಅದನ್ನು ಪಡೆಯಬಹುದು.

ಸುಲೋಚನಾ ಮತ್ತು ದಿನೇಶ್ ದಲಾಲ್ ತಮ್ಮ ಮನೆ ಮತ್ತು ಸೊತ್ತುಗಳಿಗೆ ವಿಮಾ ಪಾಲಿಸಿ ಪಡೆದಿದ್ದರು. ಹಲವು ವರುಷಗಳಿಂದ ಆ ಪಾಲಿಸಿ ನವೀಕರಿಸುತ್ತ ಬಂದಿದ್ದರು. ಒಮ್ಮೆ ಅವರ ಮನೆಯಲ್ಲಿ ಕಳ್ಳತನವಾಯಿತು. ಅನಂತರ ವಿಮಾ ಕಂಪೆನಿಗೆ ಕ್ಲೈಮ್ ಸಲ್ಲಿಸಿದಾಗಲಷ್ಟೇ ತಾವು ಪಾಲಿಸಿ ನವೀಕರಿಸುವಾಗ ಮಾಡಿದ್ದ ತಪ್ಪು ಏನೆಂಬುದು ಅವರಿಗೆ ತಿಳಿಯಿತು.

ವರುಷದಿಂದ ವರುಷಕ್ಕೆ ತಮ್ಮ ಒಡವೆಗಳ ಮೌಲ್ಯ ಅಧಿಕವಾಗುತ್ತಿದ್ದರೂ ಅವರು ಅದನ್ನು ಪಾಲಿಸಿಯಲ್ಲಿ ನಮೂದಿಸಿ ಹೆಚ್ಚಿನ ಪ್ರೀಮಿಯಂ ಪಾವತಿಸಿರಲಿಲ್ಲ. ಅವರ ಒಡವೆಗಳ ಸರಿಯಾದ ಮೌಲ್ಯ ರೂ. 6 ಲಕ್ಷಗಳು ಆಗಿತ್ತು. ಆದರೆ ಅವರು ಅದನ್ನು ಕೇವಲ ರೂ. 2 ಲಕ್ಷಗಳಿಗೆ ವಿಮೆ ಮಾಡಿಸಿದ್ದರು. ಕೊನೆಗೆ ವಿಮಾ ಕಂಪನಿ ಅಷ್ಟೇ ಪರಿಹಾರ ಪಾವತಿಸಿತು. ಒಂದೇಟಿಗೆ ಅವರಿಗೆ 4 ಲಕ್ಷ ರೂಪಾಯಿಗಳ ನಷ್ಟವಾಗಿತ್ತು. ತಮಗೆ ವಿಮಾ ಏಜೆಂಟರಾಗಲೀ ಅಧಿಕಾರಿಗಳಾಗಲೀ ಸೂಕ್ತ ಮಾಹಿತಿ ನೀಡಲಿಲ್ಲ ಎಂಬುದು ಅವರ ಅಳಲು. ಅದಲ್ಲದೇ ಅಮೇರಿಕದಲ್ಲಿರುವ ಮಗಳು ತಮ್ಮ ಮನೆಯಲ್ಲಿಟ್ಟಿದ್ದ 2 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಅವರು ವಿಮೆ ಮಾಡಿಸಿರಲಿಲ್ಲ. ಅಷ್ಟೇ ಆಲ್ಲ, ವಿಮೆ ಮಾಡಿಸಿದ್ದ ರೂ. 40,000 ಮೌಲ್ಯದ ಪೆಂಡೆಂಟನ್ನು ಅವರು ಎಫ್‌ಐಆರ್ ನಲ್ಲಿ ನೆಕ್ಲೇಸ್ ಎಂದು ನಮೂದಿಸಿದ್ದರಿಂದ ಅದರ ಕ್ಲೈಮನ್ನೂ ವಿಮಾ ಕಂಪೆನಿ ತಿರಸ್ಕರಿಸಿತು.

ಅಂತೂ ಮನೆ ವಿಮೆ ಪಾಲಿಸಿ ನವೀಕರಿಸಿದ್ದರೂ ಶರ್ಮರಿಗೆ ಒಟ್ಟಾಗಿ ರೂ. 6,40,000/= ನಷ್ಟವಾಯಿತು. ಮನೆ ವಿಮೆ ಪಾಲಿಸಿ ನವೀಕರಿಸುವಾಗ ಅವರು ಒಡವೆಗಳ ಸರಿಯಾದ ಮೌಲ್ಯಕ್ಕೆ ವಿಮೆ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ.

ಉದಯವಾಣಿ 4-3-2004

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡೊಳ್ಳನ ಪದ
Next post ನಗೆಡಂಗುರ-೧೩೯

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys