ಮತಿಯ ಪಾಲಿಸು ಯಮಗೆ ಶ್ರೀಗಣರಾಯಾ
ರುತಿ ಮಾಡ್ ಉಣಿಸು ಯಮಗೇ || ೧ ||

ಉದ್ದಿನ ವನದಲ್ಲಿ ಉದ್ದಿನ ಉಂಡೇ
ಎಳದಿಟ್ಟ ಬೆನುಮಯ್ಯ ಯೆಡಿ ಮಾಡ್ ಉಣಿಸು ಯಮಗೇ || ೨ ||

ಕಡಲೆಯ ವನದಲ್ಲಿ ಕಡಲೆಯ ಉಂಡೇ
ಕಡದಿಟ್ಟ ಬೆನುಮಯ್ಯಾ ಯಡಿಮಾಡಿ ಉಣಿಸು ಯಮಗೇ || ೩ ||

ರಾಗಿಯ ವನದಲ್ಲಿ ರಾಗಿಯ ಉಂಡೇ
ಎಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೪ ||

ಮತಿಯ ಪಾಲಿಸು ಯಮಗೇ ಶ್ರೀ ಗಣರಾಯಾ
ಗೋದಿಯ ವನದಲ್ಲಿ ಗೋದಿಯ ಉಂಡೇ
ವಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೫ ||

ಯೆಳ್ಳಿನ ವನದಲ್ಲಿ ಏಳ್ಳಿನ ಉಂಡೇ
ಯೆಡದಿಟ್ಟ ಬೆನುಮಯ್ಯ ಯೆಡಿ ಮಾಡುಣಿಸು ಯಮಗೇ || ೬ ||
*****
ಹೇಳಿದವರು: ತುಂಬಳ್ಳಿ ಮೋಹನ ನಾಗು ಗೌಡ, ೨೫ ವರ್ಷ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.