ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****...

ಒಂದು ವೃಕ್ಷದ ಕೆಳಗೆ ಇಬ್ಬರು ಪ್ರೇಮಿಗಳು ಕುಳಿತ್ತಿದ್ದರು. ಅವರು ಒಬ್ಬರಿಗೊಬ್ಬರು ಅಂತರಂಗವನ್ನು ಒಪ್ಪಿಸಿ “ಹಕ್ಕಿಯಂತೆ ಹಾಯಾಗಿರೋಣ.” ಅಂದುಕೊಂಡರು. ವೃಕ್ಷದ ಮೇಲಿನ ಗೂಡನ್ನು ಸೂಕ್ಷ್ಮವಾಗಿ ನೋಡಿದ ಹುಡುಗಿ ಹೇಳಿದಳು- “ಒಂ...

ಪ್ರತಿ ಸಂಜೆಯ ಬೆಳಕು ನನ್ನ ಪುಟ್ಟ ಕೋಣೆಯಿಂದ ಹಾರಿಹೋದ ಕ್ಷಣ ನೆರಳಿನ ಕತ್ತಲಿನಲಿ ಒಂದು ಪರಿಚಿತ ಮುಖ ಹುಡುಕುತ್ತೇನೆ. ಕವಿತೆ ಬೀಜ ಕಟ್ಟುವ ಹೊತ್ತು ತೇಲಿ ಸಾಗಿವೆ ಬೆಳ್ಳಕ್ಕಿ ಸಾಲು ಸಾಲು ಅಲ್ಲಲ್ಲಿ ಒಂದೊಂದು ಚಿಕ್ಕಿ ಮಿನುಗಳು ಅಪರಿಚಿತ ಕಣ್ಣುಗ...

ಅಸಲಿ ಕಣ್ಣೀರುಗಳು ಕತ್ತಲೆಯಲ್ಲಿಯೇ ಕರಗಿ ಹೋಗುವಾಗ…. ಮೃದು ಭಾವನೆಗಳು ಮುರುಟುವಾಗ…. ನಕಲಿ ಕಣ್ಣೀರುಗಳದೇನು? ಬಳ ಬಳನೇ ಸುರಿಯುತ್ತಿವೆ ನೂರಾರು ಬಲ್ಬು ಬೆಳಕಿನ ಸಿನೇಮಗಳಲ್ಲಿ. *****...

ಬಂಗಾರು ಚೆಟ್ಟಿಯನ್ನು ಕೊಂದೇ ಬಿಡುತ್ತೇನೆ ಇವತ್ತು ಎಂದುಕೊಂಡು ಮುಂದೆ ಧಾವಿಸುತ್ತಿರುವ ದೀಕ್ಷಿತನನ್ನು ಹೇಗಾದರೂ ಮಾಡಿ ತಡಯಲೇಬೇಕೆಂದು ವಿನಯಚಂದ್ರನಿಗೆ ಅನಿಸಿತು. ದೀಕ್ಷಿತನ ಕೈಯಲ್ಲಿ ತೆಂಗಿನಕಾಯಿ ಒಡೆಯುವಂಥ ಕತ್ತಿಯಿತ್ತು. ವಿನಯಚಂದ್ರ ಮೆಟ್ಟ...

ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ- ದವಳ ಬೇಸರದ ಮೂಲ ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ ಗೂಢಚಾರರ ಜಾಲ ಸುಮ್ಮನೆ ಓಡಾಡುವವರ ಮೇಲೆ ಕಣ್ಣಿರಿ...

ಬದುಕು ಬಂಡಿಹಬ್ಬ ಹಂಗಿಸುವವ ಕೊರಡುರಾಶಿಗಳ ದಿಬ್ಬ ಕಾಮ, ಕ್ರೋಧ, ಲೋಭ ಮೋಹ ಮದ, ಮತ್ಸರಗಳು ಅರಿಗಳಲ್ಲ ಅರಿತುಕೊಳ್ಳಲು ಆಯುಧಗಳು. ನಿಮ್ಮ ಆತ್ಮಗಮನಕ್ಕೆ ಬದುಕಿಗೆ ಕಾಮನೆಗಳಿಲ್ಲದಿರೆ ಕಾಡು ಈ ಮನೆ ಕಾಮವೆಂದರೆ ವೃಷ್ಟಿ ಸಂಕುಲ ಜೀವ ಸೃಷ್ಟಿ ಮೋಹವೆಂಬ...

ಎಲ್ಲಕ್ಕಿಂತ ಮೊದಲು ನನ್ನ ವಿಷದ ಹಲ್ಲುಗಳನ್ನು ಕಿತ್ತುಬಿಡು. ನನ್ನ ಸಣ್ಣತನದ ರೆಕ್ಕೆ ಆಕಾಶವನ್ನೆ ಗುಡಿಸುವಂತಿದ್ದರೆ ಅದನ್ನು ಕತ್ತರಿಸಿಬಿಡು. ದುರಹಂಕಾರದ ಮೀನು ಎಂದೆಣಿಸುವಿಯಾದರೆ ದಡಕ್ಕೆ ತಂದು ಬಿಸಾಡು. ನನಗೂ ಸಾಕಾಗಿದೆ ಈ ಯುದ್ಧ ಒಳಗೆ-ಹೊರಗ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....