ನಾವು ಮಕ್ಕಳು ಶಿವನ ಶಿಶುಗಳು
ನಾವು ಕಮಲದ ಹೂಗಳು
ನಾವು ಆತ್ಮರು ಬಿಂದು ರೂಪರು
ನಾವು ನಂದಾದೀಪರು

ದೊಡ್ಡ ತೇರು ಎಳೆದ ಮೇಲೆ
ಗಿಡ್ಡ ತೇರು ಏತಕೆ
ಆತ್ಮ ದೇವರ ಕಂಡ ಮೇಲೆ
ಗಿಂಡಿ ದೇವರು ಏತಕೆ

ಧೂಮಪಾನಾ ಮದ್ಯಪಾನಾ
ಅಣ್ಣಾ ನಿನಗೆ ಬೇಡವೊ
ನೀನು ತಂದಿಯ ಮಧುರ ಮಗನೊ
ಚರ್ಮ ಚಟಗಳು ಯಾತಕೊ

ಸುಟ್ಟು ಬಿಡುನೀ ಪಾಪ ಜೀವನ
ಹಾಕು ಜ್ಞಾನದಹೋಮದಿ
ಚಲ್ಲಿ ಬಿಡು ಬಿಡು ಚರ್ಮ ಚಟಗಳ
ಹಾಕು ಅಗ್ನಿಯ ಕುಂಡದಿ
*****