ಲವಲವಿಕೆಯಲಿ ಮಿಂಚಿ ಮುಚ್ಚಾಟವಾಡುತಿಹ ಬಹು ರೂಪಿಯೇ | ಅಮೃತದಿರವೇ ನನ್ನ ಮರೆವಿಲ್ಲದರಿವಿನಲಿ ಇಹೆ ಸೀಪಿಯೇ || ನೆಕ್ಕಿದೆನ್ನನು ನಿನ್ನ ವಿದ್ಯುತ್‌ ಕಟಾಕ್ಷದಲಿ ಅಗ್ನಿರುಚಿಯೇ | ನಿನ್ನ ಕುಲುಮೆಯ ಕಾವು ಇಲ್ಲ ಇಲ್ಲದ ಠಾವು ನಿತ್ಯ ಶುಚಿಯೇ || ಕ್ಷಣವಿಲ್ಲದೀಕ್ಷಣವೆ ಲವಮಾತ್ರ ಸ್ಪರ್ಶದಲಿ ನೀ ಹನಿಸುವೆ | ಹಸಿರಿ...

ಅಡಿಗರು ಎಂದೆಂದಿಗೂ ಚಡಪಡಿಕೆಯ ಕವಿ. ಅವರು ತಮ್ಮ ಸಮಾಧಾನ, ತೃಪ್ತಿಗಳನ್ನು ಸದಾ ಪರೀಕ್ಷಿಸಿ ನೋಡುವ ಮನೋಭಾವದವರು. ಈ ಲೆಕ್ಕಕ್ಕೆ ಅವರು ಅಲ್ಲಮನ ಮಠದವರು! ಅರಿವಿನ ಅಲುಗಿನಲ್ಲಿ ಅನುಕ್ಷಣವೂ ಮಸೆದು ನೋಡಬೇಕು; ನಿಜವನ್ನೇ ಶೋಧಿಸಿ ಎದೆಗಿಟ್ಟುಕೊಳ್ಳಬ...

ದೊಡ್ಡೋನ್ಗ್ ಎಚ್ಗೆ ಸಂಬ್ಳಾಂತ್ ಅಂದ್ರೆ ಚಿಕ್ಕೋರ್ ಕೆಲ್ಸಕ್ ಕೋತ! ಆನೆ ಮೈನ ಬೆಳಸಬೇಕಂದ್ರೆ- ಆವ್ತಿ ಬಡಕಲ್ ವೋತ! ೧ ಗುಡಿಸಿಲ್ಗ್ ಉಲ್ಲು ಸಾಲ್ದಿದ್ರೂನೆ ಮಾಡೀಗ್ ಮಾಡಿ ಬಡ್ತಿ! ರೂಪಾಯ್ಗ್ ಒಂದ್ ಕಾಸ್ ಕಮ್ಮಿ ಬಂದ್ರೆ ಬಡವೊನ್ ಮನೇ ಜಡ್ತಿ! ೨ ನಾ...

“ವರನೆ ಬಾ ಇಲ್ಲ; ಮುಗಿಲಿಗೆ ನೆಲವನಿತ್ತಂತೆ ನಿನಗೊಪ್ಪಿಸುವೆನಿವಳ. ಇವಳು ಸುಕ್ಷೇತ್ರ, ಕಾ- ದುದಲಿ ಅರ್‍ಥದಲಿ ಸಹಧರ್‍ಮಿಣಿಯು ಮುಕ್ತರೊಲು, ಚೆಲುವರನು, ಕಟ್ಟಾಳುಗಳನು, ಗಂಭೀರರನು ಪಡೆದು ಇವಳಲಿ ಬುನಾದಿಯ ಮನೆಯ ಕಟ್ಟುಮುಂ- ದಕೆ. ದೇವ ದೇವ...

ಕುರಿತಾಲೋಚಿಸಿದರರಿಯುವುದು ಹಣ್ಣಿನಾ ಹಿರಿಮೆಯದನುಣ್ಣಲಿಕೆ ಬೇಕಿಲ್ಲ ಸಾರು ಸಾಂ ಬಾರು, ಅಕ್ಕಿಯನ್ನವನೆಂದಾದೊಡಂ ಉಣಲುಂಟೆ ಬರಿದು? ಸಂತೆಯಿಂದೇನನುಂ ತರದೇ ಸುಖಿಸಿ ದರದುವೆ ಫಲವಂತ ಜೀವನವು – ವಿಜ್ಞಾನೇಶ್ವರಾ *****...

ಮತಿಯ ಪಾಲಿಸು ಯಮಗೆ ಶ್ರೀಗಣರಾಯಾ ರುತಿ ಮಾಡ್ ಉಣಿಸು ಯಮಗೇ || ೧ || ಉದ್ದಿನ ವನದಲ್ಲಿ ಉದ್ದಿನ ಉಂಡೇ ಎಳದಿಟ್ಟ ಬೆನುಮಯ್ಯ ಯೆಡಿ ಮಾಡ್ ಉಣಿಸು ಯಮಗೇ || ೨ || ಕಡಲೆಯ ವನದಲ್ಲಿ ಕಡಲೆಯ ಉಂಡೇ ಕಡದಿಟ್ಟ ಬೆನುಮಯ್ಯಾ ಯಡಿಮಾಡಿ ಉಣಿಸು ಯಮಗೇ || ೩ || ...

ಎರಡು ವರ್ಷಗಳಾದ ಮೇಲೆ ಜೀನ್ ವಾಲ್ಜೀನನನ್ನು ಅಪರಾಧಿ ಯಾಗಿ ಸೇರಿಸಿದ್ದ ಹಡಗು ಟೂಲಾನ್ ಪಟ್ಟಣದ ರೇವಿಗೆ ಬಂದು ನಿಂತಿತು. ನಾವಿಕರಲ್ಲಿ ಒಬ್ಬನು ಹಡಗಿನ ಪಟವನು ಸುರುಳೆ ಸುತ್ತುತ್ತಿರುವಾಗ ಮೇಲಿನಿಂದ ಜಾರಿಬಿದ್ದು ಕೈಗೆ ಸಿಕ್ಕಿದ ಒಂದು ಹಗ್ಗವನ್ನು ...

ರಾಮ ನಿನ್ನ ನೆನೆದು ನೆನೆದು ನಾನು ತಣ್ಣನೆ ನೆಂದಿರುವೆ ನಿನ್ನ ಕೃಪಾ ಬಿಸಿ ತಾಟುವುದೆಂದು ನಿನ್ನ ಅಡಿದಾವರೆಯಲಿ ಬಂದಿರುವೆ ರಾಮ ನಿನ್ನ ಭಜಿಸಿ ಭಜಿಸಿ ನಾನು ಆಸ್ತಿ ನಾಸ್ತಿಗಳಲಿ ಭಾಜಿಸಿರುವೆ ನಿನ್ನ ಸಾಕ್ಷಾತ್ಕಾರದ ಬೆಳದಿಂಗಳಿಗಾಗಿ ನಿತ್ಯ ನಾನು ...

ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯ್ತ್ತು ತುಂಬಿ ನೋಡಾ ಆತುಮ ತುಂಬಿ ತುಂಬಿ ನೋಡಾ ಪರಮಾತುಮ ತುಂಬಿ ತುಂಬಿ ನೋಡಾ ಗುಹೇಶ್ವರನೆಂಬ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ ಹೂವಿಗೆ ದುಂಬಿ ಎರಗಿದರೆ ದುಂಬಿ ಮಧುವನ್ನು ಹೀರಿ ವಿಕಾಸಗೊಳ್ಳ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...