ನೀನಿಲ್ಲದೆ ನಾನಿಲ್ಲವೋ
ಹರಿ ನಿನ್ನ ಲೀಲೆಯಲ್ಲಿ
ನನ್ನ ನಿಲುವೊ ||

ಯುಗ ಯುಗಾಂತರವೂ
ಅವತರಿಸಿದೆ ಭಕುತರಿಗಾಗಿ
ಧರ್ಮಕರ್ಮ ಭೇದ ತೊರೆದು
ನೀ ನಿಂದೆ ಪರಾತ್ಪರನಾಗಿ ||

ರೂಪ ರೂಪದಲ್ಲೂ ನೀನು
ನಾಮಕೋಟಿ ಹಲವು ಬಗೆ
ನಿನ್ನ ನಾಮ ಸ್ಮರಣೆಯಲ್ಲಿ
ಎನ್ನ ನಿಲುವು ಕಂಡುಕೊಂಡನು ||

ಜಪ ತಪ ಉಪವಾಸವೇಕೆ
ಯಾಗ ಯೋಗ ಭೋಗವೇಕೆ
ತ್ಯಾಗ ಒಂದೇ ನಿನ್ನ ರೀತಿಯಲ್ಲಿ
ಭಕ್ತಿ ಎಂಬ ಮನವ ಕಂಡೆನು ||

ಧ್ಯಾನ ಮನನ ಕರ್‍ಪೂರ
ಎನ್ನೆದೆ ಗುಡಿಯೊಳಗೆ ಸತ್ಯಶಾಂತಿ
ನಿನ್ನ ನಿಲುವು ಕಾಯಕವೇ ನಿನ್ನ ಗೆಲುವು
ಸಾಧನೆ ಯುಕ್ತಿಯು ಸ್ಥೈರ್‍ಯ ಒಂದೇ ಮುಕ್ತಿಯು ||
*****