
ಭೀಮಾಜಿಯ ಸಂತೋಷವು ಸಮುದ್ರದಂತೆ ಉಕ್ಕಿತು. ಅವನು ಚಮ ತ್ಯಾರದಿಂದ ಸೋವು ಹಿಡಿದು ಪ್ರಕರಣ ತಲಾಷು ಮಾಡಿದ್ದಕ್ಕಾಗಿ ಮೇಲು ಉದ್ಯೋಗಸ್ಥರ ಶ್ಲಾಘನೆಗೆ ಹ್ಯಾಗೂ ಯೋಗೃನಾದನಷ್ಟೇ ಅಲ್ಲ, ವಾಗ್ದೇವಿಯ ಮತ್ತು ಚಂಚಲನೇತ್ರರ ಕೃತಜ್ಞತೆಗೂ ಭಾಗಿಯಾದನು. ಶೋಧನೆಯ...
ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ. ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ. ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ. ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ. ಕೊರಳಿಗಿಳಿದು ಬಂದಿ...
ಎಂತಿರಲು ಬಹುದು? ನನ್ನಾತನೆಂತಿರಬಹುದು….? ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ- ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ ತರುಣನಿರಬಹುದೊ….? ಇಲ್ಲದಿರೆ ಗೌರಮ್ಮನಾ ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ- ನುರಿಮೊಗದ, ಬೆರಗಾಗಿಸುವ ವೇ...
ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಆ ದೇವರಿಗೊಂದು ಕೃತಜ್ಞತೆ ಅರ್ಪಿಸುವುದೇ ಸೂಕ್ತ| ಅವಕಾಶ ದೊರೆತಾಗಲೆಲ್ಲ ಜನ್ಮನೀಡಿದ ತಂದೆತಾಯಿಗಳಿಗೆ ಕೈಜೋಡಿಸಿ ನಮಿಸುವುದೇ ಸಮ್ಮತ|| ಎಂಥಹಾ ವಿಸ್ಮಯ ಈ ಜಗತ್ತು ಇಲ್ಲಿ ಮನುಜನಾಗಿ ಜನ್ಮ ತಳೆಯುವುದೇ ಪುಣ್ಯದ ಸ್ವತ್...
೧ ಕೋಳಿ ಕೂಗೋದು ಕಾದು ಬಾಳ ತಂಗಳು ತಿಂದು ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು ಬಿತ್ತಿದ್ದು ಒಣ ನವಣೆ ಬೆಳೆದದ್ದು ಬರೀ ಬವಣೆ. ೨ ಹಾರಕ ತಂದು ನೆಲತುಂಬ ಹೊಯ್ದರೂ ಸುರಕೊಂಡಿದ್ದು ಮಾತ್ರ ಹತ್ತಾರು ಸೇರು ತಿಂದು ಕುಂತರೆ ಈಗ ಮುಂದೆ ಬೀಜಕ್ಕೆ ಕಾಳಿಲ್ಲ...
ನವೋದಯದಲ್ಲೇ ಪ್ರಾರಂಭಿಸಿ ನಮ್ಮ ನವ್ಯೋತ್ತರ ಕಾವ್ಯಮಾರ್ಗಗಳನ್ನೂ ಹಾದು ಬಂದ ನಿಸಾರ್ ಅಹಮದ್ರ ಕಾವ್ಯ ಕೃಷಿ ಮೂವತ್ತೈದು ವರ್ಷಗಳಿಗಿಂತ ಹೆಚ್ಚಿನದು. ಕನ್ನಡ ಕಾವ್ಯಕ್ಕೆ ಲವಲವಿಕೆ, ಅನುಭವ ವೈವಿಧ್ಯ, ಪ್ರಯೋಗಶೀಲತೆ, ಮಾತುಗಾರಿಕೆಯ ರೋಚಕತೆಗಳನ್ನು ರ...
(ವೀರಕಾಶೀಮ) ಭಾವದಲ್ಲಿ:- “ಅಸಮ ಆಶಾಪಾಶ ಹರಿದುಬಿಟ್ಟೆ ವಿಷಮ ವಾಸನೆಗಳನ್ನು ಸುಟ್ಟುಬಿಟ್ಟೆ ಈಶ ಕೋಪದ ಕತೆಯ ಬಲ್ಲೆ ನಾನು ಈಶ ಕರುಣೆಯ ಮಹಿಮೆ ಅರಿತೆ ನಾನು ಜಯಿಸಿ ಇಂದ್ರಿಯಗಳನು ವಶಕೆ ತಂದೆ ಜಯಶೀಲನಾದೆನು ತಪಸಿನಿಂದೇ ಆರುವಿನಸ್ತ್ರದಲಿ ಭವ...
ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ ಜಾನಕಿಯು ರಘುವರನ ಸಂಜ್ಞೆಯರಿತು. ಹನುಮಂತನಿಂದಾಯ್ತು ರಾಮದರ್ಶನಮೆಂದು ನವರತ್ನಹಾರಮಂ ಕೊರಳಿಗಿತ್ತು ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ ರಾಮರತ್ನವ ಧರಿಸಿ ನುಡಿಯ ಮರೆತು. ಒಂದೊಂದೆ ರತ್ನಮಂ ಪರಿಕಿಸುತ ಕ...
ಬರೆದು ನಾನೊಂದು ಕವನ ರಾಯನಿಗೆ ಕೇಳಿದೆ ಹೇಗಿದೆ ಈ ಕವನ “ನಾ ಕಂಡ ಕನಸುಗಳೆಲ್ಲಾ ನೀರ ಮೇಲಿನ ಗುಳ್ಳೆ ಬರೀ ಹೊಡೆತ ನಿಂದನೆ ತುಂಬಿದೆ ಬದುಕೆಲ್ಲ” …ಇತ್ಯಾದಿ …ಇತ್ಯಾದಿ ಓದುತ್ತಿದ್ದಂತೆಯೇ ರಾಯ ತಾಳಿದ ರಾವಣನ ಅವತಾರ, ಮ...
ತೇಲುತಿರುವ ಮುಗಿಲುಗಳಿಗೆ ಬಳಿದನೊಬ್ಬ ಬಣ್ಣವ ಎಂಥ ಬಣ್ಣ ಅಂಥ ಬಣ್ಣ ಇನ್ನೆಲ್ಲೂ ಕಂಡುದಿಲ್ಲ ಹೂವುಗಳಿಗೂ ಹಚ್ಚಿಯಾಯ್ತು ಮರಗಳಿಗೂ ಮೆತ್ತಿಯಾಯ್ತು ಮಿಕ್ಕುದಿನ್ನು ಮಣ್ಣಿಗೆ ಚಂದವುಳ್ಳ ಹೆಣ್ಣಿಗೆ ಹಾರುತಿರುವ ಹಕ್ಕಿಗಳಿಗೆ ಇತ್ತನೊಬ್ಬ ರಾಗವ ಎಂಥ ರಾ...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















