ರಮೇಶನು ಮನೆಯವರೆಲ್ಲರನ್ನೂ ಕರೆದುಕೊಂಡು ತಿರುಪತಿಗೆ ಹೋಗಿದ್ದನು. ಬಲವಂತವಾಡಿದರೂ ಪ್ರಾಣೇಶನು ಹೋಗಲಿಲ್ಲ. ಹೊಸದಾಗಿ ಆರಂಭಿಸಿರುವ ಕನ್ಯಾಮಂದಿರವನ್ನು ನೋಡಿಕೊಳ್ಳುವ ನೆಪದಿಂದ ಅವನು ಹಿಂದೆಯೇ ನಿಂತಿದ್ದನು. ಆದರೆ ಅವನಿಗೆ ಗೊತ್ತಿತ್ತು ಇನ್ನೇನೋ ಪಾಪದ ಯೋಚನೆ ಬಹಳವಾಗಿತ್ತು ಎಂದು. ಆದರೆ ಯಾರೊಡನೆಯೂ ಬಾಯಿ ಬಿಡುವಂತಿರಲಿಲ್ಲ. ಮಗ ಮಲ್ಲೇಶನಿಂದ ರಮೇಶನ ಹೆಂಡತಿ ಮೋಹನೆಯ ಮುಖದಲ್ಲಿ ಸನ್ಯಾಸಿ ಗಳಿಗೆ ನಮಸ್ಕಾರ ಮಾಡುವಾಗ ಕುಂಕುಮವಿರಲಿಲ್ಲ ಎಂಬ ಮಾತು ಅವನಿಗೆ ತಿಳಿದಿತ್ತು. ಅದರ ಮೇಲೆ ಅವನ ಮನಸ್ಸು ಅದೇಕೋ ಒಂದು ಭಾರಿಯ ಆಕಾಶಮಂದಿರವನ್ನು ಕಟ್ಟಲು ಹೊಂಚುತ್ತಿತ್ತು. ಅನೇಕ ವೇಳೆ ಅವನಿಗೆ ಇದ್ದಕ್ಕಿದ್ದ ಹಾಗೆಯೇ ‘ನೀವಿಬ್ರೂ ಇನ್ನು ‘ಬಹಳ ಕಾಲ ವಕೀಲಿ ನಡೆಸುವಂತಿಲ್ಲ ಎಂದ ಸನ್ಯಾಸಿಗಳ ವಚನವು ನೆನಪಾಗುವುದು. ಮೋಹನೆಯ ಮುಖದಲ್ಲಿ ಕುಂಕುಮವಿಲ್ಲದಿದ್ದುದೂ ಅದೂ ಕಪಿಲಾ ಕಾವೇರಿಗಳಂತೆ ಸಂಗಮವಾಗಿ ಮುಂದಕ್ಕೆ ಹರಿದು ಹೋಗುವುದು. ‘ಹಾಗಾದರೆ ರಮೇಶನು ಅಲ್ಪಾಯುವೋ?’ ಎನ್ನಿಸುವುದು. ಪ್ರಾಣೇಶನಿಗೆ ಮುದುಕನ ಗತಿಯೇನು ಎನ್ನಿಸುವುದೇ ವಿನಾ, ಇನ್ನೂ ಪ್ರಾಯದವಳು ಮೋಹನೆಯ ಗತಿಯೇನು? ವೀಣಾ ಏನಾಗುವಳೋ ಎಂಬ ಯೋಚನೆಯೇ ಬಾರದು. ಏನಾದರೂ ಮಾಡಿ ವೀಣಾನನ್ನು ತನ್ನ ಮಗನಿಗೆ ತಂದುಕೊಂಡರೆ ಎಂದು ಒಂದು ಚಪಲ ಆಗಲೇ ಮೂಡಿತ್ತು. ಆದರೆ, ಒಂದು ದಿಗಿಲು; ಮಲ್ಲೇಶ ಈಗಿರುವಂತೇ ಇದ್ದರೆ, ಕಾಲೇಜು ಮೊಕ ಕೂಡಾ ನೋಡುವನೋ ಇಲ್ಲವೋ? ವೀಣಾದು ಪ್ರಚಂಡಬುದ್ಧಿ. ರೂಪದಿಂದ ಚಿಂತೆಯಿಲ್ಲ; ವಿದ್ಯಾಬುದ್ಧಿಗಳಿಂದ ಬಹಳ ಅಸಮ, ಜೋಡಿಯಿಲ್ಲ; ತಾಳಿಕೆಯಿಲ್ಲ; ಎನ್ನುವುದು ಅವನಿಗೂ ಗೊತ್ತು ಬಲವಂತಮಾಡಿ ಮದುವೆ ಮಾಡಿದರೆ ಮನೆ ಉದ್ಧಾರವಾಗುವುದಕ್ಕೆ ಬದಲು ದಾರಿಗೆ
ದಾರಿ ಹಿಡಿದರೆ? ಎಂದು ಅದೂ ಒಂದು ದಿಗಿಲು. ಆದರೂ ಇರಲಿ, ಎಲ್ಲದಕ್ಕೂ ಒಂದು ಉಪಾಯವಿದೆ” ಎಂದು ತರ್ಕ ವಿತರ್ಕಗಳನ್ನು ಆಶಾವಾದವು ತಟ್ಟಿ ಮಲಗಿಸು ವುದು. ರಮೇಶನು ಎಂಟನೆಯ ದಿನ ಹಿಂತಿರುಗಿ ಬರಬೇಕಾಗಿತ್ತು: ಬರಲಿಲ್ಲ. ಅವನಿಂದ ಒಂದು ಕಾಗದವು ಬಂತು; ಇಂಗ್ಲೀಷಿನಲ್ಲಿ ಬರೆದಿತ್ತು; “ಏನೋ ಹುಚ್ಚು ಹತ್ತಿ ದಕ್ಷಿಣ ಭಾರತವೆಲ್ಲ ಸುತ್ತಿಬರೋಣ ಎಂದು ಹೊರಟಿದ್ದೇವೆ. ಐದು ಸಾವಿರ ರೂಪಾಯಿ ಮದರಾಸಿನ ವಿಳಾಸಕ್ಕೆ ಕಳುಹಿಸು, ಕನ್ಯಾಮಂದಿರದ ಆರಂಭೋತ್ಸವಕ್ಕೆ ಎಲ್ಲ ಸಿದ್ಧಮಾಡಿರು. ನಾವೂ ಆದಷ್ಟು ಬೇಗ ಬಂದುಬಿಡುತ್ತೇವೆ.” ಪ್ರಾಣೇಶನು ಹಣವನ್ನು ಕಳುಹಿಸಿದನು. “ಇಷ್ಟು ಹಣ ಖರ್ಚು ಮಾಡುವುದಕ್ಕೆ ಮುದುಕ ಹೇಗೆ ಒಪ್ಪಿದ? ರಮೇಶನಿಗೆ ಈ ಯಾತ್ರೆಯ ಹುಚ್ಚು ಏತಕ್ಕೆ ಹಿಡಿಯಿತು? ಈ ವಿಚಿತ್ರ ಏನಾದರೂ ವಿಪರೀತವಾಗುವುದಾದರ ಸೂಚನೆಯೋ?” ಎಂದು ಅವನಿಗೆ ಏನೇನೋ ಯೋಚನೆಗಳು. ಯೋಚನೆಗಳು ಹರಿಯಲಿಲ್ಲ. ಸುಮಾರು ಹದಿನೈದು ದಿನವಾಯಿತು. ರಮೇಶ ನಿಂದ ಕಾಗದವೂ ಬಂದಿಲ್ಲ. ನರಸಿಂಹಯ್ಯನು ಬಂದನು. ಪ್ರಾಣೇಶನಿಗೆ ಅವನನ್ನು ನೋಡಿ ಏಕೋ ದಿಗಿಲಾಯಿತು. “ಏನು, ನರಸಿಂಹಯ್ಯ, ಬಂದಿರಿ?” ವಿಶ್ವಾಸದಿಂದ ವಿಚಾರಿಸಿದನು. “ರಾಯರಿಂದ ಏನಾದರೂ ಕಾಗದ ಬಂತೆ?” “ಏನೂ ಇಲ್ಲವಲ್ಲ?” “ಈ ಊರಿನ ಸಮಾಚಾರ ಕೇಳಿದಿರಾ ಸರ್?” “ಏನು?” “ಬ್ಯಾಂಕಿನ ವಿಚಾರವಾಗಿ ಏನೇನೋ ಗುಜಗುಂಪು” “ಏನು ಸಮಾಚಾರ?” “ಅಲ್ಲಿ ಹೆಡ್ಡಾಫೀಸಿನಲ್ಲಿ ಬ್ಯಾಂಕ್ ಮೇಲೆ ರನ್ ಆಗಿದೆಯಂತೆ!” “ನಿಮಗೆ ಹೇಗೆ ತಿಳೀತು?” “ಅವರಿವರ ಮಾತು. ಬ್ಯಾಂಕ್ ಮ್ಯಾನೇಜರ್ ನಿನ್ನೆಯಿಂದ ಮೂರು ನಾಲ್ಕು ಸಲ ಫೋನ್ ಮಾಡಿದ್ದರು. ತಾವೂ ಸಿಕ್ಕಲಿಲ್ಲವಂತೆ !” “ನಿನ್ನೆ ನಾನು ಊರಲ್ಲಿರಲಿಲ್ಲ. ನೀವು ಮ್ಯಾನೇಜರ್ ಕಂಡಿದ್ದೀರಾ?” “ರಾಯರು ಊರಿಗೆ ಬಂದರೆ? ಅವರ ಅಡ್ರೆಸ್ ತಿಳಿದಿದೆಯೇ?” ಎಂದು. ಎರಡು ಮಾತೇ ಅವರದು. ಇನ್ನೇನೂ ಹೇಳುವುದಿಲ್ಲ, ನೀವು ಫೋನ್ ಮಾಡಿ ನೋಡಿ.
ಪ್ರಾಣೇಶನು ಫೋನ್ ಮಾಡಿದನು. ಮ್ಯಾನೇಜರ್ ಮನೆಯಿಂದ ಮಾತನಾಡಿದರು: “ರಾಯರ ಬಳಿ ಮಾತನಾಡಬೇಕಾದ್ದು ಇತ್ತು. ಅದೂ ಅರ್ಜೆಂಟಾಗಿ, ಅಡ್ರೆಸ್ ತಿಳಿದಿದ್ದರೆ ಟೆಲಿಗ್ರಾಂ ಕೊಡಿ, ಬ್ಯಾಂಕ್ ರನ್ನಿನ ವಿಚಾರ ತಮಗೆ ಏನೂ ತಿಳಿಯದು. ಪೇಪರಿನಲ್ಲೂ ಅಂತಹ ಸಮಾಚಾರವೇನೂ ಇಲ್ಲ.” ಪ್ರಾಣೇಶನಿಗೆ ಅನುಮಾನ ಹುಟ್ಟಿತು. ಮ್ಯಾನೇಜರ್ ದನಿಯಲ್ಲಿ ಏನೋ ಟೊಳ್ಳು ಇತ್ತು ಅಂತ ಅನ್ನಿಸಿತು ಅವನಿಗೆ ಕೊಂಚ ಹೊತ್ತು ಯೋಚನೆ ಮಾಡಿ ಹೇಳಿದನು. “ನರಸಿಂಹಯ್ಯ, ನೀವು ಮನಸ್ಸುಮಾಡಿ, ರಮೇಶ್ ಕಾಗದ ಬಂದು ಇವೊತ್ತಿಗೆ ಏಳು ದಿವಸವಾಗಿದೆ. ಅವನು ಮದರಾಸಿನಿಂದ ಬರೆದದ್ದು ಅದರಿಂದ ಮದರಾಸ್ ಬಿಟ್ಟು ಏಳು ದಿವಸವಾಗಿದೆ. ಅವರೂ ಇವೊತ್ತಿನ ದಿವಸ ರಾಮೇಶ್ವರಕ್ಕೆ ಬಂದಿರಬೇಕು. ಅದೇನೂ ಅಂತೀರೋ? ಯಾತ್ರೆ ಅಂದಮೇಲೆ ಪ್ರದಕ್ಷಿಣವಾಗಿ ತಾನೇ ಬರಬೇಕು? ಸರಿ, ನೀವು ಹೊರಡಿ, ಪ್ಲೇನಿನಲ್ಲಿ ನೇರವಾಗಿ ಮಧುರೆಗೆ ಹೋಗಿ, ಅಲ್ಲಿಂದ ರಾಮೇಶ್ವರ ಅಂಡ್ ಬ್ಯಾಕ್. ಅಲ್ಲಿ ಸಿಕ್ಕದಿದ್ದರೆ ಟ್ರಾವನ್‌ರಿಗೆ ಬನ್ನಿ ಹೊರಡುವಾಗ ಟೆಲಿಗ್ರಾಂ ಕಳುಹಿಸಿ, ಸರಿ, ನಿಮಗೆ ಒಂದು ಸಾವಿರ ರೂಪಾಯಿ ಸಾಕೊ?” ಮಧ್ಯಾನ್ಹ ಮಧುರೆಗೆ ಹೊರಡುವ ಪ್ಲೆಯಿನ್‌ನಲ್ಲಿ ನರಸಿಂಹಯ್ಯನಿಗೆ ಸೀಟೊಂದು ಬುಕ್ಕಾಯಿತು. ಅವನೂ ಹೊರಟನು. ಅವೊತ್ತಿನ ದಿನ ಪ್ರಾಣೇಶನಿಗೆ ಕೋರ್ಟಿನಲ್ಲಿ ಬಹಳ ಕೆಲಸವಿತ್ತು ಇದ್ದಿದ್ದರೆ ಕೋರ್ಟು ಮುಗಿಯುವವರೆಗೂ ಟೈಟ್ ವರ್ಕ್. ಆದರೆ ಅವನ ಮನಸ್ಸಿಗೆ ಏನೋ ಗಾಬರಿ, ‘ಏನೋ ಸರ್ವನಾಶವಾಗಿರುವಂತೆ ಅಂಜಿಕೆ. ಕಾರಣವಿಲ್ಲದ ಕಳವಳ, ಏನೋ ಮಹಡಿಯಿಂದ ಕೆಳಕ್ಕೆ ಬೀಳುತ್ತಿರುವವನಂತೆ ಭಯಪಡುತ್ತಿದೆ, ಯಾವ ಕೆಲಸಕ್ಕೂ ಸಿದ್ಧವಿಲ್ಲ ಬಾರ್‌ಗೆ ಹೋಗಿಬಂದರೂ ಸರಿಹೋಗಲಿಲ್ಲ. ಕೋರ್ಟಿನಲ್ಲಿ ಹೇಳಿಕೊಂಡು ಮನೆಗೆ ಬಂದು ಮಂಚದ ಮೇಲೆ ಮಲಗಿಬಿಟ್ಟನು. ಏನೋ ನಿದ್ದೆ ಬಂದ ಹಾಗಾಯಿತು. ಅದರಲ್ಲಿ ಏನೇನೋ ಕೆಟ್ಟ ಕನಸುಗಳು. ಹಿಂಸೆ ಬೋಧೆಯಾಗುತ್ತದೆ. ಆದರೆ ಮನಸ್ಸಿಗೆ ಏನೂ ಗೊತ್ತಾಗದು. ಸುಮಾರು ಐದು ಗಂಟೆ ಇರಬೇಕು. ಒಂದು ಫೋನ್ ಕಾಲ್ ಬಂತು. “ರಾಯರು ಇದ್ದಾರೆಯೆ?…..ಮಲಗಿದ್ದರೆ ಎಬ್ಬಿಸಿ….ಹೌದು ಅವರು ಬೇಕೇಬೇಕು. ಅನಾಹುತವಾಗಿದೆ.” ರಾಯನು ಎದ್ದು ಅವಸರ ಅವಸರವಾಗಿ ಫೋನ್ ಬಳಿ ಬಂದನು. “ಯಾರು ಅದು?” “ಇವೊತ್ತಿನ ಪೇಪರು ನೋಡಿದರೇನು?” “ಏನು ಸಮಾಚಾರ?” “ಯುವರ್ ಫ್ರೆಂಡ್ ಈಸ್ ಇನ್ ಡೇಂಜರ್. “We?” “ಹೌದು, ಸರ್, ಪೇಪರ್ ಓದುತ್ತೇನೆ. ನೋಡಿ. ರೈಲ್ವೇ ಆಕ್ಸಿಡೆಂಟ್, ಮಧುರ ತಿನ್ನವೆಲ್ಲಿ ಎಕ್ಸ್‌ಪ್ರೆಸ್ ಡಿರೇಯ್‌ಲ್ಡ್ ತ್ರಿ ಬೋಗೀಸ್ ಫಾಲ್-ಮಿ. ರಮೇಶ್ ಬ್ಯಾಂಗಲೂ ಸೀರಿಯಸ್ ಇನ್‌ಜರ್‌ಡ್, ಎಟ್‌ಸೆಟ್ರಾ. “” “ಎಲ್ಲಿಂದ ಫೋನ್ ಮಾಡುತ್ತಿರುವುದು?” “ಕ್ಲಬ್ಬಿನಿಂದ’ “ಯಾರು?” “ಡಾ. ಕನ್ನು.’ “ಡಾಕ್ಟರೇ?” “ಹೌದು.” ಪ್ರಾಣೇಶನು ಹಾಗೆಯೇ ರಿಸೀವರ್ ಕೆಳಗಿಟ್ಟು ಕುರ್ಚಿಯ ಮೇಲೆ ಕುಳಿತು ಕೊಂಡನು. ಒಂದು ಗಳಿಗೆ ತಲೆಯನ್ನು ಕೈಯ ಮೇಲಿಟ್ಟುಕೊಂಡು ತೀವ್ರವಾಗಿ ಯೋಚಿಸಿದನು. ಎದ್ದು ಫೋನ್ ಬಳಿಗೆ ಹೋಗಿ ಏರ್ ಹೆಡ್‌ಕ್ವಾರ್ಟಸ್‌್ರಗೆ ಫೋನ್ ಮಾಡಿದನು. “ಎರಡು ಗಂಟೆಗೆ ಹೊರಟ ಪ್ಲೇನ್ ಮಧುರೆಗೆ ಎಷ್ಟು ಹೊತ್ತಿಗೆ ಅರೈವ್ ಆಗುತ್ತದೆ. “” “ಇವೊತ್ತು ನಾರ್ಮಲ್ ರೂಟ್ ಇರಲಿಲ್ಲ. ವಯಾ ಕೊಯಮುತ್ತೂರು ಹೋಗಿದೆ.” “ಅಲ್ಲಿಗೆ ಎಷ್ಟು ಹೊತ್ತಿಗೆ ತಲಪುತ್ತದೆ?” “ಅಲ್ಲಿಂದ ಫೋನ್ ಎಕ್ಸ್‌ಪೆಕ್ಸ್ ಮಾಡುತ್ತಿದ್ದೇವೆ. ಇನ್ನೂ ತಲಪಿಲ್ಲ.” ಪ್ರಾಣೇಶನು ಒಂದು ನಿಟ್ಟುಸಿರುಬಿಟ್ಟನು. “ಒಂದು ಫೋನೋಗ್ರಾಂ ಕಳುಹಿಸಿ. ಎಕ್ಸ್‌ಪ್ರೆಸ್. ಸಾರ್’ “” “ಬರೆದುಕೊಳ್ಳಿ. ನರಸಿಂಹಯ್ಯ, ಪ್ಪಂ ಬ್ಯಾಂಗಲೂರ್. ರಮೇಶ್ ಸೀರಿಯಸ್. ಸೀ ಈವನಿಂಗ್ ಪೇಪರ್, ಪ್ರೊಸೀಡ್ ಟು ಅಟೆಂಡ್ ವೈರ್ ರಿಸಲ್ಟ್ ಅಲ್ಲಿಂದ ಫೋನೋಗ್ರಾಂ ಇನ್ನೊಂದು ಸಲ ಓದಿ ಹೇಳಿದ್ದೂ ಆಯಿತು. ಪ್ರಾಣೇಶನಿಗೆ ಏಕೋ ಹೊಟ್ಟೆ ಹಿಂಡಿಕೊಳ್ಳುವ ಹಾಗಿದೆ. ತಾನೇ ಹೊರಟು ಬಿಡೋಣವೇ ಎನ್ನಿಸುತ್ತಿದೆ. ಆದರೆ ಡೀಟೆಯಿಲ್ಸ್ ಬರುವವರೆಗೂ ತಾನೆಲ್ಲಿಗೆ ಹೋಗುವುದು? ಒದ್ದಾಡುತ್ತಿದ್ದಾನೆ. ಹೆಂಡತಿ ಬಂದಳು. ಕಾಫಿ ಬಂತು. ಅವನಿಗೆ ಕಾಫಿ ಕುಡಿಯುವುದಕ್ಕೂ ಇಷ್ಟವಿಲ್ಲ, ಅಭ್ಯಾಸವೇ ಕುಡಿಯಿತು ಕಾಫಿಯನ್ನು ಹೆಂಡತಿ ಇದೇಕೆ ಹೀಗಿದ್ದೀರಿ?’ ಎಂದು ಕೇಳುವಮಟ್ಟಿಗೆ ಮೊಕ ಕೆಟ್ಟುಹೋಗಿತ್ತು. ~ ಪ್ರಾಣೇಶ್ ಮೃದು ಜಾತಿ, ಹೆಂಗರುಳಿನವನು. ಅವನಿಗೆ ರಮೇಶನಿಗೆ ಆಗಿರಬಹುದಾದ ಅಪಾಯವನ್ನು ಚಿಂತಿಸಿ ಅಳು ಬಂದುಬಿಟ್ಟಿತ್ತು. ಹೇಗೆಹೇಗೋ ತಡೆದುಕೊಂಡಿದ್ದನು. ಈಗ ಹೆಂಡತಿಯೊಡನೆ ಬಾಯಿ ಮಾತಿನಲ್ಲಿ ಹೇಳುವಾಗ ತಡೆಯಲು ಆಗಲಿಲ್ಲ. ನರಸಿಂಹಯ್ಯನಿಗೆ ಟೆಲಿಗ್ರಾಂ ಕಳುಹಿಸುವಾಗಲೇ ಮೊದಲಾಗಿದ್ದ ಕಣ್ಣೀರಿನ ಕೋಡಿ ಈಗ ಹರಿದೇಬಿಟ್ಟಿತು. ಮಕ್ಕಳಂತೆ ಬಿಕ್ಕಳಿಸಿ ಅಳುತ್ತಾ, “ರಮೇಶನಿಗೆ ಅಪಾಯವಾಗಿದೆಯಂತೆ ” ಎಂದು ಹೇಳಿದನು. ಪಾಪ ಅವಳಿಗೂ ಗಾಬರಿಯಾಯಿತು. ವಿವರವಾಗಿ ಕೇಳಬೇಕು ಎನ್ನುವುದ ರೊಳಗಾಗಿ ಪೇಪರ್ ಬಂತು. ಪೇಪರ್‌ನಲ್ಲಿ ಹೀಗಿತ್ತು:
“ಈ ದಿನ ಬೆಳಿಗ್ಗೆ ೯-೩೫ಕ್ಕೆ ಮಧುರೆಯನ್ನು ಬಿಟ್ಟ ತಿನ್ನವೆಲ್ಲಿ ಎಕ್ಸ್‌ಪ್ರೆಸ್ ಮಧುರೆಯಿಂದ ೩೦-೩೫ ಮೈಲಿ ಬಂದಾಗ ಅಲ್ಲಿ ಕಂಬಿ ತಪ್ಪಿ ಪಕ್ಕದ ಹಳ್ಳದಲ್ಲಿ ಮೊಗಚಿಕೊಂಡಿತು. ಎಂಜಿನ್ ಮಗ್ಗುಲಲ್ಲಿದ್ದ ಫಸ್ಟ್ ಕ್ಲಾಸ್ ಬೋಗಿಯು ಪುಡಿಪುಡಿ ಯಾಗಿದೆ. ಅದರಲ್ಲಿ ಕುಟುಂಬ ಸಮೇತವಾಗಿ ಪ್ರಯಾಣ ಮಾಡುತ್ತಿದ್ದ ಬೆಂಗಳೂರಿನ ಅಡ್ವಕೇಟ್ ರಮೇಶರಿಗೂ ಅವರ ಹೆಂಡತಿಗೂ ಬಹಳ ಗಾಯಗಳಾಗಿವೆ. ಅವರ ಮಗಳು ತಂದೆ ಇಬ್ಬರಿಗೂ ಗಾಯವಾಗಿದ್ದರೂ ಅಷ್ಟಿಲ್ಲ.” ಪ್ರಾಣೇಶನು ಕುಳಿತುಕೊಳ್ಳಲಾಗಲಿಲ್ಲ. ಎದ್ದು ಓಡಾಡಿದನು. ಹೆಂಡತಿಯು “ಅಯ್ಯೋ ಪಾಪ!” ಎಂದು ಕಣ್ಣೀರಿಟ್ಟುಕೊಂಡು “ದೇವರಿಗೆ ಒಂದು ತುಪ್ಪದ ದೀಪನಾದರೂ ಹಚ್ಚುತ್ತೇನೆ. ಅವರಿಗೆ ಒಳ್ಳೆಯದಾಗಲಿ’ ಎಂದು ಒಳಕ್ಕೆ ಹೋದಳು. ಪ್ರಾಣೇಶನಿಗೆ ಮೊದಲು ಐದು ನಿಮಿಷ ಏನೂ ತೋರಲಿಲ್ಲ, ಥಟ್ಟನೆ ಕಾಫೀ ಎಸ್ಟೇಟಿನಲ್ಲಿ ಸನ್ಯಾಸಿಗಳಿಗೆ ನಮಸ್ಕಾರ ಮಾಡಿದಾಗ ಮೋಹನೆಯ ಮುಖದಲ್ಲಿ ಕುಂಕುಮವಿಲ್ಲದ್ದು ನೆನಪಾಯಿತು. ಮನಸ್ಸು ಏನೇನೋ ಯೋಚಿಸಿತು. ಎಷ್ಟು ಪ್ರಯತ್ನಪಟ್ಟರೂ ಒಳ್ಳೆಯ ಕಡೆಗೆ ತಿರುಗಲೊಲ್ಲದು: ರಮೇಶನಿಗೆ ಬಿದ್ದಿರುವ ಏಟು ಭಾರಿಯಾಗಿದ್ದರೆ ಹೇಗೆ? ಅವನು ಉಳಿಯದೆ ಹೋದರೋ? ಎಂದಿದ್ದರೂ ಹೈಕೋರ್ಟಿನ ಜಡ್ಡಿಯಾಗಬೇಕಾಗಿದ್ದವನು ಹೀಗೆ ಅಪಘಾತಕ್ಕೆ ಗುರಿಯಾದನಲ್ಲ! ಸನ್ಯಾಸಿಗಳು ಇದನ್ನು ತಿಳಿದೇ ಶಿವಪೂಜೆ ಮಾಡಿ ಅಂತ ಹೇಳಿದರೆ? ಮಂಜುನಾಥನಿಗೆ ಪೂಜೆ ಮಾಡಿಸಿದ್ದಾನಲ್ಲ!” ಆಯಿತು. ಒಂದು ವೇಳೆ ಈ ಅಪಾಯ ಮರಣವಾಗಿ ಪರಿಣಮಿಸಿದರೆ ಏನು ಗತಿ? ಮೋಹನೆ ಇನ್ನೂ ಚಿಕ್ಕ ವಯಸ್ಸಿನವಳು. ಅವಳು ಗಂಡನಲ್ಲಿ ಪಂಚಪ್ರಾಣ ಇಟ್ಟುಕೊಂಡಿರುವವಳು. ಆದರೂ ಪಾಪ! ಏನೂ ತಿಳಿದವಳಲ್ಲ, ಅವರಿವರ ಮಾತು ಕೇಳಿ ಆಸ್ತಿಪಾಸ್ತಿ ಹಾಳು ಮಾಡಿಕೊಂಡರೋ? ಅದಕ್ಕೆ ಅವಕಾಶ ಕೊಡಕೂಡದು. ಸರ್ವಪ್ರಕಾರದಿಂದಲೂ ಅವರ ಆಸ್ತಿ ಕಾಪಾಡಬೇಕು. ಆ ಹುಡುಗಿಯನ್ನು ಒಳ್ಳೆಯ ವಿದ್ಯಾವಂತಳನ್ನಾಗಿ ಮಾಡಿ ಸರಿಯಾದ ಕಡೆ ಕೊಟ್ಟು ಮದುವೆ ಮಾಡಿ ರಮೇಶನ ಹೆಸರು ನಿಲ್ಲಿಸಬೇಕು.” ಇನ್ನೂ ಏನೇನೋ ಯೋಚನೆಗಳು ಯಾವುದಕ್ಕೂ ತಡೆಯಿಲ್ಲ. “ಆ ಮುದುಕನಿಗೆ ಏನಾಗಿದೆಯೋ? ಈ ವಯಸ್ಸಿನಲ್ಲಿ ರಮೇಶನದು ಅವಿವೇಕವಾದರೆ ಆ ಮುದುಕನ ಹಣೇಬರಹ ಏನು ಹೇಳಬೇಕು?” ಹೀಗೆ ಇನ್ನೂ ಏನೇನೋ ಮನಸ್ಸಿನಲ್ಲಿ ದುಷ್ಟ ಯೋಚನೆಗಳೇ ಬರುತ್ತಿರುವಾಗ ಒಂದು ಟೆಲಿಗ್ರಾಂ ಬಂತು. ಅದು ಡ್ರೈವರ್ ನಟೇಶ್ ಕಳುಹಿಸಿರುವುದು. “ಯಜಮಾನರಿಗೆ ಜಖಂ ಆಗಿದೆ. ಮೊಖ ಎದೆ ಗಾಯವಾಗಿದೆ. ಅಮ್ಮವರಿಗೆ ಪಕ್ಕಕ್ಕೆ
ಏಟು ಬಿದ್ದಿದೆ. ದೊಡ್ಡ ಯಜಮಾನರಿಗೆ ಕಾಲು ಮುರಿದಂತಿದೆ. ಮಗುವಿಗೆ ಭುಜಕ್ಕೆ ಏಟು ಬಿದ್ದಿದೆ. ನಾವೆಲ್ಲ ಮಧುರೆಯ ಆಸ್ಪತ್ರೆಗೆ ಬಂದಿದ್ದೇವೆ. ಇಲಾಜು ನಡೆಯುತ್ತಿದೆ.” “ಸರಿ. ಬೆಳಗೆದ್ದು ನಾನೂ ಮಧುರೆಗೆ ಹೊರಡುವುದು’ ಎಂದು ಗೊತ್ತುಮಾಡಿ ಕೊಳ್ಳುವುದರೊಳಗಾಗಿ ಇನ್ನೊಂದು ಟೆಲಿಗ್ರಾಂ ಬಂತು. ನರಸಿಂಹಯ್ಯ ಕಳುಹಿಸಿದ್ದು, ಅದರಲ್ಲಿ ಹೀಗಿತ್ತು: “ರಾಯರಿಗೆ ಬಹಳ ಪೆಟ್ಟಾಗಿದೆ. ಮದರಾಸಿಗೆ ಕರೆದುಕೊಂಡು ಹೋಗಬೇಕು. ತಕ್ಷಣ ಹೊರಟುಬನ್ನಿ.’ ಪ್ರಾಣೇಶನು ಮರುದಿನ ಪ್ಲೇನ್‌ನಲ್ಲಿ ಬರುವುದಾಗಿ ನರಸಿಂಹಯ್ಯನಿಗೆ ಕೂಡಲೇ ಎಕ್ಸ್‌ಪ್ರೆಸ್ ತಂತಿಯೊಂದು ಹೋಯಿತು. ಮರುದಿನ ಪ್ರಾಣೇಶನು ಹೋದನು. ಅಲ್ಲಿ ಜನರಲ್ ಹಾಸ್ಪಿಟಲಿನಲ್ಲಿ ಎಲ್ಲರಿಗೂ ಮೊದಲ ಚಿಕಿತ್ಸೆಯಾಗಿದೆ. ಮಗು ಗೆಲುವಾಗಿದ್ದಾಳೆ. ಮೋಹನೆಗೆ ಪಕ್ಕದ ಎರಡು ಎಲುಬು ಮುರಿದುಹೋಗಿದೆ. ಮುದುಕನಿಗೆ ಕಾಲು ಮುರಿದಿದೆ. ಭಾರಿ ಊದಿದೆ. ಆ ಊದು ಇಳಿಯುವವರಗೆ ಏನೂ ಮಾಡುವಂತಿಲ್ಲ, ಮೋಹನೆಗೆ ಇವೊತ್ತು ಆಪರೇಷನ್ ಆಗುತ್ತದೆ. ರಮೇಶನನ್ನು ಮಾತ್ರ ಮದರಾಸಿಗೆ ಕರೆದುಕೊಂಡು ಹೋಗಬೇಕು. ಅಲ್ಲಿಯೇ ಚಿಕಿತ್ಸೆ ನಡೆಯಬೇಕು. ಮಿದುಳಿಗೆ ಏಟು ಬಿದ್ದಿದ್ದರೆ ಉಳಿಯುವುದು ಕಷ್ಟ ಇಲ್ಲದಿದ್ದರೆ ಉಳಿಯಬಹುದು. ಆದರೂ ಮುಖವು ವಿಕಾರವಾಗಬಹುದು. ಮುದುಕನು ಅಲ್ಲಿಯೇ ಇದ್ದು ಪ್ಲಾಸ್ಟರ್ ಹಾಕಿದ ಮೇಲೆ ಬೆಂಗಳೂರಿಗೆ ಹೋಗುವುದು ಡ್ರೈವರ್ ಅಲ್ಲಿಯೇ ಇದ್ದು ಅವರನ್ನು ನೋಡಿಕೊಳ್ಳುವುದು ಎಂದಾಯಿತು. ರಮೇಶನಿಗೆ ಮೊದಲ ಚಿಕಿತ್ಸೆ ಮಾಡಿಸಿ, ಆತನನ್ನು ಫೋನಿನಲ್ಲಿ ಮದರಾಸಿಗೆ ಕರೆದೊಯ್ಯುವುದು ಎಂದಾಯಿತು. ಮೋಹನೆಯು ಮಧುರೆಯಲ್ಲಿರಲು ಒಪ್ಪಲಿಲ್ಲ. ಅದರಿಂದ ಅವಳೂ ವೀಣಾ ಜೊತೆಯಲ್ಲಿ ಹೋಗುವುದು ಎಂದಾಯಿತು.
ಸಂಜೆಯ ವೇಳೆಗೆ ಎಲ್ಲರೂ ಮದರಾಸಿಗೆ ಬಂದಿದ್ದರು. ಮದರಾಸಿನ ಜನರಲ್ ಹಾಸ್ಪಿಟಲ್‌ನಲ್ಲಿ ಗಂಡಹೆಂಡಿರು ಇನ್‌ಪೇಷೆಂಟ್ ಆಗಿ ಸ್ಪೆಷಲ್ ವಾರ್ಡಿಗೆ ಹೋದರು. ಮೋಹನೆಯು ಎಂಟು ದಿನದೊಳಗಾಗಿ ಕೊಂಚ ಚೇತರಿಸಿಕೊಂಡಳು. ಅವಳಿಗೆ ಮುರಿದಿದ್ದ ಎಲುಬಿಗೆ ಪ್ರತಿಯಾಗಿ ಸ್ಟೀಲ್‌ರಿಬ್ ಜೋಡಿಸಿಯಾಯಿತು. ಆದರಿನ್ನೂ ಅಲುಗಾಡುವಂತಿಲ್ಲ. ಆ ಮಂಚವನ್ನು ಹಾಗೆಯೇ ರಮೇಶನ ಮಂಚದ ಬಳಿ ತಳ್ಳುವುದು. ಅವಳು ಒಂದು ಗಳಿಗೆ ಗಂಡನ ಕೈಯ್ಯನ್ನು ತನ್ನ ಕೈಯಲ್ಲಿ ಇಟ್ಟುಕೊಂಡು ಎರಡು ಹನಿ ಕಣ್ಣೀರು ಉದುರಿಸುವುದು. ಏನೋ ಜ್ಞಾನವಿದ್ದರೆ ರಮೇಶನೂ ಒಂದು ಮಾತಾಡುವುದು. ಇಷ್ಟೇ ಅವರಿಗೆ ಆಪ್ಯಾಯನ. ಅವಳಿಗೆ ಈಗಂತೂ ಕಣ್ಮುಚ್ಚಿದರೆ ಏನೇನೋ ಘೋರವಾದ ಕನಸುಗಳು. ಗಂಡನು ಏನಾಗುವನೋ ತನ್ನ ಮಾಂಗಲ್ಯವು ಉಳಿಯುವುದೋ ಇಲ್ಲವೋ ಎನ್ನುವ ದಿಗಿಲು ತಾನೇ ತಾನಾಗಿಹೋಗಿದೆ. ಗಂಟೆಗೊಂದು ಸಲ ನರಸಿಂಹಯ್ಯನನ್ನು ಕರೆದು ಗಂಡನ ಯೋಗಕ್ಷೇಮ ವಿಚಾರಿಸುತ್ತಾಳೆ. ವೀಣಾ ಅಂತು “ಹೋಗಮ್ಮ! ಎಷ್ಟು ಸಲ ಬಂದುಬಂದು ಹೇಳಲಿ?” ಎಂದು ಗದರಿಸಿಕೊಳ್ಳುವಷ್ಟು ಬೇಸತ್ತಿದ್ದಾಳೆ. ಪಾಪ ಅವಳಿಗೂ ಗಾಬರಿಯಾಯಿತು. ವಿವರವಾಗಿ ಕೇಳಬೇಕು ಎನ್ನುವುದ ರೊಳಗಾಗಿ ಪೇಪರ್ ಬಂತು. ಪೇಪರ್‌ನಲ್ಲಿ ಹೀಗಿತ್ತು:
“ಈ ದಿನ ಬೆಳಿಗ್ಗೆ ೯-೩೫ಕ್ಕೆ ಮಧುರೆಯನ್ನು ಬಿಟ್ಟ ತಿನ್ನವೆಲ್ಲಿ ಎಕ್ಸ್‌ಪ್ರೆಸ್ ಮಧುರೆಯಿಂದ ೩೦-೩೫ ಮೈಲಿ ಬಂದಾಗ ಅಲ್ಲಿ ಕಂಬಿ ತಪ್ಪಿ ಪಕ್ಕದ ಹಳ್ಳದಲ್ಲಿ ಮೊಗಚಿಕೊಂಡಿತು. ಎಂಜಿನ್ ಮಗ್ಗುಲಲ್ಲಿದ್ದ ಫಸ್ಟ್ ಕ್ಲಾಸ್ ಬೋಗಿಯು ಪುಡಿಪುಡಿ ಯಾಗಿದೆ. ಅದರಲ್ಲಿ ಕುಟುಂಬ ಸಮೇತವಾಗಿ ಪ್ರಯಾಣ ಮಾಡುತ್ತಿದ್ದ ಬೆಂಗಳೂರಿನ ಅಡ್ವಕೇಟ್ ರಮೇಶರಿಗೂ ಅವರ ಹೆಂಡತಿಗೂ ಬಹಳ ಗಾಯಗಳಾಗಿವೆ. ಅವರ ಮಗಳು ತಂದೆ ಇಬ್ಬರಿಗೂ ಗಾಯವಾಗಿದ್ದರೂ ಅಷ್ಟಿಲ್ಲ.” ಪ್ರಾಣೇಶನು ಕುಳಿತುಕೊಳ್ಳಲಾಗಲಿಲ್ಲ. ಎದ್ದು ಓಡಾಡಿದನು. ಹೆಂಡತಿಯು “ಅಯ್ಯೋ ಪಾಪ!” ಎಂದು ಕಣ್ಣೀರಿಟ್ಟುಕೊಂಡು “ದೇವರಿಗೆ ಒಂದು ತುಪ್ಪದ ದೀಪನಾದರೂ ಹಚ್ಚುತ್ತೇನೆ. ಅವರಿಗೆ ಒಳ್ಳೆಯದಾಗಲಿ’ ಎಂದು ಒಳಕ್ಕೆ ಹೋದಳು. ಪ್ರಾಣೇಶನಿಗೆ ಮೊದಲು ಐದು ನಿಮಿಷ ಏನೂ ತೋರಲಿಲ್ಲ, ಥಟ್ಟನೆ ಕಾಫೀ ಎಸ್ಟೇಟಿನಲ್ಲಿ ಸನ್ಯಾಸಿಗಳಿಗೆ ನಮಸ್ಕಾರ ಮಾಡಿದಾಗ ಮೋಹನೆಯ ಮುಖದಲ್ಲಿ ಕುಂಕುಮವಿಲ್ಲದ್ದು ನೆನಪಾಯಿತು. ಮನಸ್ಸು ಏನೇನೋ ಯೋಚಿಸಿತು. ಎಷ್ಟು ಪ್ರಯತ್ನಪಟ್ಟರೂ ಒಳ್ಳೆಯ ಕಡೆಗೆ ತಿರುಗಲೊಲ್ಲದು: ರಮೇಶನಿಗೆ ಬಿದ್ದಿರುವ ಏಟು ಭಾರಿಯಾಗಿದ್ದರೆ ಹೇಗೆ? ಅವನು ಉಳಿಯದೆ ಹೋದರೋ? ಎಂದಿದ್ದರೂ ಹೈಕೋರ್ಟಿನ ಜಡ್ಡಿಯಾಗಬೇಕಾಗಿದ್ದವನು ಹೀಗೆ ಅಪಘಾತಕ್ಕೆ ಗುರಿಯಾದನಲ್ಲ! ಸನ್ಯಾಸಿಗಳು ಇದನ್ನು ತಿಳಿದೇ ಶಿವಪೂಜೆ ಮಾಡಿ ಅಂತ ಹೇಳಿದರೆ? ಮಂಜುನಾಥನಿಗೆ ಪೂಜೆ ಮಾಡಿಸಿದ್ದಾನಲ್ಲ!” ಆಯಿತು. ಒಂದು ವೇಳೆ ಈ ಅಪಾಯ ಮರಣವಾಗಿ ಪರಿಣಮಿಸಿದರೆ ಏನು ಗತಿ? ಮೋಹನೆ ಇನ್ನೂ ಚಿಕ್ಕ ವಯಸ್ಸಿನವಳು. ಅವಳು ಗಂಡನಲ್ಲಿ ಪಂಚಪ್ರಾಣ ಇಟ್ಟುಕೊಂಡಿರುವವಳು. ಆದರೂ ಪಾಪ! ಏನೂ ತಿಳಿದವಳಲ್ಲ, ಅವರಿವರ ಮಾತು ಕೇಳಿ ಆಸ್ತಿಪಾಸ್ತಿ ಹಾಳು ಮಾಡಿಕೊಂಡರೋ? ಅದಕ್ಕೆ ಅವಕಾಶ ಕೊಡಕೂಡದು. ಸರ್ವಪ್ರಕಾರದಿಂದಲೂ ಅವರ ಆಸ್ತಿ ಕಾಪಾಡಬೇಕು. ಆ ಹುಡುಗಿಯನ್ನು ಒಳ್ಳೆಯ ವಿದ್ಯಾವಂತಳನ್ನಾಗಿ ಮಾಡಿ ಸರಿಯಾದ ಕಡೆ ಕೊಟ್ಟು ಮದುವೆ ಮಾಡಿ ರಮೇಶನ ಹೆಸರು ನಿಲ್ಲಿಸಬೇಕು.” ಇನ್ನೂ ಏನೇನೋ ಯೋಚನೆಗಳು ಯಾವುದಕ್ಕೂ ತಡೆಯಿಲ್ಲ. “ಆ ಮುದುಕನಿಗೆ ಏನಾಗಿದೆಯೋ? ಈ ವಯಸ್ಸಿನಲ್ಲಿ ರಮೇಶನದು ಅವಿವೇಕವಾದರೆ ಆ ಮುದುಕನ ಹಣೇಬರಹ ಏನು ಹೇಳಬೇಕು?” ಹೀಗೆ ಇನ್ನೂ ಏನೇನೋ ಮನಸ್ಸಿನಲ್ಲಿ ದುಷ್ಟ ಯೋಚನೆಗಳೇ ಬರುತ್ತಿರುವಾಗ ಒಂದು ಟೆಲಿಗ್ರಾಂ ಬಂತು. ಅದು ಡ್ರೈವರ್ ನಟೇಶ್ ಕಳುಹಿಸಿರುವುದು. “ಯಜಮಾನರಿಗೆ ಜಖಂ ಆಗಿದೆ. ಮೊಖ ಎದೆ ಗಾಯವಾಗಿದೆ. ಅಮ್ಮವರಿಗೆ ಪಕ್ಕಕ್ಕೆ
ಏಟು ಬಿದ್ದಿದೆ. ದೊಡ್ಡ ಯಜಮಾನರಿಗೆ ಕಾಲು ಮುರಿದಂತಿದೆ. ಮಗುವಿಗೆ ಭುಜಕ್ಕೆ ಏಟು ಬಿದ್ದಿದೆ. ನಾವೆಲ್ಲ ಮಧುರೆಯ ಆಸ್ಪತ್ರೆಗೆ ಬಂದಿದ್ದೇವೆ. ಇಲಾಜು ನಡೆಯುತ್ತಿದೆ.” “ಸರಿ. ಬೆಳಗೆದ್ದು ನಾನೂ ಮಧುರೆಗೆ ಹೊರಡುವುದು’ ಎಂದು ಗೊತ್ತುಮಾಡಿ ಕೊಳ್ಳುವುದರೊಳಗಾಗಿ ಇನ್ನೊಂದು ಟೆಲಿಗ್ರಾಂ ಬಂತು. ನರಸಿಂಹಯ್ಯ ಕಳುಹಿಸಿದ್ದು, ಅದರಲ್ಲಿ ಹೀಗಿತ್ತು: “ರಾಯರಿಗೆ ಬಹಳ ಪೆಟ್ಟಾಗಿದೆ. ಮದರಾಸಿಗೆ ಕರೆದುಕೊಂಡು ಹೋಗಬೇಕು. ತಕ್ಷಣ ಹೊರಟುಬನ್ನಿ.’ ಪ್ರಾಣೇಶನು ಮರುದಿನ ಪ್ಲೇನ್‌ನಲ್ಲಿ ಬರುವುದಾಗಿ ನರಸಿಂಹಯ್ಯನಿಗೆ ಕೂಡಲೇ ಎಕ್ಸ್‌ಪ್ರೆಸ್ ತಂತಿಯೊಂದು ಹೋಯಿತು. ಮರುದಿನ ಪ್ರಾಣೇಶನು ಹೋದನು. ಅಲ್ಲಿ ಜನರಲ್ ಹಾಸ್ಪಿಟಲಿನಲ್ಲಿ ಎಲ್ಲರಿಗೂ ಮೊದಲ ಚಿಕಿತ್ಸೆಯಾಗಿದೆ. ಮಗು ಗೆಲುವಾಗಿದ್ದಾಳೆ. ಮೋಹನೆಗೆ ಪಕ್ಕದ ಎರಡು ಎಲುಬು ಮುರಿದುಹೋಗಿದೆ. ಮುದುಕನಿಗೆ ಕಾಲು ಮುರಿದಿದೆ. ಭಾರಿ ಊದಿದೆ. ಆ ಊದು ಇಳಿಯುವವರಗೆ ಏನೂ ಮಾಡುವಂತಿಲ್ಲ, ಮೋಹನೆಗೆ ಇವೊತ್ತು ಆಪರೇಷನ್ ಆಗುತ್ತದೆ. ರಮೇಶನನ್ನು ಮಾತ್ರ ಮದರಾಸಿಗೆ ಕರೆದುಕೊಂಡು ಹೋಗಬೇಕು. ಅಲ್ಲಿಯೇ ಚಿಕಿತ್ಸೆ ನಡೆಯಬೇಕು. ಮಿದುಳಿಗೆ ಏಟು ಬಿದ್ದಿದ್ದರೆ ಉಳಿಯುವುದು ಕಷ್ಟ ಇಲ್ಲದಿದ್ದರೆ ಉಳಿಯಬಹುದು. ಆದರೂ ಮುಖವು ವಿಕಾರವಾಗಬಹುದು. ಮುದುಕನು ಅಲ್ಲಿಯೇ ಇದ್ದು ಪ್ಲಾಸ್ಟರ್ ಹಾಕಿದ ಮೇಲೆ ಬೆಂಗಳೂರಿಗೆ ಹೋಗುವುದು ಡ್ರೈವರ್ ಅಲ್ಲಿಯೇ ಇದ್ದು ಅವರನ್ನು ನೋಡಿಕೊಳ್ಳುವುದು ಎಂದಾಯಿತು. ರಮೇಶನಿಗೆ ಮೊದಲ ಚಿಕಿತ್ಸೆ ಮಾಡಿಸಿ, ಆತನನ್ನು ಫೋನಿನಲ್ಲಿ ಮದರಾಸಿಗೆ ಕರೆದೊಯ್ಯುವುದು ಎಂದಾಯಿತು. ಮೋಹನೆಯು ಮಧುರೆಯಲ್ಲಿರಲು ಒಪ್ಪಲಿಲ್ಲ. ಅದರಿಂದ ಅವಳೂ ವೀಣಾ ಜೊತೆಯಲ್ಲಿ ಹೋಗುವುದು ಎಂದಾಯಿತು.
ಸಂಜೆಯ ವೇಳೆಗೆ ಎಲ್ಲರೂ ಮದರಾಸಿಗೆ ಬಂದಿದ್ದರು. ಮದರಾಸಿನ ಜನರಲ್ ಹಾಸ್ಪಿಟಲ್‌ನಲ್ಲಿ ಗಂಡಹೆಂಡಿರು ಇನ್‌ಪೇಷೆಂಟ್ ಆಗಿ ಸ್ಪೆಷಲ್ ವಾರ್ಡಿಗೆ ಹೋದರು. ಮೋಹನೆಯು ಎಂಟು ದಿನದೊಳಗಾಗಿ ಕೊಂಚ ಚೇತರಿಸಿಕೊಂಡಳು. ಅವಳಿಗೆ ಮುರಿದಿದ್ದ ಎಲುಬಿಗೆ ಪ್ರತಿಯಾಗಿ ಸ್ಟೀಲ್‌ರಿಬ್ ಜೋಡಿಸಿಯಾಯಿತು. ಆದರಿನ್ನೂ ಅಲುಗಾಡುವಂತಿಲ್ಲ. ಆ ಮಂಚವನ್ನು ಹಾಗೆಯೇ ರಮೇಶನ ಮಂಚದ ಬಳಿ ತಳ್ಳುವುದು. ಅವಳು ಒಂದು ಗಳಿಗೆ ಗಂಡನ ಕೈಯ್ಯನ್ನು ತನ್ನ ಕೈಯಲ್ಲಿ ಇಟ್ಟುಕೊಂಡು ಎರಡು ಹನಿ ಕಣ್ಣೀರು ಉದುರಿಸುವುದು. ಏನೋ ಜ್ಞಾನವಿದ್ದರೆ ರಮೇಶನೂ ಒಂದು ಮಾತಾಡುವುದು. ಇಷ್ಟೇ ಅವರಿಗೆ ಆಪ್ಯಾಯನ. ಅವಳಿಗೆ ಈಗಂತೂ ಕಣ್ಮುಚ್ಚಿದರೆ ಏನೇನೋ ಘೋರವಾದ ಕನಸುಗಳು. ಗಂಡನು ಏನಾಗುವನೋ ತನ್ನ ಮಾಂಗಲ್ಯವು ಉಳಿಯುವುದೋ ಇಲ್ಲವೋ ಎನ್ನುವ ದಿಗಿಲು ತಾನೇ ತಾನಾಗಿಹೋಗಿದೆ. ಗಂಟೆಗೊಂದು ಸಲ ನರಸಿಂಹಯ್ಯನನ್ನು ಕರೆದು ಗಂಡನ ಯೋಗಕ್ಷೇಮ ವಿಚಾರಿಸುತ್ತಾಳೆ. ವೀಣಾ ಅಂತು “ಹೋಗಮ್ಮ! ಎಷ್ಟು ಸಲ ಬಂದುಬಂದು ಹೇಳಲಿ?” ಎಂದು ಗದರಿಸಿಕೊಳ್ಳುವಷ್ಟು ಬೇಸತ್ತಿದ್ದಾಳೆ.
ರಮೇಶನಿಗೆ ಪ್ಲಾಸ್ಟಿಕ್ ಸರ್ಜರಿ ನಡೆದಿದೆ. ಮಿದುಳಿಗೆ ಅಪಾಯವಾಗಿರಲಾರದು ಎಂದು ಡಾಕ್ಟರ್ ಊಹೆ. ಹುಣ್ಣು ಆರುತ್ತ ಬಂದಿದೆ. “ತಲೆಯೇ ಜಜ್ಜಿಹೋಗಬೇಕಾಗಿತ್ತು. ಅದೃಷ್ಟ : ಮಾಂಸ ಗೋರಿಕೊಂಡು ಹೋಗಿದೆ” ಎಂದು ಅವರ ಸಿದ್ದಾಂತ. ಆದರೂ ತಲೆಯಲ್ಲಿ ಏನಾದರೂ ಆಗಿದ್ದರೆ? ಎಂದು ಸಂಶಯವೇನೋ ಇದ್ದೇ ಇದೆ. ಜನರಲ್ ಚೆಕ್‌ಆಪ್‌ನಲ್ಲಿ ಏನೂ ತೋರಿಲ್ಲ. ಆದರೂ ಏನೋ ಹೇಗೋ? ಪ್ರಾಣೇಶನು ಬೆಂಗಳೂರಿಗೆ ಬಂದು ಎಂಟು ದಿನವಾಯಿತು. ದಿನವೂ ಮದರಾಸಿಗೆ ಟ್ರಂಕ್ ಕಾಲ್ ಹಾಕಿ ಸ್ನೇಹಿತನ ಯೋಗಕ್ಷೇಮ ವಿಚಾರಿಸುತ್ತಿದ್ದಾನೆ. ಎಲ್ಲರೂ ಗುಣಮುಖವಾಗಿದ್ದಾರೆ ಎಂದು ವರ್ತಮಾನ ಬರುತ್ತಿದೆ. ಆ ಗಾಬರಿಯಲ್ಲಿ ಬ್ಯಾಂಕ್ ವಿಚಾರ ಅವನಿಗೆ ಮರೆತೇಹೋಗಿತ್ತು. ಒಂದು ದಿನ ಪ್ರಾಣೇಶನು ಬೆಳಿಗ್ಗೆ ತನ್ನ ಡ್ರಾಯಿಂಗ್ ರೂಂನಲ್ಲಿ ಕಾಫಿ ಕುಡಿಯುತ್ತಾ ಕೂತಿದ್ದಾನೆ. ಕಾಫಿ ಕುಡಿದು ಮುಖಮಾಡಿಕೊಂಡು ಸ್ನಾನಕ್ಕೆ ಹೋಗಬೇಕು. ಬೆಳಗ್ಗಿನ ಪೇಪರ್ ಬಂತು. ದೊಡ್ಡಕ್ಷರಗಳಲ್ಲಿ ಎದ್ದು ಕಾಣಿಸುತ್ತಿದ್ದ ಬ್ಯಾನರ್ ಅವನ ಕಣ್ಣಿಗೆ ಬಿತ್ತು …..ಬ್ಯಾಂಕ್ ದಿವಾಳಿಯಾಯಿತು. ಅವನಿಗೆ ಜೀವ ಜಗ್ಗೆಂತು. ಹತ್ತು ದಿನದ ಹಿಂದೆಯೇ ಬಜಾರಿ ಸುದ್ದಿ ಕಿವಿಗೆ ಬಿದ್ದದ್ದೂ ತಾನು ವಿಚಾರಿಸಲಿಲ್ಲವಲ್ಲ ಎಂದು ಕರುಳು ಕಿವಿಚಿದಂತಾಯಿತು. ಒಂದು ವಿಚಿತ್ರವಾದ ಗಾಬರಿ ತಾನೇ ತಾನಾಯಿತು. ಥಟ್ಟನೆದ್ದು ಹೋಗಿ ಬ್ಯಾಂಕ್ ಮ್ಯಾನೇಜರ್ ಮನೆಗೆ ಫೋನ್ ಮಾಡಿದನು. “ಅವರು ಊರಲಿಲ್ಲ. ಹೆಡ್ ಆಫೀಸಿನಿಂದ ಕಾಲ್ ಬಂತು. ಅವರು ಹೋಗಿ ಎಂಟು ದಿನವಾಯಿತು. ನಿನ್ನೆ ಬ್ಯಾಂಕ್ ನಡೆಯಿತು. ಈ ದಿನ ಗೊತ್ತಿಲ್ಲ. ಅಸಿಸ್ಟೆಂಟ್ ಮ್ಯಾನೇಜರ್ ಛಾರ್ಜಿನಲ್ಲಿದ್ದಾರೆ’ ಎಂದು ತಿಳಿಯಿತು. ಕಾರಿನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಮನೆಗೆ ಓಡಿದನು. ಅವನೂ ಪೆಚ್ಚಾಗಿ ಕೂತಿದ್ದನು. ಬೆಳಗಿನ ಝಾವ ೫ ಗಂಟೆಗೆ ಅವನಿಗೆ ಎಕ್ಸ್‌ಪ್ರೆಸ್ ವೈರ್ ಬಂದಿತ್ತು. “ಇನ್ನು ಎಂಟು ದಿನ ಬ್ಯಾಂಕ್ ತೆಗೆಯಬೇಡಿ’ ಎಂದು. ಬೆಳಗಿನ ಪತ್ರಿಕೆಯಲ್ಲಿ ಬ್ಯಾಂಕಿನ ದಿವಾಳಿ ಸುದ್ದಿ. ಅಲ್ಲಿಂದ ಆಚೆಗೆ ಏನು ಕೇಳಿದರೂ “ನಾನು ಕಾಣೆ, ನನಗೆ ಗೊತ್ತಿಲ್ಲ, ತಿಳಿಯದು” ಎಂದು ಅಕೃತ್ರಿಮವಾದ ಸಹಜವಾದ ಸರಳವಾದ ಉತ್ತರ. “ಹಾಗಾದರೆ ಎಲ್ಲವೂ ಹೋದ ಹಾಗೆಯೇನೋ?” “ಅದು ಹೇಳುವಂತಿಲ್ಲ. ನಿನ್ನೆಯವರೆಗೆ ಏನೂ ಸುದ್ದಿಯಿಲ್ಲ, ಈ ದಿನ ಬೆಳಿಗ್ಗೆ ಹೀಗೆ ಸುದ್ದಿ. ಅಂತೂ ಎಂಟು ದಿನದ ಹಿಂದೆ ಬ್ರಾಂಚ್ ಮ್ಯಾನೇಜರ್‌ಗಳೆಲ್ಲ ಹೋಗಿದ್ದರು. ಅವರು ಬಂದ ಮೇಲೆ ಎಲ್ಲ ತಿಳಿಯಬೇಕು.” “ತಿಳಿಯುವುದಿರಲಿ, ಜನರಲ್ ಪೊಸಿಷನ್ ಹೇಗೆ?” ‘ಹಣ ಹೋಗುವುದಿಲ್ಲ. ರಿಸರ್ವ್ ಬ್ಯಾಂಕಿಗೆ ಸೇರಿದ ಬ್ಯಾಂಕ್, ಆದರೂ ಈಗ ಏನೂ ಹೇಳುವಂತಿಲ್ಲ.” ಪ್ರಾಣೇಶನಿಗೆ ಏನು ಹೇಳುವುದಕ್ಕೂ ತೋರದಿದ್ದರೂ ಇವನಿಂದ ಏನೂ ವರ್ತಮಾನ ತಿಳಿಯುವಂತಿಲ್ಲ, ಎನ್ನುವುದಂತೂ ತಿಳಿಯಿತು. ಅಲ್ಲಿಂದ ನೇರವಾಗಿ ಮನೆಗೆ ಬಂದನು. ದಾರಿಯುದ್ದಕ್ಕೂ ಒಂದೂವರೆ ಲಕ್ಷ ಮುದುಕನ ಒಂದು ಜೀವಮಾನದ ಸಂಪಾದನೆ. ಜೊತೆಗೆ ರಮೇಶನ ಹತ್ತು ವರುಷದ ಸಂಪಾದನೆ’ ಎಂದು ಒಂದು ಯೋಚನೆ. ಅದರ ಮಗ್ಗುಲಲ್ಲಿ ತನ್ನದು ಐವತ್ತು ಸಾವಿರ. ದೇವರಿಗಿಲ್ಲ ದಿಂಡರಿಗಿಲ್ಲ, ಇನ್ನೇನು ಮುಳುಗಿದ ಹಾಗೆ ತಾನೇ!’ ಎಂದು ಇನ್ನೊಂದು ಯೋಚನೆ. ಆಕಾಶ ಕಳಚಿ ತಲೆಯ ಮೇಲೆ ಬಿದ್ದ ಹಾಗೆ ಆಗಿದೆ. ತಲೆ ತಿರುಗುತ್ತದೆ. ಹೊಟ್ಟೆಯಲ್ಲಿ ಒಂದು ಗಾಡಿ ಸೌದೆ ಉರಿಯುತ್ತಿರುವಂತಿದೆ. ಯಾರಿಗೂ ಹೇಳಿಕೊಳ್ಳುವಂತೆಯೂ ಇಲ್ಲ ಮನೆಗೆ ಬಂದನು. ಆಫೀಸಿಗೆ ಫೋನ್ ಹೋಯಿತು. “ಈ ದಿನ ಬಹಳ ಇರಿಸುಮುರಿಸಾಗಿದೆ. ಈ ದಿನ ಆಫೀಸಿಗೆ ಬರುವುದಿಲ್ಲ’ ಎಂದು. ‘ಈ ಸುದ್ದಿ ರಮೇಶನಿಗೆ ತಿಳಿದರೆ?’ ಎನ್ನಿಸಿತು. ಇನ್ನೂ ಗಾಬರಿಯಾಯಿತು. ಕೂಡಲೆ ನರಸಿಂಹಯ್ಯನಿಗೆ ಟ್ರಂಕ್ ಕಾಲ್ ಹಾಕಿ, ಬ್ಯಾಂಕಿನ ಸುದ್ದಿ ಹೇಳಿ, ಈ ಸುದ್ದಿ ಸರ್ವ ಪ್ರಯತ್ನ ಮಾಡಿ ರಮೇಶನ ಕಿವಿಗೆ ಬೀಳದಂತೆ ನೋಡಿಕೊಳ್ಳಿ ವೀಣಾ ವಿಷಯವಾಗಿ ಇವೊತ್ತು ನಾಳೆ ಬಹಳ ಎಚ್ಚರಿಕೆ” ಎಂದು ಹೇಳಿದನು. ಇನ್ನಷ್ಟು ಹೊತ್ತಿನೊಳಗಾಗಿ ಪೋಸ್ಟ್ ಬಂತು. ಒಂದು ಎಕ್ಸ್‌ಪ್ರೆಸ್ ಲೆಟರ್.. ಮಧುರೆಯಿಂದ ಡ್ರೈವರ್ ಬರೆದದ್ದು “ದೊಡ್ಡ ರಾಯರು ಪ್ರಯಾಣ ಮಾಡಬಹುದು ಎಂದು ಡಾಕ್ಟರ್ ಹೇಳಿದ್ದಾರೆ. ಅಲ್ಲಿ ಮದರಾಸಿನಲ್ಲಿ ರಾಯರಿಗೆ ಕೊಂಚ ಗುಣಮುಖವಾಗಿದೆಯೆಂದು ನರಸಿಂಹಯ್ಯನವರು ಬರೆದಿದ್ದರು. ದೊಡ್ಡ ರಾಯರು ಅಲ್ಲಿಗೆ ಹೋಗಿ ಚಿಕ್ಕರಾಯರನ್ನು ನೋಡಿಕೊಂಡು ಬೆಂಗಳೂರಿಗೆ ಹೋಗುವುದು ಎಂದು ಯೋಚಿಸಿದ್ದಾರೆ. ನಾಳೆಯ ದಿನ ಮೆಯಿಲ್‌ನಲ್ಲಿ ಹೊರಡುವುದು ಎಂದು ಗೊತ್ತಾಗಿದೆ” ಎಂದು ಬರೆದಿತ್ತು ಕಾಗದ ಓದಿ ಪ್ರಾಣೇಶನು ನಿಟ್ಟುಸಿರು ಬಿಟ್ಟನು. “ಬ್ಯಾಂಕಿನ ವಿಷಯ ಮುದುಕನಿಗೆ ತಿಳಿದರೆ ಗತಿ ಏನು? ಅವನಿಗೋ ಪ್ರಾಣವೆಲ್ಲ ಹಣದ ಮೇಲೆ ಕೂತಿದೆ. ಹಣ ಹೋಯಿತು ಎಂದರೆ ಅವನ ಪ್ರಾಣ ಉಳಿಯೋದಿಲ್ಲ. ಅಂತೂ ಈಗ ಈ ರಹಸ್ಯ ಕಾಪಾಡದಿದ್ದರೆ ಎರಡು ಮೂರು ಪ್ರಾಣ ಹೋಗುತ್ತದೆ. ಆ ಪ್ರಾಣ ಕಾಪಾಡಬೇಕು.” ಮಧುರೆಗೆ ಒಂದು ಎಕ್ಸ್‌ಪ್ರೆಸ್ ಟೆಲಿಗ್ರಾಂ ಹೋಯಿತು. “ಇನ್ನು ಮೂರು ದಿವಸ ರಾಯರು ಅಲ್ಲಿಯೇ ಇರಬೇಕು. ಹೊರಗಿನ ಸಮಾಚಾರ ಅವರಿಗೆ ಏನೂ ತಿಳಿಯಕೂಡದು. ವಿವರಗಳಿಗೆ ಕಾಗದ ಬರುತ್ತದೆ.” ಮತ್ತೆ ಅದೇ ಯೋಚನೆ. ‘ಎಷ್ಟು ದಿವಸ ಮುದುಕನಿಗೆ ತಿಳಿಯದೆ ಇರಲು ಸಾಧ್ಯ? ಊರಿಗೆ ಊರೇ ಎದ್ದೆದ್ದು ಕುಣಿಯುತ್ತಿರುವಾಗ, ಈ ಸುದ್ದಿ ಆತನಿಗೆ ಮುಟ್ಟದಿರುವುದು ಹೇಗೆ? ಇಲ್ಲ. ರಮೇಶನ ಮೇಲೆ ದೇವರಿಗೆ ಏನೋ ಕೋಪ ಬಂದಿರಬೇಕು. ಇಲ್ಲದಿದ್ದರೆ ಹೀಗೆ ವಿಪರಂಪರೆ ಬರುತ್ತಿರಲಿಲ್ಲ. ಪ್ರಾಣದ ಮೇಲೆ ಬಂದಿತ್ತು; ಧನ ಹೋಯಿತು. ಇನ್ನೂ ಏನೇನು ಕಾದಿದೆಯೋ? ವಿಧಿಯೇ ವಿಪರೀತವಾಗಿರುವಾಗ ಮನುಷ್ಯ ತಡೆಯುವುದಾದರೂ ಹೇಗೆ? ರಮೇಶನು ಬದುಕಿ ಬಂದರೂ ಅವನು ಮತ್ತೆ ಪ್ರಾಕ್ಟಿಸ್‌ಗೆ ಬರುವುದಕ್ಕೆ ಎಷ್ಟು ದಿನ ಹಿಡಿದೀತೋ? ಆದರೂ ಉಪವಾಸದಿಂದ ಸಾಯಬೇಕಾಗಲ್ಲ. ಈಗ ಕನ್ಯಾ ಮಂದಿರಕ್ಕೆ ಕೊಟ್ಟಿರೋ ಬಂಗಲೆ ಬಿಟ್ಟ ಇನ್ನೂ ಒಂದು ಬಂಗಲೆ ಇದೆ. ಆದರೂ ಕಷ್ಟ! ಅವನ ವಿಚಾರ ನೋಡಿದರೆ ನಾನೇ ವಾಸಿ. ಸದ್ಯ ದೇವರು ಹಣ ಕಿತ್ತುಕೊಂಡರೂ ಗಟ್ಟಿಯಾಗಿಯಾದರೂ ಇದ್ದೇನೆ. ಸಂಪಾದನೆ ಇದೆ. ಹೇಗೋ ಮಾಡಿಕೊಂಡು ಹೋಗಬಹುದು. ರಮೇಶನಿಗೆ ಹೀಗಾಗಬಹುದೇ? ಅದೂ ಎಪ್ಪತ್ತು ಎಂಭತ್ತು ಸಾವಿರ ಧರ್ಮ ಮಾಡಿರುವಾಗ? ಇನ್ನು ಅವನು ಕನ್ಯಾ ಮಂದಿರ ನಡೆಸುವುದೂ ನಿಜವೇ?….’ ಎಂದು ಇನ್ನೂ ಏನೇನೋ ಯೋಚನೆಗಳು, ತಲೆ ಸಿಡಿದುಹೋಗುವಷ್ಟು. ಆದರೂ ತನ್ನ ಚಿಂತೆಗಿಂತ ಗೆಳೆಯನ ಚಿಂತೆಯೇ ಅವನಿಗೆ ಮಿಗಿಲಾಗಿಹೋಗಿದೆ. ಆ ರಾತ್ರಿಯಲ್ಲಿ ಹೀಗೆಯೇ ಯೋಚನೆ, ತಾನು ಯಾರೊಡನೆಯೂ ಹೇಳು ವಂತಿಲ್ಲ. ಸುಮಾರು ಒಂಭತ್ತು ಗಂಟೆಯಿರಬಹುದು. ಪ್ರಾಣೇಶನ ಹೆಂಡತಿ ಬಂದು ಮಂಚದ ಮೇಲೆ ಗಂಡನ ಮಗ್ಗುಲಲ್ಲಿ ಕುಳಿತುಕೊಂಡಳು. ಆ ದಿನ ಅವನಿಗೆ ಎರಡು ಹೊತ್ತೂ ಊಟವು ಸರಿಯಾಗಿಲ್ಲ. ತಿಂಡಿ ತಿನ್ನಲಿಲ್ಲ. ಅದರಿಂದ ಅವನಿಗೆ ಬಹಳ ಪ್ರಿಯವಾದ ಮೊಸರು ಬಾಳೇಹಣ್ಣು ತಂದಿದ್ದಾಳೆ. ಅದೂ ಅವನಿಗೆ ಬೇಡ. ಆದರೂ ಅವಳ ಬಲವಂತಕ್ಕೆ ಅಷ್ಟು ತೆಗೆದುಕೊಂಡಿದ್ದಾನೆ. ಅವಳಿಗೂ ಬ್ಯಾಂಕಿನ ವಿಷಯ ಗೊತ್ತು. ಆದರೆ ಆ ವಿಚಾರ ಗಂಡನ ಹತ್ತಿರ ಎತ್ತುವುದಾದರೂ ಹೇಗೆ? ಈಗ ಪ್ರಸ್ತಾಪ ಮಾಡಬೇಕು ಎಂದು ಮನಸ್ಸು. ಆದರೂ ಹಿಂದಲೇಟು. ಏಟು. ಧೈರ್ಯ ಮಾಡಿ ಅವಳೇ ಮಾತೆತ್ತಿದಳು. “ಈ ದಿನ ನಾನೂ ಪೇಪರ್ ಓದಿದೆ.” “250” “ಆಗಲೇ ನಿಮ್ಮನ್ನು ಕೇಳಬೇಕು ಎನ್ನಿಸಿತು.” “250” “ಬಹಳ ನಷ್ಟವಾಯಿತೇನು?” “ಹೋದರೆ ಒಂದು ಐವತ್ತು ಆದರೆ, ನಮಗಿಂತಲೂ ರಮೇಶನಿಗೆ ಭಾರಿ ಹಾಗೆನ್ನುತ್ತಿದ್ದ ಹಾಗೆಯೇ ಮಗ ಒಂದು ಟೆಲಿಗ್ರಾಂ ತಂದುಕೊಟ್ಟ. ಮಧುರೆಯಿಂದ ನಟೇಶನು ಕಳುಹಿಸಿದ್ದು, “ರಾಯರಿಗೆ ವರ್ತಮಾನ ತಿಳಿಯಿತು. ಮಂಚದಿಂದ ಬಿದ್ದು ಪ್ರಜ್ಞೆ ಹೋಗಿದೆ. ಉಪಚಾರ ನಡೆಯುತ್ತಿದೆ. ಕಾಗದ ಬರುತ್ತದೆ.” “ನೋಡಿದೆಯಾ? ಮುದುಕ ಉಳಿಯುತ್ತಾನೋ ಇಲ್ಲವೋ? ಈಗಿರುವ ಸ್ಥಿತಿಯಲ್ಲಿ ರಮೇಶನಿಗೆ ಈ ಸುದ್ದಿ ತಿಳಿದರೆ ಅವನು ಉಳಿಯುತ್ತಾನೋ ಇಲ್ಲವೋ? ಏನೋ ಎಂಡೋ? ನಮಗೆ ಹೋದರೆ ಹೋಗುವುದು ಹಣ ಮಾತ್ರ. ರಮೇಶನಿಗೆ ಎಲ್ಲಾ ಶತವೂ ನಾಶ.”
ಒಂದು ಭಾರಿಯ ನಿಟ್ಟುಸಿರು ಅವನು ಹೇಳಿದುದೆಲ್ಲ ನಿಜನಿಜ ಎಂದು ನಂಬಿಕೆ ಕೊಟ್ಟಿತು. ಅದನ್ನು ಕೇಳಿ ನರಸಮ್ಮನಿಗೂ ಸಂಕಟವಾಯಿತು: “ನಿಜ, ನೀವು ಮದರಾಸಿ ನಿಂದ ಬಂದು ಹೇಳಿದಾಗಲೇ ನನಗೆ ಇನ್ನು ಆ ಪುಣ್ಯಾತ್ಮ ಬದುಕಿ ಬರುತ್ತಾನೆಯೇ ಎನ್ನಿಸಿತು. ಈಗಂತೂ ಧೈರವೇ ತಪ್ಪಿಹೋಯಿತು. ನಮಗೆ ಹೇಗೆ?” “ನಮಗೇನು ಮಹಾ! ಅದೃಷ್ಟ ಇತ್ತು ಐವತ್ತು ಸಾವಿರಕ್ಕೆ ಇನ್ನೊಂದು ಬಂಗಲೆ ತೆಗೆದುಕೊಂಡೆವು. ಇಲ್ಲದೇ ಅದೂ ಬ್ಯಾಂಕಿನಲ್ಲೇ ಇದ್ದಿದ್ದರೆ ಅದೂ ಇದೇ ಗತಿಯಾಗುತ್ತಿತ್ತು ನನಗೆ ಪ್ರಾಕ್ಟಿಸ್ ಇದ್ದೇ ಇದೆ. ನಮಗೇನು? ಇರುವುದೆಲ್ಲ ರಮೇಶನಿಗೆ? ಈಗ ಬಿದ್ದಿರುವ ಏಟು ವಾಸಿಯಾಗಿ ಅವನು ಮತ್ತೆ ಮನುಷ್ಯನಾಗುವುದಕ್ಕೇ ಆರು ತಿಂಗಳು ಬೇಕು. ಅದಾದ ಮೇಲೆ ಅವನು ಕುದುರಿಕೊಳ್ಳುವುದಕ್ಕೆ ಇನ್ನು ಆರು ತಿಂಗಳು. ಅಂತೂ ಒಂದು ವರ್ಷ, ಈಗ ಈ ಬ್ಯಾಂಕಿನೇಟು. ಅಂತೂ ಅವನನ್ನು ಈಗ ನೋಡಿಕೊಳ್ಳಬೇಕು.” “ಏಕೆ ಅವರಿಗೇನು ಆಸ್ತಿ ಇಲ್ಲವೆ?” “ಇದೆ, ಎರಡು ಬಂಗ್ಲೆ ಇದೆ. ಮೂರನೆಯದು ಆ ಕನ್ಯಾ ಮಂದಿರಕ್ಕೆಂದು ಬಿಟ್ಟಿದ್ದಾನೆ. ಚಿನ್ನ ಬೆಳ್ಳಿ ಏನಿಲ್ಲ ಎಂದರೂ ಹತ್ತು ಹದಿನೈದು ಸಾವಿರ ಇದೆ. ಆದರೂ ಒಂದು ವರ್ಷ ಕೂತು ತಿನ್ನುವುದು ಎಂದರೆ ಸುಮ್ಮನಾಯಿತೆ?” ಅವರದು ಹೋದದ್ದು ಎಷ್ಟು?’ “ಒಂದೂವರೆ ಲಕ್ಷ ರೂ ಎರಡು ಲಕ್ಷ ಇತ್ತು ಐವತ್ತು ಸಾವಿರ ಮೊನ್ನೆ ಸರಕಾರಕ್ಕೆ ಕೊಟ್ಟ.” “ಅದಷ್ಟೂ ಬ್ಯಾಂಕಿನಲ್ಲಿ ಏಕೆ ಇಡಬೇಕು ಎಂದರೆ?” “ಆ ಮುದುಕನ ಹುಚ್ಚು. ಅವನಿಗೆ ದಿನಕ್ಕೊಂದು ಸಲ ಬ್ಯಾಂಕಿನ ಸರ್ಟಿಫಿಕೇಟ್ ನೋಡಿಕೊಳ್ಳುವ ಹುಚ್ಚು. ಭೂಮಿ-ಕಾಣಿ, ಮನೆ-ಮಠ ಮಾಡು ಎಂದರೆ ಆಗದು. ಎಲ್ಲಾ ನಾನು ಹೋದಮೇಲೆ. ನಾನು ಇರುವವರೆಗೂ ನಾನು ಸಂಪಾದಿಸಿದ್ದು ಎಂದು ಎದುರಿಗೆ ನಗದಾಗಿ ಇರಬೇಕು ಎನ್ನುತ್ತಿದ್ದ. ಈಗ ಎಲ್ಲವೂ ಸ್ವರ್ಗಕ್ಕೆ ನೇರವಾಗಿ ಹೊರಟುಹೋಯಿತು. ಮುದುಕನೂ ಅದರ ಹಿಂದೆಯೇ ಹೊರಟುಬಿಟ್ಟರೆ, ಎಲ್ಲಾ ಸರಿಹೋಯಿತು. ಈಗ, ಟೆಲಿಗ್ರಾಮೂ ಬಂದಿದೆ. ಇನ್ನು ನಾಳೆ ಅಲ್ಲಿಗೆ ಹೋಗಿ ಬರಬೇಕು. ಹೋಗಲಿ ಬಿಡು. ಆ ಸನ್ಯಾಸಿ ಹೇಳಿದ ಹಾಗೆ ಮಾಡಬೇಕಾಗಿತ್ತೋ ಏನೋ. ಇನ್ನು ನನಗೆ ಏನೇನು ಕಾದಿದೆಯೋ?” “ಬಿಡತೂ ಅನ್ನಿ, ನಾಳೆಯಿಂದ ಬೇಕಾದ್ದು ಆಗಲಿ, ನಾನು ದೇವರ ಪೂಜೆ ಮಾಡಿಸುತ್ತೇನೆ.’ “” “ಮಾಡಿಸು. ಇನ್ನೂ ನಮ್ಮ ಭಾಗ್ಯ ಉಳಿದೀರೋದು ಹೆಂಗುಸರಿಂದ ಅವರಿಗೂ ಇಷ್ಟೋ ಅಷ್ಟೋ ಈ ಕಾಲೇಜ್ ಹುಟ್ಟೂ ಹಿಡಿದು, ದೇವರು ದಿಂಡರು ಅನ್ನೋದು ತಪ್ಪಿದರೆ ಆಗ ಇಂಡಿಯದ ಹಣೇಬರಹ ಮುಗೀತು. ಇರಲಿ ಬಿಡು. ಈಗ ಯಾವ
ಮಾತು ಆಡಿದರೂ ವಕ್ರವಾಗುತ್ತಿದೆ. ನಿನಗೆ ತೋರಿದ ಹಾಗೆ ಮಾಡು. ನಾಳೆ ಕಾಗದ ನೋಡಿಕೊಂಡು ನಾನು ಮತ್ತೆ ಮಧುರೆಗೆ ಹೋಗಿಬರಬೇಕು.
ಮರುದಿನ ಬೆಳಗ್ಗೆ ಕಾಫಿ ಕುಡಿಯುತ್ತಿದ್ದ ಹಾಗೆಯೇ ಎಕ್ಸ್‌ಪ್ರೆಸ್ ಡಿಲಿವರಿ ಕಾಗದವು ಬಂದಿತು. “ದೊಡ್ಡ ರಾಯರಿಗೆ ಇದುವರೆಗೆ ಎರಡು ಗಂಟೆ ಪ್ರಜ್ಞೆ ಬಂದಿಲ್ಲ. ಡಾಕ್ಟರುಗಳು ಬಾಯಲ್ಲಿ ಹೇಳದಿದ್ದರೂ ಮುಖದಲ್ಲಿ ಗಾಬರಿ ತೋರಿಸುತ್ತಿದ್ದಾರೆ. ಸಾಧ್ಯಮಾಡಿಕೊಂಡು ಪ್ಲೇನ್‌ನಲ್ಲಿಯೇ ಬಂದುಬಿಡಿ. ನಟೇಶ್, ಪ್ರಾಣೇಶನು ಮಧುರೆಗೆ ಪ್ಲೇನಿನಲ್ಲಿ ಹೋದನು. ಮುರಳೀಧರರಾಯನ ಶವ ಡೆಡ್‌ಹೌಸಿಗೆ ಬಂದು ಎರಡು ಗಂಟೆಯಾಗಿತ್ತು ಅಲ್ಲಿ ನಡೆಸಬೇಕಾದ ವಿಧಿಗಳನ್ನೆಲ್ಲ ನಡಸಿ, ದೇಹಕ್ಕೆ ಅಂತ್ಯಕ್ರಿಯೆಯನ್ನು ಸಲ್ಲಿಸುವ ವೇಳೆಗೆ ಸುಮಾರು ನಾಲ್ಕು ಗಂಟೆಯಾಗಿತ್ತು. ಆಸ್ಪತ್ರೆಯ ಬಿಲ್ಲುಗಳನ್ನೆಲ್ಲಾ ಕೊಟ್ಟು ಇಬ್ಬರೂ ಮದರಾಸಿಗೆ ಹೋದರು. ಮದರಾಸಿನಲ್ಲಿ ಆ ದಿನ ರಮೇಶನಿಗೆ ಮೈಮೇಲೆ ಜ್ಞಾನ ಚೆನ್ನಾಗಿ ಬಂದಿದೆ. ಎಡಭಾಗದ ಮುಖವೆಲ್ಲ ಬ್ಯಾಂಡೇಜ್‌ನಲ್ಲಿ ಮುಳುಗಿದೆ. ಬಲಗಡೆಯ ಕಷ್ಟೊಂದು ಬಿಟ್ಟು ಹೆಂಡತಿ ಮಗಳ ಮುಖ ನೋಡಿ ನಕ್ಕಿದ್ದಾನೆ. ಆದರೆ ಇನ್ನೂ ಬಹಳ ನಿಶ್ಯಕ್ತಿ ಬಾಯಿ ಬಿಟ್ಟು ಮಾತನಾಡಲಾರ. ಮೋಹನೆಯು ಇಂದು ಎದ್ದು ಕುಳಿತಿದ್ದಾಳೆ. ಆದರೂ ಇನ್ನೂ ಹೊಲಿಗೆಯು ಭದ್ರವಾಗಿಲ್ಲ ಎಂದು ಎದ್ದು ಓಡಾಡುವಂತಿಲ್ಲ, ವೀಣಾ ಕೂಡ ಏಕೋ ಮಂಕಾಗಿಹೋಗಿದ್ದಾಳೆ. ಅವಳಿಗೆ ದಿನವೂ ಸಂಜೆ ಗಾಳಿ ಸವಾರಿ ಉಂಟು. ಅಕ್ಕಪಕ್ಕದ ವಾರಿನವರಿಗೆಲ್ಲ ಅವಳು ಅಚ್ಚುಮೆಚ್ಚಾಗಿ, ಅಲ್ಲೆಲ್ಲ ಸಂಗಾತಿಯರನ್ನು ಸಂಪಾದಿಸಿಕೊಂಡಿದ್ದಾಳೆ. ಆದರೂ ಮುಖದಲ್ಲಿ ಗೆಲುವಿಲ್ಲ. ರಮೇಶನಿಗೆ ಅದುವರೆಗೆ ಬಾಹ್ಯಪ್ರಜ್ಞೆಯೇ ಅಷ್ಟಾಗಿರಲಿಲ್ಲ. ಆ ದಿನ ಏನೇನು ನಡೆಯಿತು ಎಂಬುದನ್ನು ಹೇಳಲೋ ಬೇಡವೋ ಎನ್ನುವ ಹಾಗೆ ಮೋಹನೆಯೇ ಸೂಕ್ಷ್ಮವಾಗಿ ತಿಳಿಸಿದ್ದಾಳೆ. ಅವಳಿಗೂ ಮಾವನವರು ಮಧುರೆಯಲ್ಲಿದ್ದಾರೆಯೋ ಬೆಂಗಳೂರಿನಲ್ಲಿದ್ದಾರೆಯೋ ಅಷ್ಟು ಚೆನ್ನಾಗಿ ತಿಳಿಯದು. ನಟೇಶ್ ಪ್ರಾಣೇಶ್ ಇಬ್ಬರೂ ಮದರಾಸಿಗೆ ಬಂದವರು ನೇರವಾಗಿ ಆಸ್ಪತ್ರೆಗೆ ಹೋದರು. ನರಸಿಂಹಯ್ಯನು ವೀಣೆಯನ್ನು ಕರೆದುಕೊಂಡು ಸಮುದ್ರದ ಕಡೆ ಹೊರಡುವುದರಲ್ಲಿದ್ದಾನೆ. ಪ್ರಾಣೇಶನು ಅವನನ್ನು ಸಂಧಿಸಿದನು. ನರಸಿಂಹಯ್ಯನು ಒಬ್ಬನೇ ಬಂದು ಪ್ರಾಣೇಶನನ್ನು ನೋಡಿದನು. ಪ್ರಾಣೇಶನು ಉಸಿರು ಮೊಗಚದೆ ಕೇಳಿದನು: “ಬ್ಯಾಂಕ್ ವಿಚಾರ ರಮೇಶನಿಗೆ ತಿಳಿದಿದೆಯೇನು?” “ಎಲ್ಲಿ? ಇವೊತ್ತೇ ಅವರಿಗೆ ಚೆನ್ನಾಗಿ ಜ್ಞಾನ ಬಂದಿರುವುದು. ಆಕ್ಸಿಡೆಂಟ್ ವಿಚಾರ ಕೂಡ ಇವೊತ್ತು ಅಮ್ಮಾ ಅವರೇ ಸೂಕ್ಷ್ಮವಾಗಿ ಹೇಳಿದರು. ನಾನು ಕೂಡ ಬೆಳಗಿನಿಂದ ಮೊಕ ಸರಿಯಾಗಿ ತೋರಿಸಿಲ್ಲ. ಅಲ್ಲಿ ದೊಡ್ಡ ರಾಯರು ಹೇಗಿದ್ದಾರೆ?” “ಹೇಗೇನು ಇರುವುದು? ಎಲ್ಲಾ ಮುಗಿಯಿತು. “ಹಾಗಂದರೆ?” “ಅಗೋ, ನಟೇಶ್ ಬಂದಿದ್ದಾನೆ, ಕೇಳಿ.”
ನಟೇಶ್ ಎಲ್ಲವನ್ನೂ ಮೂರೇ ಮಾತಿನಲ್ಲಿ ಮುಗಿಸಿದನು. ಬ್ಯಾಂಕ್ ವಿಚಾರ ಕೇಳಿದರು. ಅಯ್ಯೋ ಎಂದು ಕಣ್ಮುಚ್ಚಿ ಹೊರಳಿದರು. ಮಂಚದಿಂದ ಕೆಳಗೆ ಬಿದ್ದರು. ಜ್ಞಾನ ತಪ್ಪಿತು. ತಿರುಗಿ ಜ್ಞಾನ ಬರಲಿಲ್ಲ. ಎಲ್ಲವೂ ಮುಗಿಯಿತು. “” ನರಸಿಂಹಯ್ಯನು ಸುಮ್ಮನೆ ನೆಲವನ್ನು ನೋಡುತ್ತ ನಿಂತುಕೊಂಡನು. ಅಷ್ಟು ಹೊತ್ತಾದ ಮೇಲೇ ಪ್ರಾಣೇಶನೇ ಮಾತನಾಡಿಸಿದನು: “ಈಗ ರಮೇಶ್ ಹೇಗಿದ್ದಾನೆ?” “ಈಗ ಕೊಂಚ ನಿದ್ದೆ ಬಂದಂತಿದೆ. ‘ನಡೆಯಿರಿ, ಹೋಗಿ ನೋಡಿಕೊಂಡು ಬರೋಣ. ನಟೇಶ್, ರಾಯರು ಬೆಂಗಳೂರಲ್ಲಿ ಸೌಖ್ಯವಾಗಿದ್ದಾರೆಯೆಂದು ಹೇಳು. ತಿಳೀತೆ?” “ಸರಿ ಸಾರ್.” ಮೂವರೂ ರಮೇಶನಿದ್ದ ವಾರ್ಡಿಗೆ ಹೋದರು. ಅವನಿಗೆ ಆಗ ತಾನೇ ನಿದ್ದೆ ಬಂದ ಹಾಗಿದೆ. ಮೋಹನೆಯ ಸುಮ್ಮನೆ ಬಿದ್ದುಕೊಂಡಿದ್ದಾಳೆ. ಇಬ್ಬರೂ ತೊಲೆಯ ತುಂಡಿನಂತಿದ್ದವರು ಒಣಗಿದ ಕಡ್ಡಿಗಳ ಹಾಗೆ ಆಗಿದ್ದಾರೆ. ಪ್ರಾಣೇಶನು ನೋಡಲಾರದೆ ತಲೆ ತಿರುಗಿಸಿಕೊಂಡನು. ನಟೇಶನು ಗೋಡೆಯ ಕಡೆ ತಿರುಗಿಕೊಂಡು ಅಳುತ್ತಾ ನಿಂತಿದ್ದನು. ನರಸಿಂಹಯ್ಯನು ಬಾಗಿಲಲ್ಲಿ ನಿಂತಿದ್ದನು. ಇವರು ಅಷ್ಟು ಹೊತ್ತು ಹಾಗೆ ನಿಂತಿರುವಾಗ ವೀಣಾ ಓಡಿಬಂದಳು. “ಏನು ನರಸಿಂಹಯ್ಯನವರೇ, ಎಲ್ಲಿ ಹೊರಟುಹೋದಿರಿ? ನಾನು ಆಸ್ಪತ್ರೆಯೆಲ್ಲಾ ಒಂದು ಸುತ್ತು ಹಾಕಿಬಿಟ್ಟೆ.” ನರಸಿಂಹಯ್ಯನು ಬರದಿದ್ದ ನಗುವನ್ನು ಬಲವಂತವಾಗಿ ಹಿಂಡಿ ಹಿಂಡಿ ತರುತ್ತ, “ನೀನು ಅತಕಡೆ ಎಲ್ಲೋ ಹೋದೆ. ನಾನು ಇಲ್ಲಿ ಬಂದು ಕಾದಿದ್ದೇನೆ. ಅಷ್ಟರಲ್ಲೇ ನಿಮ್ಮ ಮಾವ ಬಂದರು’ ಎಂದು ಪ್ರಾಣೇಶನನ್ನು ತೋರಿಸಿದನು. ವೀಣೆಯು ‘ಮಾವ” ಎಂದು ಸಣ್ಣಗೆ ಕೂಗಿ ಹಗುರವಾಗಿ ಬಂದು ಅವನ ಕೈ ಹಿಡಿದುಕೊಂಡಳು. ಅವಳು ಕೂಗಿದುದು ಕೇಳಿ ಮೋಹನೆಯೂ ಮುಸುಕು ತೆಗೆದು ಎದ್ದು ಕೂತುಕೊಂಡಳು. ಪ್ರಾಣೇಶನು ವೀಣೆಯನ್ನು ವಿಶ್ವಾಸದಿಂದ ಎಳೆದುಕೊಂಡು ಚೆನ್ನಾಗಿದ್ದೀಯಾ? ಅಪ್ಪಾ ಅಮ್ಮಾ ಹೇಗಿದ್ದಾರೆ?” ಎಂದು ಕೇಳಿದನು. ವೀಣೆಯು ಅಪ್ಪಾ ಮಲಗಿದ್ದಾರೆ. ಅಮ್ಮಾ ಅದೋ!” ಎಂದು ತೋರಿಸಿದಳು. ಪ್ರಾಣೇಶನು ಬಂದು ಮೋಹನೆಯನ್ನು ಮಾತನಾಡಿಸಿದನು. ತನ್ನವರು ಎಂದು ಬಂದು ಮಾತನಾಡಿಸಿಯಾರೇ ಎಂದು ಹಂಬಲಿಸುತ್ತಿದ್ದ ಮೋಹನೆಗೆ ಪ್ರಾಣೇಶನ ಮುಖವನ್ನು ಕಂಡು ಅಳು ಬಂದುಬಿಟ್ಟಿತು. ಕಣ್ಣೀರನ್ನು ಹಾಗೇ ವರಸಿಕೊಳ್ಳುತ್ತಾ “ಯಾವಾಗ ಬಂದಿರಿ? ಮಾವ ಹೇಗಿದ್ದಾರೆ? ಎಲ್ಲಿದ್ದಾರೆ?” ಎಂದು ಕೇಳಿದಳು. “ಮಾವ ಊರಿಗೆ ಬಂದರು, ಚೆನ್ನಾಗಿದ್ದಾರೆ. ಇನ್ನೂ ಸುಸ್ತು ಇಲ್ಲದಿದ್ದರೆ ಅವರನ್ನೂ ಕರೆದುಕೊಂಡು ಬರುತ್ತಿದ್ದೆ. ನೀನು ಹೇಗಿದ್ದೀಯಮ್ಮಾ?” “ಸುಸ್ತು ಮಾತನಾಡಲು ಆಗುವುದಿಲ್ಲ. ಬಾರದು ಅಂತ ಡಾಕ್ಟರು ಹೇಳಿದ್ದಾರೆ.”
ಆ ದಿನ “ಈ ಸಲಕ್ಕೆ ನೀನೇ ಪುಣ್ಯವಂತೆ ! ಗಂಡನ್ನ ಉಳಿಸಿಕೊಂಡೆ. ನೋಡಿದಾಗ ಇವನು ಉಳಿದಾನೇ ಎನ್ನಿಸಿ ನನಗೆ ದೊಡ್ಡ ಪ್ರಾಣ ಹಾರಿಹೋಗಿತ್ತು” “ನೋಡಿ, ಆ ಬ್ಯಾಂಡೇಜ್ ಯಾವೊತ್ತು ತೆಗೆಯುತ್ತಾರೋ ಪುಣ್ಯಾತ್ಮರೆ! ನನಗೆ ಜೀವ ಬೇಡಾಗದೆ, ಈ ಮಗೂಗೋಸ್ಕರ ಬದುಕಿರಬೇಕು, ಅಷ್ಟೇ!” “ಹಾಗೆಲ್ಲ ಅನ್ನಬಾದು ಮೋಹನಾಬಾಯಿ. ಇನ್ನೂ ನೀನು ಸಣ್ಣಪುಟ್ಟವಳು. ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ ವಿಪತ್ತು ಅನ್ನೋದು? ರಮೇಶ ಮಲಗಿದ್ದಾನೇನು?” “ಹೌದು. ನಿದ್ದೆಯಿಲ್ಲ, ಮಂಪರ.” “ಆಗಲಿ, ನಾವು ಹೋಗಿ ಸುತ್ತಿ ಬರುತ್ತೇವೆ, ಆ ವೇಳೆಗೆ ನಟೇಶ್ ಬಂದು ನಿಂತುಕೊಂಡನು. ಮೋಹನೆಯೇ ಮಾತನಾಡಿಸಿದಳು: “ಚೆನ್ನಾಗಿದ್ದೀಯಾ? ಅವೊತ್ತು ನಿನಗೇನೂ ಆಗಲಿಲ್ಲವಲ್ಲ?” ನಟೇಶನಿಗೂ ಎಡಗೈಗೆ ಏಟು ಬಿದ್ದಿತು, ದೊಡ್ಡ ಗಾಯವಾಗಿತ್ತು. ಅದೆಲ್ಲ ಗುಣವಾಗಿತ್ತು. ಆದರೂ ಇನ್ನೂ ಕೆಂಪಗೆ ಕಲೆ ಒಂದು ಗೇಣುದ್ದವಿತ್ತು. ನಟೇಶ್ ಅದನ್ನು ತೋರಿಸಿದನು. ಮೋಹನೆಯು “ಅಯ್ಯೋ ಪಾಪ, ನಮ್ಮ ಜೊತೆಯಲ್ಲಿ ನಿನಗೂ ವಿಪತ್ತು ಬಂತು. ಹೋಗಲಿ, ಗುಣವಾಯಿತಲ್ಲ!” ಎಂದಳು. ನಟೇಶನು “ತಮ್ಮ ವಿಪತ್ತಿನ ಮುಂದೆ ನಮ್ಮದೇನಲ್ಲ ತಾಯಿ, ತಮಗೆ ರಾಯರಿಗೆ ಹೇಳಿ’ ಎಂದು ತನ್ನ ಕಷ್ಟವನ್ನು ತೇಲಿಸಿಕೊಂಡನು. ( “ನಿನ್ನ ಹೆಂಡತಿ ಮಕ್ಕಳು ಚೆನ್ನಾಗಿದ್ದಾರಾ?” “ಹೂ, ತಾಯಿ-ಚೆನ್ನಾಗಿದ್ದಾರೆ.” “ಎಲ್ಲಿಂದ ಬಂದೆ?” ಮಧುರೆ-ಅಲ್ಲ-ಬೆಂಗಳೂರಿಂದ, ದೊಡ್ಡರಾಯರನ್ನು ಅಲ್ಲಿ ಬಿಟ್ಟು ಬಂದೊ? “JO?” “ಬೆಂಗಳೂರಲ್ಲಿ” “ಅವರನ್ನು ಯಾರು ನೋಡಿಕೊಳ್ಳುತ್ತಿದ್ದಾರೆ?” ನಟೇಶನು ಅದಕ್ಕೆ ಸಿದ್ಧನಾಗಿರಲಿಲ್ಲ. ಪ್ರಾಣೇಶನ ಕಡೆ ನೋಡಿದನು. ಪ್ರಾಣೇಶನು “ನಮ್ಮ ಜೂನಿಯರ್‌ಗೆ ಒಪ್ಪಿಸಿದ್ದೇನೆ. ಏನೂ ದಿಗಿಲಿಲ್ಲ. ನಟೇಶ್ ಅಲ್ಲಿ ಇರುವವರೆಗೂ ಮೈಯೆಲ್ಲ ಕಣ್ಣಾಗಿ ನೋಡಿಕೊಳ್ಳುತ್ತಿದ್ದ. ಈಗ ಅವರು ನೋಡಿಕೊಳ್ಳುತ್ತಾರೆ, ನಾವೂ ನಾಳೆ ನಾಡಿದ್ದು ಹೋಗುತ್ತೇವಲ್ಲ.” ಆ ವೇಳೆಗೆ ಡಾಕ್ಟರ್ ಬಂದರು. ಪ್ರಾಣೇಶನೂ ಡಾಕ್ಟರೂ ಮಾತನಾಡಿಕೊಂಡರು. ಡಾಕ್ಟರು ಹೇಳಿದರು: “ಆ ಹೆಂಗಸು ಬದುಕಿಕೊಂಡರು. ಇನ್ನು ಹದಿನೈದು ದಿನದಲ್ಲಿ ಅವರು ಎದ್ದು ತಿರುಗುತ್ತಾರೆ. ಆದರೆ ಆ ಗಂಡಸು, ಅವರಿಗೆ ಇನ್ನು ಎರಡು ತಿಂಗಳಾದರೂ ಬೇಕು. ಎಡಗಣ್ಣಿನದು ಖಾತರಿ ಇಲ್ಲ, ಮೊಕ ವಿಕಾರವಾಗದ ಹಾಗೆ ನಾವೂ ಏನೇನೋ ಮಾಡಿದ್ದೇವೆ. ಆದರೂ ಮೊದಲಿನ ಹಾಗೆ ಇರುವುದಿಲ್ಲ. ಬ್ರೆಯಿನ್‌ಗೆ ಏನಾದರೂ ಏಟು ತಗಲಿದ್ದರೆ ಹೇಳುವಂತಿಲ್ಲ. ಇವೊತ್ತು ಚೆನ್ನಾಗಿ ಜ್ಞಾನ ಬಂದಿತ್ತು ಎನ್ನುತ್ತಾರೆ. ನನಗೆ ನಂಬಿಕೆಯಿಲ್ಲ. ನಾಳೆ ನೋಡಿ ಹೇಳುತ್ತೇನೆ. “” “ಹಾಗಾದರೆ ನಿಮಗೆ ಏನೋ ಸಂದೇಹವಿದೆ?” “ಹೌದು.” “ನನ್ನ ಕೈಯಲ್ಲಿ ಹೇಳಬಹುದಲ್ಲ.’ “ಬಹುಶಃ ಬ್ರೆಯಿನ್‌ಗೆ ಏಟು ಬಿದ್ದಿದೆ. ಹೆಂಡತಿ ಮಕ್ಕಳ ಗುರುತು ಹಿಡಿಯುವುದೂ ಕಷ್ಟವಾದೀತು. ಈ ಪೇಷೆಂಟು ಬದುಕಿದರೂ ಅವನಿಗೆ ಸುಖವಿಲ್ಲ.” ಪ್ರಾಣೇಶನಿಗೆ ಕಣ್ಣುಕತ್ತಲೆ ಕಟ್ಟಿಕೊಂಡು ಬಂತು. ಆದರೆ ಏನು ಮಾಡಬೇಕು? ಕಣ್ಣಲ್ಲಿ ನೀರು ಬಂತು. ಡಾಕ್ಟರ ಕೈಹಿಡಿದುಕೊಂಡು ಹೇಳಿದನು: “ಡಾಕ್ಟರ್, ಇವನು ಮೊದಲಿನಂತಾದರೆ ಹೈಕೋರ್ಟ್ ಬೆಂಚಿಗೆ ಹೋಗುತ್ತಾನೆ. ಏನಾದರೂ ಮಾಡಿ ಬದುಕಿಸಿ, ಏನು ಖರ್ಚಾದರೂ ಚಿಂತೆಯಿಲ್ಲ.’ “ನಿಮ್ಮ ಹೆಸರೇನು?” ಪ್ರಾಣೇಶನು ಕಾರ್ಡು ತೆಗೆದುಕೊಟ್ಟನು. ಡಾಕ್ಟರ್ ನೋಡಿಕೊಂಡು, ಹೇಳಿದನು: “ಮಿಸ್ಟರ್ ಪ್ರಾಣೇಶ್, ನಾನು ಇದುವರೆಗೆ ಏನೇನು ಮಾಡಬಹುದೋ ಎಲ್ಲ ಮಾಡಿದ್ದೇನೆ. ಆದರೆ ನಾನೇ ಕೊನೆಯಲ್ಲ. ಆಗಲಿ, ನಾವು ಡಾಕ್ಟರು. ನಿಮ್ಮ ಹಾಗೇ ಜಡ್ಜ್‌ಮೆಂಟ್ ಆಗುವವರೆಗೂ ನಂಬಿಕೆ ಬಿಡುವುದಿಲ್ಲ, ಬದುಕಿದರೂ ಹಿಂದಿನಂತೆ ಇರುತ್ತಾನೆ ಎನ್ನುವ ಆಶೆ ಮಾತ್ರ ಬಿಡಿ.” ಡಾಕ್ಟರು ಪೆಚ್ಚು ನಗೆ ನಕ್ಕು ಮುಂದೆ ಹೋದರು. ಪ್ರಾಣೇಶನು ವೀಣೆಯನ್ನು ಕರೆದುಕೊಂಡು ಹೋಗುವಂತೆ ನಟೇಶನಿಗೊಪ್ಪಿಸಿ, ನರಸಿಂಹಯ್ಯನನ್ನು ಕರೆದುಕೊಂಡು ತಾವು ಎತ್ತಲೋ ಹೋದರು. ಡಾಕ್ಟರು ಹೇಳಿದ್ದಂತೆಯೇ ರಮೇಶನು ಎದ್ದು ಕುಳಿತುಕೊಳ್ಳುವ ವೇಳೆಗೆ ಎರಡು ತಿಂಗಳು ಹಿಡಿಯಿತು. ಆಗಲೂ ಇನ್ನೂ ಆಯಾಸ, ಎದುರಿನವರನ್ನು ಸುಮ್ಮನೆ ದುರುಗುಟ್ಟಿಕೊಂಡು ನೋಡುವನು. ಹತ್ತು ಮಾತಿಗೆ ಯಾವದಾದರೊಂದು ಮಾತು ಉತ್ತರಕೊಡುವನು. ಆಗ ನೋಡಿದ್ದು ಈಗ ನೋಡಿದವರಿಗೆ ‘ರಮೇಶನ ದೇಹದಲ್ಲಿ ಇನ್ನು ಯಾವುದೋ ಮಡೆಯನ ಆತ್ಮ ಬಂದು ಸೇರಿಕೊಂಡಿದೆ’ ಎನ್ನಿಸುವುದು. ಮೋಹನೆಯು ಪ್ರಕೃತಿಸ್ಥಳಾದಳು. ಈಗ ವೀಣೆಗೆ ಬೇರೆ ಇನ್ನೇನೂ ಬೇಕಾಗಿಲ್ಲ. ತಂದೆಯ ಜೊತೆಯಲ್ಲಿದ್ದು ಆತನಿಗೆ ಪ್ರಿಯವಾಗುವಂತೆ ಏನಾದರೂ ಮಾಡಿಕೊಂಡಿರುವುದು. ದಿನಕ್ಕೆ ಒಂದೆರಡು ಸಲವಾದರೂ ತಾತನನ್ನು ನೆನೆಸಿಕೊಳ್ಳುವಳು. ‘ತಾತನಿಂದ ಕಾಗದವೂ ಬರಲಿಲ್ಲವಲ್ಲ ಎನ್ನುವಳು. ಒಂದು ದಿನ ಅವಳ ಬಲವಂತಕ್ಕೆ ಒಂದು ಟೆಲಿಗ್ರಾಂ ಕೂಡ ಬೆಂಗಳೂರಿಗೆ ಹೋಯಿತು. ಇನ್ನೊಂದು ಸಲ ತನ್ನೊಡನೆ ಮಾತನಾಡಲು ಟೆಲಿಫೋನ್ ಬಳಿಗಾದರೂ ಬರಲಿ, ಕರೆಯಿಸಿ ಮಾವ” ಎಂದು ಹಟ ಹಿಡಿದಳು. ಆದರೂ ಏನೂ ಫಲವಾಗಲಿಲ್ಲ. “” ಇಲ್ಲಿ ಪ್ರಾಣೇಶನಿಗೆ ಪ್ರಾಣ ಸಂಕಟ. ಮುರಳೀಧರರಾಯನು ಹೋಗಿಬಿಟ್ಟನೆಂದು ರಮೇಶನಿಗೆ ತಿಳಿಸುವುದು ಹೇಗೆ? ಅಬ್ಬಬ್ಬಾ ಎಂದರೆ ಇನ್ನೊಂದು ಹದಿನೈದು ದಿನ ತಪ್ಪಿದರೆ ತಿಂಗಳೊಳಗೆ ರಮೇಶನು ಬೆಂಗಳೂರಿಗೆ ಬರುವನು. ತಿಳಿಯದಿರುವುದು ಹೇಗೆ? ಆಗಲಾದರೂ ಅದಕ್ಕಿಂತಲೂ ಹೆಚ್ಚಾದ ಕಷ್ಟ ಬ್ಯಾಂಕಿನ ಸುದ್ದಿ. ಅದು ತಿಳಿದರೆ ಅಪ್ಪನ ಹಾಗೆ ಮಗನೂ ಎದೆ ಒಡೆದು ಸತ್ತುಹೋದರೆ ? ಪ್ರಾಣೇಶನು ನಿಜವಾಗಿಯೂ ಬುದ್ಧಿವಂತನಾದ ಲಾಯರು. ಆದರೂ ಏನು ಮಾಡಬೇಕೋ ಅವನಿಗೆ ತಿಳಿಯಲಿಲ್ಲ. ಕೊನೆಗೆ ಬೇಕಾದುದು ಆಗಲಿ, ಎಂದು ಒಂದು ಕಾಗದವನ್ನು ಮೋಹನೆಯ ಹೆಸರಿಗೆ ಬರೆದು ಹಾಕಿದನು. “ತಂಗಿ, ಈ ಕಾಗದವನ್ನು ಏಕಾಂತವಾಗಿದ್ದಾಗ ಓದಿಕೊ, ಮುಂದೆ ಹೇಗೆ ನಡೆಯಬೇಕೋ ಅದನ್ನು ನೀನೇ ನಿರ್ಧರಿಸಿಕೊ, ಗಂಡುಸರಿಗಿಂತ ಹೆಂಗುಸರ ಬುದ್ಧಿ ಚುರುಕು ಎಂದು ಕೇಳಿದ್ದೇನೆ. ಅದು ನಿಜವಾಗಲಿ, ನೀನೀಗ ಎಷ್ಟು ಜಾಗರೂಕತೆಯಿಂದ ವರ್ತಿಸಿದರೆ ಅಷ್ಟು ಒಳ್ಳೆಯದು. ನಿಮ್ಮ ಮಾವನವರು ಮುರುಳೀಧರರಾಯರು ಸ್ವರ್ಗಸ್ಥರಾಗಿ ಇಂದಿಗೆ ಮೂರು ತಿಂಗಳಾಯಿತು. ಅವರು ಮಧುರೆಯಲ್ಲಿಯೇ ಹೋಗಿಬಿಟ್ಟರು. ಆವಾಗ ನಟೇಶ್ ಅವರ ಬಳಿಯಲ್ಲಿಯೇ ಇದ್ದ ನಾನು ಅವರ ಪ್ರಾಣ ಹೋದ ಎರಡು ಮೂರು ಗಂಟೆಗಳೊಳಗಾಗಿ ಅಲ್ಲಿಗೆ ಹೋದೆ. ಇಬ್ಬರೂ ಅವರಿಗೆ ಆಗಬೇಕಾದ ಕಾರಗಳನ್ನೆಲ್ಲಾ ಮಾಡಿಸಿದೆವು. ಉಳಿದ ಕರ್ಮಗಳೂ ಸಾಂಗವಾಗಿ ಈ ಊರಿನಲ್ಲಿಯೇ ನೆರವೇರಿತು. ಇದನ್ನು ನಿಮಗೆ ಆಗಲೇ ತಿಳಿಸುವುದಕ್ಕೆ ಸಾಧ್ಯವಿರಲಿಲ್ಲ. ಅದರಿಂದ ತಿಳಿಸಲಿಲ್ಲ, ವೀಣಾಗೆ ಹೇಳದಿದ್ದರೆ ಸರಿಯಲ್ಲ. ಅದರಿಂದ ಹೇಳಲೇ ಹೇಳು, ನಿನ್ನ ಗಂಡನಿಗೆ ಹೇಗೆ ತಿಳಿಸುವುದೋ ನಾನು ಕಾಣೆ. ಸಮಯ ನೋಡಿ ಹೇಳು. ಅನರ್ಥವಾಗುವ ಹಾಗಿದ್ದರೆ ತಿಳಿಸಬೇಡ. ಇದುವರೆಗೆ ತಿಳಿಸದಿದ್ದ ತಪ್ಪು ಕ್ಷಮಿಸು, ಯಾವೊತ್ತು ಬರುವಿರೋ ಬರೆ ನಾನೇ ಬಂದು ಕರೆದುಕೊಂಡು ಬರುತ್ತೇನೆ. ಇತಿ, ನಿನ್ನ ಸೋದರ ಪ್ರಾಣೇಶ.” ಮೋಹನೆಯು ಕಾಗದವನ್ನು ಓದಿಕೊಂಡಳು. ಅವಳಿಗೆ ಆಗಲೇ ಮನಸ್ಸಿನಲ್ಲಿ ಹೀಗಾಗಿರಬೇಕೆಂದು ಒಂದು ನೆರಳಿನ ಹಾಗೆ ಒಂದು ಭಾವ ಸುಳಿದಿತ್ತು ತಮಗೊಸ್ಕರ ವಲ್ಲದಿದ್ದರು ಮುದುಕ ಮೊಮ್ಮಗಳಿಗೋಸ್ಕರವಾದರೂ ಬರಬೇಕಾಗಿತ್ತು, ಅಥವಾ ಒಂದು ಸಲವಾದರೂ ಕರೆಸಿಕೊಳ್ಳಬೇಕಾಗಿತ್ತು ಎರಡೂ ಇಲ್ಲದಿರುವುದನ್ನು ನೋಡಿ, ಅವಳ ಮನಸ್ಸಿನಲ್ಲಿ ಸಂಶಯ ಮೂಡಿತ್ತು ಕಾಗದವನ್ನು ಓದಿ ಅತ್ತಳು. ಗಟ್ಟಿಯಾಗಿ ಅಳುವಂತಿಲ್ಲ. ನೀರವವಾಗಿ ಆಸ್ಪತ್ರೆಯ
ಒಂದು ಮೂಲೆಯಲ್ಲಿ ನಿಂತು ಅತ್ತಳು. ಬಂದು ಹೋಗುವ ಜನ ಬೇಕಾದ ಹಾಗಿದ್ದರೂ ಇವಳನ್ನು ಕೇಳಲಿಲ್ಲ. ‘ನೋಡಿದೆಯಾ? ನನ್ನ ಗತಿ ಹೇಗಾಯಿತು? ತವರಿನಲ್ಲಿ ನೀನೇ ಎನ್ನುವರಿಲ್ಲ. ಏನೋ ಮುತ್ತಿನಂಥ ಗಂಡ ಸಿಕ್ಕಿದ ಎಂದುಕೊಂಡು ಹಾಯಾಗಿದ್ದರೆ, ಈ ತೀರ್ಥಯಾತ್ರೆಯ ನೆಪದಲ್ಲಿ ಮೃತ್ಯು ಬಂದು ಹೀಗಾಯಿತು. ಮಾವ ಹೋದರು. ಗಂಡ ಹೀಗಾದರು ಇನ್ನು ಈ ಮಗು ಕಟ್ಟಿಕೊಂಡು ನಾನು ಕಾಲಹಾಕಬೇಕೆಂದರೆ, ನನ್ನ ಹಣೆಯ ಬರಹ ಎಂಥದು’ ಎಂದು ಬಹಳ ಸಂಕಟಪಟ್ಟಳು. ಆದರೂ ತಾನು ಏನು ಮಾಡಬಹುದು? ಬಂದುದು ಬರಲಿ ಎಂದು ಧೈಯ್ಯಮಾಡಲಾರಳು. ಬಂದುದನ್ನು ಅನುಭವಿಸಲಾರಳು. ಅವಳಿಗೆ ಏನೋ ಅಯ್ಯ ತಟ್ಟಿ ಗಡಗಡನೆ ನಡುಗಿದಳು. ಬೆಳಗಿನ ಹತ್ತು ಗಂಟೆ. ಬಿಸಿಲಿನಲ್ಲಿಯೇ ನಿಂತಿದ್ದಾಳೆ. ಆದರೂ ಚಳಿಬಂದ ಹಾಗೆ ನಡುಗುತ್ತಿದ್ದಾಳೆ. ವೀಣಾ ಬಂದು ಮಗ್ಗುಲಲ್ಲಿ ನಿಂತಿರುವುದೂ ಅವಳಿಗೆ ತಿಳಿಯದು. ಕಣ್ಣಲ್ಲಿ ನೀರು ಉದುರುತ್ತಿವೆ. ಕೈಕಾಲು ಕೂಡ ಗಡಗಡ ನಡುಗುತ್ತಿದೆ. ಕೈಯಲ್ಲಿದ್ದ ಕಾಗದ ಕೆಳಕ್ಕೆ ಬಿದ್ದುಹೋಯಿತು. ಅದೂ ಕೂಡ ಅವಳಿಗೆ ತಿಳಿಯದು. ವೀಣಾ ತಾಯಿಯ ಸ್ಥಿತಿಯಲ್ಲಿ ಕಂಡು ಗಾಬರಿಯಾದಳು. ಏಕೋ ಮಾತಾಡಿಸ ಲಿಲ್ಲ. ಕೈಯಿಂದ ಬಿದ್ದ ಕಾಗದವನ್ನು ತೆಗೆದುಕೊಂಡಳು, ತೆಗೆದಳು; ಓದಿದಳು. ಅವಳಿಗೂ ಅಳು ಬಂತು. ಬಿದ್ದು ಬಿದ್ದು ಹೊರಳಿಹೊರಳಿ ಅಳಬೇಕು ಎನ್ನಿಸಿತು. ತನ್ನನ್ನು ಮುದ್ದಿಸುತ್ತಿದ್ದ ತಾತ ಮತ್ತೊಮ್ಮೆ ಬಂದು ಎದುರು ನಿಂತು ‘ಏನು, ವೀಣಾ, ಮುದುಕ ಸತ್ತ ಅಂದರೂ ಅಳಬೇಡವೋ?’ ಎಂದು ಕೇಳಿದ ಹಾಗಾಯಿತು. ಹಾಗೆಯೇ ಆ ಕೈಪಿಡಿಯ ಗೋಡೆಯ ಅಂಚಿನಲ್ಲಿಯೇ ಲಂಗದ ಮರೆಯಲ್ಲಿಯೇ ಅತ್ತು, ಕಣ್ಣೀರು ಒರೆಸಿಕೊಂಡು “ಅಮ್ಮ” ಎಂದಳು. ಮೋಹನೆಯು ಬೆಚ್ಚಿಬಿದ್ದಳು. ತನ್ನ ಕೈಯಲ್ಲಿರಬೇಕಾಗಿದ್ದ ಕಾಗದ ಪತ್ರ ಅವಳ ಕೈಯಲ್ಲಿರುವುದನ್ನು ಕಂಡಳು. ಅವಳು ಓದಿಯೂ ಇರಬೇಕೆಂದು ತಿಳಿಯಿತು. ನೀರು ತುಂಬಿದ ಕಣ್ಣನ್ನು ಅಗಲವಾಗಿ ತೆರೆದು ಮಗಳ ಕಡೆ ನೋಡಿದಳು. ಮಗಳು ನೀರವವಾಗಿ ಅಳುತ್ತ, ಅಳುವನ್ನೆಲ್ಲ ನುಂಗುತ್ತ ತುಟಿಗಳನ್ನು ಭದ್ರವಾಗಿ ಕಚ್ಚಿಕೊಳ್ಳುತ್ತ, ಕಷ್ಟದಿಂದ ನುಡಿಯುತ್ತ, ‘ಅಮ್ಮ, ಇದನ್ನು ಅಣ್ಣನಿಗೆ ಹೇಳಬೇಡ” ಎಂದು ತಾಯಿಯ ಕೈಗೆ ಕಾಗದವನ್ನು ಕೊಟ್ಟು, ಅಲ್ಲಿ ನಿಲ್ಲದೆ ಹೊರಟುಹೋದಳು. ಕಾಗದ ಬಂದು ಹದಿನೈದು ದಿನವಾಯಿತು. ಈಗ ಎಂಟು ದಿನದಿಂದ ರಮೇಶನಿಗೆ ಮತ್ತೆ ದೇಹಸ್ವಾಸ್ಥ್ಯ ತಪ್ಪಿದೆ. ದಿನದಿನಕ್ಕೆ ಇಳಿದು ಹೋಗುತ್ತಿದ್ದಾನೆ. ಇಳಿದು ಹೋಗುತ್ತಿರುವುದು ಬರಿಯ ಕಣ್ಣಿಗೇ ಕಾಣಿಸುತ್ತಿದೆ. ಡಾಕ್ಟರು ತೂಕಮಾಡಿ ನೋಡಿದರು. ದಿನಕ್ಕೆ ಸುಮಾರು ಐದಾರು ಪೌಂಡು ಇಳಿದು ಹೋಗುತ್ತಿರುವಂತಿದೆ. ಸಂಜೆಯ ಹೊತ್ತು ಬಂದು ಎರಡುಮೂರು ಸಲ ಪರೀಕ್ಷೆಮಾಡಿ ನೋಡಿದರು. ಮೋಹನೆಯನ್ನು ಕರೆದು “ನಿಮ್ಮವರನ್ನು ಕರೆಸಿ, ಇನ್ನೊಂದು ಸಲ ಎಗ್ಗಾಮಿನ್ ಮಾಡಬೇಕು” ಎಂದರು.
ಪ್ರಾಣೇಶನು ಮರುದಿನ ಪ್ಲೇನಿನಲ್ಲಿ ಬಂದನು. ಅಂದಿನ ಸಾಯಂಕಾಲ ಡಾಕ್ಟರು ಅವನನ್ನು ಪ್ರತ್ಯೇಕವಾಗಿ ಕರೆದು “ಟಿ.ಬಿ. ಅನ್ನುವ ಹಾಗಿದೆ. ನಾಳೆ ಪರೀಕ್ಷೆಮಾಡಿಸಿ. ಅದೂ ಕೆಟ್ಟ ಜಾತಿಯದು. ಗ್ಯಾಲಪ್ಪಿಂಗ್ ಸಾರ್ಟ್ ಎನ್ನುವಂತಿದೆ” ಎಂದರು. ಪ್ರಾಣೇಶನು ಭೂಮಿಗಿಳಿದು ಹೋದನು. ಮರುದಿನ ಪರೀಕ್ಷೆಯಾಯಿತು. ಡಾಕ್ಟರ ಸಂಶಯವೇ ನಿಜವಾಯಿತು. ಇನ್ನೊಂದು ವಾರ ಬದುಕಿದರೆ ಹೆಚ್ಚು. ಆಸ್ಪತ್ರೆಯಿಂದ ಕರೆದುಕೊಂಡು ಹೋಗಬೇಕು” ಎಂದಾಯಿತು. ಪ್ರಾಣೇಶನು ತಾಂಬರಂನಲ್ಲಿ ಒಂದು ವಿಶಾಲವಾದ ಬಂಗಲೆಯನ್ನು ಮಾಡಿ ಅಲ್ಲಿಗೆ ಎಲ್ಲರನ್ನೂ ಕರೆದುಕೊಂಡು ಹೋದನು. ಬೆಂಗಳೂರಿಂದ ನರಸಿಂಹಯ್ಯ, ನಟೇಶ್ ಇಬ್ಬರೂ ಬಂದರು. ಅಲ್ಲಿ ರಮೇಶನು ಹೆಂಡತಿ, ಮಗಳು, ಗೆಳೆಯ, ತನ್ನ ಕ್ಲಾರ್ಕ್, ಡ್ರೈವರು, ಎಲ್ಲರ ಜೊತೆಯಲ್ಲಿ ಎಂಟು ದಿನವಿದ್ದು, ಒಂಭತ್ತನೆಯ ದಿನ ಈ ಲೋಕವನ್ನು ಬಿಟ್ಟು ಹೊರಟುಹೋದನು. ಎಲ್ಲರೂ ಎರಡು ದಿನ ಇದ್ದು ಮಾಡಬೇಕಾದ್ದು ಮಾಡಿ ಬೆಂಗಳೂರಿಗೆ ಬಂದರು.
*****
ಮುಂದುವರೆಯುವುದು
















