ಬದುಕು ಬಂಡಿಹಬ್ಬ
ಹಂಗಿಸುವವ ಕೊರಡುರಾಶಿಗಳ ದಿಬ್ಬ

ಕಾಮ, ಕ್ರೋಧ, ಲೋಭ ಮೋಹ
ಮದ, ಮತ್ಸರಗಳು ಅರಿಗಳಲ್ಲ
ಅರಿತುಕೊಳ್ಳಲು ಆಯುಧಗಳು.
ನಿಮ್ಮ ಆತ್ಮಗಮನಕ್ಕೆ ಬದುಕಿಗೆ
ಕಾಮನೆಗಳಿಲ್ಲದಿರೆ ಕಾಡು ಈ ಮನೆ
ಕಾಮವೆಂದರೆ ವೃಷ್ಟಿ
ಸಂಕುಲ ಜೀವ ಸೃಷ್ಟಿ
ಮೋಹವೆಂಬುದು ಮಧುರ
ಬೇಡವೆಂದವ ಮರುಳ
ಕ್ರೋಧಕ್ಕೆ ಕೆಂಗಣ್ಣು ಯಾಕೆ?
ಬಿಸಿಗೆ ತಾನೆ ಕರಗುವುದು ತುಪ್ಪ.
ಲೋಭ ಲಾಭಬಲ
ಇರಲೇಳು ಬದುಕು ಅರ್ಥಬಲ ಸಬಲ
ಮದವಿದ್ದರೆ ಮೆರಗು
ಅದಕೆ ಬೇಡ ಮಂಥನ ಚಿಂತನ
ಒಣ ಹರಟೆ ಒಗರು.
ಮತ್ಸರವ ಮರೆಯದೆ
ಸವಿದು ನೋಡ ಮಿತಿಯಲಿ
ಷಡ್ವರ್ಗಗಳ ಸಹಜತೆಯ ಅಂಕೆಯಲಿ
ಬದುಕು ಅಮೃತದ ವಾಟೆ
*****