ಜಗದ ಚಿ೦ತೆಗೆ ಯುಗದ ಸಂತೆಗೆ
ದೇವ ಗುರುಗಳೆ ಉತ್ತರಾ
ಜನುಮ ಜನುಮದ ಜೀವ ಯಾತ್ರೆಗೆ
ತಂದೆ ಶ್ರೀಗುರು ಹತ್ತರಾ
ಪ್ರೇಮರಾಜ್ಯದ ಪ್ರಭುವ ಮರೆತರೆ
ಬರಿ ಕತ್ತಲೊ ಕತ್ತಲಾ
ಗುರುವನರಿತಾ ಭುವನವೆಲ್ಲಾ
ಲಿಂಗರಾಜ್ಯದ ಕೊತ್ತಳಾ
ಆತ್ಮಜ್ಞಾನವೆ ಅಮರ ಜ್ಞಾನವು
ಕಣ್ಣು ಬಿಚ್ಚೊ ಅಣ್ಣಾ
ಇಗೊ ವಿಶ್ವಾ ಬಣ್ಣ ಬಣ್ಣಾ
ಚೆಲ್ಲಬ್ಯಾಡೊ ಸುಣ್ಣಾ
ನಗುವ ಮಲ್ಲಿಗೆ ಗಲ್ಲ ತುಂಬಲಿ
ಎದೆಯು ಆರತಿ ಬೆಳಗಲಿ
ತನುವು ತೂಗುವ ತೊಟ್ಟಿಲಾಗಲಿ
ಭುವನ ಗುರುಮನೆಯಾಗಲಿ
*****
(ರಂಭಾಪುರಿ ಬೆಳಗು ಜನವರಿ : ೨೦೦೪)



















