ಈ ಸುಂದರ
ಭೂಮಿಯ ಮೇಲೆ
ನಡೆವುದೂ,
ನೀರಿನ ಮೇಲೆ
ನಡೆದಷ್ಟೇ-
ಅದ್ಭುತ ಚಮತ್ಕಾರ.
ಒಂದು –
ಕಣ್ಣಿಗೆ ನಿಲುಕಿದರೆ
ಇನ್ನೊಂದು-
ಊಹೆಗೆ…!
*****