Home / Poem

Browsing Tag: Poem

ಸಾವು ಬೇಡುವ ಭೂಮಿ ಸುಡುಗಾಡು ಇದು ಕೊಟ್ಟದ್ದನ್ನು ಪಡೆದು ಲೆಕ್ಕವಿಡುತ್ತಿದೆ ಬೆಳ್ಳಂಬೆಳಿಗ್ಗೆ ಮೂರು ವರ್ಷದ ಕೆಂಚ ಈರಿಯ ಮಗ ಹೊಲೆಗೇರಿಯಲ್ಲಿ ಊಟವಿಲ್ಲದೆ ಸತ್ತ ಸಮಾಧಿ ಮೇಲೆ ಹೂಗಳು ಬಾಡಿಲ್ಲ ಮಟ ಮಟ ಮಧ್ಯಾಹ್ನ ಇಪತ್ತರ ಹರೆಯದ ಕರಿಯ ಮಾರನ ಮಗ ಕು...

ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ ಕರಿಮುಗಿಲು ತುದಿ ಮಿಂಚಿ ಜರಿಸೀರೆಯಾಗಿ ನೀಲಿ ನೀರಲಿ ತೇಲಿ ಚಂದ್ರಾಮ ಬಂದ ಬಸವಳಿದ ಲೋಕಕ್ಕೆ ಹೊಸ ಚೆಲುವ ತಂದ ಕಣ್ಣು ಹಾರಿಸಿ ಸೊಕ್ಕಿ ನಕ್ಕವೋ ಚುಕ್ಕಿ ನಭದಲ್ಲಿ ತೇಲಿದವು ಹಾಯಾಗಿ ಹಕ್ಕಿ; ಕಡಲ ಮೈ ಮೇಲೆ ಅಲೆಸಾ...

ಮುಡಿಯಿಂದ ಅಡಿಯವರೆಗೆ ಸೂರ್ಯ ರಶ್ಮಿಗಳಲಿ ಮುಳುಗಿ ಎದ್ದು ತಣ್ಣನೆ ಕಿರಣಗಳನು ಸಿಂಪಡಿಸುತಿಹಳು ಚೆಲುವೆ ‘ಪ್ಲುಟೋಯ್’ ಸೂರ್ಯ ಕಿರಣಗಳಿಗಿಂತ ಮೊದಲು. *****...

ರಾಜಮಾರ್ಗಗಳಿರುವುದು ವೇಗವಾದ ವಾಹನಗಳಿಗೆ ಒಳಮಾರ್ಗಗಳಿರುವುದು ಎತ್ತಿನ ಗಾಡಿಗಳಿಗೆ ನಗ್ನಪಾದಗಳಿಗೆ ರಾಜಮಾರ್ಗಗಳು ರಾಜಕೀಯ ಕೆಲಸಗಾರರಿಗೆ ಒಳಮಾರ್ಗಗಳು ಅ-ರಾಜಕೀಯರಾದ ಜನಗಳಿಗೆ ಬಹು ಉದ್ದೇಶಪೂರ್ಣವಾದುವು ರಾಜಮಾರ್ಗಗಳು ಉದ್ದೇಶರಹಿತವಾಗಿ ಬಿದ್ದಿರ...

ಮನಸಿರಬೇಕಣ್ಣ ಒಳ್ಳೆ ಮನಸಿರಬೇಕಣ್ಣ ಮನಸೊಂದು ಮಮತೆಯ ಬೀಡಾಗಬೇಕು ಮಧುವಿನಂಥ ಒಂದು ಮಾತೇ ಸಾಕು ತಗುಲಿರ ಬೇಕಣ್ಣ ಬಂಧನ ಬಿಗಿದಿರಬೇಕಣ್ಣ ಹೊಗೆ ಬಂಡಿಯಂತೆ ನಡೆದಿರಬೇಕು ಸಿಗಲಿಲ್ಲ ತಾವೆಂದು ತವಕಿಸುವಂಥ ನಗುತಿರಬೇಕಣ್ಣ ನಗೆಯೊಳು ತಿರುಳಿರಬೇಕಣ್ಣ ಬಗ...

ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ, ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ ಮನೆಯ ಕವಿದಿದ್ದ ಇರುಳನು ಕೊಳೆದು ಹಗಲ ಹಚ್ಚಿದುದೆ ಸಾಲದೆ? ನೆರೆಜನ ಮೊರಯಿಡೆ ಕಾದಿ ಗೆಲಿಸಿದೆವು ಉರುಗೋಲಾಗಿ ಬಳ್ಳಿಗೆ ಎಂದಿನಿಂದಲೋ ಹರಿ...

ಅಲ್ಲಿ ನೋಡು ಡಿ.ಆರ್‍. ಇಲ್ಲಿ ನೋಡು ಡಿ.ಆರ್‍. ಹೆಗ್ಗೋಡಿನ ಹಳ್ಳಿಯಲ್ನೋಡು ಡಿ.ಆರ್‍. ರಾಜಧಾನಿ ಡೆಲ್ಲಿಯಲ್ನೋಡು ಡಿ.ಆರ್‍. ಡಿ.ಆರ್‍. ಡಿ.ಆರ್‍. ಎಲ್ಲೆಲ್ನೋಡು ಡಿ.ಆರ್‍. ಅದೇನೋ ಸರಿ, ಆದರೆ ಯಾರ್‍ ನೀನು ನಮ್ಮೆಲ್ಲರಿಗೂ ಬರೇ ಡಿ.ಆರೂ, ಸೆಮಿನಾ...

ಮಕ್ಕಳು ಆಡುತ್ತಿರುತ್ತವೆ ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ ದುಡಿವ ಜನ ದುಡಿಯುತ್ತಿರುತ್ತಾರೆ ಓಡಾಡುವವರು ಓಡಾಡುತ್ತಿರುತ್ತಾರೆ ಮಲಗಿರುವವರು ಮಲಗಿರುತ್ತಾರೆ ಕುಳಿತಿರುವವರು ಕುಳಿತಿರುತ್ತಾರೆ ಹೊಟ್ಟೆಗೋ ಹೊಟ್ಟೆಕಿಚ್ಚಿಗೋ ಕರುಳ ಕರೆಗೋ ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...