Home / Poem

Browsing Tag: Poem

ವೀರಪಂಡಿತ ಶಾಸ್ತ್ರಕಾರರೆ ಜ್ಞಾನನಿಧಿ ಋಷಿವರ್ಯರೆ, ಹಿಂದೆ ಗತಿಸಿದ ಯೋಗಪುರುಷರೆ ನಿಮ್ಮ ಕಷ್ಟವ ನೆನೆವೆನು ನಿಬಿಡವಾಗಿದೆ ನೀವು ರಚಿಸಿದ ಗ್ರಂಥರಾಶಿಯು ಧರೆಯೊಳು ಸೃಷ್ಟಿಯಂತ್ರವ ಭೇದಿಸುವ ಘನ ಮಥನ ರವವಿದೆ ಅದರೊಳು ಬಂದು ಇಲ್ಲಿಗೆ ಭ್ರಾಂತರಾದಿರೊ ...

ಬಾ ಬಾ ಓ ಬೆಳಕೇ ಕರುಣಿಸಿ ಇಳಿ ನೆಲಕೆ ನೀನಿಲ್ಲದೆ ಬಾಳೆಲ್ಲಿದೆ? ಹೋಳಾಗಿದೆ ಬದುಕೇ ಕಾಡು ಕಡಲು ಬಾನು ಏನಿದ್ದೂ ಏನು? ಮೈಯೆಲ್ಲಿದೆ ಇಡಿ ಬುವಿಗೇ ಕಾಣಿಸದಿರ ನೀನು? ನಿನ್ನ ಕೃಪಾಚರಣ ಚಾಚಿ ತನ್ನ ಕಿರಣ ಸೋಂಕಿದೊಡನೆ ಸಂಚರಿಸಿದೆ ನೆಲದೆದೆಯಲಿ ಹರಣ! ...

ನೀಲಿ ಸೀರೆಯ ತುಂಬೆಲ್ಲ ಬಿಳಿ ಹೂವುಗಳ ರಾಶಿ ರಾಶಿ ಮಳೆ ಮೋಡ ಮಿಂಚಿನಾಚೆಗೆಲ್ಲ ನಗುತ ಚಂದ್ರನೊಡನೆ ಸರಸವಾಡುತ ಬಣ್ಣವಾಸನೆ ಸಾವು ನೋವುಗಳಿಲ್ಲದ ಬೆಳ್ಳಿಹೂವುಗಳು ನಾವೆಂದು ಮಿರುಗುವ ನಕ್ಷತ್ರಗಳು. *****...

ಬೆಳ್ಳಂಬೆಳಗಿನ ಶುದ್ಧ ಕಣ್ಣೀರು ಗುಲಾಬಿಹೂವಲಿ ನಿಂತ ಪನ್ನೀರು ಇಬ್ಬನಿ ದೇವರೆ ಖುದ್ದಾಗಿ ಬಂದು ಸುರಿಸಿದರಿಲ್ಲಿ ಸ್ಫಟಿಕದ ಬಿಂದು ಒಂದ್ಹನಿ ನಮಗೆ ಒಂದ್ಹನಿ ನಿಮಗೆ ಒಂದ್ಹನಿ ನೆರೆಮನೆ ಪುಟ್ಟುಡುಗಿ ಕೆನ್ನೆಗೆ! *****...

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು, ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು. ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು ! ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ...

ಕರ್‍ದಾಗೆ ವೋಗಾದೇ! ಯೇಳಿ ಕೇಳಿ ಬರ್‍ಲೇನು ಅಳಿಯ್ನೇ? ಗೆಳೆಯ್ನೇ! ಬರ್‍ದೋ ಗ್ವತ್ತಿಲ್ಲ ವೋಗ್ದೋ ಗ್ವತ್ತಿಲ್ಲ ವತ್ತು ಗ್ವತ್ತು ಯೇನಿಲ್ಲ ಗತ್ತು ಮಾತ್ರ ಬಾಳ! ಯಿದು ಮೂರ್‍ದಿನ್ದ ಸಂತಿ ಸಿಂತಿ ಬ್ಯಾಡ ಬಾಳ! ಆದ್ರೂ ಯೆಶ್ಟೊಂದು ಬಡ್ಕೊಂಡಿ?! ಯೇನೆಲ...

ಸೂರ್ಯ ದೇವರೇ, ಇಲ್ಲ ಸ್ವಲ್ಪ ಕೇಳಿ ಇಷ್ಟ ಬಂದ್ಹಾಗೆ ಹನಿಮೂನ್ ಮಾಡೋದು, ಕಷ್ಟಪಟ್ಟು ಹೊಸದಾಗಿ ಮದುವೆಯಾದ ಹೆಣ್ಣು ಗಂಡಿನ ಪಾಳಿ, ಆದರೆ ಈ ಚಂದ್ರಂಗ್ಯಾಕೇಂತ, ರಾತ್ರೆ ಅವರ ಕಿಟಕಿಯಲ್ಲಿ ಹೋಗಿ ಹಣಕೋ ದುಷ್ಟ ಚಾಳಿ? ನೀವಾದರೂ ಸ್ವಲ್ಪ ಬುದ್ಧಿ ಹೇಳಿ ...

ಎಲ್ಲರನೊಂದೆ ಪಡಿಯಚ್ಚಿನಲಿ ಕೂಡಿಸುವುದು ಎಲ್ಲ ಬೇಲಿಗಳ ಕಿತ್ತೊಗೆದು ಬಯಲಿನಲ್ಲೆಲ್ಲರ ಬೆವರ ಹನಿಗಳಾಗಿಸುವುದು ಭ್ರಮೆಗುಳ್ಳೆಗಳನಡಗಿಸಿ ಕಡಲೊಡಲಲ್ಲಿ ನಿಲಿಸುವುದು ಎಲ್ಲರ ನೆಲದ ಹಾಸಿಗೆಯ ಮೇಲೆ ಮಲಗಿಸಿ ಆಗಸವ ಹೊದಿಸಿ ಗಾಳಿ ಜೋಗುಳ ಹಾಡಿ ತಟ್ಟುವ ಖ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...