ವಾಗ್ದೇವಿ – ೩೨

ವಾಗ್ದೇವಿ – ೩೨

ಭೀಮಾಜಿಯ ಸಂತೋಷವು ಸಮುದ್ರದಂತೆ ಉಕ್ಕಿತು. ಅವನು ಚಮ ತ್ಯಾರದಿಂದ ಸೋವು ಹಿಡಿದು ಪ್ರಕರಣ ತಲಾಷು ಮಾಡಿದ್ದಕ್ಕಾಗಿ ಮೇಲು ಉದ್ಯೋಗಸ್ಥರ ಶ್ಲಾಘನೆಗೆ ಹ್ಯಾಗೂ ಯೋಗೃನಾದನಷ್ಟೇ ಅಲ್ಲ, ವಾಗ್ದೇವಿಯ ಮತ್ತು ಚಂಚಲನೇತ್ರರ ಕೃತಜ್ಞತೆಗೂ ಭಾಗಿಯಾದನು. ಶೋಧನೆಯಲ್ಲಿ ಸಿಕ್ಕಿದ ಆಭರಣಗಳನ್ನು ಮಠಕ್ಕೆ ತಂದು ಅವುಗಳು ಚಂಚಲನೇತ್ರರದೆಂಬು ದಕ್ಕೆ ಸಾಕ್ಷವನ್ನು ದೊರಕಿಸಿಕೊಂಡು ಮೊಕದ್ದಮೆಯನ್ನು ಅಪರಾಧಿಯ ಸಹಿತ ಫೌಜಿದಾರಿ ಕಾರಭಾರಿಯ ಕಚೇರಿಗೆ ಕಳುಹಿಸಿಕೊಟ್ಟನು. ಅಂದಿನ ಕೆಲಸವೆಲ್ಲಾ ಕ್ಷಿಪ್ರ ತೀರಿಸಿಬಿಟ್ಟು ಸಾಯಂಕಾಲ ಮಠಕ್ಕೆ ಬಂದು ಚಂಚಲ ನೇತ್ರರಿಗೆ ಪ್ರಣಿಸಾತಮಾಡಿದನು. ಯತಿಗಳು ಅವನಿಗೆ ಬೇಕಷ್ಟು ಹೊಗಳಿ ದರು. ಆಗ ಡೊಳ್ಳು ಬೆಳೆಸಿಕೊಂಡು ಸಮಿಪದಲ್ಲಿದ್ದ ಕೆಲವು ಆಚಾರ್ಯರು “ಓಹೋ ಹೋ ಇವರೇ ಸ್ವಾಮೀ! ದೊಡ್ಡಪ್ರಾಜ್ಞರು! ಪ್ರಚಂಡ ತಸ್ಕರ ಸಿಕ್ಷರು; ಸಜ್ಜನರಕ್ಷಕಶ್ರೇಷ್ಠರು; ಕುಶಾಗ್ರ ಬುದ್ಧಿಯುಳ್ಳವರು. ನಿಷ್ಠಾವಂ ತರು. ಪರಾಪೇಕ್ಸೆ ಇಲ್ಲದವರು. ಸಾಕ್ಷಾತ್‌ ಯಮನಂತೆ ಅಪರಾಧಿಗಳನ್ನು ದಂಡಿಸುವವರು. ದೈವಬ್ರಾಹ್ಮಣರ ಮೇಲೆ ಪೂರ್ಣ ವಿಶ್ವಾಸ ಉಳ್ಳವರು. ದೈವನಿರ್ಮಿತ ಸಕಲ ಚರಾಚರವನ್ಮುಗಳಲ್ಲಿಯೂ ಅಂತಃಕರಣ ಶುದ್ಧವಾಗಿ ರುವವರು” ಎಂದು ಶುಷ್ಥೂಪಚಾರಮಾಡಿದರು.

ಸ್ವಾಮಿಗಳ ಅಪ್ಪಣೆ ಪಡಕೊಂಡು ಭೀಮಾಜಿಯು ಹೊರಡುವಾಗ ಆಬಾಚಾರ್ಯನು ಅವನನ್ನು ಅಡ್ಡತಡದು ಬಿಡಾರಕ್ಕೆ ಕರತಂದನು. ಅವನ ಆಗಮನವನ್ನು ಕಾಯುತ್ತಾ ಇದ್ದ ವಾಗ್ದೇವಿಯು ಪ್ರಥಮತಃ ಬೇಕಾದ ಫಲಾಹಾರ ಸಾಹಿತ್ಯಗಳಿಂದ ಅವನ ದಣುವನ್ನು ಪರಿಹರಿಸಿ, ತಾಂಬೂಲಾದಿ ಉಪಚಾರಗಳನ್ನು ಮಾಡಿದ ಮೇಲೆ-“ಕಳ್ಳನನ್ನು ಲವಮಾತ್ರದಲ್ಲಿ ಹಿಡಿದು ಬಿಟ್ಟಿರೇ!” ಎಂದು ಸಾನುರಾಗದಿಂದ ಕೇಳಿದಳು.

ವಾಗ್ದೇವಿ–“ಈ ಪ್ರಕರಣವನ್ನು ತಾವು ತೀರಿಸುವದು ಯಾವಾಗ?”

ಭೀಮಾಜಿ–“ಇನ್ನು ಅದರಲ್ಲಿ ನಾನು ಮಾಡತಕ್ಕದ್ದೇನಿಲ್ಲ. ಅಪರಾಧಿ ಗಳಿಗೆ ಶಿಕ್ಷೆ ಕೊಡುವ ಅಧಿಕಾರಿ ಬೇರೆ.

ವಾಗ್ದೇವಿ–“ಅವರ್ಯಾರು ಮತ್ತೆ?”

ಭೀಮಾಜಿ–“ಪೌಜದಾರಿ ಅದಾಲತ್‌ ಕಾರಭಾರಿ ಶಾಬಯ್ಯನವರು. ಪ್ರಕರಣವು ಬಡಾತಿ ತಾಬಿಗೆ ಸೇರುವದರಿಂದ ಅದನ್ನು ಆ ಉದ್ಯೋಗಸ್ತರ ಕಚೇರಿಗೆ ಕಳುಹಿಸಬೇಕಾಯಿತು.?

ವಾಗ್ದೇವಿ–“ರಾಯರೇ! ಆ ಉದ್ಯೋಗಸ್ತರ ಮರ್ಜಿ ಇನ್ಯಾವ ರೀತಿ ಅದೆಯೋ?”

ಫೀಮಾಜಿ–“ದೊಡ್ಡ ಉದ್ಯೋಗಸ್ತರಲ್ಲವೇ? ಅವರ ಹುದ್ದೆಗೆ ಸರಿ ಯಾದ ಭರಂ ಅವರಲ್ಲಿ ಇಲ್ಲದೆಹೋದರೆ ಅವರಿಗೆ ಯಾರು ಗುಮಾನಮಾ ಡ್ಯಾರು? ಮರ್ಜಿ ಸ್ವಲ್ಪಕಠಿಣನಾದರೂ ಮನಸ್ಸು ಒಳ್ಳೇದು. ಸಜ್ಜನರಿಗೆ ಪರಿಪಾಲನೆ ಮಾಡುವವರೇ ಸೈ”

ವಾಗ್ದೇವಿ–“ತಮ್ಮ ಮಾತು ಕೇಳುವಾಗ ಹೆದರಿಕೆಯಾಗುತ್ತೆ. ಸಾಮಾನ್ಯ ಜನರು ಅವರ ಭೇಟಿಮಾಟ ಸಂಕಷ್ಟಗಳನ್ನು ಹೇಳಿಕೊಳ್ಳಲಿಕ್ಕೆ ಸಂದರ್ಭವನಿಲ್ಲವೇನು?”

ಭೀಮಾಜಿ–“ಎಲ್ಲರಿಗೂ ಅಲ್ಲಿ ಆಶ್ರಯ ಸಿಕ್ಕುವಹಾಗಿಲ್ಲ. ಮನ ಮಾನೆ ಜನರು ಅವರ ಆಶ್ರಯಪಡಿಯುವದಕ್ಕೆ ಪಾತ್ರರಲ್ಲ.?

ವಾಗ್ದೇವಿ–“ತಮಗೂ ಅವರಿಗೂ ಪರಸ್ಪರ ಪ್ರೀತಿಯುಂಟೇನು??

ಭೀಮಾಜಿ–“ಅವರು ದೊಡ್ಡ ಉದ್ಯೋಗಸ್ತರು. ಆದರೂ ನನ್ನ ಮೇಲೆ ಅವರಿಗೆ ಕೊಂಚ ಪ್ರೀತಿಯೂ ಚಂದಾಗಿ ವಿಶ್ವಾಸವೂ ಅದೆ.”

ವಾಗ್ದೇವಿ–“ಹಾಗಾದರೆ ನನಗೇನು ಭಯ? ತಾವು ಹ್ಯಾಗೂ ಅನಾಥೆ ಯಾದ ನನ್ನನ್ನು ಬಿಟ್ಟುಬಿಡುವವರಲ್ಲವಷ್ಟೆ. ಆ ಕುರಿತು ತಮ್ಮ ವಾಗ್ದಾನ ನನಗೆ ಮೊದಲೇ ಸಿಕ್ಕಿಯದೆ. ಆ ದೊಡ್ಡ ಅಧಿಕಾರಸ್ತರ ದರ್ಶನವು ನನಗೆ ದೊರೆಯುವ ಹಾಗೆ ತಾವು ಮಾಡಬೇಕು.

ಭೀಮಾಜಿ–“ಅಯ್ಯೊ, ಅದೆಲ್ಲಾ ನನ್ನಿಂದ ಸಾಧ್ಯವಾಗುವದೇ? ನಿನ್ನ ಕೆಲಸ ನೋಡಿಕೊಂಡಿರುವದು ಬಿಟ್ಟು ಇಂಥಾ ಹಾಳುಹರಟೆಯಲ್ಲ ಪ್ರವೇಶಿ ಸುತ್ತೀಯಾ? ಎಂದು ಅವರೆಲ್ಲಾದರೂ ಸಿಟ್ಟುಮಾಡಿದರೆ ನನ್ನ ಮುಖಕ್ಕೆ ಮಂಗಳಾರತಿ ಆದಂತಾಗುವದು. ನಾನು ಸ್ವತಃ ಮಾಡತಕ್ಕದ್ದೇನಾದರೂ ಇದ್ದರೆ ನಿಮ್ಮ ವಾತ್ಸಲ್ಯ ಸರ್ವಥಾ ಬಿಡುವವನಲ್ಲ. ಇನ್ನೇನು ಹೇಳಲಿ?”

ವಾಗ್ದೇವಿ–“ತಾವು ನನ್ನಕೂಡೆ ಯಾಕೆ ಠಕ್ಕು ಮಾಡುತ್ತೀರಿ? ತಮ್ಮ ಬುದ್ಧಿ ವಂತಿಗೆಗೆ ಮೆಚ್ಚಿದೆ. ಹನುಮಂತನ ಆಶ್ರಯಿಸಿದವಗೆ ರಾಮದೇವರ ದರ್ಶನಕ್ಕೆ ಅಡ್ಡಿ ಯಾಗುವದೇ?

ಭೀಮಾಜಿ-“ಸರಿ ಸರಿ! ನಾನು ಒಬ್ಬ ಹನುಮಂತನೇ? ಒಳ್ಳೇ ಉಪಮೆ!”

ವಾಗ್ದೇವಿ–“ರೂಪಿನಲ್ಲಿ ಹಾಗಲ್ಲವಾದರೂ ಸಾಮರ್ಥ್ಯದಲ್ಲಿ ತಮ್ಮನ್ನ ಹನುಮಂತಗೆ ನಾನು ಹೋಲಿಸುವದು ಅನ್ಯಾಯವಲ್ಲ. ಪ್ರಧಾನ ಉಪಮೆ ಸರಿಯಾದ್ದೇ.”

ಭೀಮಾಜಿ– “ನನ್ನ ರೂಪವೂ ಸಾಮರ್ಥ್ಯವೂ ಹಾಗಿರಲಿ; ನಮ್ಮ ನಮ್ಮ ಮಾರ್ಗಬಿಟ್ಟು ಹೋಗುವದು ನಮ್ಮ ಗೌರವಕ್ಕೆ ಹಾನಿಕರದ್ದು.?

ವಾಗ್ದೇವಿ–“ನಿಜವಾಗಿ ತಮಗೆ ನನ್ನ ಮೇಲೆ ವಾತ್ಸಲ್ಯ ಉಂಟಾದರೆ ತಮ್ಮ ಬಾಯಿಯಿಂದ ಇಂಥಾ ಅಪಧೈರ್ಯಪಡಿಸುವ ಮಾತು ಬರುತ್ತಿದ್ದಿಲ್ಲ. ನನ್ನಿಂದ ಬಂದ ಅಪರಾಧವೇನು? ತಮ್ಮ ಮನಸ್ಸಿನಲ್ಲಿ ವಿಕಲ್ಪಹುಟ್ಟಿಯದೆ. ನನ್ನ ಚಾಡಿ ಯಾರಾದರೂ ಹೇಳಿ ನನ್ನ ಮೇಲೆ ತಾವು ವಿಮುಖರಾಗುವಂತೆ ಮಾಡಿರಬೇಕು.”

ಭೀಮಾಜಿ–“ಅವ್ವಾ! ಹಾಗೆ ಯಾಕೆ ಹೇಳುತ್ತೀರಿ? ನಾನು ನಿಜ ವಾಗಿ ನಿಮ್ಮ ಹಿತಚಿಂತಕ. ನಿಮ್ಮ ಚಾಡಿ ನನಗೆ ಯಾರೂ ಹೇಳಲಿಲ್ಲ. ನೀವು ನನ್ನಮೇಲೆ ವ್ಯರ್ಥ ಅನುಮಾನ ಸಟ್ಟಿರುವಿರಿ. ನನಗೆ ನಿಮ್ಮ ಮೇಲೆ ವಿಕಲ್ಪ ವೇನೂ ಹುಟ್ಟಲಿಲ್ಲ.”

ವಾಗ್ದೇವಿ– “ತಮ್ಮ ಮರೆಹೊಕ್ಕ ನಾನು ಇನ್ನೊಬ್ಬನ ಆಶ್ರಯ ಅಪೇ ಕ್ಷಿಸಲಾರೆ. ತಾವು ನನ್ನನ್ನು ಕೊಂದರೂ ಸರಿ, ತಮ್ಮ ಸಂಶ್ರಯ ಬಿಟ್ಟಿರಲಾರೆ. ತಮ್ಮ ಸ್ನೇಹಿತರೆಂತ ತಾವೇ ಒಪ್ಪಿಕೊಳ್ಳುವ ಶಾಬಯ್ಯನವರ ಭೇಟ ನನಗೆ ದೊರಕುವ ಹಾಗೆ ಇನ್ಯಾರು ನನ್ನ ಮೇಲೆ ಅನುಗ್ರಹವಿಡಬೇಕು? ದೇವರಂತೆ ತಮ್ಮನ್ನು ನಂಬಿದ ನನ್ನನ್ನು ನಡುದಾರಿಯಲ್ಲಿ ಕೈಬಿಡುವಿರೇನು??

ಭೀಮಾಜಿ–“ಈಗಲೇ ಅವರ ಭೇಟ ಮಾಡತಕ್ಕ ಅಗತ್ಯವೇನು? ಕಳವಿನ ಸೊತ್ತುಗಳು ಸಿಕ್ಕಿಯವೆ. ಪ್ರಕರಣ ಒಳ್ಳೇ ಘಟ್ಟಿ ಉಂಟು. ಅದು ತೀರುವ ಮೊದಲು ಅವರ ಭೇಟಿಗೆ ಹೋಗಿ ಅವರಿಗೆ ಕೋಪ ಎಬ್ಬಿಸಿದರೆ ಯದ್ವಾತದ್ವ ಆಗಿ ಹೋಗುವದು.?

ವಾಗ್ದೇವಿ–“ಇನ್ನೂ ನಿಮ್ಮ ತಸಕು ಬಿಡುವದಿಲ್ಲವಷ್ಟೆ? ಹಾಲೆಂದು ವಿಷವನ್ನು ಕೊಟ್ಟಿರೂ ಕುಡಿಯುವಷ್ಟು ವಿಶ್ವಾಸ ತಮ್ಮ ವೇಲೆ ನಾನು ಇಟ್ಟಿ ರುವೆನು. ಆದರೂ ನನ್ನ ಕಡೆಗೆ ಮನಃಶುದ್ಧಿಯುಳ್ಳವರಾಗಿ ತೋರುವುದಿಲ್ಲ.”

ಭೀಮಾಜಿ–“ನಿರಪರಾಧಿಯಾದ ನನ್ನನ್ನು ವ್ಯರ್ಥ ದೂರುವಿರೆ? ನನ್ನ ಗ್ರಹಗತಿಯಿಂದ ನಿಮಗೆ ನನ್ನ ಮೇಲೆ ಸಂದೇಹ ಹುಟ್ಟಿಯದೆ. ಈ ಕುರಿತು ನಾನು ಬಹಳ ಆಶ್ಚರ್ಯವೂ ಸಶ್ಚಾತ್ತಾಸವೂ ಪಡುತ್ತೇನೆ.?

ವಾಗ್ಧೇವಿ–“ಆ ಪ್ರಸ್ತಾಪ ಬಿಟ್ಟುಬಿಡುವಾ. ನಾನು ಅಭಾಗ್ಯಳು. ಅಲ್ಲದಿದ್ದರೆ ಅಷ್ಟು ದೊಡ್ಡ ಅಧಿಕಾರಸ್ಥರು ತಮ್ಮ ಸ್ನೇಹಿತರಾದಾಗ್ಲೂ ಅವರ ಭೇಟ ತಮ್ಮ ಪರಿಮುಖ ನನಗೆ ದೊರಕುವದು ದುರ್ಲಭವಾಗದು. ತಾವು ಈ ವರೆಗೆ ನನ್ನ ಮೇಲೆ ಇಟ್ಟ ಅನುಗ್ರಹವನ್ನು ನಾನು ದೇಹಾಂತ್ಯದ ಪರಿಯಂತರ ಮರೆಯುವವಳಲ್ಲ. ತಮ್ಮ ಮೇಲೆ ನಾನು ಇಟ್ಟಷ್ಟು ವಿಶ್ವಾಸ ನಾನು ಇನ್ನೊಂದು ಪ್ರಾಣಿಯ ಮೇಲೆ ಇಡುವ ಹಾಗೂ ಇಲ್ಲ. ಸಣ್ಣ ದೊಂದು ಅರಿಕೆಯದೆ, ಅದನ್ನಾದರೂ ಸಲ್ಲಿಸಿದರೆ ಕೃತಕೃತ್ಯಳಾಗುವೆನು.”

ಭೀಮಾಜಿ–ನನ್ನಿಂದಾಗುವ ಯಾವ ಕೆಲಸಕ್ಕೂ ಅಡ್ಡಿ ಹೇಳುವವ ನಲ್ಲ. ನಿಮ್ಮ ಮೇಲೆ ನನಗೆ ಅಂತರ್ಯಶುದ್ಧವಾಗಿಯೇ ಇದೆ.?

ವಾಗ್ದೇವಿ–“ತಮ್ಮಿಂದ ಆಗದ ಕೆಲಸ ಹೇಳುವಷ್ಟು ಬುದ್ಧಿ ಹೀನತೆ ನನ್ನಲ್ಲಿ ಇಲ್ಲ. ನಾನು ಹೆಣ್ಣು ಹೆಂಗಸು ಖರೆ. ನಾಳೆ ಸಾಯಂಕಾಲ ತಾವು ನನ್ನ ಮೇಲೆ ಪೂರ್ಣ ದಯವಿಟ್ಟು ನನ್ನಲ್ಲಿ ಒಂದು ಸಣ್ಣ ಭೋಜನ ಮಾಡಿ. ನನಗೆ ಪರಮ ಪ್ರೇಮಿಗಳೆಂಬದಕ್ಕೆ ತಾರ್ಕಣೆ ಕೊಡಬೇಕು.

ಭೀಮಾಜಿ–“ಅವ್ವಾ! ನೀವು ಯಾಕೆ ಅಷ್ಟು ಶ್ರಮ ತಕ್ಕೊಳ್ಳಬೇಕು? ನನಗೆ ಅಂಥಾ ಉಪಚಾರವ್ಯಾಕೆ? ನಾನು ನಿಮ್ಮ ಮೇಲೆ ತುಂಬಾ ಸ್ನೇಹ ಭಾವವುಳ್ಳವನಾಗಿರುತ್ತಾ, ನನಗೆ. ಊಟಪಾಠವೆಂಬ ಆಡಂಬರವೇನು ಅಗತ್ಯ?”

ವಾಗ್ದೇವಿ–“ಅದು ದ್ವಯಾರ್ಥದ ಮಾತು. ಮುಖ್ಯ ತಮ್ಮ ಮಾತಿನ ಅನ್ವಯವು ಔತಣಕ್ಕೆ ಬರಲೊಳ್ಗೆನೆಂಬುದೋ? ಖಂಡಿತ ಹೇಳಿಬಿಡಿ.”

ಭೀಮಾಜಿ– “ಅಮ್ಮಾ! ನೀವು ಯಾಕೆ ಅವಸರ ಪಡುತ್ತೀರಿ? ನಾಳೆಯೇ ಔತಣನಾಗಬೇಕೇನು? ಇನ್ನೊಂದು ದಿವಸ ನೋಡಬಹುದು. ಸುಮ್ಮನೆ ಹಠಹಿಡಿಯಬೇಡಿ. ನಾನು ಹೋಗುತ್ತೇನೆ.

ವಾಗ್ದೇವಿಯು ಭೀಮಾಜಿಯ ಮುಖವನ್ನು ನೋಡಿ ಅತ್ತಳು. ಕೊತ್ವಾಲನು ನಿಜವಾಗಿ ತನ್ನ ಮೇಲೆ ಸಿಟ್ಟನಲ್ಲಿರುವನೆಂಬ ಭಯವು ಅವಳಿಗೆ ಹಿಡಿಯಿತು. ಅದರ ಕಾರಣವೇನೆಂದು ತಿಳಿಯದೆ ಅವಳಿಗೆ ಮತ್ತಷ್ಟು ಕರಕರೆ ಯಾಯಿತು. ಅತ್ತಲು ಭೀಮಾಜಿಯೂ ಸ್ವಲ್ಪ ಬೆರಗಾದನು. ಔತಣ ಇನ್ನೊಂದು ದಿನವಾಗಬಹುದೆಂದು ಸಹಜವಾಗಿ ಹೇಳಿದ ಮಾತಿಗೆ ಅವಳು ಯಾಕೆ ಶಂಕಿತಳಾದಳೆಂದು ಗೊತ್ತಾಗಲಿಲ್ಲ. ಅವಳು ಸಮಜಾಯಿಶಿ ಮಾಡದೆ, ಅಲ್ಲಿಂದ ಹೊರಡುವುದಕ್ಕೆ ಮನಸ್ಸಿಲ್ಲದೆ, –“ಅಮ್ಮಾ! ಯಾಕೆ ಪಶ್ಚಾತ್ತಾಪ ಪಡುತ್ತೀರಿ? ಔತಣಕ್ಕೆ ನಾಳೆಯೇ ಬರಬೇಕೆಂಬ ಛಲ ನಿಮಗಿ ದ್ದರೆ ನಾನು ಅಗತ್ಯವಾಗಿ ನೀವು ಹೇಳುವಷ್ಟು ಹೊತ್ತಿಗೆ ಬರುವೆನು. ಅನು ಮಾನ ಪಡಬೇಡಿ. ನನ್ನ ಮನಸ್ಸಿನ ಸ್ಥಿತಿಯು ನಿಮಗೆ ಚಂದಾಗಿ ಗೊತ್ತಿರು ತಿದ್ದರೆ ನನ್ನ ಅಂತರಂಗ ಶುದ್ಧಿಯನ್ನು ಕುರಿತು ನಿಮಗೆ ಸಂದೇಹ ಹುಟ್ಟು ತ್ತಿದ್ದಿಲ್ಲ? ಎಂದು ಭೀಮಾಜಿಯು ವಾಗ್ದೇವಿಯನ್ನು ಒಡಂಬಡಿಸಿ, ಮನೆಗೆ ಹೊಂಟನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುವರ್‍ಣದೀಪ
Next post ಭ್ರಮೆ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys