ಬತ್ತಿದ ಮಾಯೆಗೆ ಹಸಿ ಹಸಿ ಮಾಡುವ
ಮನ ನಿನ್ನ ಕರ್ಮ
ಪಾತಾಳಕ್ಕೆ ಅಟ್ಟುತ್ತಿದೆ
ಇದು ನನ್ನ ಕುಕರ್ಮ
ಹಾಡಿನಲಿ ಕುಣಿ ಕುಣಿದು
ದೇವನೊಲಿಸಿದೆ ನಾನು
ನನ್ನ ಗಣನೆಗೆ ಮಣ್ಣು ತೂರಿ
ಇಂದ್ರಿಯದತ್ತ ಸರದಿತ್ತು ತಾನು
ಹಲವು ಜನುಮಗಳಲ್ಲೂ ಬೆಂಬಿಡದೆ
ನನ್ನ ಸಂಗಾತಿಯಾಗಿದೆ
ಬಾಳು ಮಸಣಕೆ ಅಟ್ಟುವರೆಗೆ
ತನ್ನ ನಗಾರಿ ಭಾರಿಸಿದೆ
ಎತ್ತೆತ್ತ ಹರಿದರೂ ಮುಕ್ತನಲ್ಲ ನಾ
ಮನವಿನ್ನೂ ಹೆಪ್ಪುಗಟ್ಟಿಲ್ಲ
ಈಗಲೋ ಇನ್ನೊಮ್ಮೆಯೊ ತಾ
ಮಾತ್ರತಪ್ಪು ಬಿಟ್ಟಿಲ್ಲ
ಬೆಳಕು ರಾತ್ರಿಗಳು ಸಾಗಿ
ಬಂದಾಗುವ ಬದುಕು
ಮನದ ಮರ್ಕಟತನ ಬಿಡದೆ
ಮಾಣಿಕ್ಯ ವಿಠಲನಾಗದ ಬದುಕು
*****















