
ಒಪ್ಪುವ ಉಡುಗೆಯ ಹುಡುಗಿ ಸೊಂಪಾದ ಮೈಯ ಬೆಡಗಿ ನಿನ್ನಂದಕೆ ಬೆಚ್ಚಿ ನಾ.. ನಡುಗಿ ಬೆವರಿದೆ ನಿನ್ನ ತೋಳಲಿ ಒರಗಿ ಹಾರಾಡುವ ನಿನ್ನ ಕೇಶಗಳಲಿ ಕಾಣುತಿದೆ ನನ್ನ ಸ್ವಾಗತವು ಬಿಗಿದಿಟ್ಟ ಹೃದಯವೇ ಹೇಳುತಿದೆ ಮನದೊಳಗೇ ಬಚ್ಚಿಟ್ಟ ಆಸೆಯನು ಮೃದು ಮನದ ಗೆಳತಿ...
ಅದೋ! ಅಲ್ಲಿಹುದು ಹೂವು ಅಂತಿಂತಹ ಹೂವಲ್ಲವದು, ತಾವರೆ ಹೂವು. ತನ್ನಂದದಿಂದೆಲ್ಲರ ಸೆಳೆವುದಿದು ಸಹಸ್ರ ಪತ್ರದ ಸುರಮ್ಯ ಹೂವು. ದೂರದಿಂದ ನೋಡಿದರೆ ಬಲು ರಮ್ಯ ಅಲ್ಲಿಂದಲೇ ಚೆಲುವಿನ ಸ್ವಾಗತವೀಯುವುದು ಬಳಿಗೆ ಹೋದರೆ ಮುಖವ ಮುಚ್ಚುವುದು! ಅದರಂದ ಕಂಡು...
ನಾನು ಚಿಕ್ಕಂದಿನಲ್ಲೇ ಗಾಂಧಿ ಆತ್ಮಕತೆಯ ಕೆಲವು ಭಾಗಗಳನ್ನು ಓದಿದ್ದೆ. ನನ್ನನ್ನು ಆವರಿಸಿಕೊಂಡದ್ದು ಅವರ ಸತ್ಯನಿಷ್ಠೆ. ತಪ್ಪಾಗಿದ್ದರೆ ಒಪ್ಪಿಕೊಳ್ಳುವ; ತಿದ್ದಿಕೊಳ್ಳುವ ಗುಣ. ಬೆಳೆಯುತ್ತ ಬಂದಂತೆ ನಾನು ಮಾರ್ಕ್ಸ್‌ವಾದವನ್ನು ಓದಿದೆ; ಅಂಬೇಡ್ಕರ...
ಮಾನವತೆಯ ಹೊರತು ಎಲ್ಲವನೂ ಹೂತು ಜಗದ ಮಾತು ಮರೆತು ಬಿಡೋಣ ಜೊತೆಯಲಿ ಕೂತು *****...
ಮಿಂಡಾನು ಬಂದಾನೆ ಗಂಡಿಲ್ಲ ಅಡವ್ಯಾಳೆ ಅಡ್ಡುಣುಗಿ ಊಟಕ್ಕ ಹಾಕ ಗೆಳತಿ ||ಪಲ್ಲ|| ತುಂಬೀದ ತತರಾಣಿ ಚಿತ್ತಾರ ಅತರಾಣಿ ಬಾರೆನಕೆ ಚಾರೆನಕೆ ಜಾರ ಜಾಣೆ ಚದುರಂಗ ಚಿತರಾಣಿ ಪದುಮಾದ ಉತರಾಣಿ ಚಾಚನಕೆ ಚುಂಬನದ ಚತುರರಾಣೆ ||೧|| ವ್ಯಾಳ್ಯಾಕ ಬಂದಾವಾ ಆಳಾಕ...
ಶೀಲಾ: “ನಿಮ್ಮಾಫಿಸಿಗೆ ಲಂಚ ನಿರ್ಮೂಲನಾಧಿಕಾರಿ ಬಂದಿದ್ರಂತೆ” ಮಾಲ: “ಹೌದು..” ಶೀಲಾ: “ಏನು ಮಾಡಿದ್ರು?” ಮಾಲ: “ಮಾಮೂಲಿ ಪಡೆದುಕೊಂಡು ಹೋದ್ರು..” *****...
ಅನ್ಯಾಯದ ಬೆಂಕಿಯಲ್ಲಿ ನೀನು ಕುದಿದು ಕುದಿದು ಕೆಂಪಾಗಿ- ಲಾವಾ ರಸವಾಗಿ- ನಿನ್ನೆದೆಯ ಲಾವಾ ಸ್ಫೋಟಗೊಂಡಾಗ ಜ್ವಾಲಾಮುಖಿ- ಅಗ್ನಿ ಪರ್ವತದಂತೆ ಬಂಡೆಯಾದೆಯಾ? ಗಟ್ಟಿಯಾದೆಯಾ ಬೆಂಜಮಿನ್. ಕಪ್ಪು ದೇಶದ ಆಗಸದಲಿ ಕೆಂಪು ಸೂರ್ಯನ ಉಗಮ ನೆತ್ತಿಗೇರಲು ಬಿಡಲ...
ಆರೋಗ್ಯದಸ್ಮಿತೆಗೆ ನೂರೊಂದು ತರ ವೈದ್ಯ ಇರುತಿಹುದು ವ್ಯಕ್ತಿ – ರೋಗ ಭೇದಕೊಂದೊಂದು ಮದ್ದು ಮೂರಡಿಗೊಂದು ಮಣ್ಣಿನಾ ಗುಣವಿರಲು ಸೂತ್ರವೊಂ ದರೊಳೆಲ್ಲರಿಗು ವರ ಕೃಷಿಯನರುಹಲಳವಿಲ್ಲ ಊರ ಬರವೆಂತು ನೀಗುವುದು ಪರ ಊರ ಮಳೆಗೆ – ವಿಜ್ಞಾನೇಶ...
ನಿನಗೆಂದು ಕವಿತೆಯನು ಬರೆದೆ ಸರಿದ ಮಧು ಚಣದ ರಸ ಸುರಿದೆ ನೀನು ಓದಬೇಕೆಂದು ಓದಿ ತಿಳಿಯಬೇಕೆಂದು ತಿಳಿದು ಉಳಿಸಬೇಕೆಂದು ಉಳಿಸಿ ನಲ್ನುಡಿಯ ಕಳಿಸಬೇಕೆಂದು ಮನಸಿನಲೆ ಬಗೆದು ಕೊರಗಿನಲಿ ಮರೆಯಲಾಗದೆ ಬರೆದೆ ಅದರೊಳಗೆ – ನಮ್ಮೊಲವಿನ ಕಥೆ ಸುಖದ ಸ...
ಹೇಳು ಗಿಳಿಯೆ ಹೇಳು ಇಂದೇಕೆ ನೀ ಮೌನ ಕಣ್ಣೀರ ಸುರಿಸುತ್ತಾ ಕೊರಗುವೇಕೆ! ಇಷ್ಟು ವರ್ಷಗಳಿಂದ ಜೊತೆ ಗೆಳತಿಯಾಗಿದ್ದ ಸೀತೆ ಮಿಥಿಲೆ ತೊರೆದು ಹೋಗುವಳೆಂದೆ! ಸೀತೆ ಮನ ತುಂಬಿದವ ಶ್ರೀರಾಮ ಶ್ರೀರಾಮ ವರಿಸಿದ ಹೆಣ್ಣು ಸೀತೆ ಇಬ್ಬರಾಸೆಗಳಿಂದು ಕೈಗೂಡಿ ಅವ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...














