Home / ಲೇಖನ / ಇತರೆ / ಕಪ್ಪು ಬಣ್ಣದವರು – ದೊಡ್ಡವರ ಮೇಲೆ ಪ್ರೀತಿ

ಕಪ್ಪು ಬಣ್ಣದವರು – ದೊಡ್ಡವರ ಮೇಲೆ ಪ್ರೀತಿ

ಬೇಸಿಗೆ ಬಂದ ಹಾಗೆಲ್ಲ ಜನರು ತಂಗಾಳಿಯ ಸಲುವಾಗಿ ಬಾಯಿ ತೆಗೆದುಕೊಂಡು ಕೂಡುವರು, ಬಿಸಿಲು ಬಲಿತಂತೆ ಮನೆಯೊಳಗಿಂದ ಹೊರಗೆ ಬಂದು ಬಂಕದಲ್ಲಿ ಕುಳಿತುಕೊಳ್ಳುವರು. ಹೊರಗೆ ಕುಳಿತವರು ಸಮೀಪದ ಗಿಡಕ್ಕೆ ಹೋಗುವರು. ಶ್ರೀಮಂತರು ಮಹಾಬಳೇಶ್ವರ, ಉಟಕಮಾಂಡ ಸಿಮ್ಲಾ ಮುಂತಾದವುಗಳಿಗೆ ಹೋಗುವರು. ಬಡವರು ವರ್ತಮಾನಪತ್ರದಲ್ಲಿ ತಂಗಾಳಿಯನ್ನು ಓದುವರು !
****
ಕಪ್ಪು ಬಣ್ಣದವರೆಲ್ಲ ಕುರೂಪಿಗಳಲ್ಲ, ಕೆಂಪು ಬಣ್ಣದವರೆಲ್ಲ ಸುರೂಪಿಗಳೂ ಅಲ್ಲ. ಹಾಗೆ ಇದ್ದದ್ದಾದರೆ ಶೀತ ಪ್ರದೇಶದಲ್ಲಿರುವ ಬಿಳಿಯ ಬಣ್ಣದವರ ಶಬ್ದಕೋಶದಲ್ಲಿ “ಕುರೂಪಿ” ಎಂಬ ಶಬ್ದವೇ ಇರಬಾರದಾಗಿತ್ತು. ಅದರಂತೆ ಉಷ್ಣ ಕಟಿಬಂಧದಲ್ಲಿ ಇರುವ ಕಪ್ಪು ಜನರ ಶಬ್ದ ಕೋಶದಲ್ಲಿ “ಸುಂದರ” ಎಂಬ ಶಬ್ದವೂ ಇರಬಾರದು.  ಬಣ್ಣದವರನ್ನು ಕಂಡರೆ ನಗುವರು. ಆದರೆ ಇದರಲ್ಲಿ ಬಣ್ಣದವರದು ಏನು ತಪ್ಪು ? ಕೆಂಪು ಬಣ್ಣದವರನ್ನು ಕಂಡರೆ ತಾವು ನಗದಿರುವದೇ ಅವರ ತಪ್ಪು ! ಸದಾ ಸರ್ವರಿಗೂ ಉಪಯೋಗ ಬೀಳುವ ಕಬ್ಬಿಣವು ಕಪ್ಪು; ನಿತ್ಯ ರೊಟ್ಟಿಯನ್ನು ಬೇಯಿಸಿ ಕೊಡುವ ಹಂಚು ಕಪ್ಪು; ಮಸಿಯು ಕಪ್ಪು; ಚಹಾ ಪುಡಿ ಕಪ್ಪು, ಚಹಾ ಕುಡಿಯುವ ಬಟ್ಟಲದ ಬಣ್ಣವು ಬಿಳಿಯದಾದರೂ ಹೆಸರು ಕಪ್ಪು, ಹೀಗೆ ಕಪ್ಪು ಅಭಿಮಾನಾಸ್ಪದವಾಗಿರುವದೇ ಹೊರತು ತಿರಸ್ಕರಣೀಯವಾಗಿರುವದಿಲ್ಲ.
     *      *     *      *
ಮಿ. ಲಾಯಿಡ ಜಾರ್ಜರು ಜಗತ್ತಿನ ರಾಜಕಾರಣ ಚತುರರಲ್ಲಿ ಶ್ರೇಷ್ಠರೆಂದು ಎಣಿಸಲ್ಪಡುತ್ತಾರೆ. ಇವರು ೧೯೧೨ನೆಯ ಇಸ್ವಿಯಲ್ಲಿ ಇಂಗ್ಲೆಂಡಿನ ಹಣಕಾಸಿನ ಮಂತ್ರಿಗಳಾಗಿದ್ದಾಗ ಇವರ ಹತ್ತರ ಒಬ್ಬ ತರುಣನು ಬಂದನು. ಬರ್ಫದಿಂದ ಬಿಗಿದ ಹಿಮಸಾಗರದ ಮಧ್ಯದಲ್ಲಿ ಉತ್ತರ ಧ್ರುವಬಿಂದುವಿನ ಮೇಲೆ ಇಂಗ್ಲಂಡದ ನಿಶಾನಿಯನ್ನು ಹಚ್ಚ ಬೇಕೆಂಬುದು ಇವನ ಸಾಹಸದ ಮಹತ್ವಾಕಾಂಕ್ಷೆ. ಇದಕ್ಕಾಗಿ ಲಾಯಿಡ ಜಾರ್ಜದಿಂದ ಧನಸಹಾಯ ಕೇಳಿದನು. ಆಗ ಲಾಯಿಡ ಜಾರ್ಜರು ಒಂದು ಪತ್ರವನ್ನು ಬರೆದು ಕೊಟ್ಟು ಆ ತರುಣನನ್ನು ತನ್ನೊಬ್ಬ ಶ್ರೀಮಂತ ಮಿತ್ರನ ಕಡೆಗೆ ಕಳಿಸಿದರು. ಆ ಶ್ರೀಮಂತನು ತರುಣನಿಗೆ ಅಂದದ್ದು, “ತಮ್ಮಾ, ನೀನು ಒಬ್ಬನೇ ಉತ್ತರ ಧ್ರುವಬಿಂದುವಿಗೆ ಹೋಗುವಿಯಾದರೆ ನಿನಗೆ ೧೦ ಸಾವಿರ ಪೌಂಡು ಕೊಡುವೆನು. ಲಾಯಿಡ ಚಾರ್ಜರನ್ನೂ ನಿನ್ನ ಸಂಗಡ ಒಯ್ಯುವಿ ಯಾದರೆ ನಿನಗೆ ೫೦ ಸಾವಿರ ಪೌಂಡು ಕೊಡುವೆನು. ಲಾಯಿಡ ಜಾರ್ಜರನ್ನು ಬರ್ಫದಲ್ಲಿ ಬಿಟ್ಟು ಒಬ್ಬನೇ ತಿರುಗಿ ಬರುವಿಯಾದರೆ ಒಂದು ಲಕ್ಷ ಪೌಂಡು ಕೊಡುವೆನು ! “
****
ಜರ್ಮನಿಯ ನಾಜಿ ಸರ್ವಾಧಿಕಾರಿಯಾಗಿದ್ದ ಹಿಟ್ಲರನು ಯಹೂದಿ ಜನರನ್ನು ಜರ್ಮನಿಯಿಂದ ಹೊರಗೆ ಹಾಕಲು ಪ್ರಾರಂಭಿಸಿದಂದಿನಿಂದ ಯಹೂದಿ ಜನರು ಅವನ ವೈರಿಗಳಾದರು. ಒಮ್ಮೆ ಎರಡು ರಾಜಮಾರ್ಗಗಳು ಕೂಡಿದ ಚೌಕಿನ ಕಡೆಗೆ ಒಂದೊಂದು ಮಾರ್ಗದಿಂದ ಒಂದೊಂದು ಮೋಟರ ಕಾರು ಅತಿ ವೇಗದಿಂದ ಬರುತ್ತಿದ್ದವು. ಹಾಗೆಯೇ ಬಂದಿದ್ದರೆ ದುರ್ಘಟನೆ ಯಾಗಿ ಅನಾಹುತವಾಗುವ ಸಂಭವವಿತ್ತು. ಅಲ್ಲಿಯೇ ನಿಂತಿದ್ದ ಯಹೂದಿ ಹುಡುಗನೊಬ್ಬನು ತಟ್ಟನೆ ಚೌಕಿನ ಮಧ್ಯದಲ್ಲಿ ಪೋಲಿಸ ಸಿಪಾಯಿಯಂತೆ ನಿಂತು, ಓಂದು ಮೋಟರಿಗೆ ಹೋಗಲಿಕ್ಕೂ ಮತ್ತೊಂದು ಮೋಟರಿಗೆ ನಿಲ್ಲಲಿಕ್ಕೂ ಸನ್ನೆ ಮಾಡಿದನು. ನಿಂತ ಗಾಡಿಯಲ್ಲಿದ್ದ ಹಿಟ್ಲರನು ಬಹಳ ಸಂತುಷ್ಟನಾದನು. ಆ ಹುಡುಗನನ್ನು ಕರೆದು ಹಿಟ್ಲರನು ಎಂದ: ” ನೀನು ಇಂದು ಜರ್ಮನಿಯ ಸರ್ವಾಧಿಕಾರಿಯಾದ ಹಿಟ್ಲರನನ್ನು ಉಳಿಸಿರುವಿ. ಏನು ಬೇಡುವಿ ಬೇಡು” ಒಂದು ಕ್ಷಣಹೊತ್ತು ವಿಚಾರಿಸಿ ತಲೆ ತುರಿಸುತ್ತ ಆ ಯಹೂದಿ ಹುಡುಗನು ಹೀಗೆ ಅಂದನು : “ನಾನು ನಿಮ್ಮನ್ನು ಉಳಿಸಿದ ಸಂಗತಿಯನ್ನು ಅಪ್ಪನಿಗೆ ಹೇಳಬೇಡಿರಿ. ಇಷ್ಟೇ ಸಾಕು!?”
*****
Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...