ಪಾಪಿಯ ಪಾಡು – ೬

ಪಾಪಿಯ ಪಾಡು – ೬

ಎರಡು ವರ್ಷಗಳಾದ ಮೇಲೆ ಜೀನ್ ವಾಲ್ಜೀನನನ್ನು ಅಪರಾಧಿ ಯಾಗಿ ಸೇರಿಸಿದ್ದ ಹಡಗು ಟೂಲಾನ್ ಪಟ್ಟಣದ ರೇವಿಗೆ ಬಂದು ನಿಂತಿತು. ನಾವಿಕರಲ್ಲಿ ಒಬ್ಬನು ಹಡಗಿನ ಪಟವನು ಸುರುಳೆ ಸುತ್ತುತ್ತಿರುವಾಗ ಮೇಲಿನಿಂದ ಜಾರಿಬಿದ್ದು ಕೈಗೆ ಸಿಕ್ಕಿದ ಒಂದು ಹಗ್ಗವನ್ನು ಮಾತ್ರ ಹಿಡಿದುಕೊಂಡು ಜೋಲಾಡುತ್ತಿದ್ದನು, ಇದನ್ನು ನೋಡಿ ಜೇನ್ ವಾಲ್ಜೀನನು, ತನ್ನನ್ನು ಕಟ್ಟಿದ್ದ ಕಬ್ಬಿಣದ ಬೇಡಿಯನ್ನು ಕಿತ್ತೊಗೆದು, ಆ ಮನುಷ್ಯನಿಗೆ ಸಹಾಯ ಮಾಡಿ ಅವನನ್ನು ಉಳಿಸಲು ಅಪ್ಪಣೆಯನ್ನು ಪಡೆದು ಹೋಗಿ ಅವ ನಿಗೆ ಸಹಾಯಮಾಡಿ ಕಾಪಾಡಿದನು. ಆದರೆ ಈ ಕಾರ್ಯಮಾಡು ವಾಗ ತಾನೇ ಸಮುದ್ರದಲ್ಲಿ ಬಿದ್ದು ಬಿಟ್ಟನು. ಆ ದಿನವೆಲ್ಲವೂ ಅವ ನನ್ನು ಸಮುದ್ರದಲ್ಲಿ ಹುಡುಕಿದರೂ ಪ್ರಯೋಜನವಾಗಲಿಲ್ಲ. ವರ್ತಮಾನ ಪತ್ರಿಕೆಗಳಲ್ಲಿ, ಬೇನ್ ವಾಲ್ಜೀನ್ ಎಂಬ ಶಿಕ್ಷಿತನಾದ ಅಪರಾಧಿಯು ಟೂಲಾನ್ ಪಟ್ಟಣದ ರೇವಿನಲ್ಲಿ ಸಮುದ್ರದ ಪಾಲಾದನೆಂದು ಪ್ರಕಟಿಸಲ್ಪಟ್ಟಿತು.

ನಿಜಾಂಶವೇನೆಂದರೆ : ಅವನು ಹೇಗೋ ನೀರಿನ ಒಳಭಾಗ ದಲ್ಲಿಯೇ ಈಜಿಕೊಂಡು ಹೋಗಿ, ಲಂಗರುಹಾಕಿ ದೋಣಿಯನ್ನು ಕಟ್ಟಿದ್ದ ಒಂದು ಹಡಗಿನ ಬಳಿಗೆ ಬಂದು, ರಾತ್ರಿಯಾಗುವವರೆಗೂ ಆ ದೋಣಿಯಲ್ಲಿ ಅಡಗಿ ಕೊಂಡಿದ್ದನು. ಅನಂತರ ಆ ರಾತ್ರಿ ನೀರಿ ನಲ್ಲಿ ಈಜಿಕೊಂಡು ಹೋಗಿ ಸಮೀಪವಾಗಿದ್ದ ಒಂದು ಊರನ್ನು ಸೇರಿದನು. ಈ ಊರಿನಲ್ಲಿ ಕಳ್ಳತನದಿಂದ ತಪ್ಪಿಸಿಕೊಂಡುಬಂದ ಅಪರಾಧಿಗಳಿಗೆ ಗೋಪ್ಯವಾಗಿ ಉಡುಪುಗಳನ್ನು ಬೆಲೆಗೆ ಕೊಡು ತ್ತಿದ್ದ ಒಂದು ಸಣ್ಣ ಅಂಗಡಿಯಿತ್ತು. ಅಲ್ಲಿ ತಕ್ಕ ಉಡುಪನ್ನು ಕೊಂಡು ಪ್ಯಾರಿಸ್ ನಗರಕ್ಕೆ ನಡೆದುಕೊಂಡು ಹೋದನು.

ಕೆಲವು ವಾರಗಳನಂತರ ಆ ನಗರವನ್ನು ಸೇರಿ, ಬಹಳೆ ಗೋಪ್ಯವಾದ ಯಾವುದೋ ಬೀದಿಯಲ್ಲಿ ಒಂದು ಮನೆಯನ್ನು ಗೊತ್ತುಮಾಡಿಕೊಂಡು ನಿಂತು ಅಲ್ಲಿಂದ ಕೋಸೆಟ್ಟಳು ವಾಸ ವಾಗಿದ್ದ ಊರಿಗೆ ಹೊರಟನು.

ಅಲ್ಲಿ ಸತ್ತ್ರದ ಯಜಮಾನನಾದ ಥೆನಾರ್ಡಿಯರ್ ಎಂಬು ವನೂ ಅವನ ಹೆಂಡತಿಯ ಕೋಸೆಟ್ಟಳನ್ನು ಗುಲಾಮಳನ್ನಾ ಗಿಟ್ಟುಕೊಂಡು ಬಹಳ ಕೂರತನದಿಂದ ಹಿಂಸೆಮಾಡುತ್ತಿದ್ದರು. ಅವನು ಅಲ್ಲಿಗೆ ಹೋದ ಮಾರನೆಯ ದಿನ, ಕೋಸೆಟ್ಟಳು ಆ ಯಜ ಮಾನನ ಹೆಣ್ಣು ಮಕ್ಕಳ ಒಂದು ಬೊಂಬೆಯನ್ನು ಮುಟ್ಟಿದಳೆಂದು ಅವಳನ್ನು ಅವರು ವಿಪರೀತವಾಗಿ ಹೊಡೆದು ಚಚ್ಚಿದರು, ಅದನ್ನು ಕಂಡ ಜೀನ್ ವಾಲ್ಜೀನನು ಕೂಡಲೆ ಹೋಗಿ ಅಂದವಾದ ಒಂದು ಬೊಂಬೆಯನ್ನು ಅವಳಿಗಾಗಿ ತಂದುಕೊಟ್ಟನು. ಅವಳ ಕಣ್ಣಿಗೆ ಅದು ಸುಂದರಳಾದ ರಾಜಪುತ್ರಿಯಂತೆ ಕಂಡಿತು. ಅವಳು ಅದಕ್ಕೆ ಕ್ಯಾಥರೈನ್ ಎಂದು ಹೆಸರಿಟ್ಟು, ಆ ರಾತ್ರಿ ತನ್ನ ಪಕ್ಕದಲ್ಲಿಯೇ ಮಲಗಿಸಿಕೊಂಡಳು,

ಮಾರನೆಯ ದಿನ ಜೀನ್ ವಾಲ್ಜೀನನು ಆ ಸತ್ಯದ ಯಜ ಮಾನನಿಗೆ ಒಂದು ಸಾವಿರದ ಐದು ನೂರು ಫಾಂಕುಗಳನ್ನು ಕೊಟ್ಟು ಕೋಸೆಟ್ಟಳನ್ನು ಅವನಿಂದ ಬಿಡಿಸಿಕೊಂಡು ಪ್ಯಾರಿಸ್ ನಗರದಲ್ಲಿ ಮುಂಚೆಯೇ ತಾನು ಗೊತ್ತುಮಾಡಿ ಹೋಗಿದ್ದ ‘ ಗಾರ್‌ ಬ್ಯೂ ಮಂದಿರ ‘ ವೆಂಬ ಗೋಪ್ಯವಾದ ವಾಸಸ್ಥಾನಕ್ಕೆ ಕರೆದೊಯ್ದನು.

ಮಾರನೆಯ ದಿನ ಬೆಳಗಾದ ಕೂಡಲೇ ಜೀನ್ ವಾಲ್ಜೀನನ್ನು, ಕೋಸೆಟ್ಟಳು ಮಲಗಿದ್ದ ಹಾಸುಗೆಯ ಬಳಿಯಲ್ಲಿ ಬಂದು ಕುಳಿತು, ಅವಳು ಎಚ್ಚರವಾಗುವುದನ್ನೇ ನಿರೀಕ್ಷಿಸುತ್ತ, ಅಲುಗಾಡದೆ ಇದ್ದನು.

ಅವನ ಆತ್ಮದಲ್ಲಿ ಒಂದು ಬಗೆಯ ಹೊಸ ವ್ಯಾಮೋಹ ಮೂಡುತ್ತಲಿತ್ತು. ಇವನು ಕೋಸೆಟ್ಟಳನ್ನು ನೋಡಿದಾಗಲೂ, ಸತ್ರದ ಯಜಮಾನನಿಂದ ಬಿಡಿಸಿ ಅವಳನ್ನು ತನ್ನ ಪೋಷಣೆಗೆ ಕರೆದುಕೊಂಡಾಗಲೂ, ಅವಳನ್ನು ಎತ್ತಿಕೊಂಡು ಬಂದು ಕಷ್ಟ ಪರಂಪರೆಗಳಿಂದ ಪಾರುಮಾಡಿದಾಗಲೂ, ಅವನ ಹೃದಯವು ಅವಳಿ ಗಾಗಿ ಬಹಳ ಮರುಕಗೊಂಡಿತ್ತು. ಕಷ್ಟದೆಸೆಯಿಂದ ಹುಟ್ಟಿದ ಕನಿಕರವೂ ಮತ್ತು ಅತ್ಯಂತ ಪ್ರೀತಿಯಿಂದ ಮೊಳೆತ ವ್ಯಾಮೋ ಹವೂ ಆ ಮಗುವಿನ ಕಡೆಗೆ ಈಗ ಉಕ್ಕಿ ಪ್ರವಹಿಸಿತು.

ಅವನಿಗೆ ತನ್ನ ಮನಸ್ಸಿನಲ್ಲಿ ಗೋಚರವಾದ ಶುದ್ಧಚ್ಛಾ ಯಾಕೃತಿಗಳಲ್ಲಿ ಇದು ಎರಡನೆಯದು. ಅವನ ಮನಃ ಪ್ರಪಂಚದಲ್ಲಿ, ಪಾದ್ರಿಯು ಸೌಜನ್ಯವನ್ನು ಉದ್ಭವಗೊಳಿಸಿದ್ದನು. ಕೋಸೆಟ್ಟಳು ಪ್ರೇಮಗುಣವನ್ನು ಉದ್ಭವಗೊಳಿಸಿದಳು.

ಕೋಸೆಟ್ಟಳಿಗೆ ಓದನ್ನು ಕಲಿಸುವುದೂ, ಅವಳು ಆಡು ವುದನ್ನು ನೋಡುವುದೂ, ಇವೇ ಜೀನ್ ವಾಲ್ಜೀನನ ಜೀವನದ ವ್ಯವಸಾಯವಾದವು. ಅಲ್ಲದೆ ಅವನು ಅವಳ ಸಂಗಡ ಅವಳ ತಾಯಿಯ ವಿಚಾರವಾಗಿ ಮಾತನಾಡುತ್ತಲೂ ಅವಳಿಗೆ ದೇವರ ಪ್ರಾರ್ಥನೆಯನ್ನು ಹೇಳಿಕೊಡುತ್ತಲೂ ಇದ್ದನು.

ಅವಳು ಅವನನ್ನು ಅಪ್ಪ ! ಅಪ್ಪ ! ” ಎಂದು ಕರೆಯು ತಿದ್ದಳು. ಇವಳಿಗೆ ಇದಲ್ಲದೆ ಅವನ ಬೇರೆ ಹೆಸರೇ ತಿಳಿಯದು.

ಅವನ ಮನೆಯ ಬಳಿಯ ಒಂದು ಮೂಲೆಯಲ್ಲಿ ಒಬ್ಬ ತಿರುಕನು ಕುಳಿತು ಬೇಡುತ್ತಿದ್ದನು. ಚೇನ್ ವಾಲ್ಜೀನನು ಆ ಮಾರ್ಗವಾಗಿ ಹೋದಾಗಲೆಲ್ಲಾ ಅವನಿಗೆ ಕಾಸುಗಳನ್ನು ಕೊಡುವ ರೂಢಿಯಾಯಿತು. ಒಂದು ದಿನ ಸಾಯಂಕಾಲ ಆ ತಿರುಕನ ಕೈಯಲ್ಲಿ ಇವನು ಕಾಸನ್ನು ಇಟ್ಟಾಗ, ತಿರುಕನು ತಲೆಯೆತ್ತಿ ಜೀನ್ ವಾಲ್ಜೀನನನ್ನು ಉದ್ದೇಶಪೂರ್ವಕವಾಗಿ, ಎವೆಯಿಕ್ಕದೆ ನೋಡಿದನು. ಅದು ತಿರುಕನ ಮುಖವಲ್ಲ-ಜೇವರ್ಟನದು.

ಕೆಲವು ದಿನಗಳಾದ ಮೇಲೆ ಜೀನ್ ವಾಲ್ಜೀನನಿಗೆ ತನ್ನ ಮನೆಯ ಮುಂಭಾಗದಲ್ಲಿ ಯಾರೋ ಹೊಸಬರು ಹೋಗಿ ಬರು ತ್ತಿದ್ದ ಅಡಿಗಳ ಸಪ್ಪಳವು ಕೇಳಿಸಿತು. ಅನಂತರ ಆ ಮನೆಯ ಯಜಮಾನಿಯಾದ ಮುದುಕಿಯನ್ನು ಕೇಳಿದುದರಲ್ಲಿ, ಜೇವರ್ಟನು ಆ ಮನೆಯಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡಿರುವುದಾಗಿ ತಿಳಿಯಬಂತು. ಮಾರನೆಯ ದಿನ ಪ್ರಾತಃಕಾಲ ಜೇವರ್ಟನು ಹೊರಗೆ ಹೋದುದನ್ನು ನೋಡಿ ಜೀನ್ ವಾಲ್ಜೀ ನನು, ಆ ಸಾಯಂಕಾಲ ಮಬ್ಬಾಗುತ್ತಲೇ, ತನ್ನ ಜೇಬಿನಲ್ಲಿ ಸ್ವಲ್ಪ ಹಣವನ್ನು ಹಾಕಿಕೊಂಡು, ಕೋಸೆಟ್ಟಳನ್ನು ಕೈಹಿಡಿದು ಕರೆದುಕೊಂಡು ಹೊರಗೆ ಹೊರಟುಹೋದನು.

ಅವರಿಬ್ಬರೂ ಕೆಲವು ಗಂಟೆಗಳ ಕಾಲ ಬೀದಿಯಿಂದ ಬೀದಿ ಯನ್ನು ದಾಟಿ ನಡೆದು ಹೋದರು. ಅನಂತರ ನಾಲ್ಕು ಮಂದಿ ಇವರನ್ನು ಹಿಂಬಾಲಿಸಿ ಬರುತ್ತಿರುವರೆಂದು ಇವನಿಗೆ ಗೋಚರ ವಾಯಿತು. ಈ ನಾಲ್ಕು ಮಂದಿಯಲ್ಲಿ ಜೇವರ್ಟನು ಒಬ್ಬ ನಾಗಿದ್ದನೆಂಬುದನ್ನು ಜೀನ್ ವಾಲ್ಜೀನನು ಕಂಡು, ದಾರಿಯು ಎರಡಾಗಿ ಕವಲೊಡೆಯುವ ಸ್ಥಳದವರೆಗೂ ವೇಗವಾಗಿ ಹೋದನು. ಒಂದು ದಾರಿಯ ಕಡೆಯ ಭಾಗದಲ್ಲಿ ಒಂದು ಎತ್ತರವಾದ ಗೋಡೆ ಯಿತ್ತು. ಮತ್ತೊಂದರ ಕಡೆಯಲ್ಲಿ ಒಬ್ಬ ಪಹರೆಯವನು ಇವನಿ ಗಾಗಿ ಕಾದಿದ್ದನು.

ಇಷ್ಟು ಹೊತ್ತಿಗೆ, ಸ್ವಲ್ಪ ದೂರದಲ್ಲಿ ಯಾರೋ ಮುಸುಕಿ ನಲ್ಲಿ ಕೂಗಿಕೊಂಡಂತೆ ಅಸ್ಪಷ್ಟವಾದ ಶಬ್ದವು ಕೇಳಿಸಿತು. ಜೀನ್ ವಾಲ್ಜೀನನು, ಧೈರ್ಯಮಾಡಿ ಆ ಬೀದಿಯ ಮೂಲೆಯ ಕಡೆಗೆ ತಿರುಗಿ, ಸುತ್ತಲೂ ನೋಡಿದನು. ಏಳೆಂಟು ಮಂದಿ ಸಿಪಾ ಯಿಗಳು ಗುಂಪಾಗಿ ಆಗತಾನೆ ರೂ ಪೋಲನ್‌ಸೂ ಎಂಬ ಆ ಬೀದಿಯ ಕಡೆಗೆ ತಿರುಗಿದ್ದರು. ಇವನಿಗೆ ಅವರ ಸನೀನುಗಳು ಥಳ ಗುಟ್ಟುವುದು ಕಾಣಿಸಿತು. ಅವರು ಇವನ ಕಡೆಗೆ ಬರುತ್ತಿದ್ದರು.

ಎತ್ತರವಾದ ಆಕಾರದ ಜೆವರ್ಟನೇ ಮುಖ್ಯಸ್ಥನಾಗಿದ್ದ ಈ ಗುಂಪಿನ ಸಿಪಾಯಿಗಳು, ಮೆಲ್ಲಗೂ ಬಹು ಎಚ್ಚರಿಕೆಯಿಂದಲೂ ಮುಂದು ಮುಂದಕ್ಕೆ ಬರುತ್ತಲೂ ಆಗಾಗ ಅಲ್ಲಲ್ಲಿ ನಿಲ್ಲುತ್ತಲೂ ಇದ್ದರು. ಇದರಿಂದ, ಅವರು ಅಲ್ಲಲ್ಲಿ ಗೋಡೆಗಳಲ್ಲಿರುವ ಸಂದು ಗಳನ್ನೂ , ಬಾಗಿಲುಗಳನ್ನೂ, ಓಣಿಗಳನ್ನೂ , ಸಂದಿಗೊಂದಿ ಗಳನ್ನೂ ಪರೀಕ್ಷಿಸಿ ನೋಡುತ್ತಿದ್ದರೆಂಬುದು ಸ್ಪಷ್ಟವಾಯಿತು. ಅವರು ಬರುತ್ತಿದ್ದ ವಿಳಂಬದಿಂದಲೂ, ಅವರು ಹಾಕುತ್ತಿದ್ದ ಹೆಜ್ಜೆಗಳ ರೀತಿಯಿಂದಲೂ, ಅವರು ಜೀನ್ ವಾಲ್ಜೀನಸಿರುವ ಸ್ಥಳಕ್ಕೆ ಒರಲು ಸುಮಾರು ಕಾಲು ಗಂಟೆಯಾಗಬಹುದೆಂದು ಕಂಡಿತು. ಇದು ಬಹಳ ಭಯಂಕರ ಸಮಯವಾಗಿತ್ತು. ಅವನಿಗೆ ಇದು ಮೂರನೆಯಾವೃತ್ತಿ ಒದಗಿದ ಭಯಂಕರ ವಿಪತ್ತು. ಕೆಲವು ನಿಮಿಷಗಳ ಕಾಲದಲ್ಲಿಯೇ ಇವನಿಗೆ ಈ ವಿಪತ್ತು ಒದ ಗುವ ಸಂಭವವಿತ್ತು. ಈಗ ಆಗುವ ಗ್ಯಾಲಿಯ ಶಿಕ್ಷೆಯು ಅವ ನಿಗೆ ಮೊದಲಿನಂತಹ ಗಾಲಿಯ ಶಿಕ್ಷೆಯಲ್ಲ. ಈಗ ಆಗುವ ಶಿಕ್ಷೆಯಿಂದ ಅವನು ಕೋಸೆಟ್ಟಳನ್ನು ನಿರಂತವಾಗಿ ಕಳೆದುಕೊಳ್ಳ ಬೇಕಾಗಿತ್ತು ; ಎಂದರೆ ತನ್ನ ಪ್ರಾಣವನ್ನೇ ತೊರೆದು ಹಾಗೂ ಜೀವಿಸಿರಬೇಕಾಗಿತ್ತು,

ಒಂದು ವಿಷಯ ಮಾತ್ರವೇ ಈಗ ಸಾಧ್ಯವಾಗಿ ಕಂಡಿತು. ಜೀನ್ ವಾಲ್ಜೀನನ ರೀತಿಯ ಈಗ ಬಹಳ ವಿಲಕ್ಷಣವಾಗಿತ್ತು. ಅವನು ಒಂದು ಚೀಲದಲ್ಲಿ ಪರಿಶುದ್ಧನಾದ ಮಹಾ ಯೋಗಿಯ ಆಲೋಚನೆಗಳನ್ನೂ ಮತ್ತೊಂದು ಚೀಲದಲ್ಲಿ ಅಪರಾಧಿಯ ಅದ್ಭುತ ಬುದ್ದಿ ಚಾತುರ್ಯಗಳನ್ನೂ ತುಂಬಿ ಹೆಗಲಿಗೆ ತೂಗ ಹಾಕಿ ಕೊಂಡಿರುವನಂತೆ ಇದ್ದನು. ಸಮಯ ಬಂದಂತೆ ಇವುಗಳಲ್ಲಿ ಆವ ಶ್ಯಕವಾದ ಒಂದೊಂದನ್ನೂ ಉಪಯೋಗಿಸಿಕೊಳ್ಳುತ್ತಿದ್ದನು.

ಇವನಿಗಿದ್ದ ಇತರ ಅನುಕೂಲ ಶಕ್ತಿಗಳ ಜೊತೆಗೆ, ಟೂಲಾನ್ ನಗರದ ಗಾಲಿಗಳಿಂದ ತಪ್ಪಿಸಿಕೊಂಡು ಅನೇಕಾವೃತ್ತಿ ಓಡಿ ಬಂದು ಪಡೆದಿದ್ದ ಅನುಭವದಿಂದ ಇವನು ಅದ್ಭುತ ಸಾಹಸ ಕಾರ್ಯ ಗಳನೇಕಗಳಲ್ಲಿ ನಿಪುಣನಾಗಿದ್ದನು. ಸಮಯ ಬಿದ್ದಲ್ಲಿ ಕಡಿದಾದ ಗೋಡೆಯ ಮೇಲೆ ನೆಟ್ಟಗೆ ಆರು ಅಂತಸ್ತುಗಳವರೆಗಾದರೂ ಹತ್ತಿ ಹೋಗಬಲ್ಲ ಕುಶಲ ವಿದ್ಯೆಯನ್ನು ಇವನು ಕಲಿತಿದ್ದನೆಂದರೆ ನಂಬು ವುದೇ ಕಷ್ಟವಾಗುವುದು. ಏಣಿಯಾಗಲಿ, ಕೂಚಗಳಾಗಲಿ ಯಾವುದೊಂದೂ ಇಲ್ಲದೆ ಕೇವಲ ಶರೀರ ಶಕ್ತಿಯನ್ನು ಮಾತ್ರವೇ ಉಪಯೋಗಿಸಿ, ಕುತ್ತಿಗೆಯ ಹಿಂಭಾಗ, ಭುಜಗಳು, ಮೊಣಕಾಲುಗಳು, ಇವುಗಳ ಸಹಾಯದಿಂದ, ಗೋಡೆಯಲ್ಲಿ ಮುಂದಕ್ಕೆ ಹೊರಟಿರುವ ಕಲ್ಲಿನ ತುಂಡುಗಳನ್ನು ಸಹ ಹಿಡಿದುಕೊಳ್ಳದೆ ನೆಟ್ಟಗೆ ಗೋಡೆಯ ಮೇಲೆ ಹತ್ತಿ ಹೋಗಬಲ್ಲ ಶಕ್ತಿಯು ಇವನಿಗೆ ಇತ್ತು.

ಜೀನ್‌ ವಾಲ್ಜೀನನು ಗೋಡೆಯನ್ನು ತನ್ನ ದೃಷ್ಟಿಯಿಂದಲೇ ಅಳತೆ ಹಾಕಿ ಅದರ ಮೇಲೆ ಒಂದು ನಿಂಬೆಯ ಮರವಿದ್ದುದನ್ನು ಕಂಡನು, ಗೋಡೆಯು ಸುಮಾರು ಹದಿನೆಂಟು ಅಡಿ ಎತ್ತರವಿತ್ತು. ಈ ಗೋಡೆಯಿದ್ದ ಭಾರಿ ಕಟ್ಟಡದ ಮೇಲಣ ತುದಿಯ ಮೂಲೆಯ ವರೆಗೆ ಬುಡದಿಂದ ತಿಕೋಣಾಕಾರವಾದ ಕಲ್ಲು ಕಟ್ಟಡವಿತ್ತು. ಈ ತ್ರಿಕೋಣದ ಭಾಗವು ಸುಮಾರು ಐದು ಅಡಿ ಎತ್ತರವಿತ್ತು, ಆದುದರಿಂದ, ಗೋಡೆಯ ಮೇಲ್ಭಾಗವನ್ನು ಸೇರಲು ಸುಮಾರು ಹದಿನಾಲ್ಕು ಅಡಿಗಳ ದೂರ ಹತ್ತಬೇಕಾಗಿತ್ತು.

ಈ ಗೋಡೆಯ ಮೇಲೆ ಒಂದು ಚಪ್ಪಟಿ ಕಲ್ಲನ್ನು ಹಾಕಿ ಕಟ್ಟಿದ್ದರು. ಆದರೆ ಸ್ವಲ್ಪವಾದರೂ ಅದು ಮುಂದಕ್ಕೆ ಬಂದು, ಹಿಡಿದುಕೊಳ್ಳಲನುಕೂಲವಾಗಿರಲಿಲ್ಲ.

ಈಗ ಕೋಸೆಟ್ಟಳದೇ ದೊಡ್ಡ ಕಷ್ಟವಾಗಿತ್ತು. ಅವಳಿಗೆ ಗೋಡೆಯನ್ನು ಹತ್ತಲು ಬಾರದು. ಅವಳನ್ನು ಬಿಟ್ಟುಬಿಡಬೇಕೇ ? ಜೀನ್ ವಾಲ್ಜೀನನಿಗೆ ಈ ಆಲೋಚನೆಯೇ ಬರಲಿಲ್ಲ, ಅವಳನ್ನು ಎತ್ತಿಕೊಂಡು ಹೋಗುವುದು ಅಸಾಧ್ಯ. ಇಷ್ಟು ಕಠಿಣವಾದ ಕಡೆಗಳಲ್ಲಿ ಹತ್ತುವುದಕ್ಕೆ ಮನುಷ್ಯನ ಶಕ್ತಿಯೆಲ್ಲವೂ ಬೇಕಾಗಿತ್ತು. ಸ್ವಲ್ಪ ಭಾರಹೊತ್ತಿದ್ದರೂ ಹತ್ತುವ ಮನುಷ್ಯನು ಪವನ ತಪ್ಪಿ ಕೆಳಗೆ ಬೀಳುವನು.

ಅವನಿಗೆ ಒಂದು ಹಗ್ಗವು ಬೇಕಾಗಿತ್ತು. ಆ ರೂ ವೋಲನ್ ಸೂ ಬೀದಿಯಲ್ಲಿ ಆ ಅರ್ಧ ರಾತ್ರಿಯಲ್ಲಿ ಅವನಿಗೆ ಹಗ್ಗವೆಲ್ಲಿ ಸಿಕ್ಕ ಬೇಕು? ನಿಜವಾಗಿಯೂ ಆ ಸಮಯದಲ್ಲಿ ಜೀನ್ ವಾಲ್ಜೀನನು ರಾಜನಾಗಿದ್ದಿದ್ದರೆ ಒಂದು ಹಗ್ಗ ಕ್ಕಾಗಿ ತನ್ನ ರಾಜ್ಯವನ್ನೇ ಕೊಟ್ಟು ಬಿಡುತ್ತಿದ್ದನು. ಇಂತಹ ಪರೀಕ್ಷೆಯ ಕಷ್ಟ ಸಂಧಿಗಳಲ್ಲೆಲ್ಲ, ಜನರಿಗೆ ಒಂದು ವಿದ್ಯುತ್ಪ್ರಕಾಶವು ಹೊಳೆದು ದಿಕ್ಕು ತೋರದಂತಾಗುವುದು. ಮಿಂಚಿನೋಪಾದಿಯಲ್ಲಿ ಕೆಲವು ದಿಕ್ಕು ತೋರಿಸುವುದೂ ಉಂಟು.

ನಿರಾಶನಾಗಿ ದಿಕ್ಕು ತೋರದೆ ನೋಡುತ್ತಿದ್ದ ಜೀನ್ ವಾಲ್ಜೀನನ ದೃಷ್ಟಿಯು ಕಲ್ ಡಿ ಸ್ವಾಕ್ ಜೆನ್‌ರಾಟ್ ಎಂಬ ಮುಂದಣ ಬೀದಿಯ ದೀಪದ ಕಂಬದ ಮೇಲೆ ಬಿತ್ತು, ದೀಪಗಳನ್ನು ಮೇಲಕ್ಕೆ ಎಳೆಯುವುದಕ್ಕೂ ಕೆಳಕ್ಕೆ ಇಳಿಸುವುದಕ್ಕೂ ಉಪ ಯೋಗಿಸುವ ಒಂದು ಹಗ್ಗವು ಆ ದೀಪದ ಕೆಳಗಿನ ಚಿಕ್ಕ ಕಬ್ಬಿಣದ ಪೆಟ್ಟಿಗೆಯಲ್ಲಿರುವುದೆಂಬುದು ಅವನಿಗೆ ತಿಳಿದಿತ್ತು. ತನ್ನ ಕಟ್ಟ ಕಡೆಯ ಪ್ರಯತ್ನ ವೆಂದು, ಶಕ್ತಿಯೆಲ್ಲವನ್ನೂ ಪ್ರಯೋಗಿಸಿ ಒಂದು ನೆಗೆತಕ್ಕೆ ಹಾರಿ ಆ ಬೀದಿಯನ್ನು ದಾಟಿ ಕಲ್’ – ಸ್ಟಾಕ್ ಬೀದಿಗೆ ಹೋಗಿ, ಆ ಚಿಕ್ಕ ಕಬ್ಬಿಣದ ಪೆಟ್ಟಿಗೆಯ ಚಿಲುಕವನ್ನು ತನ್ನ ಚಾಕು ವಿನ ಮೊನೆಯಿಂದ ಎಬ್ಬಿ, ಒಂದು ನಿಮಿಷ ಮಾತ್ರದಲ್ಲಿ ಹಗ್ಗ ದೊಡನೆ ಮತ್ತೆ ಕೋಸೆಟ್ಟಳ ಬಳಿಗೆ ಬಂದು ಸೇರಿದನು. ಹಗ್ಗವು ಸಿಕ್ಕಿತು. ಜೀವದ ಮೇಲಣ ಆಸೆಯನ್ನು ತೊರೆದು ಮೃತ್ಯುವಿ ನೊಡನೆ ಹೀಗೆ ಹೋರಾಡುವುದರಲ್ಲಿ ಸಮಯೋಚಿತವಾದ ಉಪಾಯಗಳನ್ನು ಕಂಡುಹಿಡಿಯುವ ಧೀರರು ಸಮಯಬಿದ್ದಾಗ ಮಿಂಚಿನಷ್ಟು ವೇಗವಾಗಿ ಕೆಲಸಮಾಡಬಲ್ಲರು. ಅನಂತರ ಬೇವ ರ್ಟನೂ ಸಿಪಾಯಿಗಳೂ ಯಾವ ಕ್ಷಣದಲ್ಲಿ ಬಂದುಬಿಡುವರೋ ಎಂಬ ವಿಪತ್ಸಮಯದಲ್ಲಿಯೂ ಸಹ ಆತುರಪಡದೆ ದೃಢಸಂಕಲ್ಪ ದಿಂದ ವೇಗವಾಗಿ ತನ್ನ ಉದ್ದವಾದ ‘ಕೊರಳ ಪಟ್ಟಿಯನ್ನು ತೆಗೆದು ಕೋಸೆಟ್ಟಳ ಕಂಕುಳ ಕೆಳಗಿನಿಂದ ಅವಳಿಗೆ ನೋವಾಗ ದಂತೆ ಮೈಸುತ್ತಲೂ ಬಳಸಿ ಕಟ್ಟಿ, ಆ ಪಟ್ಟಿಯನ್ನು ನಾವಿಕರು ಕಟ್ಟುವಂತಹ ಬಿಗಿಯಾದ ಮುಡಿಹಾಕಿ ಹಗ್ಗದ ಕೊನೆಗೆ ಕಟ್ಟಿ, ಹಗ್ಗದ ಇನ್ನೊಂದು ಕೊನೆಯನ್ನು ತಾನು ಹಲ್ಲಿನಲ್ಲಿ ಕಚ್ಚಿ ಕೊಂಡು, ತನ್ನ ಕಾಲಿನಲ್ಲಿದ್ದ ಜೋಡನ್ನೂ ಕಾಲುಚೀಲಗಳನ್ನೂ ತೆಗೆದು ಗೋಡೆಯ ಮೇಲಕ್ಕೆ ಎಸೆದು, ಕಲ್ಲು ಕಟ್ಟಡದ ಮೇಲೆ ಹತ್ತಿ, ಗೋಡೆಯನ್ನು ಏರಲಾರಂಭಿಸಿದನು. ಅವನು ಹತ್ತುವ ಧೈರ್ಯವನ್ನೂ ರೀತಿಯನ್ನೂ ನೋಡಿದರೆ ಅವನ ಕಾಲುಗಳಿಗೂ ಮೊಣಕೈಗಳಿಗೂ ಏಣಿಯ ಮೆಟ್ಟಿಲುಗಳೇ ಸಿಕ್ಕುತ್ತಿದ್ದುವೆಂಬಂತೆ ಕಂಡಿತು, ಅರ್ಧ ನಿಮಿಷವಾಗುವುದಕ್ಕೆ ಮೊದಲೇ ಅವನು ಗೋಡೆಯನ್ನೇರಿ ಮೊಣಕಾಲಿನ ಮೇಲೆ ಕುಳಿತನು.

ಕೋಸೆಟ್ಟಳು ದಿಕ್ಕು ತೋರದೆ ಮುಗ್ಧಳಾಗಿ ಒಂದು ಮಾತ್ರ ನ್ನೂ ಆಡದೆ ಸುಮ್ಮನೆ ನೋಡುತ್ತಿದ್ದಳು. ತಟ್ಟನೆ ಅವಳ ಕಿವಿಗೆ ಜೀನ್ ವಾಲ್ಜೀನನು ಪಿಸುಮಾತಿನಲ್ಲಿ, ‘ ಗೋಡೆಗೆ ಬೆನ್ನನ್ನು ಒತ್ತಿಕೊ,’ ಎಂದು ಹೇಳಿದುದು ಕೇಳಿಸಿತು. ಅವಳು ಅದ ರಂತೆಯೇ ಮಾಡಿದಳು.

ಜೀನ್ ವಾಲ್ಜೀನನು, ಮಾತನಾಡಬೇಡ, ಭಯಪಡಬೇಡ,’ ಎಂದನು. ಅವಳಿಗೆ ತನ್ನ ನ್ನು ನೆಲದಮೇಲಿನಿಂದ ಎತ್ತಿದುದೇನೋ ಗೊತ್ತಾಯಿತು. ತಾನು ಎಲ್ಲಿರುವೆನೆಂಬುದನ್ನು ಅವಳು ಆಲೋ ಚಿಸಿ ತಿಳಿದುಕೊಳ್ಳುವುದಕ್ಕೆ ಮೊದಲೇ ಗೋಡೆಯ ಮೇಲಕ್ಕೆ ಬಂದುಬಿಟ್ಟಳು.

ಜೀನ್‌ ವಾಲ್ಜೀನನು ಅವಳನ್ನು ಹಿಡಿದು ತನ್ನ ಬೆನ್ನಿಗೆ ಹಾಕಿಕೊಂಡು, ಅವಳ ಎರಡು ಕೈಗಳನ್ನೂ ತನ್ನ ಎಡಗೈ ಯಿಂದ ಹಿಡಿದು, ಬೋರಲಾಗಿ ಮಲಗಿ ಗೋಡೆಯ ಮೇಲೆ ಮೂಲೆಯವರೆಗೂ ತೆವಳಿಕೊಂಡು ಹೋದನು. ಅವನು ಊಹಿಸಿ ದಂತೆಯೇ ಅಲ್ಲಿ ಒಂದು ಕಟ್ಟಡವಿತ್ತು. ಅದರ ಚಾವಣಿಯು ಮೇಲಿನಿಂದ ನೆಲದ ಸಮೀಪದ ವರೆಗೂ ಸ್ವಲ್ಪ ಸ್ವಲ್ಪ ಇಳಿಜಾರಾಗಿ ನಿಂಬೆಯ ಮರದ ವರೆಗೂ ಹೋಗಿತ್ತು.

ಇದು ಒಂದು ಅನುಕೂಲ ಸಂದರ್ಭವೇ ಸರಿ, ಏತಕ್ಕೆಂದರೆ, ಗೋಡೆಯು, ಈ ಕಡೆಯಲ್ಲಿ, ಬೀದಿಯ ಕಡೆಯಲ್ಲಿರುವುದಕ್ಕಿಂತಲೂ, ಎತ್ತರವಾಗಿತ್ತು. ಜೀನ್ ವಾಲ್ಜೀನನಿಗೆ ನೆಲವು ಬಹಳ ಕೆಳಗೆ ಇರುವುದಾಗಿ ಕಂಡಿತು. ಅವನು ಆಗತಾನೇ ಚಾವಣಿಯ ಇಳಿಜಾರಿನ ಪ್ರದೇಶದ ವರೆಗೆ ಬಂದಿದ್ದನು ; ಇನ್ನೂ ಗೋಡೆಯ ಅಂಚನ್ನು ಬಿಟ್ಟಿರಲಿಲ್ಲ. ಅಷ್ಟರಲ್ಲಿಯೇ ಗಟ್ಟಿಯಾದ ಗದ್ದಲವು ಕೇಳಿಸಿದುದರಿಂದ ಸಿಪಾಯಿಗಳ ಗುಂಪು ಬಂತೆಂದು ಗೊತ್ತಾ ಯಿತು. ಜೇವರ್ಟನ ಸಿಡಿಲಿನಂತಹ ಧ್ವನಿಯೂ ಇವನಿಗೆ ಕೇಳಿಸಿತು.

“ಕಲ್ ಡಿ ಸ್ವಾಕ್ ಸ್ಥಳದಲ್ಲಿ ಹುಡುಕಿರಿ ! ರೂ ಡ್ರಾಯಿಟ್ ಮರ್ ಬೀದಿಯಲ್ಲಿಯೂ ಪೆಟಿಟ್ ರೂ ಪಿಕ್ಪಸ್ ಬೀದಿಯಲ್ಲಿಯೂ ಕಾವಲಿಟ್ಟಿದೆ. ಅದಕ್ಕೆ ನಾನು ಹೊಣೆ, ಕಲ್ ಡಿ ಸ್ಯಾಕ್ ನಲ್ಲಿಯೇ ಅವನಿದ್ದಾನೆ,’ ಎಂದು ಬೇವರ್ಟನು ಹೇಳಿದನು.

ಸಿಪಾಯಿಗಳು ಕಲ್’ ಡಿ ಪ್ಯಾಕ್ ಜೆನ್‌ರಾಟ್‌ ನೊಳಕ್ಕೆ ನುಗ್ಗಿದರು. ಜೀನ್ ವಾಲ್ಜೀನನು ಕೋಸೆಟ್ಟಳನ್ನು ಹಿಡಿದುಕೊಂಡು ಮಾಳಿಗೆಯಿಂದ ಕೆಳಕ್ಕೆ ಜಾರಿಬಂದು ನಿಂಬೆಯ ಮರದ ಬಳಿಗೆ ಸೇರಿ ನೆಲಕ್ಕೆ ಧುಮ್ಮಿಕ್ಕಿದನು, ಭಯದಿಂದಲೋ ಅಥವಾ ಧೈರ್ಯ ದಿಂದಲೋ ಕೋಸೆಟ್ಟಳು ಒಂದು ಪಿಸುಮಾತನ್ನೂ ಸಹ ಆಡಿರಲಿಲ್ಲ.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದರುಶನಕ್ಕೆ
Next post ಮತಿಯ ಪಾಲಿಸು

ಸಣ್ಣ ಕತೆ

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys