ಎಲ್ಲಿ ನೋಡಲಲ್ಲಿ ಕಣ್ಣು ಕಾಣುತಿಹೆದು ಕೆಮ್ಮಣ್ಣು! ಸುತ್ತ ಮುತ್ತ ನೋಡು ಮಿತ್ರ ಪ್ರಕೃತಿಯಾ ಕೃತಿ ವಿಚಿತ್ರ! ತನ್ನ ರೂಪ ತಾನೆ ನೋಡಿ ಮೆಚ್ಚಿ ಮೋದದಿಂದ ಹಾಡಿ ಸುರಿಸುತಿಹಳೊ ಪ್ರಕೃತಿಮಾತೆ ಕಣ್ಣನೀರನೆಂಬೊಲೊರತೆ- ಯೊಂದು ನೋಡು ಬೀಳುತಿಹುದು! ನೊರೆಯ ನಗೆಯು ಏಳುತಿಹುದು! ಇದೋ! ನುಣುಪುಕಲ್ಲ ನಲ್ಲ ಮುತ್ತನಿಡಲು ...

ಕಪ್ಪು ಕೋಗಿಲೆ ಕೆಂಪಾಯ್ತು ಸಂಭ್ರಮದಾ ಮನ ಬೆವೆತೋಯ್ತು ಕೆಂಪು ಸೂರ್ಯ ಕೆಂಪಾಗಿಯೆ ಉಳಿದ ಹುಣ್ಣಿಮೆ ಚಂದ್ರ ಕೆಂಪಾದ ಗುಡುಗು ಸಿಡಿಲು ಮಳೆ ಮಿಂಚು ಮೋಡ ಒಂದಾಯಿತು ಕಳೆದಾಮೋದ ಹರಡಿದ ಎಲ್ಲೂ ಇಬ್ಬನಿ ಮಾಲೆ ಕೋಟಿ ಸೂರ್ಯರಿಗೆ ಮರುಜನ್ಮ ಜೊತೆಗೇ ಬಂತು ...

ಎದುರು ಮನೇಲಿ ಇರೋ ಎಳೆವಯಸ್ಸಿನ ಗಂಡಹಂಡತಿನಾ ನೋಡಿದರೆ ಅವರುಗಳದ್ದು ಅರೇಂಜ್ಡ್ ಮ್ಯಾರೇಜ್‌ ಅನ್ನಿಸೋದಿಲ್ಲ ಕಣ್ರಿ ಅಂದಳು ನಿರ್ಮಲಮ್ಮ. “ಅಯ್ಯೋ! ಯಾಕ್‌ ಹಂಗಂತಿರ್ರೀ? ಬಲು ಅನುಮಾನ ಬಿಡಿ ನಿಮ್ಗೆ…. ಆದರೆ ನನಗೂ ಹಾಗೆ ಅನ್ಸುತ್ತೆ ...

ಮೂಲ: ತಾರಾಪದ ರಾಯ್ ಹೇಳು ಕಲ್ಕತ್ತಾ, ನನ್ನ ಬಳಿಯಿದ್ದ ಹಸಿರಂಗಿ, ಪಾಸ್‌ ಪೋರ್ಟುಗಳ ನೆನಪಿದೆಯೆ ನಿನಗೆ? ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ. ನನ್ನ ಜೀವನದಲ್ಲ...

ಕೆಲವು ಕಾಲದ ಮೇಲೆ ತಿರುಚನಾಪಳ್ಳಿಯ ಅರಸನು ತನ್ನ ಜಟ್ಟಿಯನ್ನು ಕಾಳಗದಲ್ಲಿ ಕೊಂದವನೇ ಶ್ರೀರಂಗಪಟ್ಟಣದ ಒಡೆತನಕ್ಕೆ ಬಂದನೆಂಬುದನ್ನು ತಿಳಿದು ಭಯಭ್ರಾಂತನಾದನು. ಇಷ್ಟು ಪೌರುಷಸಾಹಸಗಳುಳ್ಳ ಒಡೆಯರು ತಮ್ಮ ರಾಜ್ಯದಮೇಲೆ ಕೈ ಮಾಡಿದರೇನುಗತಿಯೆಂದು ಚಿಂತ...

ಜೀವನದ ಜ್ವಾಲೆಗಳು ಸುಟ್ಟ ಹೃದಯವು ಬೆಂದು ತಾಳಲಾರದೆ ನೋವ, ತನ್ನ ತಾ ಮರೆಯಲೆನೆ ಬಿನದವನೆ ಮರೆಹೊಕ್ಕು ತೋಯುವದು ತಪತಪನೆ ಸರಸಗೋಷ್ಠಿ ವಿಹಾರದೊಂದು ರಚನೆಯಲಿಂದು. ಜಕ್ಕವಕ್ಕಿಗಳ ಬೆಳದಿಂಗಳೂಟವ ತಂದು ತಿನಿಸುವದು. ಹೂಗಣೆಯ ಗುರಿಯನೆಸಗುವ ಸ್ಮರನೆ ಬಂ...

ಜಗದ ಚಿ೦ತೆಗೆ ಯುಗದ ಸಂತೆಗೆ ದೇವ ಗುರುಗಳೆ ಉತ್ತರಾ ಜನುಮ ಜನುಮದ ಜೀವ ಯಾತ್ರೆಗೆ ತಂದೆ ಶ್ರೀಗುರು ಹತ್ತರಾ ಪ್ರೇಮರಾಜ್ಯದ ಪ್ರಭುವ ಮರೆತರೆ ಬರಿ ಕತ್ತಲೊ ಕತ್ತಲಾ ಗುರುವನರಿತಾ ಭುವನವೆಲ್ಲಾ ಲಿಂಗರಾಜ್ಯದ ಕೊತ್ತಳಾ ಆತ್ಮಜ್ಞಾನವೆ ಅಮರ ಜ್ಞಾನವು ಕಣ್...

ಇದು ಜಯಂತ ಕಾಯ್ಕಿಣಿ ಹೇಳಿದ ಕಥೆ: ಆದೊಂದು ಆತ್ಯಾಧುನಿಕ ಆಫೀಸು. ದೂಳಿನ ಕಣವೂ ಕಾಣದ ಹವಾ ನಿಯಂತ್ರಿತ ಕಟ್ಟಡ. ಜಗಮಗಿಸೊ ದೀಪಗಳು. ಅಧಿಕಾರಿಯೊಬ್ಬ ತನ್ನ ಚೇಂಬರ್‌ನಲ್ಲಿ ಕುಳಿತು ಕಂಪ್ಯೂಟರ್‌ನಲ್ಲಿ ಮುಳುಗಿಹೋಗಿದ್ದಾನೆ. ಆಷ್ಟರಲ್ಲಿಯೇ ಫೋನು. ‘ನಿ...

ಏಳು ಮಾತೆ ಜನ್ಮದಾತೆ ಹೇ ಸ್ನೇಹದ ಮೂರುತಿ | ಕೇಳಿ ಬಂದೆ ತಾಯೆ, ನಿನ್ನ ಮೊಲೆ ಹಾಲಿನ ಕೀರುತಿ | (೨) ತನ್ನ ರಕ್ತ ತಾನೆ ಹೀರಿ ತನ್ನ ಮಾಂಸ ತಾನೆ ಸವರಿ ನಿಂತಿರುವಳು ಪೃಥ್ವಿಗೌರಿ -ಬರಿ ಎಲುಬಿನ ಹಂದರ ! ಚೀರುತಿಹುದು ಜೀವ ಹಲುಬಿ -ನಾ ಕಂಬನಿ ಕಂದರ ...

೧ ಜೀವಕ್ಕೆ ಕಳೆ ಕಡಮೆ ಇರುವದುಂಟು ಭಾವಕ್ಕು ಹುಸಿಬಣ್ಣ ಬರುವದುಂಟು. ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ ಅಪಸರದ ಮಾಲೆಯನು ತರುವದುಂಟು. ಹೀಗಿಹುದ ನೋಡಿಹೆನು-ಎಂದಮೇಲೆ, “ಹಾಳಿಗೂ ಬಾಳುಂಟೇ?” ಉಂಟು, ಉಂಟು! ೨ ನಾಲಗೆಗೆ ನಿಲುಕದಾ ನ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...