೧
ಉಮ್ಮಳಿಸಿದೆ ಮಗು! ಕಾಯುವ ತಾಯಿಯ
ಕೈಯ ನೀಡುವಿರಾ
ನನ್ನಯ
ರಯ್ಯ ಗೆಳೆಯರಿರಾ!
೨
ಇಮ್ಮಡಿ ಮುಮ್ಮಡಿ ನಾಲ್ಮಡಿ ನೂರ್ಮಡಿ
ತಳಮಳಗೊಳುತಿಹುದು
ಈ ಮಗು
ಕಳವಳಗೊಳುತಿಹುದು!
೩
ನಿಮ್ಮಯ ನೆಮ್ಮದಿ-ಮಡಿಲಲಿ ಮಡಗಿಸಿ
ಮಲಗಿಸಿಕೊಳ್ಳುವುದು
ಗೆಳೆಯರೆ
ತೂಲಗಿಸಿ ತಳ್ಳುವುದೆ?
೪
ಸುಮ್ಮನೆ ಮಲಗುವ ಮಗುವಿಗೆ ಸಲೆ ಸೋ-
ಬಾನವ ಪಾಡುನಿರಾ?
ಬಲು ಸು-
ಮ್ಮಾನವ ನೀಡುವಿರಾ?
೫
ರಮ್ಮಿಸಿ ರಂಬಿಸುವೊಲವಿನ ನಿಲುವನು,
ನೀನೇ ಅರಿತವರು
ಸುಹೃದರೆ
ತಾವೇ ನುರಿತವರು!
೬
ಹೇಳುವುದೇನಿದೆ? ಕೇಳುವುದೇನಿದೆ?
ಕೂಡಿದೆ ನಿಮ್ಮನ್ನೇ
ಎಲ್ಲಾ
ಕೂಡಿದೆ ತಮ್ಮನ್ನೇ!
*****








