ಇಂದು ಒಂದು ಕರಿಕಾಗೆ ಕೆರೆ ಅಂಚಿನ ನೀರಲ್ಲಿ
ಕತ್ತುವರೆಗೆ ಮುಳುಗುವುದು, ಮೇಲೆದ್ದು ರೆಕ್ಕೆ ಬಡಿಯುವುದು,
ಮತ್ತೆ ಮುಳುಗುವುದು, ಎದ್ದೆದ್ದು ರೆಕ್ಕೆ ಬಡಿಯುವುದು ಮಾಡುತ್ತಲೇ
ಇತ್ತು.
ಪ್ರಾಯಶಃ ಚೆನ್ನಾಗಿ ಸ್ನಾನ ಮಾಡಿ ಬಿಳೀ ಬೆಳ್ಳಕ್ಕಿಯಂತಾಗಿ
ಬಿಡಬೇಕೆಂಬ ಪ್ರಯತ್ನ-
ಖಂಡಿತಾ ಆಗದ ಮಾತು, ವ್ಯರ್ಥ ಮೈ ನೋಯಿಸಿಕೊಳ್ಳಬೇಡ
ಗಾಳಿಗುದ್ದಿ:
ಎಂದದಕ್ಕೆ ಹೇಳಬೇಕೆಂದುಕೊಳ್ಳುತ್ತಾ ಮನೆಗೆ
ಬರುವಷ್ಟರಲ್ಲೊಂದು ಸಾವಸುದ್ದಿ.
*****
Latest posts by ಶ್ರೀನಿವಾಸ ಕೆ ಎಚ್ (see all)
- ಅಯ್ಯೋ - December 27, 2019
- ದೊಡ್ಡ ಗ್ವಾಲೆ - December 20, 2019
- ಅಮ್ಮಂದಿರ ಗುದ್ದು - December 13, 2019