ಅವಳು ನೂರಾರು ಪ್ರೇಮ ಪ್ರಕರಣಗಳಲ್ಲಿ ಸಿಲಿಕಿಕೊಂಡು, ನಿಜವಾದ ಪ್ರೀತಿಯನ್ನು ಹುಡುಕುತ್ತಾ, ಅಲೆಯುತ್ತಾ ಅವಳು ಹೃದಯಗಳ ತೀರ ಸನಿಹಕ್ಕೆ ಹೋಗುತ್ತಿದ್ದಳು. ಇವನ ನೆರಳು ನನಗೆ ತಂಪು ಕೊಟ್ಟೀತೆ? ಅವನ ಪ್ರೀತಿ ಬೆಸುಗೆಯಾದೀತೆ? ಎಂದು ಹತ್ತು ಹಲವರಲ್ಲಿ ಮನಸ್ಸನ್ನು ಹರಿಬಿಟ್ಟಳು. ಕೊನೆಗೆ ಅವಳ ಹೃದಯ ಚಿಪ್ಪಿನಲ್ಲಿ ಸ್ವಾತಿ ಮಳೆ ಹನಿ ಬೀಳಲೇ ಇಲ್ಲ. ಶೋಧನೆಯಲ್ಲಿ ಇದ್ದ ಅವಳನ್ನು ನೋಡಿ ಸಮಾಜ “ಹಾದರಗಿತ್ತಿಯ” ಕಿರೀಟ ತೊಡಸಿತ್ತು.
*****