‘ನಂದನವನ ಮಕರಂದವನು ತರಲು ನಡೆದ ಜಾಣ! ಬಂದೆಯಲ್ಲ! ತಂದುದೇನು?’ `ಬರಿಯ ಪಂಚಪ್ರಾಣ. ಮಿಂಚಿತೆಂದು ಮುಂದೆ ನಡೆದೆ. ಕಾಮಾಕ್ಷಿಯೆ! ನಿನ್ನ ಬಿಟ್ಟ ದಿನವೆ ಕವಿಯಿತೆನ್ನ ಕತ್ತಲಂಥ ಬನ್ನ! ನಂದಿತೇನೊ ಎನ್ನ ಬೆಳಕು ಇಂಗಿತೇನೊ ಘ್ರಾಣ? ಅಂತೆ ಬಂತು ನಿನ್ನನರಸಿ ನನ್ನ ಪಂಚಪ್ರಾಣ!’ ‘ಪಣವ ತ...

ಮನುಷ್ಯರು ಹುಟ್ಟುತ್ತಾರೆ, ಬೆಳೆಯುತ್ತಾರೆ, ವೃದ್ಧರಾಗುತ್ತಾರೆ. ಒಂದು ದಿನ ಸಾಯಲೂಬೇಕು. ಆದರೆ ವೃದ್ಧರಾಗಿ ಸಾಯುವತನಕದ ಕಾಲ ಅವರು ಅನೇಕ ರೋಗರುಜಿನುಗಳಿಗೆ ತುತ್ತಾಗಬಹುದು, ಏಕಾಕಿಯಾಗಬಹುದು. ಆಗ ನೋಡಿಕೊಳ್ಳುವುದಕ್ಕೆ ಮನೆ ಮಂದಿ ಬೇಕಾಗುತ್ತಾರೆ....

ಬಾನಂಗಣದಲ್ಲಿ ಮಲಗಿ ಉಸಿರೆಳೆಯುತ್ತಿದೆ ಹಗಲು. ರೋಗಿಯ ಸುತ್ತಮುತ್ತ ಮಿಕಿ ಮಿಕಿ ನೋಡುತ್ತ ತಲ್ಲಣಿಸಿ ಕಾಯುತ್ತಿವೆ ಕೆಂಪಗೆ ಹತ್ತಾರು ಪುಟ್ಟ ಮುಗಿಲು. ಬೆಳಗಿನ ಎಳೆಪಾಪ ಮಧ್ಯಾಹ್ನಕ್ಕೆ ಬೆಳೆದು, ಮಧ್ಯಾಹ್ನದ ಉರಿ ಪ್ರತಾಪ ಮುಸ್ತಂಜೆಗೆ ಕಳೆದು ಈಗ ಕ...

ಬಹಿರಂಗದಲಿ ರೊಟ್ಟಿ ಹಸಿವಿನ ಸಮಾನ ಸಂಗಾತಿ. ಅಂತರಾಳದಲಿ ಅಂತರಗಳ ವಿಜೃಂಭಣೆ. ಹಸಿವಿನ ಮೇಲರಿಮೆಯಲಿ ರೊಟ್ಟಿಯ ಹೆಡ್ಡತನಗಳು ಢಾಳಾಗಿ ಗೋಚರಿಸಿ ಕೀಳರಿಮೆಯಲಿ ನರಳಿಕೆ. ಮನಸುಗಳ ದೂರ ವಿಸ್ತಾರ....

ಆಕಾಶ ಭೂಮಿ ಮಹದ್ ಕಾವ್ಯ ಮರವೃಕ್ಷ ಸಕಲ ವೇದ ಗಿಡಬಳ್ಳಿ ಸರಳ ರಗಳೆ ಪೊದೆಕಳ್ಳಿ ಕಥೆ ಕಾದಂಬರಿ ನದಿನಾಲೆ ಪ್ರವಾಸ ಕಥನ ಸರೋವರ ಚಿಲುಮೆ ಭಾವಗೀತೆ ಸಾಗರ ಗ್ರಂಥಾಲಯ ಆಗರ ಯುಗಯುಗಕು ಮುಫ್ತಲಿ ಸಿಗುವ ಪಠ್ಯ ಪುಸ್ತಕಗಳಿವು ನಿಂತು ಓದು ಬಾ ಮಾನವ ಕುರುಡ ಬ...

ಸದಾ ತನ್ನ ಆಕಾರ ಬದಲಿಸುತ್ತಾ ನೋಟಕ್ಕೆ ದಕ್ಕಿ ಕೈಗೆ ನಿಲುಕದ ಫಳ ಫಳ ಹರಿಯುವ ಹಾಸುಬೀಸು ತೆಂಗು ಸಾಲುಸಾಲು ಹಕ್ಕಿ ರೆಕ್ಕೆ ಬಿಚ್ಚಿ ತೇಲಿ ಬಂದು ಮೋಡವಿರದ ಶುಭ್ರನೀಲಿ ನೆಲಮುಟ್ಟದೇ ಅಲೆಯುತ್ತಿದ್ದಾಳೆ ನೇತ್ರಾವತಿ. ಗಾಳಿ ತೀಡಿ ಅಂತರಾಳದಿಂದ ನೆಲದಾ...

ಪ್ಯಾಂಟು ಶರ್ಟು ತೊಟ್ಟು ಬಾಯ್‌ಕಟ್ ಮಾಡಿಕೊಂಡು ಹೊಂಡಾ ಓಡಿಸುವ ಹುಡುಗಿ – ಡಾಕ್ಟರ್‍ ಇಂಜಿನೀಯರ ಆಫೀಸರ್‍ ಬಿಸಿನೆಸ್‌ಮ್ಯಾನ್ ಎನ್ನುತ್ತಾ ಕಾರು ಓಡಿಸುವ ಹುಡುಗಿ ತಿಂಗಳು ಕೊನೆಗೆ ಬಚ್ಚಲಲ್ಲಿ ಬ್ಯುಸಿಯಾಗಿ ಹೆಣ್ಣಾಗಿರುತ್ತಾಳೆ. ಕನ್ನಡಿಯ ...

ಯಾವುದೋ ಉಪನಿಷತ್ತು ಅಥವಾ ಭಗವದ್ಗೀತೆ ಹೇಳ್ತದಲ್ಲಾ ಹುಡುಕಿದರೆ ಸಿಗದ್ದು ಮರೆತಾಗ ಅಡ್ಡಬಂತು ಅಂತ. ಹಾಗೇ ಆಯಿತು. ಮರೆಯದಿದ್ದರೂ ಮರೆತ ಹಾಗೆ ನಟಿಸುತ್ತಿರುವಾಗಲೆ ಒಂದು ದಿನ ವಿನಯಚಂದ್ರ ಮನೆಬಾಗಿಲು ತೆರೆಯುತ್ತಿದ್ದಂತೆ ರೇಶ್ಮ ಕಾಲಿಂಗ್ ಬೆಲ್ ನ ...

ಮನಸು ಆಕಾಶಗಾಮಿ ದೇಹವನು ಮಾತ್ರ ಕರೆಯುವುದು ಭೂಮಿ ಆಹ್! ಯೊಹಾನಸ್ ಕೆಪ್ಲರ್ ಆಕಾಶವನಳೆದವನು ಭೂಮಿಯ ನೆರಳನಳೆಯುತ್ತಿರುವೆಯ ! ಆ ವಾಕ್ಯಗಳನೆಂತು ಮರೆಯುವುದು ಆ ಅರ್ಥಗಳನೆಂತು ಬರೆಯುವುದು ಒಂದು ಹೆಜ್ಜೆಯಲೆ ಕಲ್ಪಗಳ ದಾಟಿದವನೆ ಕವಿಯೆ, ವಿಜ್ಞಾನಿಯೆ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...