ವಾಗ್ದೇವಿ – ೩೭

ವಾಗ್ದೇವಿ – ೩೭

ಸೂರ್ಯನಾರಾಯಣನಿಗೆ ಚಂಚಲನೇತ್ರರು ಸನ್ಯಾಸವನ್ನು ಕೊಟ್ಟು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವರೆಂಬ ಜನ್ಯವು ದಶದಿಕ್ಟುಗಳಲ್ಲಿಯೂ ತುಂಬಿತು. ವೇದವ್ಯಾಸ ಉಪಾಧ್ಯನ ಕಿವಿಗೂ ಅದು ಬೀಳದೆ ಹೋಗುವ ದುಂಟೇ!। ವಾಗ್ದೇವಿಯು ತನ್ನ ಪತ್ನಿಯನ್ನು ಜರದು ಮಾತಾಡಿದ ಸಿಟ್ಟು ಅವನ ಒಡಲನ್ನು ಬಿಟ್ಟು ಹೋಗಿರಲಿಲ್ಲ. ಹಾಗೂ ಪೇಷ್ಕಾರನು ತನ್ನನ್ನೂ ತನ್ನ ಅನುಜನನ್ನೂ ಸೆರೆಮನೆಯಲ್ಲಿ ಇರಿಸಲಿಕ್ಕೆ ವಾಗ್ದೇವಿಯೇ ಮೂಲ ಪುರುಷಳೆಂಬ ನೆನಪು ಚಂದಾಗಿ ಇತ್ತು. ಒಮ್ಮೆ ಸೂರ್ಯನಾರಾಯಣನಿಗೆ ಆಶ್ರಮವಾದರೆ ವಾಗ್ದೇವಿಯ ದರ್ಪವನ್ನು ತಗ್ಗಿಸುವದು ಸುಲಭವಾದ ಕೆಲಸವಲ್ಲವೆಂದು ಅವನಿಗೆ ಪೂರ್ಣವಾಗಿ ಗೊತ್ತಿತ್ತು. ಪರಂತು ವಿಘ್ನವನ್ನು ಒಡ್ಡುವ ಉಪಾಯ ನಡಸುವ ಬಗೆ ತಿಳಿಯದೆ ಇದ್ದರೂ ನಿರುದ್ಯೋಗಿಯಾಗಿ ರಲಿಕ್ಕೆ ಅವನಿಗೆ ಮನಸ್ಸು ಬರಲಿಲ್ಲ. ಕುಮುದಪುರದ ಗೃಹಸ್ಥರಲ್ಲಿ ಒಬ್ಬನ ಮನೆಯಾದರೂ ಬಿಡದೆ ನಡದಾಡಿದರೂ ಅವನ ಮಾತಿಗೆ ಯಾರೂ ಕಿವಿ ಕೊಡಲಿಲ್ಲ. ಬಾಲಮುಕುಂದಾಚಾರ್ಯನು ಕೇವಲ ರೋಗಿಯಾಗಿ ಮೃತಾ ಸನದಲ್ಲಿ ಇದ್ದವನ ಅವಸ್ಥೆ ಯುಳ್ಳವನಾದ ಪ್ರಯುಕ್ತ ವಾಗ್ದೇವಿಯ ಬಲ ಮುರಿದಂತಾಯಿತು. ಬೆಂಬಲಕ್ಕೆ ಸಾಮಾನ್ಯ ಬುದ್ದಿಯುಳ್ಳವನೊಬ್ಬನು ದೊರಕಿದರೆ ತನ್ನ ಶತ್ರುಗಳನ್ನು ಸದೆಬಡಿಯುವೆನೆಂಬ ಧೈರ್ಯದಿಂದ ಪುರು ಷನನ್ನು ಹುಡುಕುವದರಲ್ಲಿ ಬಿದ್ದನು.

ಆಗ ಅದೇ ಪಟ್ಟಣದ ಉಪಗ್ರಾಮವಾದ ಕಂಬನಿಹಳ್ಳಿಯಲ್ಲಿ ರಾಮ ದಾಸ ರಾಯನೆಂಬ ಹೆಸರಿನ ಯೌವನಸ್ಥನು ಚನ್ನಾಗಿ ಕಲಿತು ಬುದ್ಧಿವಂತ ನಾಗಿ ವಕೀಲಿ ಉದ್ಯೋಗವನ್ನು ನಡೆಸಲಿಕ್ಕೆ ಯೋಗ್ಯನೆಂದು ಸರ್ಕಾರದಿಂದ ಅಧಿಕಾರಪತ್ರಹೊಂದಿ ಒಂದು ದೊಡ್ಡ ಪ್ರಕರಣ ಸಿಕ್ಕಿದರೆ ಒಂದೇ ಸಾರಿ ಹಣವನ್ನು ಪೆಟ್ಟಿಗೆಯಲ್ಲಿ ತುಂಬಿಸಿಬಿಡುವದಕ್ಕೆ ಅತ್ಯಾಶೆಯಿಂದ ಕಾದು ಕೊಂಡಿದ್ದನು. ಈ ಹೊಸವಕೀಲಗೆ ವೇದವ್ಯಾಸ ಉಪಾಧ್ಯನು ಗಂಟು ಬಿದ್ದನು. ಆದರೆ ಅವನ ಕೈಯಲ್ಲಿ ಕಾಸೊಂದು ಇಲ್ಲವಷ್ಟೇ. ಇದ್ದರೂ ಸರ್ವಥಾ ಬಿಡುವವನಲ್ಲ. ಮೊತ್ತಮೊದಲು ಹಿಡಿಯುವ ಮೊಕದ್ದಮೆಯಲ್ಲಿ ಧರ್ಮಕ್ಕೆ ವ್ಯವಹರಿಸಿ ಹೆಸರುಪಡೆಯುವದು ಉತ್ತಮವಾದ ವಶೀಕರಣವೆಂದು ವೇದ ವ್ಯಾಸ ಉಪಾಧ್ಯನು ರಾಮದಾಸಗೆ ಬುದ್ಧಿ ಉಪದೇಶಕೊಟ್ಟರೂ ಬೋಣಿ ಯಾಗದೆ ಕಡಕೊಡುವದು ಹ್ಯಾಗೆಂದು ಅಂಗಡಿಗಾರರು ಹೇಳುವ ರೀತಿಯಲ್ಲಿ ಹೊಸವಕೀಲನು ಗುಣುಗುಟ್ಟಲೆಸಗಿದನು. ಲಾಭದ ಮೇಲೆ ದೃಷ್ಟಿ ಇಟ್ಟು ಹಟಮಾಡಿದರೆ ತಾನು ಬೇರೆ ಯಾರಿಗಾದರೂ ಹುಡುಕಿ ತೆಗೆಯುವದೇ ಸರಿ ಕೀರ್ತಿಯನ್ನೂ ಹಣವನ್ನೂ ಸಮುಚ್ಚಯವಾಗಿಯೂ ಪ್ರತ್ಯೇಕವಾಗಿಯೂ ಸಂಪಾದಿಸಲಿಕ್ಕೆ ಆತುರವುಳ್ಳವನು ತಾಳ್ಮೆಯಿಂದ ಉದ್ಯೋಗವನ್ನು ನಿರ್ವಹಿ ಸಿದರೆ ಮುಂದೆ ಒಂದೇಸರ್ತಿ ಹಣದ ರಾಶಿಯೇ ಸಿಕ್ಕುವ ಸಂಭವವಿದೆ. ಅವಸರಮಾಡಿ ವೃದ್ಧಿಯನ್ನು ಹಾಳುಮಾಡಿಕೊಳ್ಳ ಬೇಡವೆಂದು ವೇದವ್ಯಾಸನು ಹೇಳಿದ ಜ್ಞಾನವು ಕೊನೆಗೆ ರಾಮದಾಸಗೆ ಸಮ್ಮತವಾಯಿತು.

“ಹಾಗಾದರೆ ನಿನ್ಶ ಬುದ್ಧಿವಂತಿಗೆಯ ಪರೀಕ್ಷೆ ಈಗಲೇ ನೋಡಬೇಕು” ಎಂದು ವೇದವ್ಯಾಸನು ಹೇಳಿದನು. ಹೊಸವಕೀಲನು ದೊಡ್ಡ ದೊಡ್ಡ ಕಾನೂನಿನ ಪುಸ್ತಕಗಳನ್ನು ಅತ್ತಿತ್ತ ಮಗುಚಿ ನಾಲ್ಕುತಾವು ಕಾಗದ ಖರ್ಚು ಮಾಡಿ ಒಂದು ಮನವಿಯ ಮಸೂದೆಯನ್ನು ಸಮನಿಸಿ ವೇದವ್ಯಾಸಗೆ ಓದಿ ಹೇಳಿದನು. ಉಪಾಧ್ಯನು ಅದರ ಒಕ್ಳಣೆಯಚಾತುರ್ಯಕ್ಕೆ ಮೆಚ್ಚಿಹೋದನು. ಅದರ ನಕಲು ಮಾಡುವದಕ್ಕೆ ಹತ್ತು ಹಾಳೆ ದಪ್ಪವಾದ ಕಾಗದ ತಾರೆಂದು ವಕೀಲನು ಹೇಳಲು “ಪೆಟ್ಟಿಗೆಯಲ್ಲಿ ಒಂದಾಣೆ ದುಡ್ಡು ಇದ್ದರೆ ಕೊಡು; ನನ್ನ ಕೈಯಲ್ಲಿ ಕಾಸೊಂದು ಇಲ್ಲ” ಎಂದು ವೇದವ್ಯಾಸನು ನಗುತ್ತಾ ನುಡಿದನು. “ಆಹಾ! ಎಷ್ಟು ಔದಾರ್ಯ ಗುಣಭರಿತ ಕಕ್ಷಿಗಾರನು ನನಗೆ ದೊರಕಿದನಪ್ಪಾ? ಎಂದು ರಾಮದಾಸನು ಒಂದಾಣೆ ದುಡ್ಡು ಪೆಟ್ಟಿಗೆಯಿಂದ ತೆಗೆದುಕೊಟ್ಟನು. ಅದನ್ನು ಸೊಂಟಕ್ಕೆ ಸಿಕ್ಕಿಸಿ ವೇದವ್ಯಾಸನು ಸಮೀಪವಿರುವ ನಾಲ್ಕೈದು ಅಂಗಡಿಗಳಿಗೆ ಹೋಗಿ ಐದಾರು ಹಾಳೆ ಕಾಗದ ಬೇಡಿ ತಂದು ವಕೀಲಗೆ ಕೊಟ್ಟನು. ವಕೀಲನು ತನ್ನ ಗುಮಾಸ್ತನಿಂದ ಮನವಿಯ ನಕಲು ಬರಿಸಿ ಅವನಿಗೇನಾದರೂ ಶುಲ್ಕ ಕೊಡೆಂದು ವೇದವ್ಯಾಸಗೆ ಅಪೇಕ್ಷಿಸಿದನು. ಧನಿಗೆ ಶುಲ್ಕ ಕೊಟ್ಟರಷ್ಟೇ ಗುಮಾಸ್ತನಿಗೆ ಕೋಡೋದು. ನಿಮ್ಮಿಬ್ಬರಿಗೂ ಒಂದೇ ಸರ್ತಿ ಕೈತುಂಬಾ ಕೊಡಿಸೋಣ ಎಂದು ಸಮಜಾಯಿಸಿ ಮಾತು ಹೇಳಿ ಕೂತುಕೊಂಡನು.

ಮನವಿಯನ್ನು ವೇದವ್ಯಾಸ ಉಪಾಧ್ಯನು ವಕೀಲನ ಅನುಜ್ಞೆಗಳಂತೆ ಪೇಷ್ಕಾರ ತಿಮ್ಮೈಯನ ಮುಂದೆ ದಾಖಲುಮಾಡಿದನು. ಪೇಷ್ಕಾರನು ಅದನ್ನು ನೋಡಿ–“ಇದು ಛೋಟಾ ಕಿತಾಬಿನ ಪ್ರಕರಣವಲ್ಲ. ಕಾರ್ಬಾರಿ ಗಳ ಕಚೇರಿಗೆ ಕೊಂಡುಹೋಗು” ಎಂದು ತಿರುಗಿ ಕೊಟ್ಟನು. ಅದರ ಬುಡ ದಲ್ಲಿ ಹಾಗೆಯೇ ಬರಕೊಡಬೇಕೆಂದು ವೇದವ್ಯಾಸ ಉಪಾಧ್ಯನು ಅಪೇಕ್ಷಿಸಿ ದನು. ಪೇಷ್ಕಾರನು ಅವನ ಅಪೇಕ್ಷೆಯಂತೆ ನಡೆಸಿದನು. ಶಾಬಯನ ಮುಂದೆ ಅದು ಹೋದಾಗ ಅವನು ಅದನ್ನು ಓದಿನೋಡಿ ಎದ್ರಿಗಳಿಗೆ ವಿದಿತಪತ್ರ ಕೊಡಬೇಕಾಗಿ ತನ್ನ ಕರಣೀಕರಿಗೆ ಅಜ್ಞೆಮಾಡಿದನು. ಚಂಚಲನೇತ್ರರಿಗೆ ಮತ್ತು ಅವರ ಪಾರುಪತ್ಯಗಾರಗೆ ವಿದಿತ ಪತ್ರಗಳು ಮುಟ್ಟಿದುವು. ಇದನ್ನು ತಿಳಿದ ವಾಗ್ದೇವಿಯು ಭೀಮಾಜಿಯನ್ನು ಅಂತರಂಗದಿಂದ ಕರಸಿ ತಿಳಿಸಿದಾಗ “ಬರಕೈಯಿಂದ ಮೊಳ ಹಾಕುವ ಸಮಯ ಇದಲ್ಲವೆಂದು ಅನೇಕರು ಹೇಳಲಿಕ್ಕೆ ಸಾಕು. ಪರಂತು ಅಂಥಾ ಮಾತುಗಳಿಗೆ ಕಿವಿಗೊಟ್ಟು ಕುಣಿದಾಡಿದರೆ ಕಾರ್ಯ ಹಾನಿಯೂ ಕಾರ್ಬಾರಿಯ ಅವಕರಣವೂ ಉಂಟಾಗುವದು. ಶಾಬಯನು ಸಂಭಾವಿತನೂ ನಿಶ್ಚಲಪ್ರಾಮಾಣಿಕತೆಯುಳ್ಳವನೂ ಆಗಿರುವದರಿಂದೆದ್ರವ್ಯ ದಾಶೆಯನ್ನು ತೋರಿಸಿ ಅವನ ಮನಸ್ಸುಂಟುಮಾಡಿಕೊಳ್ಳ ಬಹುದೆಂಬ ಭ್ರಮೆಯನ್ನು ಬಿಟ್ಟುಬಿಡಬೇಕು. ದೀನಭಾವದಿಂದ ಅವನ ಮರೆ ಹೊಕ್ಕವ ರಿಗೆ ಅವನು ಸರ್ವಧಾ ಬಿಟ್ಟು ಹಾಕುವದಿಲ್ಲ. ಸಾರ್ವಜನಿಕ ಉಪಯೋಗದ ಸದ್ಧರ್ಮವನ್ನು ಮಾಡಿಸಿ ಪುಣ್ಯಸಂಗ್ರಹ ಮಾಡಬೇಕೆಂಬ ಆತುರದಿಂದ ಈ ಪಟ್ಟಣದಲ್ಲಿ ಕೆಲವು ಪ್ರಮುಖ ಗೃಹಸ್ತರು ಒಗ್ಗಟ್ಟಾಗಿ ವಿದ್ಯಾಶಾಲೆಗಳನ್ನು ಛತ್ರಗಳನ್ನು ದೇವಾಲಯಗಳನ್ನು ಕಟ್ಟಸಿ ಬಡವರ ಉಪಪಕಾರಿಗಳಾಗಿ ಮೆರಿ ಯಬೇಕೆಂಬ ಅಶೆವುವಳ್ಳವರಾಗಿರುತ್ತಾರೆ. ಪ್ರಕೃತ ದೊಡ್ಡದೊಂದು ವಿದ್ಯಾಶಾಲೆ ಯನ್ನು ಕಟ್ಟಿಸಲಿಕೆ ಅವರು ಉದ್ಯುಕ್ತರಾಗಿರುವರು. ಇಂಥಾ ಸತ್ಕಾರ್ಯಕ್ಕೆ ಸಹಾಯಾರ್ಥವಾಗಿ ಮಠದಿಂದ ಆಶ್ರಮ ಕೊಡುವ ಸಮಯ ದ್ರವ್ಯದಾನ ವನ್ನು ಮಾಡಿದರೆ ಕಾರ್ಭಾರಿಗೆ ಆ ವಾರ್ತೆಯು ಸಿಕ್ಕಿ ಸಂತೋಷಪಟ್ಟು ಮಠದ ಮೇಲೆ ಮತ್ತಷ್ಟು ಅಭಿಮಾನವಿಡುವನೆಂದು ನನಗೆ ತೋರುತ್ತದೆ.” ಹೀಗೆಂದು ಕೊತ್ವಾಲನು ಕೊಟ್ಟ ಸೂಚನೆಯನ್ನನುಸರಿಸಿ ಚಂಚಲನೇತ್ರರು ವೆಂಕಟಪತಿ ಆಚಾರ್ಯನನ್ನು ಕರೆಸಿಆಲೋಚನೆಮಾಡಿದರು. ಭೀಮಾಜಿಯು ಹೇಳಿದ ಬುದ್ಧಿಯಂತೆ ನಡಕೊಳ್ಳುವದು ಉತ್ತಮವೆಂದು ಆಚಾರ್ಯನೆಂದನು ಯತಿಗಳು ಹಾಗಾಗಲೆಂದರು. ಅದರ ಮರುದಿವಸ ಭೀಮಾಜಿಯ ಪರಿಮುಖ ಆ ಪುಣ್ಯ ಸಂಗ್ರಹಸಂಘದ ಬಕ್ಷಿ ಚಲುವೈಯನನ್ನು ಮಠಕ್ಕೆ ಕರೆಸಿ ಲಕ್ಷ ರೂಪಾಯಿಯ ಪವನುಗಳನ್ನು ಗಂಟುಕಟ್ಟ ಅವನ ವಶಕೊಟ್ಟಲ್ಲಿ ಅವನು ಅದನ್ನು ಮಠದ ಕಡೆಯಿಂದ ಗುಪ್ತ ದ್ರವ್ಯದಾನವಾಗಿ ಲೆಕ್ಕಕ್ಕೆ ಬರಕೊಂಡನು

ವೇದವ್ಯಾಸ ಉಪಾಧ್ಯನ ಮನವಿಯ ಅನುಸಂಧಾನಕ್ಕೆ ನಿಶ್ಚೈಸಿದ ದಿವಸ ಅವನ ಕಡೆಯಿಂದ ಬಂದ ವಕೀಲ ರಾಮದಾಸನ ಚರ್ಚೆಗಳನ್ನು ಕೇಳುತ್ತಿರುವಾಗಲೇ ಕಾರಭಾರಿಗಳಿಗೆ ಸಿಟ್ಟೇರಿತು. “ಸಾಕು, ನಿನ್ನ ಪಂಚಾಂಗ ಕಟ್ಟು; ಅನಾವಶ್ಯಕವಾಗಿ ಫಸಾದಖೋರನಾದ ಈ ದಿಂಡ ಹಾರುವನನ್ನು ಉಬ್ಬೇರಿಸಿ ಹಣ ಸುಲಿಯುವದಕ್ಕೆ ನೋಡುತ್ತಿಯಾ? ನೀನಿನ್ನೂ ಹೊಸ ವಕೀಲ. ಕಣ್ಣುಗಳು ತೆರೆಯದ ಬೆಕ್ಕಿನ ಮರಿಯಂತೆ ಇರುವಿ. ಆದರೂ ದುಸ್ವಾಭಾವ ಬಿಡವಲ್ಲೆ. ಈ ತಂಟಲಮಾರಿ ಬ್ರಾಹ್ಮಣನು ಮೊದಲೊಮ್ಮೆ ನಜರಬಂದಿಯಲ್ಲಿ ಇರಿಸಲ್ಪಟ್ಟ ಹದನವನ್ನು ನೀನು ತಿಳಿಯಲಿಲ್ಲವೇ? ಅವನ ಸಂಗಡ ನೀನೂ ಕೂಡಿ ಫಸಾದಖೋರನೆನ್ಸಿಸಿಕೊಳ್ಳುವ ಮನಸ್ಸುಳ್ಳವ ನಾದರೆ ಅನ್ನ ಬೆಲ್ಲವಾದೀತು ನೋಡಿಕೋ” ಎಂದು ಶಾಬಯನು ರಾಮ ದಾಸಗೆ ಚನ್ನಾಗಿ ಗದರಿಸಿಬಿಟ್ಟನು. ರಾಮದಾಸರಾಯನು ಎಳ್ಳಿನಷ್ಟು ಹೆದ ರಲಿಲ್ಲ. ವಕೀಲನಾಗಿ ಕಕ್ಷಿಗಾರನ ಕಡೆಯಿಂದ ವ್ಯವಹರಿಸುವದು ನ್ಯಾಯ ವಾದ ಮಾರ್ಗವಾಗಿರುತ್ತದೆ ಅವನು ಫಸಾದಖೋರನಾದರೆ ತಾನು ಅವ ನಂತೆ ದುರ್ನಾಮವನ್ನುು ಪಡೆಯತಕ್ಕವನಲ್ಲ. ಕಾನೂನಿಗೆ ಸರಿಯಾಗಿ ವ್ಯವಹರಿಸುವ ತನಕ ತನ್ನಮೇಲೆ ಯಾರೊಬ್ಬರೂ ದೋಷ ಆರೋಪಿಸಕೂ ಡದು ಎಂದು ಘಟ್ಟಿಯಾಗಿ ರಾಮದಾಸನು ಉತ್ತರಕೊಟ್ಟನು. ಇವನು ಹಾಗೆಲ್ಲಾ ಭಯಪಡುವವನಲ್ಲ. ಇವನನ್ನು ಉಪಾಯದಿಂದ ನೆಲಕ್ಕೆ ಬಡಿ ಯುನ ಕಾಲ ಮುಂದೆ ಉಂಟು, ಈಗಲೇ ರೌದ್ರಾವತಾರತಾಳಿದರೆ ಕಾರ್ಯ ಹಾಳಾದೀತೆಂದು ಶಾಬಯನು ತನ್ನ ಸಿಟ್ಟು ತಾನೇ ನುಂಗಿಕೊಂಡನು. “ಒಳ್ಳೆದು ನಿನಗೆ ರವಷ್ಟು ಬುದ್ಧಿ ಬರಲೆಂದು ಮಾತಾಡಿದೆ ನಿನಗೆ ಹಿತವಾಗ ಲಿಲ್ಲವೇ! ಹೋಗಲಿ. ನೀನು ಹೇಳುವದೇನುಂಟೋ ಅದೆಲ್ಲಾ ಅಧಿಕಪ್ರಸಂಗ ವಿಲ್ಲದೆ ಒದರಿಬಿಡು” ಎಂದು ಕಾರ್ಭಾರಿಯ ಅಪ್ಪಣೆಯಾಯಿತು.

ರಾಮದಾಸನು ಹಿಗ್ಗಿ ನಸುನಗೆಯಿಂದ ಒಂದು ತಾಸಿನ ಪರಿಯಂತರ ದೊಡ್ಡ ಸ್ವರದಿಂದ ಶಬ್ದಮಂಜರಿಯೊಳಗಿನ ಮುಕ್ಕಾಲುವಾಸಿ ದೊಡ್ಡ ದೊಡ್ಡ ಮಾತುಗಳನ್ನುವಯೋಗಿಸಿ ಕೇಳುವ ಜನರು ಶಹಬಾಸು! ಧೀರನೇ ಸರಿ! ವಕೀಲನು ಹೀಗೆ ಬುದ್ಧಿಶಾಲಿಯೂ ವಾಗ್ಜಾಲಿಯೂ ಆಗಿರಬೇಕು. ಎಂದು ಹೊಗಳುವಂತೆ ಭಾಷಣಮಾಡಿದನು. ವೇದವ್ಯಾಸನು ನಗಲಿಕ್ಕೆ ತೆರೆದಬಾಯಿಯನ್ನು ಮುಚ್ಚಲಿಕ್ಕೆ ಮರೆತುಬಿಟ್ಟು ಪ್ರಾಣವಾಯು ತೊಲಗುವ ಸಂಭವದಲ್ಲಿದ್ದವನಂತೆ ಕಾಣುತ್ತಿದ್ದನು. ಕಾರ್ಭಾರಿಯು ಮಧ್ಯೆ ಮಧ್ಯೆ ಮಾಡುವ ಕಕ್ಷಿಯನ್ನು ಲಕ್ಷ್ಮಮಾಡದೆ ವಕೀಲನು ಕಾನೂನಿನ ಪುಸ್ತಕ ಗಳ ಕಾಗದಗಳನ್ನು ಸಾವಿರಾರು ಸಲ ಮಗುಚುತ್ತಾ ಸಮರ್ಪಕವಾದ ಉತ್ತರಗಳಿಂದ ಬಾಯಿ ಮಚ್ಚಿಸಿಬಿಟ್ಟನು. ಇಂಥಾ ಲಕ್ಷೋಪಿ ವಕೀಲರನ್ನು ಕಕ್ಷದಲ್ಲಿ ಔತಿಕೊಳ್ಳುವ ಸಾಮರ್ಥ್ಯವುಳ್ಳ ಶಾಬಯ್ಯನು ಕೊಂಚ ಸಮಯ ವಕೀಲನ ಭಾಷಣಕ್ಕೆ ಮೆಚ್ಚಿಹೋದವನಂತೆ ಮುಗುಳು ನಗೆಯಂದ ಅವನ ಕಕ್ಷಿಗಾರನ ಪಕ್ಷಕ್ಕೆ ಹಿತವಾದ ಮಾತುಗಳನ್ನಾಡುತ್ತಾ ಅವನಿಗೆ ಧೈರ್ಯ ಉಂಟಾಗುವಂತೆ ಮಾಡಿ ಕೊನೆಯ ಮನನಿಯು ರೂಷ್ಟ್ರಕರವಾದ ಪ್ರಯುಕ ಅದನ್ನು ತಳ್ಳಿಹಾಕಿಯದೆಂದು ತೀರ್ಪುಕೊಟ್ಟದ್ದಲ್ಲದೆ ಸೂರ್ಯ ನಾರಾಯಣನಿಗೆ ಆಶ್ರಮವಾಗುವ ಕಾಲದಲ್ಲಿ ದೊಡ್ಡ ಕಲಹ ನಡೆಯುವ ಸಂಭವವಿರದೆನ್ನಕೂಡದಾದ ಕಾರಣ ಮುಂದಾಗಿ ಯಾರಿಗೂ ತಿಳಿಯದ ಹಾಗೆ ಗುಪ್ತ ಚರರನ್ನಿಟ್ಟು ವರ್ತಮಾನವನ್ನು ಸಂಗ್ರಹಿಸಿ ವಿಘ್ನನಿವಾರ ಣೆಯ ಸಾರಣೆಮಾಡುವ ಜಾಗ್ರತ ತಕ್ಕೊಳ್ಳಬೇಕೆಂದು ಕೊತ್ವಾಲಗೆ ಅಪ್ಪಣೆ ಮಾಡಿದನು.

ರಾಮದಾಸರಾಯಗೆ ಸಿಟ್ಟುಬಂದು ಇಡೀ ಬೀಹವು ನಡುಗಲಾರಂಭಿ ಸಿತು. ಆ ಪರಿಯಂತರ ವೇದವ್ಯಾಸ ಉಪಾಧ್ಯನು ತೆರೆದುಕೊಂಡೇ ಇದ್ದ ಬಾಯಿಯನ್ನು ಮುಚ್ಚಿ ಸಮೀಪಕ್ಕೆ ಬಂದು, ಮನವಿಯು ಹ್ಯಾಗೆ ತೀರಿತಂದು ವಿಚಾರಿಸಿದಾಗ, “ನಿನ್ನವ್ವನ ಶ್ರಾದವಾಯಿತು” ಎಂದು ವಕೀಲನ ಉತ್ತರ ವಾಯಿತು. “ನನ್ನವ್ವನ ಶ್ರಾದ್ಧ ಮೊದಲೇ ಆಗಿಯದೆ; ಜೀವನದಲ್ಲಿರುವ ನಿಮ್ಮಪ್ಪನ ಶ್ರಾದ್ಧವಾಗುವದು ಉಳದದೆ” ಎಂದು ಉಪಾಧ್ಯನು ಸಿಟ್ಟಿನಿಂದ ಪ್ರತ್ಯುತ್ತರ ಕೊಟ್ಟನು. ಇಬ್ಬರಿಗೂ ಝಟಾವಟಾ ಹಿಡಿಯಿತು. ಅಷ್ಟರಲ್ಲಿ ಸಮೀಪ ಇದ್ದ ಗೃಹಸರು ಉಭಯರನ್ನೂ ಸಮಾಧಾನಮಾಡಿ ಅವರಲ್ಲಿ ವಿವೇಕವಾಗುವಂತೆ ಪ್ರಯತ್ನ ಮಾಡಿದರು. ಕೊಂಚ ಸಮಯದಲ್ಲಿ ಇಬ್ಬರ ಸಿಟ್ಟೂ ತಣಿಮ ಮುಂದೇನು ಉಪಾಯವೆಂದು ತಿಳಿಯದೆ ಕಚೇರಿ ಯಿಂದ ಇಳಿದು ತಮ್ಮ ತಮ್ಮ ಮೀಶೆಗಳನ್ನು ತಿಕ್ಕಿಕೊಂಡು ಬಿಡಾರಸೇರಿ ಕೊಂಡರು.

ರಾತ್ರೆ ಭೋಜನವಾದ ತರುವಾಯ ಬರಬೇಕೆಂದು ವಕೀಲನಿಂದ ಅಪೇಕ್ಷಿಸಲ್ಪಟ್ಟ ವೇದವ್ಛಾಸ ಉಪಾಧ್ಯನು ರಾಮದಾಸರಾಯನ ಮನೆಯಲ್ಲಿ ಕಾದುಕೊಂಡಿರುವಾಗ ವಕೀಲನು ಊಟವಾದಮೇಲೆ ಹೊರಗೆ ಬಂದು ಅಂತ ರಂಗದಲ್ಲಿ ಉಪಾಧ್ಯನ ಕೂಡೆ ಕೊಂಚ ಸಮಯ ಮಾತಾಡಿದನು. ಹಾಗೆಯೇ ಸರಿ! ಬೇರೆ ಏನೂ ಮಾಡಲಿಕ್ಕೆ ಈಗ ಸಮಯ ಸಾಲದು, ಅಪ್ಪಣೆಯಾದಂತೆ ವರ್ತಿಸಿ ಅರಿಕೆ ಮಾಡುವೆನೆಂದು ವಕೀಲನ ಮನೆಯಿಂದ ಹೊರಟುಬಂದನು. ಪತ್ನಿಯು ಹಿಂದೆ ಅವರಾಜಿತ ಸೆಟ್ಟಿಯಿಂದ ಬಂದ ಬವಣೆಯನ್ನು ನೆನಪಿಗೆ ತಂದು ಈಗ ಅನಕ ಅಧಿಕ ಜಾಗ್ರತೆಯಿಂದಿರುವದು ಅವಶ್ಯವೆಂದು ಪತಿಗೆ ಬುದ್ಧಿಮಾರ್ಗ ಹೇಳಿದಳು. “ನಾನು ಹಾಗೇನೂ ಕುರುಬನೇ? ಒಮ್ಮೆ ಸಿಕ್ಕಿ ಬಿದ್ದೆ, ಮತ್ತೆ ಹಾಗೆ ಸಿಕ್ಕಿಬೀಳಲಾರೆ” ಎಂದು ಹೆಂಡತಿಗೆ ಧೈರ್ಯಹೇಳಿ ಮನಸ್ಸಿನಲ್ಲಿಯೇ ಯೋಚನೆ ಗೈಯುವದರಲ್ಲಿ ಬಿದ್ದು ಇಡೀ ರಾತ್ರೆ ನಿದ್ದೆ ಹೋಗದೆ ತಲೆ ವೇದನೆಯಿಂದ ಪ್ರಾತಃಕಾಲದಲ್ಲಿ ಎದ್ದು ಮುಖ ಮಜ್ಜನ ವಾದ ಬಳಿಕ ಹೊರಟನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದು ಅದುವೆ ಯುಗಾದಿ
Next post ಪರಿವರ್‍ತನೆ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys