ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ
ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ||

ಮಠತುಂಬ ರಂಗೋಲಿ ಮುತೈದಿ ಬಾಲೇರು
ಪಡಿಹಿಗ್ಗು ಪಂಚಮಿ ಮಾಡ್ಯಾರೆ
ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ
ಕಾಶೀಯ ಪೀತಾಂಬ್ರ ಉಟ್ಟಾರೆ ||೧||

ಪರಪಂಚ ಪಂಚೇತಿ ಫಜೀತಿ ಪುರಮಾಶಿ
ಕೀರ್ತನಾ ಕೇಳಾಗ ಹೋಗೇತೆ
ಉಟಸೀರಿ ಜಾರೇತೆ ಮುಡಿಸೆರಗು ಹಾರೇತೆ
ಗರತೇರ ಮಾನಾ ಮಾರೇತೆ ||೨||

ಸಾಮೇರ ಮಂಚಕ್ಕ ಪಂಚರಂಭೇರೇರಿ
ಹಣ್ಗಾಯಿ ನೀರ್‍ಗಾಯಿ ಆಗ್ಯಾರೆ
ಸಾಮೇರ ತೊಡಿಮ್ಯಾಗ ಆರೂರ ಹುಡಿಗೇರು
ಬಕಬಾರ್‍ಲೆ ಕಣ್ತಿರಿಗಿ ಬಿದ್ದಾರೆ ||೩||

ಗುರುಗೋಳು ಬಂದಾರೆ ಗುರುವಣ್ಣಿ ಕೂಡ್ಯಾರೆ
ಮಠದಾಗ ಹೆಂಡಿರ ಮಾಡ್ಯಾರೆ
ಹೋದೋರು ಆರ್‍ಮಂದಿ ಬಂದೋರು ಮೂರ್‍ಮಂದಿ
ಊರ್‍ಮಂದಿ ಹುಡಿಗೇರು ಬಸರಾಗೆ ||೪||

ಗೋಡಿ ಬುದಬುದು ಬಿದ್ದು ಪೀಠ ಫಡಫಡ ಎದ್ದು
ಸಾಮೇರು ಕಾಮೇರು ಆಗ್ಯಾರೆ
ನವಿಲೀನ ನಾರೇರ ಕದ್ದಾರೆ ಮೆದ್ದಾರೆ
ಮುಗಿಲೀನ ತೊಟ್ಟಿಲಾ ತೂಗ್ಯಾರೆ ||೫||
*****
ಶ್ರಾವಣ=ಆತ್ಮಿಕ ಶ್ರವಣಾ; ಸ್ವಾಮೇರು = ಭಗವಂತ; ಮಠ = ಬ್ರಹ್ಮ ತತ್ವ; ಬಾಲೇರು-ಹುಡಿಗೇರು-ಗರತೇರು-ಗುರುವಣ್ಣಿ-ಹೆಂಡಿರು = ಸರ್ವ ಆತ್ಮರು; ಪಂಚಮಿ=ಪಂಚೇಂದ್ರಿಯಗಳ ಕೂಟ; ಉಟಸೀರಿ= ದೇಹಾಭಿಮಾನ (Physical Consciousness); ಆರ್‍ಮಂದಿ = ಷಡ್ವೈರಿಗಳು; ಮೂರ್‍ಮಂದಿ=ಸತ್, ಚಿತ್, ಆನಂದ; ಬಸರಾಗು=ಆತ್ಮ ಜ್ಞಾನಿಯಾಗು; ಕಾಮೇರು = ಕಾರುಣ್ಯದ ಮೇರು; ಮುಗಿಲಿನ ತೊಟ್ಟಿಲು = ಅಶರೀರ ಸ್ಥಿತಿ (Supra-mental plane).

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೧

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…