ಒಪ್ಪುವ ಉಡುಗೆಯ ಹುಡುಗಿ
ಸೊಂಪಾದ ಮೈಯ ಬೆಡಗಿ
ನಿನ್ನಂದಕೆ ಬೆಚ್ಚಿ ನಾ.. ನಡುಗಿ
ಬೆವರಿದೆ ನಿನ್ನ ತೋಳಲಿ ಒರಗಿ
ಹಾರಾಡುವ ನಿನ್ನ ಕೇಶಗಳಲಿ
ಕಾಣುತಿದೆ ನನ್ನ ಸ್ವಾಗತವು
ಬಿಗಿದಿಟ್ಟ ಹೃದಯವೇ ಹೇಳುತಿದೆ
ಮನದೊಳಗೇ ಬಚ್ಚಿಟ್ಟ ಆಸೆಯನು
ಮೃದು ಮನದ ಗೆಳತಿ
ಮಧುರ ಭಾವದ ಒಡತಿ
ನನ್ನಾಸೆಯ ಅರಿತ ರತಿ
ತೋರಿದೆ ನಿನ್ನಯ ಪ್ರೀತಿ
ಕೆಂದುಟಿಯ ಚೆಲುವೆ
ಬಾ ನನ್ನ ಒಲವೆ
ಕೂಗಿ ಕರೆಯಿತೆನ್ನ ಮನವು ನಿನ್ನನ್ನೇ
ನೀ… ಸೇರು ಬಾರೇ ನನ್ನನ್ನೇ..
*****


















