ಮಳೆ ಎಂದರೆ
ಮೋಡ ಮಿಂಚು
ಗುಡುಗು ಸಿಡಿಲು.

ಮಳೆ ಎಂದರೆ
ಹಳ್ಳ ಕೊಳ್ಳ
ನದಿ ಹೊಳೆ.

ಮಳೆ ಎಂದರೆ
ಚಹಾ ಚುರುಮುರಿ
ಕಂಬಳಿ ಕೊಡೆ.

ಮಳೆ ಎಂದರೆ
ಸೋರುವ ಸೂರು
ಮುರಿದ ಚಾವಣಿ.

ಮಳೆ ಎಂದರೆ
ಬುಡ ಕಡಿದ ಮರ
ಉದುರಿದ ಹೂವು ಎಲೆ.

ಮಳೆ ಎಂದರೆ ಬೆಳೆ
ಮಳೆ ಎಂದರೆ ಹೊಳೆ
ಮಳೆ ಎಂದರೆ ಕಳೆ.

ಮಳೆ ಎಂದರೆ
ನನ್ನೊಳಗಿರುವ
ನಿನ್ನ ಪ್ರೀತಿಯ ಹಾಗೆ.
ಕನಸು ಕಾಮನಬಿಲ್ಲು-
ಮುಗಿದ ಬೇಸಿಗೆ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)