ಸಂತತಿ

“ವರನೆ ಬಾ ಇಲ್ಲ; ಮುಗಿಲಿಗೆ ನೆಲವನಿತ್ತಂತೆ
ನಿನಗೊಪ್ಪಿಸುವೆನಿವಳ. ಇವಳು ಸುಕ್ಷೇತ್ರ, ಕಾ-
ದುದಲಿ ಅರ್‍ಥದಲಿ ಸಹಧರ್‍ಮಿಣಿಯು ಮುಕ್ತರೊಲು,
ಚೆಲುವರನು, ಕಟ್ಟಾಳುಗಳನು, ಗಂಭೀರರನು
ಪಡೆದು ಇವಳಲಿ ಬುನಾದಿಯ ಮನೆಯ ಕಟ್ಟುಮುಂ-
ದಕೆ. ದೇವ ದೇವತಾ ಗಣಕೆ ಮೇಲ್ಪಂಕ್ತಿಯೆನೆ
ನಿನ್ನ ಮನದಲಿ ಹೊಳೆದು ಬೆಳೆವ, ಕನಸಲಿ ಇವಳು-
ಕೊಂಡು ಕೊನೆಯುವ ಮೂರ್‍ತಿಗಳನ್ನು ಮೂಡಿಸಿರಿನ್ನು”

“ಕೃತಯುಗವು ಕಲಿಯುಗಕೆ ಇಳಿದು ನಿಂತಿತು; ಮಾನ-
ವನ ದುಃಖದರ್‍ಶನವು ಬೆಳೆದು ಬಂದಿತು; ಸುಖವು
ಕಣಸಿನಲಿ ಕೆಣಕುತಿದೆ. ವಾನರರು ನರರಾದ-
ರೋ, ನರರೆ ವಾನರರು ಆಗುತಿಹರೋ? ಕವಲು
ಕವಲಾಗುತಿದೆ ಆಸೆ; ಕುಣಿಯುತಿದೆ ಪ್ರಾಣ, ಮಂ-
ತ್ರವನೆ ನುಂಗಿತೊ ತಂತ್ರ, ಎಲೆ ಕನ್ನೆ, ಮನದನ್ನೆ?”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ತ್ರೀ ಸಾಮರ್‍ಥ್ಯಹರಣ-ಲಿಂಗತ್ವ ರಾಜಕಾರಣ
Next post ಯೆಂಡ ಕುಡಿಯೋರ್ ನಾವು

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…