ಆಟ
ಪ್ರತಿ ಸಂಜೆಯ ಬೆಳಕು ನನ್ನ ಪುಟ್ಟ ಕೋಣೆಯಿಂದ ಹಾರಿಹೋದ ಕ್ಷಣ ನೆರಳಿನ ಕತ್ತಲಿನಲಿ ಒಂದು ಪರಿಚಿತ ಮುಖ ಹುಡುಕುತ್ತೇನೆ. ಕವಿತೆ ಬೀಜ ಕಟ್ಟುವ ಹೊತ್ತು ತೇಲಿ ಸಾಗಿವೆ ಬೆಳ್ಳಕ್ಕಿ ಸಾಲು ಸಾಲು ಅಲ್ಲಲ್ಲಿ ಒಂದೊಂದು ಚಿಕ್ಕಿ ಮಿನುಗಳು ಅಪರಿಚಿತ ಕಣ್ಣುಗಳು ಹರಿದಾಡುತ್ತವೆ. ಕಿಟಕಿಯಾಚೆ ಕಾಣುವ ಬೆಟ್ಟದ ಕೆಂಪು ಹಾಸು ಬಿರಿದ ಕತ್ತಲೆ ಮೌನ ಅಂತರಿಕ ನೆರಳಿಗೆ […]