ಆ ದಿನ
ಮುಂಜಾವಿನಿಂದ
ಸಂಜೆಯ ತನಕ
ಬೀದಿಯಲ್ಲಿ,
ಬಸ್ ನಿಲ್ದಾಣದಲ್ಲಿ,
ಆಫೀಸಿನಲ್ಲಿ,
ಪೇಟೆಯಲ್ಲಿ
ಎಲ್ಲೆಡೆ ಕಂಡ
ಹಲವು ಹತ್ತು
ಮುಖಗಳು
ಎಲ್ಲ ಪರಿಚಿತ!
ಕೊನೆಗೆ – ಹೋಗಿ
ಮನೆಗೆ
ನಿಂತಾಗ
ಕನ್ನಡಿಯ ಮುಂದೆ,
ಕಂಡ ಪ್ರತಿಬಿಂಬ
ಪರಿಚಿತ ತುಂಬ!
ಬರಿಯ ಬೈತಲೆ ಮಾತ್ರ
ತಿರುವು-ಮುರುವು.
*****
೧೦-೦೭-೧೯೯೪
ವರದರಾಜನ್ ಟಿ ಆರ್ ರವರು ಕಲಾವಿದರು, ಸಮಾಜ ಸೇವಕರು ಹಾಗೂ ಕನ್ನಡ, ಆಂಗ್ಲ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ಬರೆಯುವವರಾಗಿದ್ದಾರೆ. ಇವರು ಹಲವು ಸಾಹಿತ್ಯ ಸಮ್ಮೇಳನಗಳು ಹಾಗೂ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾಟಕಕಾರರಾಗಿ ಹಲವಾರು ನಾಟಕಗಳನ್ನು ರಚಿಸಿದ್ದಾರೆ, ನಿರ್ಧೇಶಿಸಿದ್ದಾರೆ ಹಾಗೂ ನಟಿಸಿದ್ದಾರೆ. ಇವರ ಹಿಂದಿ ಕಾದಂಬರಿ "ಸಲ್ಮಾ"ಗೆ ೨೦೦೧ನೆಯ ರಾಷ್ಟ್ರ ಪ್ರಶಸ್ತಿ ದೊರಕಿದೆ.