ಎಲ್ಲಕ್ಕಿಂತ ಮೊದಲು
ನನ್ನ ವಿಷದ ಹಲ್ಲುಗಳನ್ನು
ಕಿತ್ತುಬಿಡು.

ನನ್ನ ಸಣ್ಣತನದ ರೆಕ್ಕೆ
ಆಕಾಶವನ್ನೆ ಗುಡಿಸುವಂತಿದ್ದರೆ
ಅದನ್ನು ಕತ್ತರಿಸಿಬಿಡು.
ದುರಹಂಕಾರದ ಮೀನು
ಎಂದೆಣಿಸುವಿಯಾದರೆ
ದಡಕ್ಕೆ ತಂದು ಬಿಸಾಡು.
ನನಗೂ ಸಾಕಾಗಿದೆ
ಈ ಯುದ್ಧ ಒಳಗೆ-ಹೊರಗೆ

ಎಳೆದು ತಾ ನನ್ನನ್ನು
ನಿರ್ಮಲ ಬದುಕಿಗೆ.


ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)