ಅಲ್ಲಿ ನೋಡು ಡಿ.ಆರ್. ಇಲ್ಲಿ ನೋಡು ಡಿ.ಆರ್.
ಹೆಗ್ಗೋಡಿನ ಹಳ್ಳಿಯಲ್ನೋಡು ಡಿ.ಆರ್.
ರಾಜಧಾನಿ ಡೆಲ್ಲಿಯಲ್ನೋಡು ಡಿ.ಆರ್.
ಡಿ.ಆರ್. ಡಿ.ಆರ್. ಎಲ್ಲೆಲ್ನೋಡು ಡಿ.ಆರ್.
ಅದೇನೋ ಸರಿ, ಆದರೆ ಯಾರ್
ನೀನು ನಮ್ಮೆಲ್ಲರಿಗೂ ಬರೇ ಡಿ.ಆರೂ, ಸೆಮಿನಾರೂ ಅಷ್ಟೇ ಅಲ್ಲ,
ಯೂ ಆರ್
ಅವರ್ ವೆರಿ ವೆರಿ ವೆರಿ ವೆರಿ ಡಯರ್.
*****