ಹೇಳಲೇಬೇಕಾದ ಮಾತುಗಳು
Latest posts by ಸವಿತಾ ನಾಗಭೂಷಣ (see all)
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
- ಮೋಂಬತ್ತಿ - January 2, 2021
ಹೇಳಬಾರದು, ಅಂದುಕೊಂಡರೂ ದಿಗ್ಗನೆ ಎದೆಗೆ ಒದ್ದು ದುಡುದುಡು ಓಡಿಬಂದು ಗಂಟಲಲ್ಲಿ ಗಕ್ಕನೆ ಕೂತು ಹೊರಳಿ-ತೆವಳಿ ನಾಲಿಗೆಯ ತುದಿಗೆ ಬಂದು ನಿಂತಾಗ ಕಿಕ್ಕಿರಿದ ಸಭಾಂಗಣದಲ್ಲಿ ಹೆಜ್ಜೆತಪ್ಪಿದ ನರ್ತಕಿಯಂತೆ ಗೆಜ್ಜೆ ಧ್ವನಿಗಳೂ ಅಸ್ಪಷ್ಟ ಹಾವ ಭಾವಗಳು ಮಾತ್ರ ಕಂಗಳಲ್ಲಿ ವ್ಯಕ್ತ.