ಈ ನನ್ನ ಶೀರ್‍ಷಿಕೆ ಓದಿ ನೀವೆಲ್ಲ ದಂಗುಬಡಿದು ಹೋಗಿರಬಹುದು. ಹೌದು! ಪೋರ್‍ಚುಗಲ್‌ನ ರಿಯಲ್ ಮ್ಯಾಡ್ರಿಡ್ ಫುಟ್‌ಬಾಲ್‌ ಕ್ಲಬ್‌ನ ಪ್ರಸಿದ್ಧ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ತಮ್ಮ ಆಪ್ತ ಸಲಹೆಗಾರನಿಗೆ ಗ್ರೀಸ್ ದೇಶದ ವ್ಯಾಪ್ತಿಯಲ್ಲಿ ಬರುವ ಒಂದು ಪುಟ್ಟ ದ್ವೀಪವನ್ನೇ ಆಯಿರಿ ಮಾಡಿ ಅಲ್ಲಿದ್ದವರೆನ್ನೆಲ್ಲ ಬೆರಗುಗೊಳಿಸಿರುವರು.

ಈ ತನಕ ನಾವೆಲ್ಲ ಕೇಳಿರುವುದು ನೋಡಿರುವುದು, ಓದಿರುವುದು, ಮದುವೆಯಾದ ದಂಪತಿಗಳಿಗೆ ಅವರ ಬಂಧುಗಳು, ಆಪ್ತರು, ಸ್ನೇಹಿತರು, ಬೆಳ್ಳಿ, ಬಂಗಾರ, ವಜ್ರ ವೈಡೂರ್‍ಯಗಳನ್ನು ಹೂವು ಗುಚ್ಛ, ಬಟ್ಟೆಬರೆ ಇತ್ಯಾದಿ ಆಯಿರಿ ನೀಡುವುದು ಸರ್‍ವೇಸಾಮಾನ್ಯ! ಆದರೆ…. ಇದೊಂದು ವಿಶೇಷ ವಿಶಿಷ್ಟವಾದ ಆಯಿರಿ ಆಗಿದ್ದು ಈ ಶತಮಾನದ ಹೊಸದ್ದು!

ದಿನಾಂಕ ೦೨-೦೮-೨೦೧೫ರಂದು ಭಾನುವಾರದ ದಿನದಂದು ಪೋರ್‍ಚುಗಲ್ಲಿನಲ್ಲಿ ರೊನಾಲ್ಡೊ ಅವರ ಆಪ್ತ ಸಲಹೆಗಾರ ಜೋರ್‍ಗೆಮೆಂಡಸ್ ಸಾಂಡ್ರಾ ಅವರನ್ನು ವಿವಾಹವಾದರು!

ಅಂದು- ದ್ವೀಪ ನೀಡಿದ ಬಗ್ಗೆ ಪೋರ್‍ಚುಗಲ್‌ನ ಸುದ್ದಿ ಸಂಸ್ಥೆ ಮೂವ್ಫ಼್ ನೋಟಿಸಿಯಾ ವಿಶೇಷವಾಗಿ ವರದಿ ಮಾಡಿದೆ!

ಗ್ರೀಸ್ ರಾಷ್ಟ್ರವು ಆರ್‍ಥಿಕ ಮುಗ್ಗಟ್ಟನ್ನು ಸರಿದೂಗಿಸಲು ತನ್ನಲ್ಲಿರುವ ದ್ವೀಪಗಳನ್ನು ಈಗಾಗಲೇ ಮಾರಾಟ ಮಾಡುತ್ತಿದ್ದು ಆ ಪೈಕಿ ರೊನಾಲ್ಡೊ ಕೂಡಾ ಒಂದು ದ್ವೀಪವನ್ನು ಖರೀದಿಸಿದ್ದರು.

ಜೊರ್‍ಗೆ ಮೆಂಡಸ್ ಅವರು ರೊನಾಲ್ಡೊ ಮಾತ್ರವಲ್ಲದೆ ಚೆಲ್ಸಿ ಕ್ಲಬ್‌ನ ಮ್ಯಾನೇಜರ್ ಜೋಸ್ ಮೌರಿನೊ ಈ ಕ್ಲಬ್‌ನ ಸ್ಪ್ರೆಕರ್ ರಾಡಮೆಲ್ ಫಾಲ್ಕಾವೊ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್‌ನ ಗೋಲ್‌ಗೀಪರ್ ಡೇವಿಡ್ ಜಿಯಾ ಅವರಿಗೂ ಸಲಹೆಗಾರರಾಗಿ ಕಾರ್‍ಯ ನಿರ್‍ವಹಿಸುವರು.

ಇದು ಕಲಿಗಾಲ ಸ್ವಾಮಿ! ಏನ್ ಬೇಕಾದರೂ ಆಯಿರಿ ಕೊಡಲಿಲ್ಲಿ ಸಾಧ್ಯವಿದೆ. ಇಂಥಾದ್ದು ಎಂದು ಊಹಿಸಲು ಸಾಧ್ಯವಿಲ್ಲ! ಅಂಥಾ ಕಾಲ ಈಗಾಗಲೇ ಬಂದುಬಿಟ್ಟಿದೆ. ನಾವು ನೀವು ಕುತೂಹಲಿಗಳಾಗಿ ಕಾಯೋಣವಲ್ಲವೇ?
*****