Home / Poem

Browsing Tag: Poem

ಉಬಿಸ್ತೇವೆ ಕೊಬ್ಬಿಸ್ತೇವೆ ನಿನ್ನಯ ಕೀರುತಿ ಹಬ್ಬಿಸ್ತೇವೆ ಆಮೇಲೆ ನಿನ್ನ ತಲೆ ಕಡಿತೇವೆ ಓಕೇನಾ? ಓಕೆ ಓಕೆ ಎಂದಿತು ಮೇಕೆ ಆದರೆ ಜೋಕೆ! ನಾನೂ ಹಂಗೇ ಮಾಡುತ್ತಿದ್ದೆ ಹಿಂದಿನ ಜನ್ಮದಲಿ! *****...

ಪತಿಯು ಮಡಿದ ಸುದ್ದಿಯು ತಾ ರತಿಯು ಕೇಳಿದಳೋ ಅಯ್ಯೋ ತಾ ರತಿಯು ಕೇಳಿದಳೋ ಕ್ಷಿತಿಯೋಳು ಹೊರಳ್ವಳೋ ||ಪ|| ಅಯ್ಯೋ ಎನ್ನ ಪ್ರಾಣ ಪತಿಯೆ ಪ್ರಾಣ ನೀಗಿದೆಯಾ ಅಯ್ಯೋ ಪ್ರಾಣ ನೀಗಿದೆಯಾ ಎನ್ನ ಕೈಯನಗಲಿದೆಯಾ ||೧|| ನಾ ಪ್ರೇಮದಿಂದ ಕೂಡಿದಂತೆ ಪ್ರೀತಿ ಹೋಯ...

ಯಾರಿಗೂ ಕೇಳಿಲ್ಲ ಹೇಳಿಲ್ಲ ನಿಂತ ನಿಲುವಲಿ ಎಲ್ಲರಿಗೂ ಕಾಣುವಂತೇ… ವಿಧಾನಸೌಧದಾ ಎದುರಲ್ಲೇ… ಪ್ರತಿಮೆಯಾದರು… ಈ ನಮ್ಮ ಅಂಬೇಡ್ಕರ್‍. ೧ ಪ್ರತಿಮೆಗೂ ಮಿಗಿಲು ಮುಗಿಲು, ಹಗಲು- ವಿಸ್ಮಯ ಪ್ರತಿಭೆ ಅವರದು! ಮಲ್ಲಿಗೆ ಮನಸನು, ವಿಶ...

ಎಲ್ಲವೂ ಫಲ, ಎಲ್ಲೆಲ್ಲೂ ಫಲ ಒಂದು ಇನ್ನೊಂದರದ್ದು, ಇನ್ನೊಂದು ಮತ್ತೊಂದರದ್ದು ಈ ಭೂಮಿ ಫಲಭರಿತ ಕಾರಣ – ಕೆಲವು ಸಚ್ಚರಿತ ಮತ್ತು ಹಲವಾರು ಬರಿದುರಿತ *****...

ಹುಟ್ಟಿದಾಗ ನೆಲ ಮೂಸಿ, ಬೆಳೆದಾಗ ಮುಡಿ ಮೂಸಿ ಇಳಿದಾಗ ಕಾಲು ಮೂಸ್ತದೆ, ಕಾಯಿದ್ದಾಗ ಕಟು ವಾಸನೆ, ಹಣ್ಣಿದ್ದಾಗ ಕಟುವಾಸನೆ. ಕೊಳೆತಾಗ ಮೂಗು ಮುಚ್ಚೋ ವಾಸಾನೆ, ಮಣ್ಣಾಗಿಂದ ವಾಸನೆ ಬೇರ್ಪಡಿಸಾಕೆ ಸಾಧ್ಯೇನು? ಈ ವಾಸನೆ ಆ ವಾಸನೆಗಳ ನಡುವೆ ಸೇತುವಾದೀತ...

ಮನವು ತಂಬೂರಿ ಹೃದಯ ಮೃದಂಗ, ತಬಲ ಕನಸು, ಕೊಳಲು, ಪಿಟೀಲು, ವೀಣೆ ಮಾನವನ ಬಾಳೊಂದು ವೃಂದಗಾನ, ಸುಗಮ ಸಂಗೀತ ಜೊತೆ ಇರಬೇಕು ಶಾಸ್ತ್ರೀಯ ಸಂಗೀತ ಚೌಕಟ್ಟು, ಬಿಗಿತ, ಹಿಡಿತ ಕೂಡಿ ಬರಬೇಕು *****...

ಊರಿಗೆ ಬಂದ ಶವಪೆಟ್ಟಿಗೆಯೊಳಗಿನ ಅವನ ಚಿರನಿದ್ರೆ ಏನೆಲ್ಲ ಹೇಳುತಿದೆ ಇವರೆಲ್ಲ ಅಳುತ್ತಿದ್ದಾರೆ. ದೇಶಭಕ್ತ ಇವ ನಮ್ಮ ಹುಡುಗ ಜೈಕಾರ ಹಾಕುತ ಮನೆಯ ಬೆಳಕು ನುಂಗಿದ ಕಾರ್ಗಿಲ್ ಕರಿಕತ್ತಲೆಗೆ ನೆರಳುತಿರುವರು. ಕಟ್ಟುಮಸ್ತಾದ ಹುಡುಗ ಹೊಳೆವ ಕಣ್ಣು ಗುಂ...

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ...

ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು? ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು? ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು? ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು? ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು? ಕಡಲು ನೆಲವ ನುಂಗದಂತೆ ಯ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...