ಇದೇನಿದು ಹಸುವಿಗೂ ಬೋಳುತಲೆಗೂ ಎಲ್ಲಿಂದೆಲ್ಲಿಯ ಸಂಬಂಧ? ಹೌದು ನಿಕಟ ಸಂಬಂಧವಿದೆ ಎಂದು ಕೊಲಂಬಿಯಾ ದೇಶದ ವಿಜ್ಞಾನಿ ‘ಫೇರಿರಾ’ ಹೇಳುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ೪೦ ವರ್ಷದಾಟುತ್ತಿದ್ದಂತೆ ಒಂದೊಂದೇ ಕೂದಲುಗಳು ಉದುರಲಾರಂಬಿಸುತ್ತವೆ. ೫೦ ವರ್ಷಕ್ಕಾಗಲೇ ತಾಮ್ರದ ಚಂಬಿನಂತಾಗಿ ಬಿಡುತ್ತದೆ ತಲೆ. ಇಂಥಹ ಅಸಂಖ್ಯೆ ತಲೆಗಳ ಸಮಸ್ಯೆಗಳನ್ನು ಪರಿಹರಿಸಲು ಅಂದರೆ ಬೋಳುತಲೆಯಲ್ಲಿ ಪುನಃ ನೈಸರ್ಗಿಕವಾಗಿ ಕೂದಲು ಬೆಳೆಯಲು ವಿಜ್ಞಾನಿ ಪೆರೀರಾ ಅವರು ಒಂದು ಔಷಧಿಯನ್ನು ಕಂಡು ಹಿಡಿದ್ದಾರೆ. ತಲೆಗೆ ಹಚ್ಚಲೆಂದು ಒಂದು ತೈಲವನ್ನು ತಯಾರಿಸಿದ್ದು ಅದನ್ನು ಬೋಳು ತಲೆಗೆ ಸವರಿ ನಂತರ ದಿನವೂ ಒಂದು ಹಸುವಿನಿಂದ ತಲೆಯನ್ನು ನೆಕ್ಕಿಸಿಕೊಳ್ಳಬೇಕು. ಹಸುವಿನ ಜೊಲ್ಲಿನಲಿ ಕೆಲವು ಗುಣಕಾರಕ ಔಷಧಿಗಳಿವೆ. ತಲೆಗೆ ಹಚ್ಚಿಕೊಂಡ ಎಣ್ಣೆ ಹಾಗೂ ಹಸುವಿನ ಜೊಲ್ಲು ಸೇರಿದರೆ ಕೆಂಪು ರಾಸಾಯನಿಕ ಮಾರ್ಪಾಡುಗಳು ಉಂಟಾಗುತ್ತವೆ. ಹೀಗಾಗಿ ಬೋಳು ತಲೆಯಲ್ಲಿ ಮತ್ತೆ ನೈಸರ್ಗಿಕವಾದ ಕೂದಲುಗಳು ಬೆಳೆಯಲಾರಂಬಿಸುತ್ತವೆ. ಇವರ ಈ ವಿಶಿಷ್ಟ ಚಿಕಿತ್ಸಾ ಪದ್ಧತಿಯನ್ನು ಪಡೆದುಕೊಂಡ ಹಲವರು ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. ಇದು ವಿಸ್ಮಯವಾದರೂ ಸತ್ಯ.
*****
