ಸೂರ್ಯ ದೇವರೇ, ಇಲ್ಲ ಸ್ವಲ್ಪ ಕೇಳಿ
ಇಷ್ಟ ಬಂದ್ಹಾಗೆ ಹನಿಮೂನ್
ಮಾಡೋದು, ಕಷ್ಟಪಟ್ಟು ಹೊಸದಾಗಿ
ಮದುವೆಯಾದ ಹೆಣ್ಣು ಗಂಡಿನ ಪಾಳಿ,
ಆದರೆ ಈ ಚಂದ್ರಂಗ್ಯಾಕೇಂತ, ರಾತ್ರೆ
ಅವರ ಕಿಟಕಿಯಲ್ಲಿ ಹೋಗಿ ಹಣಕೋ
ದುಷ್ಟ ಚಾಳಿ? ನೀವಾದರೂ ಸ್ವಲ್ಪ ಬುದ್ಧಿ ಹೇಳಿ
*****