ಬೆಳ್ಳಂಬೆಳಗಿನ ಶುದ್ಧ ಕಣ್ಣೀರು
ಗುಲಾಬಿಹೂವಲಿ ನಿಂತ ಪನ್ನೀರು
ಇಬ್ಬನಿ ದೇವರೆ ಖುದ್ದಾಗಿ ಬಂದು
ಸುರಿಸಿದರಿಲ್ಲಿ ಸ್ಫಟಿಕದ ಬಿಂದು

ಒಂದ್ಹನಿ ನಮಗೆ ಒಂದ್ಹನಿ ನಿಮಗೆ
ಒಂದ್ಹನಿ ನೆರೆಮನೆ ಪುಟ್ಟುಡುಗಿ ಕೆನ್ನೆಗೆ!
*****