Home / ಕವನ / ಕವಿತೆ / ಯೆಂಡ ಕುಡಿಯೋರ್ ನಾವು

ಯೆಂಡ ಕುಡಿಯೋರ್ ನಾವು

ದೊಡ್ಡೋನ್ಗ್ ಎಚ್ಗೆ ಸಂಬ್ಳಾಂತ್ ಅಂದ್ರೆ
ಚಿಕ್ಕೋರ್ ಕೆಲ್ಸಕ್ ಕೋತ!
ಆನೆ ಮೈನ ಬೆಳಸಬೇಕಂದ್ರೆ-
ಆವ್ತಿ ಬಡಕಲ್ ವೋತ! ೧

ಗುಡಿಸಿಲ್ಗ್ ಉಲ್ಲು ಸಾಲ್ದಿದ್ರೂನೆ
ಮಾಡೀಗ್ ಮಾಡಿ ಬಡ್ತಿ!
ರೂಪಾಯ್ಗ್ ಒಂದ್ ಕಾಸ್ ಕಮ್ಮಿ ಬಂದ್ರೆ
ಬಡವೊನ್ ಮನೇ ಜಡ್ತಿ! ೨

ನಾಯ್ನ ನಾಯೇ ತಿಂತಾದಂತೆ!
ಮೀನ್ಗೆ ಮೀನೆ ತಿಂಡಿ!
ಮನ್ಸನ್ ಮನ್ಸ ತಿಂತಾನ್ ಈಗ
ಜೀವ ಪೂರ ಯಿಂಡಿ! ೩

ಯೆಂಡ ಕುಡಿಯೋರ್ ನಾವ್ ಇಂಗಿಲ್ಲ!
ಬುಂಡೆ ಪೂರ ತಂದಿ
ಪಕ್ದೋನ್ ಕೈಲಿ ಕಾಸ್ ಇಲ್ದಿದ್ರೆ
ಔನ್ಗು ಕೊಡತೀವ್ ಸೇಂದಿ! ೪

ನಂತಾಕ್ ಬಂದ್ರೆ ಯೋಳ್ಕೊಡ್ತೀವಿ
ದಾನ ಧರ್‍ಮಕ್ ಅರ್‍ತ;
ಸಾಜ ಕೇಳಿ ರೇಕ್ಕೊಂಡ್ ಓದ್ರೆ-
ಕೋಪಾನೆಲ್ಲ ವೆರ್‍ತ! ೫
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...