ಮನಸಿರಬೇಕಣ್ಣ
ಒಳ್ಳೆ ಮನಸಿರಬೇಕಣ್ಣ
ಮನಸೊಂದು ಮಮತೆಯ ಬೀಡಾಗಬೇಕು
ಮಧುವಿನಂಥ ಒಂದು ಮಾತೇ ಸಾಕು

ತಗುಲಿರ ಬೇಕಣ್ಣ
ಬಂಧನ ಬಿಗಿದಿರಬೇಕಣ್ಣ
ಹೊಗೆ ಬಂಡಿಯಂತೆ ನಡೆದಿರಬೇಕು
ಸಿಗಲಿಲ್ಲ ತಾವೆಂದು ತವಕಿಸುವಂಥ

ನಗುತಿರಬೇಕಣ್ಣ
ನಗೆಯೊಳು ತಿರುಳಿರಬೇಕಣ್ಣ
ಬಗೆ ಬಗೆ ಬಣ್ಣವ ಸವಿದಿರಬೇಕು
ಜಗವನೆ ತನ್ನೊಳು ತುಂಬಿಸುವಂಥ

ತಿಳಿದಿರಬೇಕಣ್ಣ
ಕೊಳೆಯನು ತೊಳೆದಿರಬೇಕಣ್ಣ
ತಳಮಳವೆಲ್ಲವು ಅಡಗಿರಬೇಕು
ಒಳಗಿನ ದೃಷ್ಟಿಯು ಬಿದ್ದಿರುವಂಥ

ರಸವಿರಬೇಕಣ್ಣ
ಸುಧೆಯನು ಸವಿದಿರಬೇಕಣ್ಣ
ಥಳಥಳಿಸುವ ಮಿಂಚು ಹೊಳೆದಿರಬೇಕು
ಒಳಹೊಕ್ಕು ಜನಕಜೆ ತಣಿದಿರುವಂಥ
*****

Latest posts by ಜನಕಜೆ (see all)