Dharmadas Barki

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೭೧

0

ಗ್ರಹಣ ಹಿಡಿಯಿತೆಂದು ಚಿಂತಿಸುತ- ಡೈಮಂಡ್ ರಿಂಗ್ ನೋಡುವ ಭಾಗ್ಯ ಕಳೆದುಕೊಳ್ಳಬೇಡ! *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೭೦

0

ನಾನೇನೂ ಮಾಡದೇ- ಸುಮ್ಮನೇ- ಕುಳಿತಿರುವಂತೆ ನಿಮಗನ್ನಿಸಿದೆಯಾ? ಇಡೀ ಬ್ರಹ್ಮಾಂಡವೇ ನನ್ನ ಹಾಗೇ- ಸುಮ್ಮನೇ ಕುಳಿತುಬಿಟ್ಟಿರುವಂತೆ… ನಿಮಗನ್ನಿಸುವುದಿಲ್ಲವೆ? *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೯

0

ಬೆಳಕನರಸಿ ಹೊರಟದ್ದು ಬೇರೇನೂ ಆಗಿರಲಿಲ್ಲ; ಬೆಳಕೇ ಆಗಿತ್ತು! *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೮

0

ನಾವಿಬ್ಬರೂ ಗೆಲ್ಲದಿದ್ದರೆ, ಇಬ್ಬರೂ ಸೋತಂತೆ. *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೭

0

ಆನಂದ-ಸಂತಸ ಹುಡುಕುವಿಯೇಕೆ? ಅವು- ಎಂದೂ ಕಳೆದುಕೊಂಡಿಲ್ಲ! *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೬

0

ಓ ಬದುಕೇ, ನನ್ನ ಕೈ ಹಿಡಿದು ನಡೆಸುವ ಮುನ್ನ- ಎದ್ದು ಸರಿಯಾಗಿ ನಿಂತುಕೋ! *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೫

0

ಅಹಂಕಾರದ ನೀರು ಕುದಿಸಿದೆ. ಆವಿ ಹೊರಡಿತು. ಮತ್ತೆ… ನೀರಾಗಿ ಧರೆಗಿಳಿಯಿತು. ಅಷ್ಟೆ. *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೪

0

ಅದು ಬೇಕೇ ಬೇಕೆಂದಾದರೆ ಹುಡುಕು. ಆದರೆ- ಅದನ್ನು ಕಳೆದುಕೊಂಡ ಬಗ್ಗೆ ನಿನಗೆ ಖಾತ್ರಿಯಾಗಿರಲಿ! *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೩

0

ಅದೇನು ನಡೆದಿರಬೇಕು, ಏನೂ ಜರುಗದ ಕ್ಷಣದಲ್ಲಿ? *****

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೨

0

ಸುರಕ್ಷಿತವಾಗಿರಬೇಕೆಂದುಕೊಂಡೆಯಾ? ನೀನಿರುವ ಜೇಲಿನಿಂದ ಹೊರಗೆ ಹೆಜ್ಜೆ ಹಾಕೀಯಾ ಜೋಕೆ! *****